ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ
azadi ka amrit mahotsav

ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆಯು ಅಕ್ಟೋಬರ್ 2024 ರಲ್ಲಿ ₹1000 ಕೋಟಿ ಮೌಲ್ಯದ ಮಾರಾಟವನ್ನು ಸಾಧಿಸಿದೆ


ಕಳೆದ 10 ವರ್ಷಗಳಲ್ಲಿ, ಜನೌಷಧಿ ಕೇಂದ್ರಗಳ ಸಂಖ್ಯೆಯು 170 ಪಟ್ಟು ಹೆಚ್ಚು ಹೆಚ್ಚಾಗಿದೆ; ಪ್ರಸ್ತುತ ದೇಶದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ 14,000 ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳಿವೆ

Posted On: 21 OCT 2024 4:46PM by PIB Bengaluru

ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ (ಪಿಎಂಬಿಜೆಪಿ) ಅಕ್ಟೋಬರ್ 2024 ರಲ್ಲಿ ರೂ. 1000 ಕೋಟಿ ಮೌಲ್ಯದ ಮಾರಾಟವನ್ನು ಸಾಧಿಸಿ ಗಮನಾರ್ಹ ಮೈಲಿಗಲ್ಲನ್ನು ತಲುಪಿದೆ. ಹಿಂದಿನ ವರ್ಷ ಡಿಸೆಂಬರ್ 2023 ರಲ್ಲಿ ಈ ಗುರಿಯನ್ನು ತಲುಪಲಾಗಿತ್ತು. ಹೀಗಾಗಿ ಇದು ಗಮನಾರ್ಹ ಪ್ರಗತಿಯಾಗಿದೆ. ಕೈಗೆಟುಕುವ ಮತ್ತು ಗುಣಮಟ್ಟದ ಔಷಧಿಗಳ ಮೇಲೆ ಜನರ ಬೆಳೆಯುತ್ತಿರುವ ವಿಶ್ವಾಸ ಮತ್ತು ಅವಲಂಬನೆಯನ್ನು ಈ ಸಾಧನೆ ಎತ್ತಿ ತೋರಿಸುತ್ತದೆ. ದೇಶಾದ್ಯಂತ 14,000 ಕ್ಕೂ ಹೆಚ್ಚು ಜನ ಔಷಧಿ ಕೇಂದ್ರಗಳಿಂದ ಔಷಧಿಗಳನ್ನು ಖರೀದಿಸುವ ಮೂಲಕ ಈ ಯೋಜನೆಯನ್ನು ಸ್ವೀಕರಿಸಿದ ನಾಗರಿಕರ ಅಚಲ ಬೆಂಬಲದಿಂದ ಮಾತ್ರ ಇದು ಸಾಧ್ಯವಾಗಿದೆ. ಜನರ ಆರೋಗ್ಯ ವೆಚ್ಚವನ್ನು ಕಡಿಮೆ ಮಾಡುವ ಮೂಲಕ ಆರೋಗ್ಯ ಸೇವೆಯನ್ನು ಎಲ್ಲರಿಗೂ ಲಭ್ಯವಾಗುವಂತೆ ಮತ್ತು ಕೈಗೆಟುಕುವಂತೆ ಮಾಡುವಲ್ಲಿ ಪಿಎಂಬಿಐ ತೋರಿದ ಬದ್ಧತೆಗೆ ಈ ಗಮನಾರ್ಹ ಬೆಳವಣಿಗೆ ಸಾಕ್ಷಿಯಾಗಿದೆ. ವಿಶೇಷವಾಗಿ ಕೆಲವು ದಿನಗಳ ಹಿಂದೆ, ಸೆಪ್ಟೆಂಬರ್ 2024 ರ ಒಂದೇ ತಿಂಗಳಲ್ಲಿ ಪಿಎಂಬಿಐ ರೂ. 200 ಕೋಟಿ ಮೌಲ್ಯದ ಔಷಧಿಗಳನ್ನು ಮಾರಾಟ ಮಾಡಿತ್ತು.

ಕಳೆದ ಹತ್ತು ವರ್ಷಗಳಲ್ಲಿ ಜನೌಷಧಿ ಕೇಂದ್ರಗಳ ಸಂಖ್ಯೆ 170 ಪಟ್ಟು ಹೆಚ್ಚಾಗಿದೆ. 2014ರಲ್ಲಿ ಎಂಬತ್ತು ಜನೌಷಧಿ ಕೇಂದ್ರಗಳಿದ್ದರೆ, ಪ್ರಸ್ತುತ ಅವುಗಳ ಸಂಖ್ಯೆ 14,000 ಮೀರಿದೆ. ದೇಶದ ಪ್ರತಿಯೊಂದು ಜಿಲ್ಲೆಯಲ್ಲೂ ಜನೌಷಧಿ ಕೇಂದ್ರಗಳು  ಹರಡಿದೆ.

ಮುಂದಿನ 2 ವರ್ಷಗಳಲ್ಲಿ, ದೇಶದಲ್ಲಿ 25,000 ಜನ ಔಷಧಿ ಕೇಂದ್ರಗಳು ಇರಲಿವೆ. PMBJP ಯ ಉತ್ಪನ್ನ ಬುಟ್ಟಿಯು 2047 ಔಷಧಿಗಳು ಮತ್ತು 300 ಶಸ್ತ್ರಚಿಕಿತ್ಸಾ ಸಾಧನಗಳನ್ನು ಒಳಗೊಂಡಿದೆ. ಹೃದಯ ರೋಗಗಳು, ಕ್ಯಾನ್ಸರ್ ವಿರೋಧಿ, ಮಧುಮೇಹ ವಿರೋಧಿ, ಸೋಂಕು ವಿರೋಧಿ, ಅಲರ್ಜಿ ವಿರೋಧಿ, ಜೀರ್ಣಾಂಗ ವ್ಯವಸ್ಥೆಯ ಔಷಧಿಗಳು, ಪೋಷಕಾಂಶಗಳು ಇತ್ಯಾದಿ ಎಲ್ಲ ಪ್ರಮುಖ ಚಿಕಿತ್ಸಾ ಗುಂಪುಗಳನ್ನು ಒಳಗೊಂಡಿದೆ. ಪ್ರತಿದಿನ ಸುಮಾರು 1 ಮಿಲಿಯನ್ ಜನರು ಈ ಜನಪ್ರಿಯ ಜನ-ಸ್ನೇಹಿ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದಾರೆ.

ಪಿಎಂಬಿಜೆಪಿ ಯೋಜನೆಯು ಸಮುದಾಯಗಳನ್ನು ಸಬಲೀಕರಣಗೊಳಿಸುವ ಮೂಲಕ, ಪ್ರತಿಯೊಬ್ಬ ನಾಗರಿಕರಿಗೂ ಗುಣಮಟ್ಟದ ಆರೋಗ್ಯ ಸಂರಕ್ಷಣೆಯು ಲಭ್ಯವಾಗುವಂತೆ ಮಾಡುತ್ತದೆ. ದಾಖಲೆಯ ಮಾರಾಟವು ಕೇವಲ ಕಾರ್ಯಕ್ರಮದ ಯಶಸ್ಸನ್ನು ಎತ್ತಿ ತೋರಿಸುವುದಲ್ಲದೆ, ದೇಶದಲ್ಲಿ ಆರೋಗ್ಯ ಸಮಾನತೆಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

 

*****




(Release ID: 2066941) Visitor Counter : 13