ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್‌ ಶಾ ಅವರು, ನಮ್ಮ ಯುವಕರನ್ನು ಮಾದಕ ವಸ್ತುಗಳ ಪಿಡುಗಿನಿಂದ ರಕ್ಷಿಸುವ ಮೂಲಕ ಮಾದಕವಸ್ತು ಮುಕ್ತ ಭಾರತವನ್ನು ನಿರ್ಮಿಸಲು ನರೇಂದ್ರ ಮೋದಿ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು


ಡ್ರಗ್ಸ್‌ ಮತ್ತು ಮಾದಕವಸ್ತು ವ್ಯಾಪಾರದ ವಿರುದ್ಧದ ಬೇಟೆಯು ಯಾವುದೇ ಸಡಿಲಿಕೆಯಿಲ್ಲದೆ ಮುಂದುವರಿಯುತ್ತದೆ

ಗುಜರಾತ್‌ ಪೊಲೀಸರು 5,000 ಕೋಟಿ ಮೌಲ್ಯದ ಕೊಕೇನ್‌ ವಶಪಡಿಸಿಕೊಂಡಿದ್ದು ಸೇರಿದಂತೆ 13,000 ಕೋಟಿ ರೂ.ಗಳ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳುವ ಸರಣಿ ಯಶಸ್ವಿ ಕಾರ್ಯಾಚರಣೆಗಳಿಗಾಗಿ ಕೇಂದ್ರ ಗೃಹ ಸಚಿವರು ದೆಹಲಿ ಪೊಲೀಸರನ್ನು ಅಭಿನಂದಿಸಿದ್ದಾರೆ

Posted On: 14 OCT 2024 5:57PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ನಮ್ಮ ಯುವಕರನ್ನು ಮಾದಕ ದ್ರವ್ಯಗಳ ಪಿಡುಗಿನಿಂದ ರಕ್ಷಿಸುವ ಮೂಲಕ ಮಾದಕವಸ್ತು ಮುಕ್ತ ಭಾರತವನ್ನು ನಿರ್ಮಿಸಲು ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್‌ ಶಾ ಹೇಳಿದ್ದಾರೆ.

ಈ ಸಂಬಂಧ ಸಾಮಾಜಿಕ ತಾಣ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವ ಶ್ರೀ ಅಮಿತ್‌ ಶಾ ಅವರು ಡ್ರಗ್ಸ್‌ ಮತ್ತು ಮಾದಕವಸ್ತು ವ್ಯಾಪಾರದ ವಿರುದ್ಧದ ಬೇಟೆಯು ಯಾವುದೇ ಸಡಿಲಿಕೆಯಿಲ್ಲದೆ ಮುಂದುವರಿಯುತ್ತದೆ ಎಂದು ಹೇಳಿದರು. ಗುಜರಾತ್‌ ಪೊಲೀಸರು 5,000 ಕೋಟಿ ರೂಪಾಯಿ ಮೌಲ್ಯದ ಕೊಕೇನ್‌ ಅನ್ನು ವಶಪಡಿಸಿಕೊಂಡಿದ್ದು ಸೇರಿದಂತೆ 13,000 ಕೋಟಿ ರೂ.ಗಳ ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳುವ ಸರಣಿ ಯಶಸ್ವಿ ಕಾರ್ಯಾಚರಣೆಗಳಿಗಾಗಿ ಶ್ರೀ ಅಮಿತ್‌ ಶಾ ಅವರು ದೆಹಲಿ ಪೊಲೀಸರನ್ನು ಅಭಿನಂದಿಸಿದರು.

2024ರ ಅಕ್ಟೋಬರ್‌ 13ರಂದು ದೆಹಲಿ ಪೊಲೀಸ್‌ ಮತ್ತು ಗುಜರಾತ್‌ ಪೊಲೀಸರ ವಿಶೇಷ ಸೆಲ್‌ ಗುಜರಾತ್‌ನ ಅಂಕಲೇಶ್ವರ ಮೂಲದ ಕಂಪನಿಯಲ್ಲಿ ಶೋಧ ಕಾರ್ಯಾಚರಣೆಯ ಸಮಯದಲ್ಲಿ 518 ಕೆ.ಜಿ ಕೊಕೇನ್‌ಅನ್ನು ವಶಪಡಿಸಿಕೊಂಡಿದೆ. ವಶಪಡಿಸಿಕೊಂಡ ಕೊಕೇನ್‌ನ ಮೌಲ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 5,000 ಕೋಟಿ ರೂಪಾಯಿ ಆಗಿದೆ.

ಇದಕ್ಕೂ ಮುನ್ನ 2024ರ ಅಕ್ಟೋಬರ್‌ 01ರಂದು ದೆಹಲಿ ಪೊಲೀಸರ ವಿಶೇಷ ಸೆಲ್‌ ಮಹಿಪಾಲ್ಪುರದ ಗೋದಾಮಿನ ಮೇಲೆ ದಾಳಿ ನಡೆಸಿ 562 ಕೆ.ಜಿ ಕೊಕೇನ್‌ ಮತ್ತು 40 ಕೆ.ಜಿ ಹೈಡ್ರೋಪೋನಿಕ್‌ ಗಾಂಜಾವನ್ನು ವಶಪಡಿಸಿಕೊಂಡಿತ್ತು. ತನಿಖೆಯ ಸಮಯದಲ್ಲಿ, 2024ರ ಅಕ್ಟೋಬರ್‌ 10ರಂದು, ದೆಹಲಿಯ ರಮೇಶ್‌ ನಗರದ ಅಂಗಡಿಯಿಂದ ಸುಮಾರು 208 ಕೆ.ಜಿ ಹೆಚ್ಚುವರಿ ಕೊಕೇನ್‌ಅನ್ನು ವಶಪಡಿಸಿಕೊಳ್ಳಲಾಗಿದೆ. ತನಿಖೆಯ ಸಮಯದಲ್ಲಿ, ವಶಪಡಿಸಿಕೊಂಡ ಮಾದಕವಸ್ತು ಗುಜರಾತ್‌ನ ಅಂಕಲೇಶ್ವರ ಮೂಲದ ಕಂಪನಿಗೆ ಸೇರಿದೆ ಎಂದು ತಿಳಿದುಬಂದಿದೆ.

ಈ ಪ್ರಕರಣದಲ್ಲಿ, ಒಟ್ಟು 1,289 ಕೆ.ಜಿ ಕೊಕೇನ್‌ ಮತ್ತು 40 ಕೆ.ಜಿ ಹೈಡ್ರೋಪೋನಿಕ್‌ ಥಾಯ್ಲೆಂಡ್‌ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಇದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ13,000 ಕೋಟಿ ರೂಪಾಯಿ ಮೌಲ್ಯವನ್ನು ಹೊಂದಿದೆ. 

ಇತ್ತೀಚೆಗೆ ಗುಜರಾತ್‌ ಪೊಲೀಸರು 5,000 ಕೋಟಿ ರೂಪಾಯಿ ಮೌಲ್ಯದ ಕೊಕೇನ್‌ ವಶಪಡಿಸಿಕೊಂಡಿದ್ದು ಸೇರಿದಂತೆ 13,000 ಕೋಟಿ ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳುವ ಸರಣಿ ಯಶಸ್ವಿ ಕಾರ್ಯಾಚರಣೆಗಳಿಗಾಗಿ ನಾನು ದೆಹಲಿ ಪೊಲೀಸರನ್ನು ಅಭಿನಂದಿಸುತ್ತೇನೆ.

ಡ್ರಗ್ಸ್‌ ಮತ್ತು ಮಾದಕವಸ್ತು ವ್ಯಾಪಾರದ ವಿರುದ್ಧದ ಬೇಟೆಯು ಯಾವುದೇ ಸಡಿಲಿಕೆಯಿಲ್ಲದೆ ಮುಂದುವರಿಯುತ್ತದೆ.

 

*****

 

Click here to see pdf
 


(Release ID: 2064908) Visitor Counter : 36