ಗೃಹ ವ್ಯವಹಾರಗಳ ಸಚಿವಾಲಯ
ಸೋಮವಾರ ನಡೆಯಲಿರುವ ಎನ್.ಡಿ.ಎಂ.ಎ.ಯ 20ನೇ ಸಂಸ್ಥಾಪನಾ ದಿನದ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ
ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ವಿಪತ್ತು ಅಪಾಯ ಕಡಿಮೆಗೊಳಿಸುವ (ಡಿ.ಆರ್.ಆರ್.) ಕಾರ್ಯತಂತ್ರಗಳ 10 ಅಂಶಗಳ ಕಾರ್ಯಸೂಚಿಗೆ ಅನುಗುಣವಾಗಿ, ವಿಪತ್ತುಗಳ ಪರಿಣಾಮವನ್ನು ಕಡಿಮೆಗೊಳಿಸಲು ಪರಿಪೂರ್ಣವಾಗಿ ಒಳಗೊಂಡಿರುವ ಮತ್ತು ಪೂರ್ವಭಾವಿ ಕ್ರಮಗಳನ್ನು ಜಾರಿಗೆ ತರಲು ಭಾರತ ಸರ್ಕಾರ ಬದ್ಧವಾಗಿದೆ
''ನಡವಳಿಕೆಯ ಬದಲಾವಣೆಗಾಗಿ ಜಾಗೃತಿ ಮೂಡಿಸುವ ಮೂಲಕ ವಿಪತ್ತು ಅಪಾಯವನ್ನು ಕಡಿಮೆ ಮಾಡಲು ಸಮುದಾಯಗಳನ್ನು ಸಶಕ್ತಗೊಳಿಸುವುದು' ಈ ವರ್ಷದ ಸಂಸ್ಥಾಪನಾ ದಿನದ ಪರಿಕಲ್ಪನೆಯಾಗಿದೆ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮತ್ತು ಇಲಾಖೆಗಳ ಹಿರಿಯ ಅಧಿಕಾರಿಗಳು, ಅಂತರಾಷ್ಟ್ರೀಯ/ವಿಶ್ವ ಸಂಸ್ಥೆಯ ಪ್ರತಿನಿಧಿಗಳು, ವಿಪತ್ತು ನಿರ್ವಹಣಾ ತಜ್ಞರು, ಎನ್.ಜಿ.ಒ.ಗಳ ಸದಸ್ಯರು ಮತ್ತು ದೇಶಾದ್ಯಂತ ವಿಪತ್ತು ನಿರ್ವಹಣಾ ಕ್ಷೇತ್ರದಲ್ಲಿ ಕೆಲಸ ಮಾಡುವ ಪ್ರಮುಖ ಪಾಲುದಾರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ
Posted On:
26 OCT 2024 6:32PM by PIB Bengaluru
ನವದೆಹಲಿಯಲ್ಲಿ ಸೋಮವಾರ 28ನೇ ಅಕ್ಟೋಬರ್, 2024 ರಂದು ನಡೆಯಲಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎನ್.ಡಿ.ಎಂ.ಎ) 20 ನೇ ಸಂಸ್ಥಾಪನಾ ದಿನದ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ವಿಪತ್ತು ಅಪಾಯ ಕಡಿಮೆಗೊಳಿಸುವ (ಡಿ.ಆರ್.ಆರ್.) ಕಾರ್ಯತಂತ್ರಗಳ 10 ಅಂಶಗಳ ಕಾರ್ಯಸೂಚಿಗೆ ಅನುಗುಣವಾಗಿ, ವಿಪತ್ತುಗಳ ಪರಿಣಾಮವನ್ನು ಕಡಿಮೆಗೊಳಿಸಲು ಪರಿಪೂರ್ಣವಾಗಿ ಒಳಗೊಂಡಿರುವ ಮತ್ತು ಪೂರ್ವಭಾವಿ ಕ್ರಮಗಳನ್ನು ಜಾರಿಗೆ ತರಲು ಭಾರತ ಸರ್ಕಾರ ಬದ್ಧವಾಗಿದೆ.
ವಿಪತ್ತು ಪೀಡಿತ ಪ್ರದೇಶಗಳಲ್ಲಿ ಮತ್ತು ಸುತ್ತಮುತ್ತ ವಾಸಿಸುವ ಸಮುದಾಯಗಳ ಗುರುತಿಸಲಾದ ವಿಭಾಗಗಳಲ್ಲಿ ಸ್ವಭಾವ - ವರ್ತನೆಯಲ್ಲಿ ಬದಲಾವಣೆಗಳನ್ನು ತರಲು ಮತ್ತು ಪರಿಣಾಮಕಾರಿಯಾಗಿ ಮುಂಜಾಗ್ರತೆ ಸಾಧಿಸಲು ಜಾಗೃತಿ ಮೂಡಿಸುವ ಚಟುವಟಿಕೆಗಳಿಗೆ ಪ್ರಚೋದನೆ ನೀಡಲು ಅಗತ್ಯ 'ನಡವಳಿಕೆಯ ಬದಲಾವಣೆಗಾಗಿ ಜಾಗೃತಿಯ ಮೂಲಕ ವಿಪತ್ತು ಅಪಾಯವನ್ನು ಕಡಿಮೆ ಮಾಡಲು ಸಮುದಾಯಗಳನ್ನು ಸಶಕ್ತಗೊಳಿಸುವುದು' - ಇದು ಈ ವರ್ಷದ ಸಂಸ್ಥಾಪನಾ ದಿನದ ಪರಿಕಲ್ಪನೆಯ ವಿಷಯವಾಗಿರುತ್ತದೆ. ಈ ಮೂಲಕ ವಿಪತ್ತು ಅಪಾಯ ಕಡಿತಗೊಳಿಸುವ ಗುರಿ ಹೊಂದಿದೆ.
ಸಮಾರಂಭದ ಮುಖ್ಯ ವಿಷಯದ ಸುತ್ತ ಮೂರು ತಾಂತ್ರಿಕ ವಿಷಯಗಳು ಕೂಡ ಕೇಂದ್ರೀಕೃತವಾಗಿವೆ: i) 'ಹವಾಮಾನದ ಮಾದರಿಯಲ್ಲಿನ ಬದಲಾವಣೆಯೊಂದಿಗೆ ಸಮುದಾಯಗಳಿಂದ ಧ್ವನಿಗಳು', ii) 'ವಿಪತ್ತು ಅಪಾಯ ಕಡಿತ - ಕೊನೆಯ ಮೈಲಿ ಸಂವಹನಕ್ಕಾಗಿ ತಂತ್ರಜ್ಞಾನ', iii) 'ನಿಧಾನವಾಗಿ ಪ್ರಾರಂಭವಾಗುವ ಹವಾಮಾನ ಘಟನೆಗಳು, ಹವಾಮಾನ ಬದಲಾವಣೆಯ ಕುರಿತು ಜಾಗೃತಿ ಮತ್ತು ಡಿ.ಆರ್.ಆರ್. ಗಳನ್ನು ಕಾರ್ಯಕ್ರಮದಲ್ಲಿ ಆಯೋಜಿಸಲಾಗುತ್ತದೆ.
ಇದರ ಹೊರತಾಗಿ, ವಿವಿಧ ವಿಪತ್ತು ವಿಷಯಗಳ ಕುರಿತು ಮಾರ್ಗಸೂಚಿಗಳು, ಕಾರ್ಯಸೂಚಿಗಳು ಮತ್ತು ಪುಸ್ತಕಗಳು ಇವುಗಳಲ್ಲಿ ಸೇರಿರುವ ಹಲವಾರು ಮಾಹಿತಿ ಪೂರ್ಣ ದಾಖಲೆಗಳ ಬಿಡುಗಡೆ ಮಾಡಲಾಗುವುದು.
ಈ ಕಾರ್ಯಕ್ರಮದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮತ್ತು ಇಲಾಖೆಗಳ ಹಿರಿಯ ಅಧಿಕಾರಿಗಳು, ಅಂತರಾಷ್ಟ್ರೀಯ/ ವಿಶ್ವಸಂಸ್ಥೆಯ ಪ್ರತಿನಿಧಿಗಳು, ಅಧಿಕಾರಿಗಳು, ವಿಪತ್ತು ನಿರ್ವಹಣಾ ತಜ್ಞರು, ಎನ್.ಜಿ.ಒ.ಗಳ ಸದಸ್ಯರು ಮತ್ತು ದೇಶಾದ್ಯಂತದ ವಿಪತ್ತು ನಿರ್ವಹಣಾ ಕ್ಷೇತ್ರದಲ್ಲಿ ಕೆಲಸ ಮಾಡುವ ಪ್ರತಿನಿಧಿಗಳು ಪ್ರಮುಖ ಪಾಲುದಾರರು ಭಾಗವಹಿಸಲಿದ್ದಾರೆ. ಹಾಗೂ ಇವರ ಜೊತೆಗೆ, ಇತರ ಗಣ್ಯರಲ್ಲದೆ, ವಿಪತ್ತು ನಿರ್ವಹಣಾ ಅಪಾಡ ಮಿತ್ರ, ನೆಹರು ಯುವ ಕೇಂದ್ರ ಸಂಘಟನೆ (ಎನ್‌ವೈಕೆಎಸ್), ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ), ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್), ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ (ಬಿಎಸ್‌ಜಿ) ಯ ಸ್ವಯಂಸೇವಕರನ್ನು ಸಹ ಈ ಬೃಹತ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ. .
*****
(Release ID: 2068716)
Visitor Counter : 11