ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಇಂದಿನ ಮನ್ ಕಿ ಬಾತ್ ಸಂಚಿಕೆಯಲ್ಲಿ 'ಡಿಜಿಟಲ್ ಅರೆಸ್ಟ್' ಎಂದು ಬೆದರಿಕೆ ಹಾಕುವ ಮೂಲಕ ಜನರನ್ನು ವಂಚಿಸುವ ಮೋಸದ ಹಾವಳಿಯಿಂದ ಸಮಾಜವನ್ನು ಜಾಗೃತಗೊಳಿಸಿದರು


ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು ತಮ್ಮ ಎಕ್ಸ್ ಸಂದೇಶ ತಾಣದಲ್ಲಿ ಪ್ರಕಟಿಸಿದ ಸಂದೇಶದಲ್ಲಿ, ಸೈಬರ್ ಸುರಕ್ಷಿತ ಭಾರತ ನಿರ್ಮಾಣಕ್ಕೆ ಮೋದಿ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ

ಪೊಲೀಸ್, ಸಿಬಿಐ, ಮಾದಕ ದ್ರವ್ಯ ತಡೆ ಅಥವಾ ಆರ್‌.ಬಿ.ಐ. ಅಧಿಕಾರಿಗಳಂತೆ ಪೋಶಾಕಿನಲ್ಲಿ ನಾಗರಿಕರಿಗೆ ವಿಡಿಯೊ ಕರೆ ಮಾಡುವ ಮೂಲಕ ಬೆದರಿಕೆ ಹಾಕುವುದು ಮತ್ತು ಅನುಮಾನಾಸ್ಪ ಹಾಗೂ ಸಂಶಯ ಗೊಂದಲಗಳನ್ನು ಮೂಡಿಸುವುದು ಸೈಬರ್ ವಂಚಕರ ವಿಧಾನಗಳಾಗಿವೆ

ಇಂತಹ ವಂಚನೆಯನ್ನು ತಡೆಗಟ್ಟಲು ಮಾಡಬೇಕಾದ ಕ್ರಮಗಳ ವಿವರಣೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೀಡಿದರು ಮತ್ತು ಯಾವುದೇ ಸರ್ಕಾರಿ ಸಂಸ್ಥೆಯು ಫೋನ್ ಅಥವಾ ವಿಡಿಯೊ ಕರೆಗಳ ಮೂಲಕ ತನಿಖೆಗಳನ್ನು ನಡೆಸುವುದಿಲ್ಲ ಎಂದು ನಾಗರಿಕರಿಗೆ ತಿಳಿಸಿದರು

ಈ ದುಷ್ಟತನವನ್ನು ಮೊಳಕೆಯೊಡೆಯುವ ಮುನ್ನ ತಡೆಯಲು ಮೋದಿ ಅವರು, 'ನಿಲ್ಲಿ, ಯೋಚಿಸಿ ಹಾಗೂ ಕ್ರಮ ತೆಗೆದುಕೊಳ್ಳಿ ( ರುಕೋ, ಸೋಚೋ ಔರ್ ಆಕ್ಷನ್ ಲೋ) ' ಎಂಬ ಉಪಾಯದ ಮಂತ್ರವನ್ನು ಜನತೆಗೆ ಹೇಳಿದರು, ಮತ್ತು ಇಂತಹ  ಕರೆಗಳು ಬಂದಾಗ ಆ ವಿವರಗಳನ್ನು ತಕ್ಷಣ ಅಧಿಕಾರಿಗಳಿಗೆ ಸಹಾಯವಾಣಿ ಸಂಖ್ಯೆ 1930 ಮೂಲಕ ಅಥವಾ https://cybercrime.gov.in ನಲ್ಲಿ ವರದಿ ಮಾಡುವಂತೆ ಮನವಿ ಮಾಡಿದರು

Posted On: 27 OCT 2024 5:56PM by PIB Bengaluru

ಇಂದಿನ ಮನ್‌ ಕಿ ಬಾತ್ ಸಂಚಿಕೆಯಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 'ಡಿಜಿಟಲ್ ಅರೆಸ್ಟ್' ಎಂದು ಬೆದರಿಕೆ ಹಾಕುವ ಮೂಲಕ ಜನರನ್ನು ವಂಚಿಸುವ ಸಾಮಾಜಿಕ – ಆರ್ಥಿಕ ಪಿಡುಗಿನ ಜಾಲದಿಂದ ಸಮಾಜವನ್ನು ಜಾಗೃತಗೊಳಿಸಿದರು.

ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು ತಮ್ಮ ಎಕ್ಸ್ ವೇದಿಕೆಯಲ್ಲಿ ಈ ರೀತಿ ಸಂದೇಶ ಪ್ರಕಟಿಸಿದ್ದಾರೆ, “ಈ ವಂಚಕರ ವಿಧಾನವೆಂದರೆ ಪೊಲೀಸ್, ಸಿಬಿಐ, ಮಾದಕ ದ್ರವ್ಯ ವಿರೋಧಿ ಅಥವಾ ಆರ್‌.ಬಿ.ಐ ಅಧಿಕಾರಿಗಳಂತೆ ವೇಷಧರಿಸಿ ನಾಗರಿಕರಿಗೆ ಮೋಸ ಮಾಡುವುದು ಮತ್ತು ವಿಡಿಯೊ ಕರೆ ಮೂಲಕ ಅನುಮಾನಾಸ್ಪದ ಸಂಶಯ ಸೃಷ್ಟಿಸಿ ಬೆದರಿಕೆ ಹಾಕುವುದು. ಇಂತಹ ವಂಚನೆಗಳನ್ನು ತಡೆಗಟ್ಟಲು ನಾಗರಿಕರು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿ ಅವರು ವಿವರಿಸಿದ್ದಾರೆ. ಯಾವುದೇ ಸರ್ಕಾರಿ ಸಂಸ್ಥೆ ಫೋನ್ ಅಥವಾ ವೀಡಿಯೊ ಕರೆಗಳ ಮೂಲಕ ತನಿಖೆ ನಡೆಸುವುದಿಲ್ಲ ಎಂದು ಜನತೆಗೆ ಅವರು ನೆನಪಿಸಿದರು. ಈ ದುಷ್ಟ ಕೃತ್ಯಗಳನ್ನು ಮೊಗ್ಗಿನಲ್ಲೇ ಚಿವುಟಿ ಹಾಕಲು, ಮೋದಿ ಜಿ ಅವರು 'ನಿಲ್ಲಿ, ಯೋಚಿಸಿ ಹಾಗೂ ಕ್ರಮ ತೆಗೆದುಕೊಳ್ಳಿ ( ರುಕೋ, ಸೋಚೋ ಔರ್ ಆಕ್ಷನ್ ಲೋ) ' ಎಂಬ ಉಪಾಯದ ಮಂತ್ರವನ್ನು ಜನತೆಗೆ ತಿಳಿಸಿಕೊಟ್ಟಿದ್ದಾರೆ, ಮತ್ತು ಸಹಾಯವಾಣಿ ಸಂಖ್ಯೆ 1930 ಮೂಲಕ ಅಥವಾ https://cybercrime.gov.in ನಲ್ಲಿ ತಕ್ಷಣವೇ ಅಧಿಕಾರಿಗಳಿಗೆ ಬಂದಿರುವ ಕರೆಗಳ ಕುರಿತದ ವಿವರಗಳನ್ನು ವರದಿ ಮಾಡುವಂತೆ ಮನವಿ ಮಾಡಿದ್ದಾರೆ. ಮೋದಿ ಸರ್ಕಾರವು ಸೈಬರ್‌ ಸುರಕ್ಷಿತ ಭಾರತವನ್ನು ನಿರ್ಮಿಸಲು ಬದ್ಧವಾಗಿದೆ.”

 

 

*****


(Release ID: 2068764) Visitor Counter : 33