ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಅಕ್ಟೋಬರ್ 16-17ರಂದು ಗುವಾಹಟಿ (ಅಸ್ಸಾಂ) ಮತ್ತು ಶಿಲ್ಲಾಂಗ್ (ಮೇಘಾಲಯ) ಗೆ ಉಪರಾಷ್ಟ್ರಪತಿಗಳು ಭೇಟಿ ನೀಡಲಿದ್ದಾರೆ


ಉಪರಾಷ್ಟ್ರಪತಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ನ್ಯೂ ಶಿಲ್ಲಾಂಗ್ ನ ಮಾವ್ಡಿಯಾಂಗ್ ಡಿಯಾಂಗ್ ನಲ್ಲಿ ಮೇಘಾಲಯ ಕೌಶಲ್ಯ ಮತ್ತು ನಾವೀನ್ಯತೆ ಹಬ್ ಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ

ಶಿಲ್ಲಾಂಗ್ ನ ಐಟಿ ಪಾರ್ಕ್ ಗೆ ಭೇಟಿ ನೀಡಲಿರುವ ಉಪರಾಷ್ಟ್ರಪತಿ

Posted On: 15 OCT 2024 10:52AM by PIB Bengaluru

ಭಾರತದ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಮತ್ತು ಡಾ. ಸುದೇಶ್ ಧನಕರ್ ಅವರು 2024 ರ ಅಕ್ಟೋಬರ್ 16 ಮತ್ತು 17 ರಂದು ಗುವಾಹಟಿ (ಅಸ್ಸಾಂ) ಮತ್ತು ಮೇಘಾಲಯದ ಶಿಲ್ಲಾಂಗ್ ಗೆ ಎರಡು ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ.

ತಮ್ಮ ಭೇಟಿಯ ಸಮಯದಲ್ಲಿ, ಉಪರಾಷ್ಟ್ರಪತಿ ಅವರು ಮುಖ್ಯ ಅತಿಥಿಯಾಗಿ ಅಧ್ಯಕ್ಷತೆ ವಹಿಸಲಿದ್ದಾರೆ ಮತ್ತು ನ್ಯೂ ಶಿಲ್ಲಾಂಗ್ ನ ಮಾವ್ಡಿಯಾಂಗ್ಡಿಯಾಂಗ್ ನಲ್ಲಿ ಮೇಘಾಲಯ ಕೌಶಲ್ಯ ಮತ್ತು ನಾವೀನ್ಯತೆ ಹಬ್ ಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಉಪರಾಷ್ಟ್ರಪತಿ ಅವರು ಶಿಲ್ಲಾಂಗ್ ನ ಐಟಿ ಪಾರ್ಕ್ ಮತ್ತು ರಾಜಭವನಕ್ಕೆ ಭೇಟಿ ನೀಡಿ ಮುಖ್ಯಮಂತ್ರಿ ಮತ್ತು ಇತರ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ.

 

*****
 



(Release ID: 2065006) Visitor Counter : 17