ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಹೆಚ್ಚುತ್ತಿರುವ ಆನ್ಲೈನ್ ವಂಚನೆಗಳನ್ನು ನಿಭಾಯಿಸಲು "ವಂಚನೆ ಹಗರಣಗಳಿಂದ ಸುರಕ್ಷಿತರಾಗಿರಿ (ಸ್ಕ್ಯಾಮ್ ಸೆ ಬಾಚೋ)" ಅಭಿಯಾನಕ್ಕಾಗಿ ಕೇಂದ್ರ ಸರ್ಕಾರ ಮತ್ತು ಮೆಟಾ ಸಂಸ್ಥೆ ಜೊತೆ ಸೇರಿಕೊಳ್ಳುತ್ತದೆ


ಡಿಜಿಟಲ್ ಸುರಕ್ಷತೆ ಮತ್ತು ಜಾಗರೂಕತೆಯ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಇದು ಎಲ್ಲಾ ಇಲಾಖೆಗಳು ಒಟ್ಟಾಗಿ ನಿರ್ವಹಿಸುವ ಸಂಪೂರ್ಣ ಸರ್ಕಾರದ ವಿಧಾನವಾಗಿದೆ: ಶ್ರೀ ಸಂಜಯ್ ಜಾಜು, ಕಾರ್ಯದರ್ಶಿ, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ

ನಾವು ಸುರಕ್ಷಿತ, ಹೆಚ್ಚು ಸುಭದ್ರತೆಯ ಮತ್ತು ಚೇತರಿಸಿಕೊಳ್ಳುವ ಡಿಜಿಟಲ್ ಇಂಡಿಯಾವನ್ನು ಕಲ್ಪಿಸುವ ಆಂದೋಲನವನ್ನು ನಿರ್ಮಿಸುತ್ತಿದ್ದೇವೆ: ಶ್ರೀ ಸಂಜಯ್ ಜಾಜು

Posted On: 17 OCT 2024 10:39PM by PIB Bengaluru

ರಾಷ್ಟ್ರೀಯ ಬಳಕೆದಾರರ ಜಾಗೃತಿ ಅಭಿಯಾನ "ವಂಚನೆ ಹಗರಣಗಳಿಂದ ಸುರಕ್ಷಿತರಾಗಿರಿ (ಸ್ಕ್ಯಾಮ್ ಸೆ ಬಾಚೋ)" ಇದರ ಕುರಿತು ಇಂದು ನವದೆಹಲಿಯಲ್ಲಿ ನಡೆದ ಚಾಲನಾ ಸಮಾರಂಭದಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ಅವರು ಮುಖ್ಯ ಭಾಷಣ ಮಾಡಿದರು.

ಮೆಟಾ ಸಂಸ್ಥೆಯ ಈ ಉಪಕ್ರಮವನ್ನು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಎಂ.ಇ.ಐ.ಟಿ.ವೈ.), ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ (ಎಂ.ಹೆಚ್.ಎ), ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ (ಎಂ.ಐ.ಬಿ) ಮತ್ತು ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (ಐ4ಸಿ) ಸಹಯೋಗದೊಂದಿಗೆ ಪ್ರಾರಂಭಿಸಲಾಗಿದೆ. ಹೆಚ್ಚುತ್ತಿರುವ ವಂಚನೆಗಳು ಮತ್ತು ಸೈಬರ್ ವಂಚನೆಗಳ ಬೆದರಿಕೆಯನ್ನು ಎದುರಿಸುವ ಗುರಿಯನ್ನು ಹೊಂದಿದೆ, ಆನ್ ಲೈನ್ ವಂಚನೆಗಳ ಹೆಚ್ಚುತ್ತಿರುವ ಪ್ರಕರಣಗಳನ್ನು ಪರಿಹರಿಸಲು ಮತ್ತು ಸೈಬರ್ ಸುರಕ್ಷತೆಯನ್ನು ಹೆಚ್ಚಿಸುವ ಸರ್ಕಾರದ ಬದ್ಧತೆಗೆ ಅನುಗುಣವಾಗಿರುತ್ತದೆ.

ಇದು ಆನ್ಲೈನ್ ಹಗರಣಗಳ ಹೆಚ್ಚುತ್ತಿರುವ ಬೆದರಿಕೆಯಿಂದ ನಮ್ಮ ನಾಗರಿಕರನ್ನು ರಕ್ಷಿಸುವ ನಿಟ್ಟಿನಲ್ಲಿ ಒಂದು ಸಮಯೋಚಿತ ಮತ್ತು ಹೆಚ್ಚು ಅಗತ್ಯವಿರುವ ಹೆಜ್ಜೆಯಾಗಿದೆ ಎಂದು ಮೆಟಾ ಸಂಸ್ಥೆಯ 'ಸ್ಕ್ಯಾಮ್ ಸೆ ಬಚೋ' ಅಭಿಯಾನಕ್ಕೆ ಸರ್ಕಾರದ ಬೆಂಬಲವನ್ನು ಸೂಚಿಸುತ್ತಾ ಕೇಂದ್ರ ಮಾಹಿತಿ ಮತ್ತು ಪ್ರಸಾರ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ಅವರು ಹೇಳಿದರು.

ಡಿಜಿಟಲ್ ಸುರಕ್ಷತೆ ಮತ್ತು ಜಾಗರೂಕತೆಯ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಇದು ಎಲ್ಲಾ ಇಲಾಖೆಗಳು ಒಟ್ಟಾಗಿ ನಿರ್ವಹಿಸುವ ಸಂಪೂರ್ಣ ಸರ್ಕಾರದ ವಿಧಾನವಾಗಿದೆ

“900 ಮಿಲಿಯನ್ ಗಿಂತಲೂ ಹೆಚ್ಚು ಇಂಟರ್ನೆಟ್ ಬಳಕೆದಾರರನ್ನು ಹೊಂದಿರುವ ಭಾರತವು ಡಿಜಿಟಲ್ ಇಂಡಿಯಾ ಉಪಕ್ರಮದ ಅಡಿಯಲ್ಲಿ ಅಸಾಧಾರಣ ಡಿಜಿಟಲ್ ಬೆಳವಣಿಗೆಯನ್ನು ಕಂಡಿದೆ ಮತ್ತು ಯುಪಿಐ ವಹಿವಾಟುಗಳಲ್ಲಿ ಜಾಗತಿಕ ನಾಯಕನಾಗುತ್ತಿದೆ.

ಈ ಪ್ರಗತಿಯ ಜೊತೆಗೆ ಸೈಬರ್ ವಂಚನೆಗಳು ಹೆಚ್ಚುತ್ತಿದೆ, 2023 ರಲ್ಲಿ 1.1 ಮಿಲಿಯನ್ ಪ್ರಕರಣಗಳು ವರದಿಯಾಗಿವೆ. ಭಾರತದ ಪ್ರಧಾನಮಂತ್ರಿ ಈ ಬೆದರಿಕೆಗಳನ್ನು ಎದುರಿಸಲು ಮತ್ತು ಡಿಜಿಟಲ್ ಸಾಕ್ಷರತೆಯನ್ನು ಹೆಚ್ಚಿಸಲು ಬಲವಾದ ಕ್ರಮಗಳಿಗೆ ಕರೆ ನೀಡಿದ್ದಾರೆ.”  ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ಅವರು ಹೇಳಿದರು.

“ವಂಚನೆ ಹಗರಣಗಳಿಂದ ಸುರಿಕ್ಷಿತರಾಗಿರಿ (ಸ್ಕ್ಯಾಮ್ ಸೆ ಬಚೋ)” : ಸೈಬರ್ ವಂಚನೆ/ಬೆದರಿಕೆಗಳ ವಿರುದ್ಧ ರಕ್ಷಿಸಲು ನಾಗರಿಕರನ್ನು ಸಜ್ಜುಗೊಳಿಸುವುದು

"ಸ್ಕ್ಯಾಮ್ ಸೆ ಬಚೋ" ಅಭಿಯಾನವು ಕೇವಲ ಜಾಗೃತಿ ಅಭಿಯಾನಕ್ಕಿಂತ ಹೆಚ್ಚಿನ ಮಹತ್ವದ್ದಾಗಿದೆ. ಈ ಅಭಿಯಾನವು ರಾಷ್ಟ್ರೀಯ ಆಂದೋಲನವಾಗಿರಬಹುದು, ಅದು ಭಾರತೀಯ ನಾಗರಿಕರಿಗೆ ಇಂತಹ ಬೆದರಿಕೆಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಲಹೆ, ಉಪಕರಣಗಳು, ಅರಿವು ಮತ್ತು ಜ್ಞಾನದೊಂದಿಗೆ ಅಧಿಕಾರವನ್ನು ನೀಡುತ್ತದೆ. ಡಿಜಿಟಲ್ ಸುರಕ್ಷತೆ ಮತ್ತು ಜಾಗರೂಕತೆಯ ಸಂಸ್ಕೃತಿಯನ್ನು ರಚಿಸಲು ನಮ್ಮ ಗುರಿ ಸರಳವಾಗಿದೆ ಆದರೆ ಶಕ್ತಿಯುತವಾಗಿದೆ” ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ಅವರು ಹೇಳಿದರು. "ಮೆಟಾ ಸಂಸ್ಥೆಯ ಜಾಗತಿಕ ಪರಿಣತಿಯನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ, ಅಭಿಯಾನವು ಸೈಬರ್ ಬೆದರಿಕೆಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪ್ರತಿಯೊಬ್ಬ ಭಾರತೀಯರಿಗೆ ಅಧಿಕಾರ ನೀಡುತ್ತದೆ, ನಮ್ಮ ಡಿಜಿಟಲ್ ಪ್ರಗತಿಯನ್ನು ದೃಢವಾದ ಡಿಜಿಟಲ್ ಭದ್ರತೆಯೊಂದಿಗೆ ಹೊಂದಿಸಲಾಗಿದೆ ಎಂದು ಖಚಿತಪಡಿಸುತ್ತದೆ" ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ಅವರು ಹೇಳಿದರು.

 

*****
 


(Release ID: 2066117) Visitor Counter : 28