ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

“ಛತ್ತೀಸ್ ಗಢ, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಅಗ್ನಿಶಾಮಕ ಸೇವೆಗಳ ವಿಸ್ತರಣೆ ಮತ್ತು ಆಧುನೀಕರಣ”ದ ಅಡಿಯಲ್ಲಿ 725.62 ಕೋಟಿ ರೂಪಾಯಿ ಮೌಲ್ಯದ ಮೂರು ಯೋಜನೆಗಳಿಗೆ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿಯು ಅನುಮೋದನೆ ನೀಡಿದೆ



ಸಮಿತಿಯು ಛತ್ತೀಸ್ ಗಢಕ್ಕೆ ರೂ.147.76 ಕೋಟಿ, ಒಡಿಶಾಗೆ ರೂ. 201.10 ಕೋಟಿ ಮತ್ತು ಪಶ್ಚಿಮ ಬಂಗಾಳಕ್ಕೆ ರೂ. 376.76 ಕೋಟಿಗೆ ಅನುಮೋದನೆ ನೀಡಿದೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ  ʼವಿಪತ್ತು ನಿರೋಧಕ ಭಾರತʼದ ದೃಷ್ಟಿಕೋನವನ್ನು ಈಡೇರಿಸಲು , ಗೃಹ ಸಚಿವ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ,  ಸಚಿವಾಲಯವು ದೇಶದಲ್ಲಿನ ವಿಪತ್ತುಗಳ ಪರಿಣಾಮಕಾರಿ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ

"ರಾಜ್ಯಗಳಲ್ಲಿ ಅಗ್ನಿಶಾಮಕ ಸೇವೆಗಳ ವಿಸ್ತರಣೆ ಮತ್ತು ಆಧುನೀಕರಣಕ್ಕಾಗಿ" ಕೇಂದ್ರ ಸರ್ಕಾರವು ಎನ್.ಡಿ.ಆರ್.ಎಫ್.  ಅಡಿಯಲ್ಲಿ ಒಟ್ಟು ರೂ.5000 ಕೋಟಿಗಳನ್ನು ನಿಗದಿಪಡಿಸಿದೆ, ಒಟ್ಟು ರೂ.2542.12 ಕೋಟಿ ವೆಚ್ಚದಲ್ಲಿ 15 ರಾಜ್ಯಗಳ ಪ್ರಸ್ತಾವನೆಗಳನ್ನು ಈಗಾಗಲೇ ಅನುಮೋದಿಸಲಾಗಿದೆ

Posted On: 11 NOV 2024 3:39PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯು, ಛತ್ತೀಸ್ ಗಢ, ಒಡಿಶಾ ಮತ್ತು ಪಶ್ಚಿಮ ಬಂಗಾಳಕ್ಕೆ "ರಾಜ್ಯಗಳಲ್ಲಿ ಅಗ್ನಿಶಾಮಕ ಸೇವೆಗಳ ವಿಸ್ತರಣೆ ಮತ್ತು ಆಧುನೀಕರಣ" ಅಡಿಯಲ್ಲಿ 725.62 ಕೋಟಿ ರೂಪಾಯಿ ಮೌಲ್ಯದ ಮೂರು ಯೋಜನೆಗಳಿಗೆ ಅನುಮೋದನೆ ನೀಡಿದೆ. ಸಮಿತಿಯು ಛತ್ತೀಸ್ ಗಢಕ್ಕೆ ರೂ. 147.76 ಕೋಟಿ, ಒಡಿಶಾಗೆ ರೂ. 201.10 ಕೋಟಿ ಮತ್ತು ಪಶ್ಚಿಮ ಬಂಗಾಳಕ್ಕೆ ರೂ. 376.76 ಕೋಟಿ ಯನ್ನು ಅನುಮೋದಿಸಿದೆ.  ಉನ್ನತ ಮಟ್ಟದ ಸಮಿತಿಯು ಹಣಕಾಸು ಸಚಿವರು, ಕೃಷಿ ಸಚಿವರು ಮತ್ತು ನೀತಿ ಆಯೋಗದ ಉಪಾಧ್ಯಕ್ಷರನ್ನು ಸದಸ್ಯರನ್ನಾಗಿ ಒಳಗೊಂಡಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ವಿಪತ್ತು ನಿರೋಧಕ ಭಾರತದ ದೃಷ್ಟಿಕೋನವನ್ನು ಈಡೇರಿಸಲು, ಗೃಹ ಸಚಿವರ ಮಾರ್ಗದರ್ಶನದಲ್ಲಿ ಗೃಹ ಸಚಿವಾಲಯ, ಶ್ರೀ ಅಮಿತ್ ಶಾ ಅವರು ದೇಶದಲ್ಲಿನ ವಿಪತ್ತುಗಳ ಪರಿಣಾಮಕಾರಿ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಹಲವಾರು ಉಪಕ್ರಮಗಳನ್ನು ಕೈಗೊಂಡಿದ್ದಾರೆ. ಭಾರತದಲ್ಲಿ ವಿಪತ್ತು ಅಪಾಯ ಕಡಿತದ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ವಿಪತ್ತಿನ ಸಮಯದಲ್ಲಿ ಯಾವುದೇ ವ್ಯಾಪಕವಾದ ಜೀವ ಮತ್ತು ಆಸ್ತಿ ನಷ್ಟವನ್ನು ತಡೆಗಟ್ಟಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

"ರಾಜ್ಯಗಳಲ್ಲಿ ಅಗ್ನಿಶಾಮಕ ಸೇವೆಗಳ ವಿಸ್ತರಣೆ ಮತ್ತು ಆಧುನೀಕರಣ" ಯೋಜನೆಗಾಗಿ ಕೇಂದ್ರ ಸರ್ಕಾರವು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್.ಡಿ.ಆರ್.ಎಫ್.) ಅಡಿಯಲ್ಲಿ 5000 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ, ಒಟ್ಟು 2542.12 ಕೋಟಿ ರೂಪಾಯಿಗಳೊಂದಿಗೆ 15 ರಾಜ್ಯಗಳ ಪ್ರಸ್ತಾವನೆಗಳನ್ನು ಈಗಾಗಲೇ ಅನುಮೋದಿಸಲಾಗಿದೆ .

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮತ್ತು ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಈ ವರ್ಷದಲ್ಲಿ ರಾಜ್ಯಗಳಿಗೆ ಈಗಾಗಲೇ 21,026 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ.  ಇದು ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ (ಎಸ್.ಡಿ.ಆರ್.ಎಫ್) 26 ರಾಜ್ಯಗಳಿಗೆ 14,878.40 ಕೋಟಿ ರೂ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ (ಎನ್.ಡಿ.ಆರ್.ಎಫ್) 15 ರಾಜ್ಯಗಳಿಗೆ 4,637.66 ಕೋಟಿ ರೂ. 11 ರಾಜ್ಯಗಳಿಗೆ ರಾಜ್ಯ ವಿಪತ್ತು ತಗ್ಗಿಸುವಿಕೆ ನಿಧಿಯಿಂದ (ಎಸ್.ಡಿ.ಎಂ.ಎಫ್.) 1,385.45 ಕೋಟಿ  ರೂ. ಮತ್ತು ರಾಷ್ಟ್ರೀಯ ವಿಪತ್ತು ತಗ್ಗಿಸುವಿಕೆ ನಿಧಿಯಿಂದ (ಎನ್.ಡಿ.ಎಂ.ಎಫ್.) 3 ರಾಜ್ಯಗಳಿಗೆ 124.93 ಕೋಟಿ ರೂ.ಗಳನ್ನು ಒಳಗೊಂಡಿದೆ.

 

*****


(Release ID: 2072649) Visitor Counter : 22