ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಆಯುರ್ವೇದ ದಿನದ ಅಂಗವಾಗಿ ರಾಷ್ಟ್ರದ ಜನತೆಗೆ  ಪ್ರಧಾನಮಂತ್ರಿ ಶುಭಾಶಯ

Posted On: 29 OCT 2024 8:54AM by PIB Bengaluru

ಆಯುರ್ವೇದ ದಿನದ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರದ ಜನತೆಗೆ ಶುಭ ಕೋರಿದ್ದಾರೆ. ಭಗವಾನ್ ಧನ್ವಂತರಿಯ ಜನ್ಮ ದಿನದ ಈ ಶುಭ ಸಂದರ್ಭವು ನಮ್ಮ ಮಹಾನ್ ಸಂಸ್ಕೃತಿಯಲ್ಲಿ ಮಿಳಿತಗೊಂಡಿರುವ ಆಯುರ್ವೇದದ ಬಳಕೆ ಮತ್ತು ಕೊಡುಗೆಯೊಂದಿಗೆ ಸಂಪರ್ಕಿತವಾಗಿದೆ ಎಂದು ಅವರು ಹೇಳಿದ್ದಾರೆ. ಪ್ರಾಚೀನ ವೈದ್ಯ ಪದ್ಧತಿಯಾದ ಆಯುರ್ವೇದವು ಇಡೀ ಮನುಕುಲದ ಆರೋಗ್ಯಕರ ಜೀವನಕ್ಕೆ ಪ್ರಯೋಜ‌ಕಾರಿಯಾಗಲಿದೆ ಎಂದು ಶ್ರೀ ಮೋದಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಎಕ್ಸ್ ಪೋಸ್ಟ್ ನಲ್ಲಿ ಶ್ರೀ ಮೋದಿ ಅವರು ಹೀಗೆ ಬರೆದಿದ್ದಾರೆ: 

“ದೇಶದ ಸಮಸ್ತ ನಾಗರಿಕರಿಗೆ ಆಯುರ್ವೇದ ದಿನದ ಶುಭಾಶಯಗಳು.  ಭಗವಾನ್ ಧನ್ವಂತರಿಯ ಜನ್ಮ ದಿನದ ಈ ಶುಭ ಸಂದರ್ಭವು ನಮ್ಮ ಮಹಾನ್ ಸಂಸ್ಕೃತಿಯಲ್ಲಿ ಆಯುರ್ವೇದದ ಬಳಕೆ ಮತ್ತು ಆದರ ಕೊಡುಗೆಗಳೊಂದಿಗೆ ಸಮ್ಮಿಳಿತವಾಗಿದ್ದು ಪ್ರಸ್ತುತ ಇದರ ಮಹತ್ವವನ್ನು ಇಡೀ ಜಗತ್ತು ಪುರಸ್ಕರಿಸಿದೆ. ಈ ಪ್ರಾಚೀನ ವೈದ್ಯಕೀಯ ಪದ್ಧತಿಯು ಇಡೀ ಮನುಕುಲದ ಆರೋಗ್ಯಪೂರ್ಣ ಜೀವನಕ್ಕೆ ಅನುಕೂಲಕರವಾಗಿರಲಿದೆ ಎಂದು ನನಗೆ ವಿಶ್ವಾಸವಿದೆ.”

 

 

*****




(Release ID: 2069413) Visitor Counter : 8