ವಾರ್ತಾ ಮತ್ತು ಪ್ರಸಾರ ಸಚಿವಾಲಯ
iffi banner
0 3

ಐ ಎಫ್‌ ಎಫ್‌ ಐ 2024: ಎನ್‌ ಎಫ್‌ ಡಿ ಸಿ ಇಂಡಿಯಾ ಫಿಲ್ಮ್ ಬಜಾರ್‌ ನಲ್ಲಿ ಸಹ-ನಿರ್ಮಾಣ ಮಾರುಕಟ್ಟೆ ವಿಭಾಗಕ್ಕೆ ಆಯ್ಕೆಯನ್ನು ಪ್ರಕಟಿಸಿದೆ


21 ಚಲನಚಿತ್ರಗಳು, 7 ದೇಶಗಳ 8 ವೆಬ್ ಸರಣಿಗಳು; ಫಿಲ್ಮ್ ಬಜಾರ್‌ ನಲ್ಲಿ ಸಹ-ನಿರ್ಮಾಣ ಮಾರುಕಟ್ಟೆ ವಿಭಾಗವು ವೈವಿಧ್ಯಮಯ ಜಾಗತಿಕ ನಿರೂಪಣೆಗಳಿಗೆ ಸಾಕ್ಷಿಯಾಗಲಿದೆ

ಏಷ್ಯಾ ಟಿವಿ ಫೋರಮ್ ಮತ್ತು ಮಾರ್ಕೆಟ್ (ಎಟಿಎಫ್) ನೊಂದಿಗೆ ಎನ್‌ ಎಫ್‌ ಡಿ ಸಿ ಫಿಲ್ಮ್ ಬಜಾರ್ ಸಹಯೋಗ ಹೊಂದಿದೆ

ಎನ್‌ ಎಫ್‌ ಡಿ ಸಿ ಫಿಲ್ಮ್ ಬಜಾರ್‌ ನ 18ನೇ ಆವೃತ್ತಿಯು 21 ಫೀಚರ್‌ ಚಲನಚಿತ್ರಗಳು ಮತ್ತು ಏಳು ದೇಶಗಳ 8 ವೆಬ್ ಸರಣಿಗಳನ್ನು ಸಹ-ನಿರ್ಮಾಣ ಮಾರುಕಟ್ಟೆ (Co-Production Market) ವಿಭಾಗಕ್ಕೆ ತನ್ನ ಅಧಿಕೃತ ಆಯ್ಕೆಯನ್ನು ಪ್ರಕಟಿಸಿದೆ. 2024 ರ ನವೆಂಬರ್ 20 ರಿಂದ 28 ರವರೆಗೆ ಗೋವಾದಲ್ಲಿ ನಡೆಯಲಿರುವ ಪ್ರತಿಷ್ಠಿತ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ ಎಫ್‌ ಎಫ್‌ ಐ) ಜೊತೆಗೆ ಪ್ರತಿ ವರ್ಷ ಫಿಲ್ಮ್ ಬಜಾರ್ ಅನ್ನು ಆಯೋಜಿಸಲಾಗುತ್ತದೆ. ಈ ವರ್ಷ, ಫಿಲ್ಮ್ ಬಜಾರ್ 2024ರ ನವೆಂಬರ್ 20 ರಿಂದ 24 ರವರೆಗೆ ಗೋವಾದ ಮ್ಯಾರಿಯೊಟ್ ರೆಸಾರ್ಟ್‌ನಲ್ಲಿ ನಡೆಯಲಿದೆ.

ಈ ವರ್ಷದ ಅಧಿಕೃತ ಆಯ್ಕೆಯು ಹಿಂದಿ, ಇಂಗ್ಲಿಷ್, ಅಸ್ಸಾಮಿ, ತಮಿಳು, ಮಾರ್ವಾಡಿ, ಬೆಂಗಾಲಿ, ಮಲಯಾಳಂ, ಪಂಜಾಬಿ, ನೇಪಾಳಿ, ಮರಾಠಿ, ಪಹಾಡಿ ಮತ್ತು ಕ್ಯಾಂಟೋನೀಸ್ ಸೇರಿದಂತೆ ಹಲವು ಭಾಷೆಗಳ ಸಮೃದ್ಧತೆಯನ್ನು ಪ್ರದರ್ಶಿಸುತ್ತದೆ. ಫಿಲ್ಮ್ ಬಜಾರ್‌ ನಲ್ಲಿ, ಭಾರತ, ಬಾಂಗ್ಲಾದೇಶ, ನೇಪಾಳ, ಆಸ್ಟ್ರೇಲಿಯಾ, ಯುಕೆ, ಜರ್ಮನಿ ಮತ್ತು ಹಾಂಗ್ ಕಾಂಗ್‌ ನ ಚಲನಚಿತ್ರ ನಿರ್ದೇಶಕರು ನಿರ್ಮಾಪಕರು, ವಿತರಕರು, ಚಿತ್ರೋತ್ಸವ ಆಯೋಜಕರು, ಹಣಕಾಸು ಒದಗಿಸುವವರು ಮತ್ತು ಮಾರಾಟ ಏಜೆಂಟರು ಸೇರಿದಂತೆ ಹಲವಾರು ಉದ್ಯಮ ವೃತ್ತಿಪರರು ತಮ್ಮ ಯೋಜನೆಗಳನ್ನು ಪ್ರಸ್ತುತಪಡಿಸುತ್ತಾರೆ.

ಓಪನ್ ಪಿಚ್ ಅಧಿವೇಶನವು ಚಲನಚಿತ್ರ ನಿರ್ಮಾಪಕರಿಗೆ ಸಂಪರ್ಕಗಳನ್ನು ಹೊಂದಲು ಮತ್ತು ಸಂಭಾವ್ಯ ಸಹಯೋಗಗಳನ್ನು ಅನ್ವೇಷಿಸಲು ಅದ್ಭುತ ಅವಕಾಶವಾಗಿದೆ ಎಂದು ಸಾಬೀತಾಗಿದೆ. ಈ ವರ್ಷ ಸಹ-ನಿರ್ಮಾಣ ಮಾರುಕಟ್ಟೆ ವಿಭಾಗಕ್ಕೆ ಆಯ್ಕೆಯಾದ ಚಲನಚಿತ್ರಗಳು ಮತ್ತು ವೆಬ್ ಸರಣಿಗಳ ಪಟ್ಟಿ ಇಲ್ಲಿದೆ:

ಕ್ರ.ಸಂ.

ಚಲನಚಿತ್ರಗಳು / ವೆಬ್ ಸರಣಿಗಳು

ದೇಶ / ರಾಜ್ಯ

ಭಾಷೆ

  1.  

ಎ ನೈಟ್ಸ್ ವಿಸ್ಪರ್ಸ್ ಮತ್ತು ವಿಂಡ್ಸ್

ಭಾರತ

ಅಸ್ಸಾಮಿ

  1.  

 ಆಡು ಕಿ ಕಸಮ್‌ (ಡೆಸ್ಟಿನಿ ಡ್ಯಾನ್ಸ್)

ಭಾರತ

ಇಂಗ್ಲಿಷ್, ಹಿಂದಿ

  1.  

ಆನೈಕಟ್ಟಿ ಬ್ಲೂಸ್

ಭಾರತ

ತಮಿಳು

  1.  

ಆಬ್ಸೆಂಟ್

ಭಾರತ

ಹಿಂದಿ, ಇಂಗ್ಲಿಷ್

  1.  

ಆಲ್‌ ಟೆನ್‌ ಹೆಡ್ಸ್‌ ಆಫ್‌ ರಾವಣ

ಭಾರತ

ಹಿಂದಿ

  1.  

ಚೇತಕ್

ಭಾರತ

ಹಿಂದಿ, ಮಾರ್ವಾಡಿ

  1.  

ಡಿವೈನ್‌ ಕಾರ್ಡ್ಸ್

ಬಾಂಗ್ಲಾದೇಶ, ಭಾರತ

ಬೆಂಗಾಲಿ

  1.  

ಫೆರಲ್

ಭಾರತ

ಇಂಗ್ಲೀಷ್

  1.  

ಗುಲಿಸ್ತಾನ್ (ಇಯರ್‌ ಆಫ್‌ ವೀಡ್ಸ್‌)

ಭಾರತ

ಹಿಂದಿ

  1.  

ಗುಪ್ತಮ್ (ದ ಲಾಸ್ಟ್‌ ಆಫ್‌ ದೆಮ್‌ ಪ್ಲೇಗ್ಸ್)

ಭಾರತ

ಮಲಯಾಳಂ

  1.  

ಹರ್ಬೀರ್

ಭಾರತ

ಪಂಜಾಬಿ, ಹಿಂದಿ, ಇಂಗ್ಲಿಷ್

  1.  

ಹೋಮ್‌ ಬಿಫೋರ್‌ ನೈಟ್

ಆಸ್ಟ್ರೇಲಿಯಾ, ನೇಪಾಳ

ಇಂಗ್ಲಿಷ್, ನೇಪಾಳಿ

  1.  

ಕಬೂತರ್

ಭಾರತ

ಮರಾಠಿ

  1.  

ಕೋಥಿಯಾನ್- ಫಿಷರ್ಸ್‌ ಆಫ್‌ ಮೆನ್

ಭಾರತ

ಮಲಯಾಳಂ

  1.  

ಕುರಿಂಜಿ (ದ ಡಿಸಪಿಯರಿಂಗ್‌ ಫ್ಲವರ್)

ಭಾರತ, ಜರ್ಮನಿ

ಮಲಯಾಳಂ

  1.  

ಬಾಘಿ ಬೇಚರೆ (ರಿಲಕ್ಟಂಟ್‌ ರೆಬೆಲ್ಸ್)

ಭಾರತ

ಹಿಂದಿ

  1.  

ರೋಯ್ಡ್

ಬಾಂಗ್ಲಾದೇಶ

ಬೆಂಗಾಲಿ

  1.  

ಸೋಮಾಹೆಲಾಂಗ್‌ (ದ ಸಾಂಗ್‌ ಆಫ್‌ ಫ್ಲವರ್ಸ್)

ಭಾರತ, ಯುಕೆ

ಪಹಾಡಿ, ಹಿಂದಿ

  1.  

ದ ಎಂಪ್ಲಾಯರ್

ಭಾರತ

ಹಿಂದಿ

  1.  

ವ್ಯಾಕ್ಸ್ ಡ್ಯಾಡಿ

ಭಾರತ

ಇಂಗ್ಲಿಷ್, ಹಿಂದಿ

  1.  

ದ ವ್ಯಾಂಪೈರ್‌ ಆಫ್‌ ಶೆಯುಂಗ್ ಶೂಯಿ

ಹಾಂಗ್ ಕಾಂಗ್

ಇಂಗ್ಲಿಷ್, ಕ್ಯಾಂಟೋನೀಸ್, ಹಿಂದಿ

  1.  

ಏಜ್‌ ಆಫ್‌ ಡೆಕ್ಕನ್- ದ ಲೆಜೆಂಡ್‌ ಆಫ್‌ ಮಲಿಕ್ ಅಂಬರ್

ಭಾರತ

ಹಿಂದಿ, ಇಂಗ್ಲಿಷ್

  1.  

ಚೌಹಾನ್ಸ್ BnB ಬೆಡ್‌ ಅಂಡ್‌ ಬಸೆರಾ

ಭಾರತ

ಹಿಂದಿ

  1.  

ಚೇಕವರ್

ಭಾರತ

ತಮಿಳು, ಮಲಯಾಳಂ

  1.  

ಇಂಡಿಪೆಂಡೆಂಟ್

ಭಾರತ, ಯುಕೆ

ಇಂಗ್ಲೀಷ್, ತಮಿಳು

  1.  

ಜಸ್ಟ್‌ ಲೈಕ್‌ ಹರ್‌ ಮದರ್

ಭಾರತ

ಹಿಂದಿ, ಇಂಗ್ಲಿಷ್

  1.  

ಮಾಡರ್ನ್ ಟೈಮ್ಸ್

ಭಾರತ, ಯುಕೆ

ಇಂಗ್ಲೀಷ್

  1.  

ಪಾಂಡಿ-ಚೆರಿ

ಭಾರತ

ಹಿಂದಿ

  1.  

ರಿಸೆಟ್

ಭಾರತ

ತಮಿಳು, ಹಿಂದಿ, ತೆಲುಗು, ಕನ್ನಡ, ಮಲಯಾಳಂ

ಈ ವರ್ಷ ಏಷ್ಯಾ ಟಿವಿ ಫೋರಮ್ ಮತ್ತು ಮಾರ್ಕೆಟ್ (ಎಟಿಎಫ್) ನೊಂದಿಗೆ ಉತ್ತೇಜಕ ಪಾಲುದಾರಿಕೆಯನ್ನು ಕಂಡಿದೆ, ಕ್ರಾಸ್-ಎಕ್ಸ್ಚೇಂಜ್ ಇನಿಶಿಯೇಟಿವ್ ಅಡಿಯಲ್ಲಿ ಯೋಜನೆಯನ್ನು ಪ್ರಾರಂಭಿಸಿದೆ. ವೆಬ್ ಸರಣಿಯ ಹೆಚ್ಚುತ್ತಿರುವ ಜನಪ್ರಿಯತೆಯೊಂದಿಗೆ, ಎನ್‌ ಎಫ್‌ ಡಿ ಸಿ ಯು ಡ್ರಾಮಾ, ರೋಮಾನ್ಸ್, ಪೀರಿಯಡ್‌ ಡ್ರಾಮಾ, ಹಾಸ್ಯ, ಆಕ್ಷನ್, ಸಾಹಸ ಮತ್ತು ಥ್ರಿಲ್ಲರ್‌ ಗಳಂತಹ ವಿಭಿನ್ನ ಪ್ರಕಾರಗಳಲ್ಲಿ ಎಂಟು ಅತ್ಯಾಕರ್ಷಕ ಯೋಜನೆಗಳನ್ನು ಸೇರಿಸಿದೆ.

ಎನ್‌ ಎಫ್‌ ಡಿ ಸಿ ಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ಪೃಥುಲ್ ಕುಮಾರ್, “ಸಹ-ನಿರ್ಮಾಣ ಮಾರುಕಟ್ಟೆಯು ಫಿಲ್ಮ್ ಬಜಾರ್‌ ನ ನಿರ್ಣಾಯಕ ಭಾಗವಾಗಿದೆ, ಆಯ್ದ ಯೋಜನೆಗಳಿಗೆ ಅಮೂಲ್ಯವಾದ ಆರ್ಥಿಕ ಬೆಂಬಲವನ್ನು ಒದಗಿಸುತ್ತದೆ. ಈ ವರ್ಷ, ನಾವು 30 ಭಾಷೆಗಳಲ್ಲಿ 23 ದೇಶಗಳಿಂದ ಪ್ರಭಾವಶಾಲಿ 180 ಫೀಚರ್ ಚಿತ್ರಗಳ ಸಲ್ಲಿಕೆಗಳನ್ನು ಸ್ವೀಕರಿಸಿದೆವು. ನಮ್ಮ ಉದ್ಘಾಟನಾ ವೆಬ್ ಸರಣಿಯ ಆವೃತ್ತಿಗಾಗಿ, ನಾವು 14 ಭಾಷೆಗಳನ್ನು ಪ್ರತಿನಿಧಿಸುವ 8 ದೇಶಗಳ 38 ಸಲ್ಲಿಕೆಗಳನ್ನು ಹೊಂದಿದ್ದೇವೆ. ಆಯ್ಕೆಯಾದ ಎಲ್ಲಾ ಚಲನಚಿತ್ರ ನಿರ್ಮಾತೃಗಳುರು ತಮ್ಮ ದೃಷ್ಟಿಕೋನಗಳಿಗೆ ಜೀವ ತುಂಬಲು ಪರಿಪೂರ್ಣ ಸಹ-ನಿರ್ಮಾಣ ಪಾಲುದಾರರನ್ನು ಹುಡುಕುವಲ್ಲಿ ಯಶ ಕಾಣಲಿ ಎಂದು ಶುಭ ಹಾರೈಸುತ್ತೇವೆ!” ಎಂದು ಹೇಳಿದ್ದಾರೆ.

ಫಿಲ್ಮ್ ಬಜಾರ್ ಬಗ್ಗೆ

2007 ರಲ್ಲಿ ಪ್ರಾರಂಭವಾದಾಗಿನಿಂದ, ಫಿಲ್ಮ್ ಬಜಾರ್ ದಕ್ಷಿಣ ಏಷ್ಯಾದ ಚಲನಚಿತ್ರಗಳು ಮತ್ತು ಚಲನಚಿತ್ರ ತಯಾರಿಕೆ, ನಿರ್ಮಾಣ ಮತ್ತು ವಿತರಣೆಯಲ್ಲಿನ ಪ್ರತಿಭೆಯನ್ನು ಅನ್ವೇಷಿಸಲು, ಬೆಂಬಲಿಸಲು ಮತ್ತು ಪ್ರದರ್ಶಿಸಲು ಮೀಸಲಾಗಿದೆ. ಫಿಲ್ಮ್ ಬಜಾರ್ ದಕ್ಷಿಣ ಏಷ್ಯಾ ಪ್ರದೇಶದಲ್ಲಿ ವಿಶ್ವ ಸಿನಿಮಾದ ಮಾರಾಟವನ್ನು ಸುಗಮಗೊಳಿಸುತ್ತದೆ, ಇದು ದಕ್ಷಿಣ ಏಷ್ಯಾದ ಮತ್ತು ಅಂತಾರಾಷ್ಟ್ರೀಯ ಚಲನಚಿತ್ರ ನಿರ್ಮಾತೃಗಳು, ನಿರ್ಮಾಪಕರು, ಮಾರಾಟ ಏಜೆಂಟರು ಮತ್ತು ಉತ್ಸವದ ಪ್ರೋಗ್ರಾಮರ್‌ ಗಳಿಗೆ ಸೃಜನಶೀಲ ಮತ್ತು ಆರ್ಥಿಕ ಸಹಯೋಗಕ್ಕಾಗಿ ಸಮನ್ವಯ ಬಿಂದುವಾಗಿ ಕಾರ್ಯನಿರ್ವಹಿಸುತ್ತದೆ. ಐದು ದಿನಗಳಲ್ಲಿ, ಫಿಲ್ಮ್ ಮಾರ್ಕೆಟ್ ದಕ್ಷಿಣ ಏಷ್ಯಾದ ಕಂಟೆಂಟ್ ಮತ್ತು ಪ್ರತಿಭೆಯನ್ನು ಉತ್ತೇಜಿಸಲು ಕೇಂದ್ರೀಕರಿಸುತ್ತದೆ. ಸಹ-ನಿರ್ಮಾಣ ಮಾರುಕಟ್ಟೆಯು ವೈವಿಧ್ಯಮಯ ಜಾಗತಿಕ ನಿರೂಪಣೆಗಳನ್ನು ಗುರುತಿಸುವ ಗುರಿಯನ್ನು ಹೊಂದಿದೆ.

ಐ ಎಫ್‌ ಎಫ್‌ ಐ ಬಗ್ಗೆ

1952ರಲ್ಲಿ ಸ್ಥಾಪನೆಯಾದ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ ಎಫ್‌ ಎಫ್‌ ಐ) ಏಷ್ಯಾದ ಪ್ರಮುಖ ಚಲನಚಿತ್ರೋತ್ಸವಗಳಲ್ಲಿ ಒಂದಾಗಿದೆ. ಅದರ ಪ್ರಾರಂಭದಿಂದಲೂ, ಐ ಎಫ್‌ ಎಫ್‌ ಐ ಚಲನಚಿತ್ರಗಳು, ಅವುಗಳ ಆಕರ್ಷಕ ಕಥೆಗಳು ಮತ್ತು ಅವುಗಳ ಹಿಂದೆ ಇರುವ ಪ್ರತಿಭಾವಂತ ವ್ಯಕ್ತಿಗಳನ್ನು ಸಂಭ್ರಮಿಸುವ ಗುರಿಯನ್ನು ಹೊಂದಿದೆ. ಚಲನಚಿತ್ರಗಳ ಬಗ್ಗೆ ಆಳವಾದ ಮೆಚ್ಚುಗೆ ಮತ್ತು ಪ್ರೀತಿಯನ್ನು ಉತ್ತೇಜಿಸಲು ಮತ್ತು ಪಸರಿಸಲಲು, ಜನರಲ್ಲಿ ತಿಳುವಳಿಕೆ ಮತ್ತು ಸೌಹಾರ್ದದ ಸೇತುವೆಗಳನ್ನು ನಿರ್ಮಿಸಲು ಮತ್ತು ವೈಯಕ್ತಿಕ ಮತ್ತು ಸಾಮೂಹಿಕ ಶ್ರೇಷ್ಠತೆಯ ಹೊಸ ಎತ್ತರಗಳನ್ನು ತಲುಪಲು ಅವರನ್ನು ಪ್ರೇರೇಪಿಸಲು ಈ ಉತ್ಸವವು ಪ್ರಯತ್ನಿಸುತ್ತದೆ.

 

*****

 

iffi reel

(Release ID: 2068304) Visitor Counter : 29