ಹಣಕಾಸು ಸಚಿವಾಲಯ
azadi ka amrit mahotsav

ವಿದ್ಯುತ್ ಮತ್ತು ವಸತಿ ಮತ್ತು ನಗರ ವ್ಯವಹಾರಗಳ ಕ್ಯಾಬಿನೆಟ್ ಸಚಿವರಿಂದ ರಾಷ್ಟ್ರೀಯ ವಿದ್ಯುತ್ ಯೋಜನೆ (ಪ್ರಸರಣ) ಪ್ರಾರಂಭ

Posted On: 14 OCT 2024 6:10PM by PIB Bengaluru

2030ರ ವೇಳೆಗೆ 500 ಗಿಗಾ ವ್ಯಾಟ್‌ ನವೀಕರಿಸಬಹುದಾದ ಶಕ್ತಿಯ ಸ್ಥಾಪಿತ ಸಾಮರ್ಥ್ಯವನ್ನು ಮತ್ತು 2032ರ ವೇಳೆಗೆ 600 ಗಿಗಾ ವ್ಯಾಟ್‌ಗಿಂತಲೂ ಹೆಚ್ಚು ನವೀಕರಿಸಬಹುದಾದ ಶಕ್ತಿಯ ಸ್ಥಾಪಿತ ಸಾಮರ್ಥ್ಯವನ್ನು ರವಾನಿಸುವ ಗುರಿಯೊಂದಿಗೆ ಭಾರತೀಯ ಕೇಂದ್ರೀಯ ವಿದ್ಯುತ್ ಪ್ರಾಧಿಕಾರ (CEA), ವಿವಿಧ ಪಾಲುದಾರರೊಂದಿಗೆ ಸಮಾಲೋಚಿಸಿ ಸಮಗ್ರ ರಾಷ್ಟ್ರೀಯ ವಿದ್ಯುತ್ ಯೋಜನೆಯನ್ನು (ಪ್ರಸರಣ) ಸಿದ್ಧಪಡಿಸಿದೆ.

2024 ರ ಅಕ್ಟೋಬರ್ 14-15 ರಂದು ಹೊಸದಿಲ್ಲಿಯಲ್ಲಿ CEA ಆಯೋಜಿಸಿರುವ ಎರಡು ದಿನಗಳ ಸಮಾವೇಶದಲ್ಲಿ ಕೇಂದ್ರ ಸಚಿವ ಶ್ರೀ ಮನೋಹರ್ ಲಾಲ್ ಅವರು ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ಇದಕ್ಕೆ ಚಾಲನೆ ನೀಡಿದರು.

47 ಗಿಗಾ ವ್ಯಾಟ್‌ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ಸ್ ಮತ್ತು 31 ಗಿಗಾ ವ್ಯಾಟ್‌ ಪಂಪ್ಡ್ ಸ್ಟೋರೇಜ್ ಪ್ಲಾಂಟ್‌ಗಳನ್ನು ನವೀಕರಿಸಬಹುದಾದ ಶಕ್ತಿಯೊಂದಿಗೆ ಅಭಿವೃದ್ಧಿಪಡಿಸಬೇಕಾದ ಶೇಖರಣಾ ವ್ಯವಸ್ಥೆಗಳ ಅಗತ್ಯತೆಗಳನ್ನು ಯೋಜನೆಯು ಪರಿಗಣನೆಗೆ ತೆಗೆದುಕೊಂಡಿದೆ. ಮುಂದ್ರಾ, ಕಾಂಡ್ಲಾ, ಗೋಪಾಲ್‌ಪುರ, ಪರಾದೀಪ್, ಟ್ಯುಟಿಕಾರಿನ್, ವೈಜಾಗ್, ಮಂಗಳೂರು ಮುಂತಾದ ಕರಾವಳಿ ಪ್ರದೇಶಗಳಲ್ಲಿನ ಹಸಿರು ಹೈಡ್ರೋಜನ್/ಗ್ರೀನ್ ಅಮೋನಿಯಾ ಉತ್ಪಾದನಾ ಕೇಂದ್ರಗಳಿಗೆ ವಿದ್ಯುತ್ ತಲುಪಿಸಲು ಪ್ರಸರಣ ವ್ಯವಸ್ಥೆಯನ್ನು ಯೋಜಿಸಲಾಗಿದೆ.

ರಾಷ್ಟ್ರೀಯ ವಿದ್ಯುಚ್ಛಕ್ತಿ ಯೋಜನೆಯ ಪ್ರಕಾರ, 2022-23 ರಿಂದ 2031-32 ರವರೆಗಿನ ಹತ್ತು ವರ್ಷಗಳ ಅವಧಿಯಲ್ಲಿ (220 ಕಿಲೋ ವ್ಯಾಟ್‌ (KV) ಮತ್ತು ಅದಕ್ಕಿಂತ ಹೆಚ್ಚಿನ ವೋಲ್ಟೇಜ್ ಮಟ್ಟದಲ್ಲಿ) 1,91,000 ckm ಪ್ರಸರಣ ಮಾರ್ಗಗಳು ಮತ್ತು 1270 GVA ರೂಪಾಂತರ ಸಾಮರ್ಥ್ಯವನ್ನು ಸೇರಿಸಲು ಯೋಜಿಸಲಾಗಿದೆ. ಜೊತೆಗೆ, 33 ಗಿಗಾ HVDC ಬೈ-ಪೋಲ್ ಲಿಂಕ್‌ಗಳನ್ನು ಸಹ ಯೋಜಿಸಲಾಗಿದೆ. ಅಂತರ-ಪ್ರಾದೇಶಿಕ ಪ್ರಸರಣ ಸಾಮರ್ಥ್ಯವನ್ನು ಪ್ರಸ್ತುತ 119 GW ಮಟ್ಟದಿಂದ 2027ರ ವೇಳೆಗೆ 143 ಗಿಗಾ ವ್ಯಾಟ್‌ ಗೆ ಮತ್ತು 2032 ರ ವೇಳೆಗೆ 168 ಗಿಗಾ ವ್ಯಾಟ್‌ ಗೆ ಹೆಚ್ಚಿಸಲು ಯೋಜಿಸಲಾಗಿದೆ, 

ಪ್ರಸರಣ ಯೋಜನೆಯು ನೇಪಾಳ, ಭೂತಾನ್, ಮ್ಯಾನ್ಮಾರ್, ಬಾಂಗ್ಲಾದೇಶ, ಶ್ರೀಲಂಕಾ ಜೊತೆಗೆ ಸೌದಿ ಅರೇಬಿಯಾ, ಯುಎಇ ಇತ್ಯಾದಿಗಳೊಂದಿಗಿನ ಸಂಭಾವ್ಯ ಅಂತರ್ಸಂಪರ್ಕಗಳನ್ನು ಸಹ ಒಳಗೊಳ್ಳುತ್ತದೆ.

ಪ್ರಸರಣ ಯೋಜನೆಯು ಈ ವಲಯದಲ್ಲಿ ಹೈಬ್ರಿಡ್ ಸಬ್‌ಸ್ಟೇಷನ್‌ಗಳು, ಮೊನೊಪೋಲ್ ಸ್ಟ್ರಕ್ಚರ್‌ಗಳು, ಇನ್ಸುಲೇಟೆಡ್ ಕ್ರಾಸ್ ಆರ್ಮ್ಸ್, ಡೈನಮಿಕ್ ಲೈನ್ ರೇಟಿಂಗ್, ಹೈ ಪರ್ಫಾರ್ಮೆನ್ಸ್ ಕಂಡಕ್ಟರ್‌ಗಳು, ಗರಿಷ್ಠ ಆಪರೇಟಿಂಗ್ ವೋಲ್ಟೇಜ್ ಅನ್ನು 1200 kV AC ಗೆ ಅಪ್‌ಗ್ರೇಡ್ ಮಾಡುವುದರ ಜೊತೆಗೆ ಟ್ರಾನ್ಸ್‌ಮಿಷನ್ ಸೆಕ್ಟರ್‌ನಲ್ಲಿ ಕೌಶಲ್ಯ ಅಭಿವೃದ್ಧಿಯಂತಹ ಹೊಸ ತಂತ್ರಜ್ಞಾನ ಆಯ್ಕೆಗಳ ಬಗ್ಗೆ ಗಮನಹರಿಸಲಾಗಿದೆ. 

ನಿರ್ಮಾಣ ಹಂತದಲ್ಲಿರುವ ಹಲವಾರು ಪ್ರಸರಣ ಯೋಜನೆಗಳು, ಬಿಡ್ಡಿಂಗ್ ಅಡಿಯಲ್ಲಿ ಹಲವಾರು ಪ್ರಸರಣ ಯೋಜನೆಗಳು ಮತ್ತು ಪೈಪ್‌ಲೈನ್‌ನಲ್ಲಿರುವ ಹಲವಾರು ಪ್ರಸರಣ ಯೋಜನೆಗಳೊಂದಿಗೆ, ಹೂಡಿಕೆದಾರರಿಗೆ 2032ರವರೆಗೆ ಪ್ರಸರಣ ವಲಯದಲ್ಲಿ 9,15,000 ಕೋಟಿ ರೂಪಾಯಿಗಳಷ್ಟು ಬೃಹತ್ ಹೂಡಿಕೆಯ ಅವಕಾಶವನ್ನು ಒದಗಿಸುತ್ತದೆ.

 

*****
 


(Release ID: 2064909) Visitor Counter : 40


Read this release in: English , Urdu , Hindi , Tamil , Telugu