ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
azadi ka amrit mahotsav

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ 'ಇಶ್ರಮ್ - ಒನ್ ಸ್ಟಾಪ್ ಪರಿಹಾರ' ವ್ಯವಸ್ಥೆ ಪ್ರಾರಂಭಿಸಿದ ಕೇಂದ್ರ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ


“ಇಶ್ರಮ್ - ಒನ್ ಸ್ಟಾಪ್ ಪರಿಹಾರ”ವು ಇಶ್ರಮ್ ನಲ್ಲಿ ನೋಂದಾಯಿಸಿರುವ ಅಸಂಘಟಿತ ಕಾರ್ಮಿಕರಿಗೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಸರಳ ಪ್ರವೇಶ ಅವಕಾಶವನ್ನು ಒದಗಿಸುತ್ತದೆ: ಕೇಂದ್ರ ಸಚಿವರು

Posted On: 21 OCT 2024 4:44PM by PIB Bengaluru

ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಮತ್ತು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ಅವರು ಇಂದು ನವದೆಹಲಿಯಲ್ಲಿ "ಇಶ್ರಮ್ - ಒನ್ ಸ್ಟಾಪ್ ಪರಿಹಾರ" ವನ್ನು ಪ್ರಾರಂಭಿಸಿದರು. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ , ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕಾರ್ಯದರ್ಶಿ ಮತ್ತು ಇತರ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Image

ಇಶ್ರಮ್ - ಒನ್ ಸ್ಟಾಪ್ ಪರಿಹಾರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಡಾ. ಮಾಂಡವೀಯ ಅವರು ಇಶ್ರಮ್ ಪೋರ್ಟಲ್‌ನಲ್ಲಿ ಹೆಚ್ಚುತ್ತಿರುವ ನಂಬಿಕೆಯನ್ನು ವಿವರಿಸಿ ಹೇಳಿದರು, "ಪ್ರತಿದಿನ ಸುಮಾರು 60,000 ರಿಂದ 90,000 ಕಾರ್ಮಿಕರು ಇಶ್ರಮ್ ವೇದಿಕೆಗೆ ಸೇರುತ್ತಿದ್ದಾರೆ, ಇದು ಈ ಉಪಕ್ರಮದಲ್ಲಿ ಅವರ ಹೊಂದಿರುವ ವಿಶ್ವಾಸವನ್ನು ಪ್ರದರ್ಶಿಸುತ್ತದೆ." ಇಶ್ರಮ್ - ಒನ್ ಸ್ಟಾಪ್ ಪರಿಹಾರವು ಇಶ್ರಮ್ ನಲ್ಲಿ ನೋಂದಾಯಿಸಲಾದ ಅಸಂಘಟಿತ ಕಾರ್ಮಿಕರಿಗೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ತಡೆರಹಿತ ಪ್ರವೇಶ ಅವಕಾಶವನ್ನು ಒದಗಿಸುತ್ತದೆ” ಎಂದು ಹೇಳಿದರು.

Image

“ಅಸಂಘಟಿತ ಕಾರ್ಮಿಕರ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸುವುದು ಮತ್ತು ಸರ್ಕಾರದ ಕಲ್ಯಾಣ ಯೋಜನೆಗಳಿಗೆ ಅವರ ಪ್ರವೇಶವನ್ನು ಸುಲಭಗೊಳಿಸುವುದು ಇಶ್ರಮ್ ಒನ್ ಸ್ಟಾಪ್ ಪರಿಹಾರ ವ್ಯವಸ್ಥೆಯ ಪ್ರಾಥಮಿಕ ಉದ್ದೇಶವಾಗಿದೆ ಎಂದು ಕೇಂದ್ರ ಸಚಿವರಾದ ಡಾ. ಮಾಂಡವೀಯ ಅವರು ಹೇಳಿದರು. "ಈ ವೇದಿಕೆಯು ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ, ಸರ್ಕಾರವು ನೀಡುವ ಹಲವಾರು ಪ್ರಯೋಜನಗಳಿಗೆ ಕಾರ್ಮಿಕರನ್ನು ಸಂಪರ್ಕ ಏರ್ಪಡಿಸುತ್ತದೆ ಮತ್ತು ನೋಂದಣಿ ಪ್ರಕ್ರಿಯೆಯನ್ನು ಸುಲಭ ಮತ್ತು ಹೆಚ್ಚು ಪಾರದರ್ಶಕಗೊಳಿಸುತ್ತದೆ" ಎಂದು ಕೇಂದ್ರ ಸಚಿವರು ಹೇಳಿದರು.

ಎಲ್ಲಾ ಅಸಂಘಟಿತ ಕಾರ್ಮಿಕರು ಇಶ್ರಮ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು ಮತ್ತು ಅವರ ಅನುಕೂಲಕ್ಕಾಗಿ ವಿನ್ಯಾಸಗೊಳಿಸಲಾದ ವಿವಿಧ ಕಲ್ಯಾಣ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಡಾ.ಮಾಂಡವೀಯ ಒತ್ತಾಯಿಸಿದರು. ಈ ವ್ಯವಸ್ಥೆಗೆ ನೋಂದಣಿ ಮಾಡುವುದರಿಂದ ಕಾರ್ಮಿಕರಿಗೆ ಅವರ ಜೀವನೋಪಾಯವನ್ನು ಸುಧಾರಿಸುವ ಮತ್ತು ಅವರ ಯೋಗಕ್ಷೇಮವನ್ನು ಖಾತ್ರಿಪಡಿಸುವ ಉದ್ದೇಶದಿಂದ ಸರ್ಕಾರವು ಪ್ರಾರಂಭಿಸಿರುವ ವ್ಯಾಪಕ ಶ್ರೇಣಿಯ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಉಪಕ್ರಮಗಳನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ ಎಂದು ಅವರು ಒತ್ತಿ ಹೇಳಿದರು.

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯಗಳು ಸಿಗುವ ವ್ಯವಸ್ಥೆಗಳ ಸಂಪರ್ಕವನ್ನು ಖಚಿತಪಡಿಸಿಕೊಳ್ಳಲು ಇಶ್ರಮ್ ನೊಂದಿಗೆ ರಾಜ್ಯ ಸರ್ಕಾರದ ಪೋರ್ಟಲ್ ಗಳನ್ನು ಏಕೀಕರಣಗೊಳಿಸಲು ಕೇಂದ್ರ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ ಅವರು ಸಲಹೆ ನೀಡಿದರು. ಈ ಉಪಕ್ರಮವು ರಾಜ್ಯ/ಜಿಲ್ಲಾವಾರು ಮಟ್ಟದಲ್ಲಿ ಬಿಟ್ಟುಹೋಗಿರುವ ಸಂಭಾವ್ಯ ಫಲಾನುಭವಿಗಳನ್ನು ಗುರುತಿಸುವ ಮೂಲಕ ಯೋಜನೆಗಳ ಪಾರ್ದರ್ಶಕತೆ /ಶುದ್ಧತ್ವವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಕೇಂದ್ರ ಸಚಿವೆ ಸುಶ್ರೀ ಶೋಭಾ ಕರಂದ್ಲಾಜೆ ಅವರು ಹೇಳಿದರು.

ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಇತ್ತೀಚಿನ ಬಜೆಟ್ ಪ್ರಕಟಣೆ ಮತ್ತು 100 ದಿನಗಳ ಅಜೆಂಡಾದ ಪ್ರಕಾರ ವಿವಿಧ ಕೇಂದ್ರ ಸಚಿವಾಲಯಗಳು/ಇಲಾಖೆಗಳಿಂದ ಮಾಹಿತಿ(ಡೇಟಾ)ಗಳನ್ನು ಒಂದೇ ಕಡೆಯಲ್ಲಿ ಏಕೀಕರಿಸುವ ಮತ್ತು ಸಂಯೋಜಿಸುವ ಒಂದು ನಿಲುಗಡೆ ಪರಿಹಾರ ವ್ಯವಸ್ಥೆಯನ್ನು ಒಳಗೊಳ್ಳುತ್ತದೆ. ಒಂದು ದೇಶ ಒಂದು ಪಡಿತರ ಚೀಟಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ, ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮ, ರಾಷ್ಟ್ರೀಯ ವೃತ್ತಿ ಸೇವೆ, ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್-ಧನ್ ಮುಂತಾದ ಪ್ರಮುಖ ಕಲ್ಯಾಣ ಯೋಜನೆಗಳನ್ನು ಇಶ್ರಮ್‌ನೊಂದಿಗೆ ಸಂಯೋಜಿಸಲಾಗಿದೆ ಮತ್ತು ಇತರ ಪ್ರಗತಿಪರ ಕಲ್ಯಾಣ ಯೋಜನೆಗಳ ಜೋಡಿಸುವ ವ್ಯವಸ್ಥೆ ಸಹ ಇದರಲ್ಲಿದೆ.

Image

ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕಾರ್ಯದರ್ಶಿ ಶ್ರೀಮತಿ ಸುಮಿತಾ ದಾವ್ರಾ ಅವರು ಅಸಂಘಟಿತ ಕಾರ್ಮಿಕರಿಗೆ ಸರ್ಕಾರದ ವಿವಿಧ ಯೋಜನೆಗಳನ್ನು ತಡೆರಹಿತವಾಗಿ ಪ್ರವೇಶಿಸಲು ಇಶ್ರಮ್ ಒನ್ ಸ್ಟಾಪ್ ಪರಿಹಾರವು ಅನುಕೂಲಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿದರು. ಇಶ್ರಮ್ ಪೋರ್ಟಲ್ ನಲ್ಲಿ ಎಲ್ಲಾ ಸಾಮಾಜಿಕ ಭದ್ರತೆ/ಕಲ್ಯಾಣ ಯೋಜನೆಗಳನ್ನು ಸಂಯೋಜಿಸಲು 'ಒನ್ ಸ್ಟಾಪ್ ಪರಿಹಾರ'ದ ವ್ಯವಸ್ಥೆ ನಡೆಯುತ್ತಿರುವ ಪ್ರಕ್ರಿಯೆ ಮುಂದುವರಿಯುತ್ತದೆ ಎಂದು ಅವರು ತಿಳಿಸಿದರು.

ಕೇಂದ್ರದ ಹೊಸ ಸರ್ಕಾರದ ಮೊದಲ 100 ನೂರು ದಿನಗಳಲ್ಲಿ, ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದ ಸಂಪೂರ್ಣ ವಿಧಿ-ವಿಧಾನಗಳ ಅನುಷ್ಠಾನ, ಪ್ರಗತಿಯ ಉತ್ತಮ ಉದಾಹರಣೆಯನ್ನು ಪ್ರದರ್ಶಿಸುವ ಇಶ್ರಮ್ ನೊಂದಿಗೆ ಅವರ ಸಾಮಾಜಿಕ ಭದ್ರತೆ / ಕಲ್ಯಾಣ ಯೋಜನೆಗಳನ್ನು ಸಂಯೋಜಿಸಲು ಸಂಬಂಧಿಸಿದ ಸಚಿವಾಲಯಗಳು / ಇಲಾಖೆಗಳೊಂದಿಗೆ ಹಲವಾರು ಸಭೆಗಳನ್ನು ನಡೆಸಲಾಯಿತು.

ಇಶ್ರಮ್ ಪೋರ್ಟಲ್ ಅನ್ನು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು 26 ಆಗಸ್ಟ್ 2021 ರಂದು ಪ್ರಾರಂಭಿಸಿತು ಮತ್ತು 3 ವರ್ಷಗಳ ಅವಧಿಯಲ್ಲಿ 30 ಕೋಟಿಗೂ ಹೆಚ್ಚು ಕಾರ್ಮಿಕರು ಈಗಾಗಲೇ ಇಶ್ರಮ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ.
 

*****




(Release ID: 2066949) Visitor Counter : 16