ವಾರ್ತಾ ಮತ್ತು ಪ್ರಸಾರ ಸಚಿವಾಲಯ
iffi banner

ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2024 ರಲ್ಲಿ ಭಾಗವಹಿಸಲು ಮಾಧ್ಯಮ ಪ್ರತಿನಿಧಿಗಳಿಗೆ ಅಂತಿಮ ಕರೆ


ಮುಂದಿನ ಕೆಲವು ಗಂಟೆಗಳಲ್ಲಿ ಮಾಧ್ಯಮ ದವರಿಗಾಗಿ ಇರುವ ನೋಂದಣಿ  ಮುಕ್ತಾಯವಾಗುತ್ತದೆ

ಸಿನಿಮಾದ ಖುಷಿಯನ್ನು ಹಂಚಿಕೊಳ್ಳಲು ಐ.ಎಫ್.ಎಫ್.ಐ. ಮಾಧ್ಯಮದವರನ್ನು ಸ್ವಾಗತಿಸುತ್ತದೆ

ನವೆಂಬರ್ 20-28 ರವರೆಗೆ ನಡೆಯುವ 55ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ, (ಐ.ಎಫ್.ಎಫ್.ಐ.) ಗೋವಾಕ್ಕೆ ವಿಮಾನದಲ್ಲಿ ಹೋಗಲು ಮತ್ತು ಸಿನಿಮಾದ ಸಂತೋಷವನ್ನು ಹಂಚಿಕೊಳ್ಳಲು ಬಯಸುವ ಎಲ್ಲಾ ಮಾಧ್ಯಮದವರಿಗೆ ನೋಂದಣಿ ಮಾಡಿಕೊಳ್ಳಲು ಇದೇ  ಕೊನೆಯ ಕರೆಯಾಗಿದೆ .  ಇಂದು ನವೆಂಬರ್ 12, 2024 ರಂದು ರಾತ್ರಿ 11:59:59 ಕ್ಕೆ ಮುಕ್ತಾಯಗೊಳ್ಳುತ್ತದೆ.

ನೀವು ಅನುಭವಿ ಚಲನಚಿತ್ರ ವಿಮರ್ಶಕರಾಗಿರಲಿ ಅಥವಾ ಕಥೆ ಹೇಳುವ ಉತ್ಸಾಹವಿರುವ ಉದಯೋನ್ಮುಖ ಪತ್ರಕರ್ತರಾಗಿರಲಿ, ಗೋವಾದ ಪಣಜಿಯಲ್ಲಿ ನಡೆಯುತ್ತಿರುವ ಐ.ಎಫ್.ಎಫ್.ಐ.ನ 55ನೇ ಆವೃತ್ತಿಯಲ್ಲಿ ತೆರೆದುಕೊಳ್ಳುವ ಸಿನಿಮಾದ ಶ್ರೇಷ್ಠತೆಯನ್ನು ಅನುಭವಿಸಲು ಇದು ನಿಮಗೆ ಕೊನೆಯ ಅವಕಾಶವಾಗಿದೆ. ಉತ್ಸವಕ್ಕೆ ಮಾಧ್ಯಮ ಪ್ರತಿನಿಧಿಯಾಗಿ ನೋಂದಾಯಿಸಿರಿ ಮತ್ತು ಪ್ರಪಂಚದ ಮೂಲೆ ಮೂಲೆಗೆ  ಹಬ್ಬವನ್ನು ಜನಸಾಮಾನ್ಯರಿಗೆ ಕೊಂಡೊಯ್ಯುವ ತಂಡದ ಭಾಗವಾಗಿರಿ.
 
ನೋಂದಣಿ ಪ್ರಕ್ರಿಯೆ

ಮಾಧ್ಯಮ ಪ್ರತಿನಿಧಿಯಾಗಿ ನೋಂದಾಯಿಸಿಕೊಳ್ಳಲು, ನೀವು ಜನವರಿ 1, 2024 ರೊಳಗೆ 21 ವರ್ಷಗಳನ್ನು ಪೂರ್ಣಗೊಳಿಸಿರಬೇಕು ಹಾಗು ಮುದ್ರಣ, ವಿದ್ಯುನ್ಮಾನ,  ಡಿಜಿಟಲ್ ಅಥವಾ ಆನ್ಲೈನ್ ಮಾಧ್ಯಮ ಸಂಸ್ಥೆಗೆ ಸೇರಿದ ವರದಿಗಾರ, ಛಾಯಾಗ್ರಾಹಕರು, ಕ್ಯಾಮರಾ ಪರ್ಸನ್  ಅಥವಾ ಡಿಜಿಟಲ್ ವಿಷಯವಸ್ತು ರಚನೆಕಾರರಾಗಿರಬೇಕು. ವಯೋಮಾನದ ಮಾನದಂಡಗಳನ್ನು ಪೂರೈಸುವ ಸ್ವತಂತ್ರ ಪತ್ರಕರ್ತರನ್ನು ಸಹ ನೋಂದಾಯಿಸಲು ಪ್ರೋತ್ಸಾಹಿಸಲಾಗುತ್ತದೆ. ನೋಂದಾಯಿಸುವ ಮೊದಲು ದಯವಿಟ್ಟು ಇಲ್ಲಿ ಸಂಬಂಧಿತ ಅರ್ಹತಾ ಮಾನದಂಡಗಳನ್ನು ಓದಿ ಮತ್ತು ನೋಂದಾಯಿಸುವ ಮೊದಲು ಅಪ್ ಲೋಡ್ ಮಾಡಲು ನಮೂದಿಸಿದ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿರಿ. ನೋಂದಣಿ ಪ್ರಕ್ರಿಯೆಯು ನೇರವಾಗಿದ್ದು ಆನ್ ಲೈನ್ನಲ್ಲಿ https://my.iffigoa.org/media-login ನಲ್ಲಿ ಮಾಡಬಹುದು. 

ದಯವಿಟ್ಟು ಗಮನಿಸಿ,  ನಿಮ್ಮ ಅರ್ಜಿಯ ಪರಿಶೀಲನೆಯ ನಂತರ ಮಾಧ್ಯಮ ಪ್ರತಿನಿಧಿಯಾಗಿ ನಿಮ್ಮ ಮಾನ್ಯತೆಯ ಅನುಮೋದನೆಯನ್ನು ನಿಮ್ಮ ನೋಂದಾಯಿತ ಇಮೇಲ್ ಐಡಿಯಲ್ಲಿ ನಿಮಗೆ ತಿಳಿಸಲಾಗುತ್ತದೆ. ಈ ನೋಂದಣಿ ಪ್ರಕ್ರಿಯೆಯ ಮೂಲಕ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (ಪಿಐಬಿ) ನಿಂದ ಮಾನ್ಯತೆ ಪಡೆದ ಮಾಧ್ಯಮದವರು ಮಾತ್ರ 55ನೇ ಐ.ಎಫ್.ಎಫ್.ಐ.2024 ಗಾಗಿ ಮಾಧ್ಯಮ ಪ್ರತಿನಿಧಿ ಪಾಸ್ ಗಳಿಗೆ ಅರ್ಹರಾಗಿರುತ್ತಾರೆ.   ಮಾಧ್ಯಮದ ಪ್ರಸಾರಾವಧಿ, ಗಾತ್ರ (ಪ್ರಸಾರ, ಪ್ರೇಕ್ಷಕರು, ತಲುಪುವಿಕೆ), ಸಿನಿಮಾದ ಮೇಲೆ ಕೇಂದ್ರೀಕರಿಸುವುದರ ಪರಿಮಾಣ ಮತ್ತು ಐ.ಎಫ್.ಎಫ್.ಐನ ನಿರೀಕ್ಷಿತ ಮಾಧ್ಯಮ ಪ್ರಸಾರದಂತಹ ಅಂಶಗಳ ಆಧಾರದ ಮೇಲೆ ಪ್ರತಿ ಮಾಧ್ಯಮ ಸಂಸ್ಥೆಗೆ ನೀಡಬೇಕಾದ ಮಾನ್ಯತೆಗಳ ಸಂಖ್ಯೆಯನ್ನು ಪಿಐಬಿ ನಿರ್ಧರಿಸುತ್ತದೆ.
ಮಾಧ್ಯಮ ಪ್ರತಿನಿಧಿ ಪಾಸ್ ಗಳನ್ನು 18ನೇ ನವೆಂಬರ್ 2024 ರಿಂದ ಐ.ಎಫ್.ಎಫ್.ಐ. ಆವರಣದಲ್ಲಿ ಪಡೆಯಬಹುದು. ಯಾವುದೇ ಪ್ರಶ್ನೆಗಳಿಗೆ ದಯವಿಟ್ಟು  ‘Media Accreditation Query’ ಎಂದು ವಿಷಯವನ್ನು ನಮೂದಿಸಿ  iffi4pib[at]gmail[dot]com ಗೆ ಇಮೇಲ್ ಅನ್ನು ಕಳುಹಿಸಿ.

ಹಾಗಾಗಿ, ಐ.ಎಫ್.ಎಫ್.ಐ. ಗೆ ಕ್ಷಣಗಣನೆ  ಪ್ರಾರಂಭವಾದಾಗಲೂ ನೀವು ಹಿಂದೆ ಉಳಿದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.  ಈಗಲೇ ಇಲ್ಲಿ ನೋಂದಾಯಿಸಿ ಮತ್ತು ಚಲನಚಿತ್ರೋತ್ಸವದಲ್ಲಿ ನಿಮ್ಮನ್ನು ಸ್ವಾಗತಿಸಲು ನಾವು ಎದುರು ನೋಡುತ್ತಿದ್ದೇವೆ!

ಐ.ಎಫ್.ಎಫ್.ಐ ಬಗ್ಗೆ

1952ರಲ್ಲಿ ಸ್ಥಾಪನೆಯಾದ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (ಐ.ಎಫ್.ಎಫ್.ಐ) ವು ಏಷ್ಯಾದ ಪ್ರಮುಖ ಚಲನಚಿತ್ರೋತ್ಸವಗಳಲ್ಲಿ ಒಂದಾಗಿದೆ. ಅದರ ಪ್ರಾರಂಭದಿಂದಲೂ, ಐ.ಎಫ್.ಎಫ್.ಐ ಚಲನಚಿತ್ರಗಳು, ಅವುಗಳ ಆಕರ್ಷಕ ಕಥೆಗಳು ಮತ್ತು ಅವುಗಳ ಹಿಂದೆ ಇರುವ ಪ್ರತಿಭಾವಂತ ವ್ಯಕ್ತಿಗಳನ್ನು ಆಚರಿಸುವ ಗುರಿಯನ್ನು ಹೊಂದಿದೆ. ಚಲನಚಿತ್ರಗಳ ಬಗ್ಗೆ ಅಪಾರವಾದ ಮೆಚ್ಚುಗೆ ಮತ್ತು ಪ್ರೀತಿಯನ್ನು ಉತ್ತೇಜಿಸಲು ಮತ್ತು ಹರಡಲು, ಜನರಲ್ಲಿ ತಿಳುವಳಿಕೆ ಮತ್ತು ಸೌಹಾರ್ದದ ಸೇತುವೆಗಳನ್ನು ನಿರ್ಮಿಸಲು ಮತ್ತು ವೈಯಕ್ತಿಕ ಮತ್ತು ಸಾಮೂಹಿಕ ಶ್ರೇಷ್ಠತೆಯ ಹೊಸ ಎತ್ತರಗಳನ್ನು ತಲುಪಲು, ಅವರನ್ನು ಪ್ರೇರೇಪಿಸಲು ಈ ಉತ್ಸವವು ಶ್ರಮಿಸುತ್ತದೆ.

ಐ.ಎಫ್.ಎಫ್.ಐ ಅನ್ನು ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಗೋವಾ ಸರ್ಕಾರದ ಎಂಟರ್ ಟೈನ್ಮೆಂಟ್ ಸೊಸೈಟಿಯ ಸಹಯೋಗದೊಂದಿಗೆ  ಪ್ರತಿವರ್ಷ ಆಯೋಜಿಸುತ್ತದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಚಲನಚಿತ್ರೋತ್ಸವಗಳ ನಿರ್ದೇಶನಾಲಯವು (ಡಿ.ಎಫ್.ಎಫ್.) ಸಾಮಾನ್ಯವಾಗಿ ಉತ್ಸವವನ್ನು ಮುನ್ನಡೆಸುತ್ತಿದ್ದರೆ, ಚಲನಚಿತ್ರ ಮಾಧ್ಯಮ ಘಟಕಗಳನ್ನು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದೊಂದಿಗೆ (ಎನ್.ಎಫ್.ಡಿ.ಸಿ.) ವಿಲೀನಗೊಳಿಸಿದ ಪರಿಣಾಮವಾಗಿ ಎನ್.ಎಫ್.ಡಿ.ಸಿ.ನಿಗಮವು  ಉತ್ಸವದ ನಿರ್ವಹಣೆಯನ್ನು ವಹಿಸಿಕೊಂಡಿದೆ.  55 ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ತಾಜಾ ಸುದ್ಧಿಗಳಿಗಾಗಿ, ದಯವಿಟ್ಟು http://www.iffigoa.org ನಲ್ಲಿ ಚಲನಚಿತ್ರೋತ್ಸವದ ಜಾಲತಾಣಕ್ಕೆ  ಭೇಟಿ ನೀಡಿ ಮತ್ತು ಪಿಐಬಿ ನ ಸಾಮಾಜಿಕ ಮಾಧ್ಯಮ ವೇದಿಕೆಗಳಾದ ಎಕ್ಸ್, ಫೆಸ್ ಬುಕ್, ಇನ್ಟಾಗ್ರಾಂ ಮತ್ತು ವಾಟ್ಸ್ ಆಪ್ ನಲ್ಲಿ ಐ.ಎಫ್.ಎಫ್.ಐ ಅನ್ನು ಅನುಸರಿಸಿ.

 

*****

iffi reel

(Release ID: 2072999) Visitor Counter : 50