ಕೃಷಿ ಸಚಿವಾಲಯ
azadi ka amrit mahotsav

ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯು ಕೇಂದ್ರ ವಲಯ ಯೋಜನೆ "ನಮೋ ಡ್ರೋನ್ ದೀದಿ"ಯ ಕಾರ್ಯಾಚರಣೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ 


ಸರ್ಕಾರವು DAY-NRLM ಅಡಿಯಲ್ಲಿ ಮಹಿಳಾ ಸ್ವಸಹಾಯ ಗುಂಪುಗಳಿಗೆ (SHG) ಡ್ರೋನ್‌ ಗಳನ್ನು ಒದಗಿಸಲು 'ನಮೋ ಡ್ರೋನ್ ದೀದಿ' ಕೇಂದ್ರ ವಲಯ ಯೋಜನೆಯನ್ನು ರೂ. 1,261 ಕೋಟಿ ವೆಚ್ಚದಲ್ಲಿ ಅನುಮೋದಿಸಿದೆ

ಈ ಯೋಜನೆಯು 2024-25 ರಿಂದ 2025-26 ರ ಅವಧಿಯಲ್ಲಿ 14,500 ಆಯ್ದ ಮಹಿಳಾ ಸ್ವಸಹಾಯ ಗುಂಪುಗಳಿಗೆ ಕೃಷಿ ಉದ್ದೇಶಕ್ಕಾಗಿ ರೈತರಿಗೆ ಬಾಡಿಗೆ ಸೇವೆಗಳನ್ನು ಒದಗಿಸಲು ಡ್ರೋನ್ ಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ 

Posted On: 01 NOV 2024 12:04PM by PIB Bengaluru

ಸರ್ಕಾರವು 'DAY-NRLM' ಅಡಿಯಲ್ಲಿ ಮಹಿಳಾ ಸ್ವಸಹಾಯ ಗುಂಪುಗಳಿಗೆ (SHG) ಡ್ರೋನ್ ಗಳನ್ನು ಒದಗಿಸಲು 'ನಮೋ ಡ್ರೋನ್ ದೀದಿ' ಕೇಂದ್ರ ವಲಯ ಯೋಜನೆಯನ್ನು ರೂ. 1,261 ಕೋಟಿ ವೆಚ್ಚದಲ್ಲಿ ಅನುಮೋದಿಸಿದೆ. ಈ ಯೋಜನೆಯು 2024-25 ರಿಂದ 2025-26 ರ ಅವಧಿಯಲ್ಲಿ 14,500 ಆಯ್ದ ಮಹಿಳಾ ಸ್ವಸಹಾಯ ಗುಂಪುಗಳಿಗೆ ಡ್ರೋನ್‌ ಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಇದರ ಮೂಲಕ ರೈತರಿಗೆ ಕೃಷಿ ಉದ್ದೇಶಗಳಿಗಾಗಿ (ಪ್ರಸ್ತುತ ದ್ರವ ರಸಗೊಬ್ಬರಗಳು ಮತ್ತು ಕೀಟನಾಶಕಗಳ ಸಿಂಪಡಣೆಗಾಗಿ) ಬಾಡಿಗೆ ಸೇವೆಗಳನ್ನು ಒದಗಿಸಲಾಗುವುದು. ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯು ಈ ಯೋಜನೆಗಾಗಿ ಕಾರ್ಯಾಚರಣೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ ಮತ್ತು 'ನಮೋ ಡ್ರೋನ್ ದೀದಿ' ಯೋಜನೆಯ ತ್ವರಿತ ಜಾರಿ ಮತ್ತು ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಈ ಕಾರ್ಯಾಚರಣೆ ಮಾರ್ಗಸೂಚಿಗಳ ಅರ್ಥಪೂರ್ಣ ಬಳಕೆ ಮಾಡಲು ಎಲ್ಲಾ ಪಾಲುದಾರರನ್ನು ಕೋರಲಾಗಿದೆ. ಕಾರ್ಯಾಚರಣೆಯ ಮಾರ್ಗಸೂಚಿಗಳ ಪ್ರಮುಖ ಅಂಶಗಳು ಈ ಕೆಳಗಿನಂತಿವೆ:

- ಈ ಯೋಜನೆಯನ್ನು ಕೇಂದ್ರ ಮಟ್ಟದಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ, ರಸಗೊಬ್ಬರ ಇಲಾಖೆ, ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿಗಳ ಅಧಿಕಾರ ಸಮಿತಿಯು ಆಡಳಿತ ನಡೆಸುತ್ತದೆ.

-  ಗ್ರಾಮೀಣಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ನೇತೃತ್ವದ ಮತ್ತು ಇತರ ಎಲ್ಲ ಪಾಲುದಾರರ ಪ್ರಾತಿನಿಧ್ಯವನ್ನು ಹೊಂದಿರುವ ಅನುಷ್ಠಾನ ಮತ್ತು ಮೇಲ್ವಿಚಾರಣಾ ಸಮಿತಿಯು ಯೋಜನೆಯ ಪರಿಣಾಮಕಾರಿ ಪ್ಲಾನಿಂಗ್‌, ಅನುಷ್ಠಾನ ಮತ್ತು ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಹೊಂದಿರುತ್ತದೆ ಮತ್ತು ಇದು ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ಎಲ್ಲಾ ತಾಂತ್ರಿಕ ವಿಷಯಗಳಿಗೆ ಒಟ್ಟಾರೆ ಸಲಹೆ ಮತ್ತು ಮಾರ್ಗದರ್ಶನವನ್ನು ನೀಡುತ್ತದೆ.

-  ಈ ಯೋಜನೆ ಅಡಿಯಲ್ಲಿ, ಡ್ರೋನ್ ಮತ್ತು ಪೂರಕ/ಸಹಾಯಕ ವೆಚ್ಚಗಳ ವೆಚ್ಚದ 80% ರಷ್ಟು ಕೇಂದ್ರ ಹಣಕಾಸು ನೆರವನ್ನು ಗರಿಷ್ಠ ₹ 8.0 ಲಕ್ಷಗಳವರೆಗೆ ಮಹಿಳಾ ಸ್ವಸಹಾಯ ಗುಂಪುಗಳಿಗೆ ಡ್ರೋನ್‌ ಗಳನ್ನು ಪ್ಯಾಕೇಜ್ ಆಗಿ ಖರೀದಿಸಲು ನೀಡಲಾಗುವುದು.

-  ಸ್ವಸಹಾಯ ಗುಂಪುಗಳ ಕ್ಲಸ್ಟರ್ ಮಟ್ಟದ ಒಕ್ಕೂಟಗಳು (CLFs)/ಸ್ವಸಹಾಯ ಗುಂಪುಗಳು ರಾಷ್ಟ್ರೀಯ ಕೃಷಿ ಮೂಲಸೌಕರ್ಯ ಹಣಕಾಸು ಸೌಲಭ್ಯ (AIF) ಅಡಿಯಲ್ಲಿ ಉಳಿದ ಮೊತ್ತವನ್ನು (ಒಟ್ಟು ಖರೀದಿ ವೆಚ್ಚ ಕಡಿಮೆ ಸಬ್ಸಿಡಿ) ಸಾಲವಾಗಿ ಪಡೆಯಬಹುದು. AIF ಸಾಲದ ಮೇಲೆ 3% ರಷ್ಟು ಬಡ್ಡಿ ಸಹಾಯಧನವನ್ನು ಸಿಎಲ್‌ಎಫ್ ‌ಗಳು/ಸ್ವಸಹಾಯ ಗುಂಪುಗಳಿಗೆ ನೀಡಲಾಗುವುದು.

- ಗ್ರಾಮೀಣಾಭಿವೃದ್ಧಿ ಸಚಿವಾಲಯದ ಇತರ ಮೂಲಗಳು/ಕಾರ್ಯಕ್ರಮಗಳು/ಯೋಜನೆಗಳಿಂದ ಸಾಲವನ್ನು ಪಡೆಯುವ ಆಯ್ಕೆಯನ್ನು ಸಹ CLF ಗಳು/ಸ್ವಸಹಾಯ ಗುಂಪುಗಳು ಹೊಂದಿರುತ್ತವೆ.

 - CLFಗಳು/SHGಗಳು ಗ್ರಾಮೀಣಾಭಿವೃದ್ಧಿ ಸಚಿವಾಲಯದ ಇತರ ಮೂಲಗಳು/ಕಾರ್ಯಕ್ರಮಗಳು/ಸ್ಕೀಮ್‌ಗಳಿಂದ ಸಾಲವನ್ನು ಪಡೆಯುವ ಆಯ್ಕೆಯನ್ನು ಸಹ ಹೊಂದಿರುತ್ತವೆ.

- ಈ ಯೋಜನೆ ಅಡಿಯಲ್ಲಿ, ಕೇವಲ ಡ್ರೋನ್‌ ಗಳನ್ನು ಮಾತ್ರವಲ್ಲದೆ, ಒಂದು ಪ್ಯಾಕೇಜ್‌ನಂತೆ ಡ್ರೋನ್‌ಗಳನ್ನು ಪೂರೈಸಲಾಗುವುದು. ಈ ಪ್ಯಾಕೇಜ್‌ ನಲ್ಲಿ ಈ ಕೆಳಗಿನವುಗಳು ಒಳಗೊಂಡಿರುತ್ತವೆ: ದ್ರವ ರಸಗೊಬ್ಬರಗಳು ಮತ್ತು ಕೀಟನಾಶಕಗಳ ಸಿಂಪಡಣೆಗಾಗಿ ಸಿಂಪಡಣಾ ಘಟಕದೊಂದಿಗೆ ಮೂಲ ಡ್ರೋನ್ ,  ಡ್ರೋನ್ ಸಾಗಣೆ ಪೆಟ್ಟಿಗೆ,  ಪ್ರಮಾಣಿತ ಬ್ಯಾಟರಿ ಸೆಟ್, ಕೆಳಮುಖವಾಗಿರುವ ಕ್ಯಾಮೆರಾ,  ದ್ವಿ-ಮಾರ್ಗದ ವೇಗದ ಬ್ಯಾಟರಿ ಚಾರ್ಜರ್ , ಬ್ಯಾಟರಿ ಚಾರ್ಜರ್ ಹಬ್   ಗಾಳಿ ವೇಗ ಮಾಪಕ (ಅನಿಮೋಮೀಟರ್) , ಪಿಎಚ್ ಮೀಟರ್,  ಎಲ್ಲಾ ವಸ್ತುಗಳ ಮೇಲೆ 1 ವರ್ಷದ ಸ್ಥಳೀಯ ವಾರಂಟಿಯನ್ನು ಒಳಗೊಂಡಿರುತ್ತವೆ.

-  ಈ ಪ್ಯಾಕೇಜ್ ನಲ್ಲಿ 4 ಬಿಡಿ ಬ್ಯಾಟರಿ ಸೆಟ್ ಗಳು, ಒಂದು ಬಿಡಿ ಪ್ರೊಪೆಲ್ಲರ್ ಸೆಟ್ (ಪ್ರತಿ ಸೆಟ್ ನಲ್ಲಿ 6 ಪ್ರೊಪೆಲ್ಲರ್ ಗಳು), ನೋಝಲ್ ಸೆಟ್, ಡ್ಯುಯಲ್ ಚಾನೆಲ್ ಫಾಸ್ಟ್ ಬ್ಯಾಟರಿ ಚಾರ್ಜರ್, ಬ್ಯಾಟರಿ ಚಾರ್ಜರ್ ಹಬ್, ಡ್ರೋನ್ ಪೈಲಟ್ ಮತ್ತು ಡ್ರೋನ್ ಸಹಾಯಕರಿಗೆ 15 ದಿನಗಳ ತರಬೇತಿ, ಒಂದು ವರ್ಷದ ಸಮಗ್ರ ವಿಮೆ, 2 ವರ್ಷಗಳ ವಾರ್ಷಿಕ ನಿರ್ವಹಣಾ ಒಪ್ಪಂದ ಮತ್ತು ಅನ್ವಯವಾಗುವ GST ಸೇರಿವೆ. ಹೆಚ್ಚುವರಿ ಬ್ಯಾಟರಿಗಳು ಒಂದು ದಿನದಲ್ಲಿ 20 ಎಕರೆ ಪ್ರದೇಶವನ್ನು ಸುಲಭವಾಗಿ ಆವರಿಸುವ ನಿರಂತರ ಡ್ರೋನ್ ಹಾರಾಟವನ್ನು ಖಚಿತಪಡಿಸುತ್ತವೆ.

- ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರಲ್ಲಿ ಒಬ್ಬರನ್ನು 15 ದಿನಗಳ ತರಬೇತಿಗೆ ಆಯ್ಕೆ ಮಾಡಲಾಗುವುದು, ಇದರಲ್ಲಿ ಕಡ್ಡಾಯ ಡ್ರೋನ್ ಪೈಲಟ್ ತರಬೇತಿ ಮತ್ತು ಪೋಷಕಾಂಶ ಮತ್ತು ಕೀಟನಾಶಕಗಳ ಬಳಕೆಗಾಗಿ ಕೃಷಿ ಉದ್ದೇಶಕ್ಕಾಗಿ ಹೆಚ್ಚುವರಿ ತರಬೇತಿ ಇರುತ್ತದೆ. ವಿದ್ಯುತ್ ಸರಕುಗಳ ದುರಸ್ತಿ, ಅಳವಡಿಕೆ ಮತ್ತು ಯಾಂತ್ರಿಕ ಕಾರ್ಯಗಳನ್ನು ಕೈಗೊಳ್ಳುವ ಒಲವು ಹೊಂದಿರುವ ಎಸ್. ಎಚ್. ಜಿ. ಯ ಇತರ ಸದಸ್ಯರು/ಕುಟುಂಬದ ಸದಸ್ಯರಿಗೆ ಡ್ರೋನ್ ಸಹಾಯಕರಾಗಿ ತರಬೇತಿ ನೀಡಲಾಗುವುದು. ಕಾರ್ಯಾಚರಣೆಯ ಮಾರ್ಗಸೂಚಿಗಳಲ್ಲಿ ಸೂಚಿಸಲಾದ ತರಬೇತಿ ವೇಳಾಪಟ್ಟಿಯ ಪ್ರಕಾರ ಡ್ರೋನ್ ಗಳ ಪೂರೈಕೆಯೊಂದಿಗೆ ಡ್ರೋನ್ ತಯಾರಕರು ಈ ತರಬೇತಿಗಳನ್ನು ಪ್ಯಾಕೇಜ್ ಆಗಿ ಒದಗಿಸಬೇಕು.

 -  ರಾಜ್ಯ ಮಟ್ಟದಲ್ಲಿ ಯೋಜನೆಯ ಅನುಷ್ಠಾನ ಸಂಸ್ಥೆಗಳಾಗಿ ರಾಜ್ಯಗಳಿಗೆ ಜವಾಬ್ದಾರರಾಗಿರುವ ಪ್ರಮುಖ ರಸಗೊಬ್ಬರ ಕಂಪನಿಗಳು (LFCs) ಕಾರ್ಯನಿರ್ವಹಿಸುತ್ತವೆ ಮತ್ತು ಅವರು ರಾಜ್ಯ ಇಲಾಖೆಗಳು, ಡ್ರೋನ್ ತಯಾರಕರು, ಸ್ವಸಹಾಯ ಗುಂಪುಗಳ ಕ್ಲಸ್ಟರ್ ಮಟ್ಟದ ಒಕ್ಕೂಟಗಳು/ಸ್ವಸಹಾಯ ಗುಂಪುಗಳು ಮತ್ತು ರೈತರು/ಫಲಾನುಭವಿಗಳು ಇತ್ಯಾದಿಗಳೊಂದಿಗೆ ಅಗತ್ಯ ಸಮನ್ವಯವನ್ನು ಸ್ಥಾಪಿಸುತ್ತವೆ. LFCಗಳು ನ್ಯಾಯಯುತ ಮತ್ತು ಪಾರದರ್ಶಕ ಪ್ರಕ್ರಿಯೆಯ ಮೂಲಕ ಡ್ರೋನ್‌ ಗಳನ್ನು ಖರೀದಿಸುತ್ತವೆ ಮತ್ತು ಡ್ರೋನ್ ‌ಗಳ ಮಾಲೀಕತ್ವವನ್ನು ಸ್ವಸಹಾಯ ಗುಂಪುಗಳ ಕ್ಲಸ್ಟರ್ ಮಟ್ಟದ ಒಕ್ಕೂಟಗಳು ಅಥವಾ ಸ್ವಸಹಾಯ ಗುಂಪುಗಳ ಹತ್ತಿರ ಇರಿಸಲಾಗುತ್ತದೆ.

- ಯೋಜನೆಯ ಅನುಷ್ಠಾನವು ಕೃಷಿ ಸೇವೆಗಳನ್ನು ಒದಗಿಸಲು ಡ್ರೋನ್‌ ಗಳ ಬೇಡಿಕೆ ಇರುವ ಪ್ರದೇಶ/ಕ್ಲಸ್ಟರ್ ಮತ್ತು ಸ್ವಸಹಾಯ ಗುಂಪುಗಳ ಸರಿಯಾದ ಆಯ್ಕೆಯ ಮೇಲೆ ಅವಲಂಬಿತವಾಗಿದೆ. ಕೃಷಿಯಲ್ಲಿ ಡ್ರೋನ್‌ ಗಳ ಪರಿಚಯವು ಪ್ರಾರಂಭಿಕ ಹಂತದಲ್ಲಿರುವುದರಿಂದ, ರಾಜ್ಯಗಳು ಈ ಮಧ್ಯಪ್ರವೇಶಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತವೆ, ಮಹಿಳಾ ಸ್ವಸಹಾಯ ಗುಂಪುಗಳಿಗೆ ಕೈಜೋಡಿಸಿ ಬೆಂಬಲ ನೀಡುತ್ತವೆ ಮತ್ತು ವರ್ಷದಲ್ಲಿ ಕನಿಷ್ಠ 2000 ರಿಂದ 2500 ಎಕರೆ ಪ್ರದೇಶವನ್ನು ವ್ಯಾಪಿಸುವ ವ್ಯವಹಾರವನ್ನು ಪಡೆಯಲು ಅವರಿಗೆ ಸಹಾಯ ಮಾಡುತ್ತವೆ. ರಾಜ್ಯ ಕೃಷಿ ಇಲಾಖೆಗಳು ಮತ್ತು DAY-NRLM ನ ರಾಜ್ಯ ಮಿಷನ್ ನಿರ್ದೇಶಕರು ಬಲವಾದ ಸಮನ್ವಯವನ್ನು ಹೊಂದಿರುತ್ತಾರೆ ಮತ್ತು ರಾಜ್ಯ ಮಟ್ಟದ ಸಮಿತಿಯ ಸಹಾಯದೊಂದಿಗೆ ತಳಮಟ್ಟದಲ್ಲಿ ಅದರ ಯಶಸ್ವಿ ಅನುಷ್ಠಾನಕ್ಕಾಗಿ ಅವರು ಯೋಜನೆಯ ಮಾಲೀಕತ್ವವನ್ನು ತೆಗೆದುಕೊಳ್ಳುತ್ತಾರೆ.

- ಯೋಜನೆಯ ಪರಿಣಾಮಕಾರಿ ಮೇಲ್ವಿಚಾರಣೆಯನ್ನು ಐಟಿ ಆಧಾರಿತ ನಿರ್ವಹಣಾ ಮಾಹಿತಿ ವ್ಯವಸ್ಥೆ (MIS) ಅಂದರೆ ಡ್ರೋನ್ ಪೋರ್ಟಲ್ ಮೂಲಕ ಮಾಡಲಾಗುತ್ತದೆ, ಇದು ಸೇವಾ ವಿತರಣೆ ಮತ್ತು ಮೇಲ್ವಿಚಾರಣೆ, ನಿಧಿಗಳ ಹರಿವು ಮತ್ತು ನಿಧಿಗಳ ವಿತರಣೆಗಾಗಿ ಸಂಪೂರ್ಣ ಸಾಫ್ಟ್‌ವೇರ್ ಆಗಿ ಕಾರ್ಯನಿರ್ವಹಿಸುತ್ತದೆ. ಪೋರ್ಟಲ್ ಪ್ರತಿ ಡ್ರೋನ್‌ ನ ಕಾರ್ಯಾಚರಣೆಗಳನ್ನು ಟ್ರ್ಯಾಕ್ ಮಾಡುತ್ತದೆ ಮತ್ತು ಡ್ರೋನ್ ಬಳಕೆಯ ಬಗ್ಗೆ ನೇರ ಮಾಹಿತಿಯನ್ನು ನೀಡುತ್ತದೆ.

- ಯೋಜನೆಯ ಅಡಿಯಲ್ಲಿನ ಉಪಕ್ರಮಗಳು ಸ್ವಸಹಾಯ ಗುಂಪುಗಳಿಗೆ ಸುಸ್ಥಿರ ವ್ಯವಹಾರ ಮತ್ತು ಜೀವನೋಪಾಯ ಬೆಂಬಲವನ್ನು ಒದಗಿಸುತ್ತದೆ ಮತ್ತು ಅವರು ತಮಗಾಗಿ ಹೆಚ್ಚುವರಿ ಆದಾಯವನ್ನು ಗಳಿಸಲು ಸಾಧ್ಯವಾಗುತ್ತದೆ ಎಂದು ಊಹಿಸಲಾಗಿದೆ. ಈ ಯೋಜನೆಯು ಸುಧಾರಿತ ದಕ್ಷತೆಗಾಗಿ, ಬೆಳೆ ಇಳುವರಿಯನ್ನು ಹೆಚ್ಚಿಸಲು ಮತ್ತು ರೈತರ ಅನುಕೂಲಕ್ಕಾಗಿ ಕಾರ್ಯಾಚರಣೆಯ ವೆಚ್ಚವನ್ನು ಕಡಿಮೆ ಮಾಡಲು ಕೃಷಿಯಲ್ಲಿ ಸುಧಾರಿತ ತಂತ್ರಜ್ಞಾನವನ್ನು ಅಳವಡಿಸಲು ಸಹಾಯ ಮಾಡುತ್ತದೆ.

 

*****


(Release ID: 2070084) Visitor Counter : 58