ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯಲ್ಲಿ PHD ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ (PHDCCI) 119 ನೇ ವಾರ್ಷಿಕ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು


ಶ್ರೀ ನರೇಂದ್ರ ಮೋದಿ ಅವರು, ಮೊದಲು ಮುಖ್ಯಮಂತ್ರಿಯಾಗಿ ಮತ್ತು ನಂತರ ಸತತ ಮೂರನೇ ಅವಧಿಗೆ ದೇಶದ ಪ್ರಧಾನ ಮಂತ್ರಿಯಾಗಿ, ಕಳೆದ 23 ವರ್ಷಗಳಿಂದ ಪ್ರಜಾಸತ್ತಾತ್ಮಕ ರೀತಿಯಲ್ಲಿ ಜನರ ವಿಶ್ವಾಸವನ್ನು ಗಳಿಸುತ್ತಿದ್ದಾರೆ.

ಪ್ರಧಾನಮಂತ್ರಿ ಶ್ರೀ ಮೋದಿಯವರು ವಿಷನ್, ಅನುಭವ ಮತ್ತು ಬದ್ಧತೆಯ ಅಪರೂಪದ ಸಂಯೋಜನೆ

PHD ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಉದ್ಯಮ ಮತ್ತು ಸರ್ಕಾರದ ನಡುವಿನ ಪ್ರಮುಖ ಕೊಂಡಿಯಾಗಿದೆ

PHD ಚೇಂಬರ್ ಸರ್ಕಾರದ ನೀತಿಗಳು, ಯೋಜನೆಗಳು ಮತ್ತು ವಿಷನ್ ಗಳನ್ನು ಅನುಷ್ಠಾನಗೊಳಿಸಬೇಕು ಮತ್ತು ಉದ್ಯಮದ ಸಮಸ್ಯೆಗಳನ್ನು ಸರ್ಕಾರಕ್ಕೆ ತಿಳಿಸಬೇಕು

ಕಳೆದ 10 ವರ್ಷಗಳಲ್ಲಿ ಪ್ರಧಾನಮಂತ್ರಿ ಶ್ರೀ ಮೋದಿ ಅವರು ಭಾರತವನ್ನು ವಿಶ್ವದ ಪ್ರತಿಯೊಂದು ಕ್ಷೇತ್ರದಲ್ಲೂ ನಂಬರ್ ಒನ್ ಮಾಡಲು ಅಡಿಪಾಯ ಹಾಕಿದ್ದಾರೆ.

ಪ್ರಧಾನಮಂತ್ರಿ ಶ್ರೀ ಮೋದಿಯವರು ದೇಶವನ್ನು ‘ನೀತಿ ಪಾರ್ಶ್ವವಾಯು’ ದಿಂದ ಹೊರತಂದು ಕಾರ್ಯಕ್ಷಮತೆಯ ರಾಜಕಾರಣವನ್ನು ಸ್ಥಾಪಿಸಿದರು

ಈ ಹಿಂದೆ 'ದುರ್ಬಲವಾದ ಐದು' ಸ್ಥಾನದಲ್ಲಿದ್ದ ಭಾರತೀಯ ಆರ್ಥಿಕತೆಯು ಪ್ರಧಾನಿ ಶ್ರೀ ಮೋದಿಯವರ ನಾಯಕತ್ವದಲ್ಲಿ ವಿಶ್ವದಲ್ಲಿ 'ಪ್ರಕಾಶಮಾನವಾದ ತಾಣ'ವಾಗಿ ಹೊರಹೊಮ್ಮಿದೆ

2014ರ ಮೊದಲು ಹದಗೆಟ್ಟಿದ್ದ ಸಾರ್ವಜನಿಕ ಬ್ಯಾಂಕಿಂಗ್ ವ್ಯವಸ್ಥೆಯು 2023-24ನೇ ಹಣಕಾಸು ವರ್ಷದಲ್ಲಿ ಪ್ರಧಾನಮಂತ್ರಿ ಶ್ರೀ ಮೋದಿಯವರ ನೇತೃತ್ವದಲ್ಲಿ ₹1.40 ಲಕ್ಷ ಕೋಟಿ ಲಾಭ ಗಳಿಸಿದೆ.

2000 ಕ್ಕೂ ಹೆಚ್ಚು ವಸಾಹತುಶಾಹಿ ಕಾನೂನುಗಳನ್ನು ಮತ್ತು 39,000 ಕ್ಕೂ ಹೆಚ್ಚು ಅನುಸರಣೆಗಳನ್ನು ರದ್ದುಪಡಿಸುವ ಮೂಲಕ, ಮೋದಿ ಸರ್ಕಾರವು ಜನರ ಜೀವನವನ್ನು ಸುಲಭಗೊಳಿಸಿದೆ

ಪ್ರಧಾನಮಂತ್ರಿ ಶ್ರೀ ಮೋದಿ ಅವರು ₹ 50 ಸಾವಿರ ಕೋಟಿ ವೆಚ್ಚದಲ್ಲಿ ಸಂಶೋಧನಾ ಪ್ರತಿಷ್ಠಾನವನ್ನು ಸ್ಥಾಪಿಸಿದ್ದಾರೆ, ಇದು ಮುಂದಿನ 25 ವರ್ಷಗಳಲ್ಲಿ ಭಾರತವನ್ನು ವಿಶ್ವದ ಸಂಶೋಧನಾ ಕ್ಷೇತ್ರದಲ್ಲಿ ಅಗ್ರಸ್ಥಾನಕ್ಕೆ ಕೊಂಡೊಯ್ಯಲಿದೆ.

ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರು ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಿದರು

ರತನ್ ಟಾಟಾ ಜಿ ಭಾರತೀಯ ಕೈಗಾರಿಕಾ ವಲಯದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿಯೂ ಗೌರವಾನ್ವಿತ ವ್ಯಕ್ತಿಯಾಗಿದ್ದರು, ಅವರು ದೀರ್ಘಕಾಲದವರೆಗೆ ಕೈಗಾರಿಕಾ ಕ್ಷೇತ್ರದ ನಾಯಕರಿಗೆ ಮಾರ್ಗದರ್ಶನ ನೀಡುವ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ.

ರತನ್ ಟಾಟಾ ಜಿ ಅವರು ತಮ್ಮ ಟ್ರಸ್ಟ್ ಮೂಲಕ ದೇಶದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಉತ್ತಮ ಸಮಾಜವನ್ನು ನಿರ್ಮಿಸಲು ಶ್ರಮಿಸಿದರು

Posted On: 10 OCT 2024 7:04PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯಲ್ಲಿ PHD ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿಯ (PHDCCI) 119 ನೇ ವಾರ್ಷಿಕ ಅಧಿವೇಶನದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.ಈ ವರ್ಷದ ವಾರ್ಷಿಕ ಅಧಿವೇಶನದ ಮುಖ್ಯ ವಿಷಯವೆಂದರೆ "ವಿಕಸಿತ ಭಾರತ @ 2047: ಪ್ರಗತಿಯ ಉತ್ತುಂಗದ ಕಡೆಗೆ ಮುನ್ನಡೆ" (Viksit Bharat @ 2047: Marching Towards the Peak of Progress). ಉದ್ಯಮದ ಸುಮಾರು 1500 ಉದ್ಯಮಿಗಳು, ಚಾರ್ಟರ್ಡ್ ಅಕೌಂಟೆಂಟ್ ಗಳು, ಬ್ಯಾಂಕರ್ ಗಳು, ವಕೀಲರು ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು ತಮ್ಮ ಭಾಷಣವನ್ನು ಕಳೆದ ರಾತ್ರಿ ಮುಂಬೈನಲ್ಲಿ ನಿಧನರಾದ ಪ್ರಸಿದ್ಧ ಉದ್ಯಮಿ ಶ್ರೀ ರತನ್ ಟಾಟಾ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವುದರೊಂದಿಗೆ ಆರಂಭಿಸಿದರು. ಶ್ರೀ ಅಮಿತ್ ಶಾ ಅವರು, ಶ್ರೀ ರತನ್ ಟಾಟಾ ಅವರು ಭಾರತೀಯ ಕೈಗಾರಿಕಾ ವಲಯದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿಯೂ ಗೌರವಾನ್ವಿತ ವ್ಯಕ್ತಿಯಾಗಿದ್ದರು ಎಂದು ಹೇಳಿದರು. ಟಾಟಾ ಗ್ರೂಪ್ ಗೆ ಹಲವಾರು ಬದಲಾವಣೆಗಳ ಅಗತ್ಯವಿದ್ದ ಸಮಯದಲ್ಲಿ ಅವರು ಗ್ರೂಪ್ ನ ಜವಾಬ್ದಾರಿಯನ್ನು ವಹಿಸಿಕೊಂಡರು ಮತ್ತು ಶ್ರೀ ಟಾಟಾ ಅವರು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡರು, ಟಾಟಾ ಗ್ರೂಪ್ನ ಎಲ್ಲಾ ಉದ್ಯಮಗಳು ಮತ್ತು ಕಾರ್ಯಚಟುವಟಿಕೆಗಳನ್ನು ತಾಳ್ಮೆಯಿಂದ ಬದಲಾಯಿಸಿದರು. ಇಂದಿಗೂ ಟಾಟಾ ಗ್ರೂಪ್ ಭಾರತೀಯ ಉದ್ಯಮದಲ್ಲಿ ಧ್ರುವತಾರೆಯಂತೆ ಎಂದು ಶ್ರೀ ಶಾ ಹೇಳಿದರು. ರತನ್ ಟಾಟಾ ಅವರು ಸಮಗ್ರತೆಯನ್ನು ಅನುಸರಿಸುತ್ತಾ ಮತ್ತು ಎಲ್ಲಾ ನಿಯಮಗಳು ಹಾಗೂ ನಿಬಂಧನೆಗಳನ್ನು ಪಾಲಿಸುತ್ತಾ ತಮ್ಮ ಕೈಗಾರಿಕಾ ಸಮೂಹವನ್ನು ದೇಶದಲ್ಲಿ ಮತ್ತು ಜಾಗತಿಕವಾಗಿ ಪ್ರಮುಖ ಸ್ಥಾನಕ್ಕೆ ಕೊಂಡೊಯ್ದರು ಎಂದು ಅವರು ಹೇಳಿದರು. ಶ್ರೀ ರತನ್ ಟಾಟಾ ಅವರು ತಮ್ಮ ಟ್ರಸ್ಟ್ ಮೂಲಕ ದೇಶದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿದರು ಮತ್ತು ಉತ್ತಮ ಸಮಾಜವನ್ನು ನಿರ್ಮಿಸಲು ಪ್ರಯತ್ನಿಸಿದರು ಎಂದು ಶ್ರೀ ಶಾ ಹೇಳಿದರು. ಶ್ರೀ ರತನ್ ಟಾಟಾ ಅವರ ಪರಂಪರೆಯು ದೇಶದ ಕೈಗಾರಿಕಾ ಕ್ಷೇತ್ರದ ನಾಯಕರಿಗೆ ದೀರ್ಘಕಾಲ ಮಾರ್ಗದರ್ಶನ ನೀಡಲಿದೆ ಎಂದು ಅವರು ಹೇಳಿದರು.

ಈ ವರ್ಷ ಭಾರತದ ಕೈಗಾರಿಕಾ ಜಗತ್ತಿಗೆ ಅತ್ಯಂತ ನಿರ್ಣಾಯಕ ಎಂದು ಸಾಬೀತುಪಡಿಸಲಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು ಮತ್ತು ಅಂತಹ ಸಮಯದಲ್ಲಿ, PHD ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ (PHDCCI) ನ 119 ನೇ ವಾರ್ಷಿಕ ಸಮಾವೇಶವನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು. ಇಂದು ಪ್ರಪಂಚದಾದ್ಯಂತ ಒಂದು ರೀತಿಯ ನಂಬಿಕೆಯ ಬಿಕ್ಕಟ್ಟು ಗೋಚರಿಸುತ್ತಿದೆ ಎಂದು ಹೇಳಿದರು. ಶ್ರೀ ನರೇಂದ್ರ ಮೋದಿ ಜೀ ಅವರು ಮೊದಲು ಮುಖ್ಯಮಂತ್ರಿಯಾಗಿ ಮತ್ತು ನಂತರ ಪ್ರಧಾನಿಯಾಗುವ ಮೂಲಕ ಸತತ 23 ವರ್ಷಗಳಿಂದ ಪ್ರಜಾಸತ್ತಾತ್ಮಕವಾಗಿ ಜನರ ವಿಶ್ವಾಸವನ್ನು ಗಳಿಸುತ್ತಿದ್ದಾರೆ ಎಂದು ಹೇಳಿದರು. ಸ್ಥಿರತೆ ಇಲ್ಲದೆ, ನೀತಿಗಳನ್ನು ಸರಿಯಾಗಿ ಜಾರಿಗೆ ತರಲು ಸಾಧ್ಯವಿಲ್ಲ ಮತ್ತು ಭದ್ರತೆ ಮತ್ತು ಅಭಿವೃದ್ಧಿಯನ್ನು ಖಾತರಿಪಡಿಸುವುದಿಲ್ಲ ಎಂದು ಶ್ರೀ ಶಾ ಹೇಳಿದರು. ಸ್ಥಿರತೆಯು ನೀತಿಗಳು, ಆಲೋಚನೆಗಳು ಮತ್ತು ಅಭಿವೃದ್ಧಿಯಲ್ಲಿ ನಿರಂತರತೆಯನ್ನು ತರುತ್ತದೆ ಎಂದು ಅವರು ಹೇಳಿದರು. ಮೋದಿಜಿಯವರು ಇಂತಹ ದೊಡ್ಡ ದೇಶವನ್ನು 10 ವರ್ಷಗಳ ಕಾಲ ಹಲವು ಸಮಸ್ಯೆಗಳಿಂದ ಮುಕ್ತಗೊಳಿಸಿದ್ದಾರೆ ಮತ್ತು ಅವರು ಸತತ ಮೂರನೇ ಬಾರಿಗೆ ದೇಶವನ್ನು ಮುನ್ನಡೆಸುತ್ತಿದ್ದಾರೆ ಎಂದು ಶ್ರೀ ಶಾ ಹೇಳಿದರು.

ಶ್ರೀ ಅಮಿತ್ ಶಾ ಅವರು ಇಂದಿನ ವಿಷಯ “ವಿಕಸಿತ ಭಾರತ @ 2047: ಪ್ರಗತಿಯ ಶಿಖರದತ್ತ ಮುನ್ನಡೆ'” ಬಹಳ ಸೂಕ್ತವಾಗಿದೆ ಎಂದು ಹೇಳಿದರು. ಪ್ರಧಾನಿ ಮೋದಿ ಅವರು ತಮ್ಮ ಮುಂದೆ ಎರಡು ಪ್ರಮುಖ ಗುರಿಗಳನ್ನು ಿಟ್ಟುಕೊಂಡಿದ್ದಾರೆ: 2047ರಲ್ಲಿ ದೇಶವು ತನ್ನ ಸ್ವಾತಂತ್ರ್ಯದ ಶತಮಾನೋತ್ಸವವನ್ನು ಆಚರಿಸುವಾಗ ಭಾರತವು ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುತ್ತದೆ ಮತ್ತು 2027ರ ವೇಳೆಗೆ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುತ್ತದೆ ಎಂದು ಅವರು ಹೇಳಿದರು. ಈ ಎರಡು ಗುರಿಗಳನ್ನು ಸಾಧಿಸಲು, ಪ್ರಧಾನಿ ಮೋದಿ ಅವರು ಕಳೆದ 10 ವರ್ಷಗಳಿಂದ ವಿವಿಧ ನೀತಿಗಳು ಮತ್ತು ಕಾರ್ಯಕ್ರಮಗಳ ಮೂಲಕ ಅವಿರತವಾಗಿ ದುಡಿಯುತ್ತಿದ್ದಾರೆ ಎಂದು ಅವರು ಹೇಳಿದರು. ಶ್ರೀ ಶಾ ಅವರು, ಪ್ರಧಾನಮಂತ್ರಿ ಶ್ರೀ ಮೋದಿ ಅವರು ದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿ ಮಾಡುವುದು, ಹೂಡಿಕೆ-ಸ್ನೇಹಿ ಪರಿಸರವನ್ನು ನಿರ್ಮಿಸುವುದು, ನುರಿತ ಕಾರ್ಮಿಕ ಪಡೆಯನ್ನು ನಿರ್ಮಿಸುವುದು, ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವುದು, ಅಡ್ವಾನ್ಸ್ಡ್ ಕಂಪ್ಯೂಟಿಂಗ್ ನಂತಹ ಹೊಸ ತಂತ್ರಜ್ಞಾನಗಳಲ್ಲಿ ಭಾರತವನ್ನು ಮುಂಚೂಣಿಯಲ್ಲಿರಿಸುವುದು ಮತ್ತು ಆಳ ಸಮುದ್ರ ಅನ್ವೇಷಣೆ, ಸಮುದ್ರ ಆರ್ಥಿಕತೆ ಮತ್ತು ಬಾಹ್ಯಾಕಾಶದಂತಹ ಕ್ಷೇತ್ರಗಳಲ್ಲಿ ಹೊಸ ಉದ್ಯಮಗಳನ್ನು ಆರಂಭಿಸುವುದು - ಇವುಗಳನ್ನು ಗುರಿಯಾಗಿಟ್ಟುಕೊಂಡು ದೂರದೃಷ್ಟಿಯ ನೀತಿಗಳನ್ನು ಜಾರಿಗೊಳಿಸಿದ್ದಾರೆ ಎಂದು  ಹೇಳಿದರು. ಪ್ರಧಾನಮಂತ್ರಿ ಶ್ರೀ ಮೋದಿ ಅವರು ಈ ನೀತಿಗಳನ್ನು ರೂಪಿಸಿದ್ದು ಮಾತ್ರವಲ್ಲದೆ, ಅವುಗಳ ಅನುಷ್ಠಾನಕ್ಕೆ ತರಲು ನಿರಂತರ ಪ್ರಯತ್ನಗಳನ್ನು ನಡೆಸಿದ್ದಾರೆ ಎಂದು ಅವರು ಹೆಳಿದರು.  

PHD ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯು ಉದ್ಯಮ ಮತ್ತು ಸರ್ಕಾರದ ನಡುವಿನ ಸೇತುವೆಯಾಗಿದೆ. ಮುಂಬರುವ ಕಾಲದಲ್ಲಿ, PHD ಚೇಂಬರ್ ಸರ್ಕಾರದ ನೀತಿಗಳು, ಯೋಜನೆಗಳು ಮತ್ತು ದೃಷ್ಟಿಕೋನವನ್ನು ಅನುಷ್ಠಾನಗೊಳಿಸಬೇಕು ಮತ್ತು ಉದ್ಯಮದ ಸಮಸ್ಯೆಗಳನ್ನು ಸರ್ಕಾರಕ್ಕೆ ತಿಳಿಸಬೇಕು ಎಂದು ಗೃಹ ಸಚಿವರು ಹೇಳಿದರು. ಕಳೆದ 10 ವರ್ಷಗಳಲ್ಲಿ ನಾವು ಸಾಕಷ್ಟು ಸಾಧನೆ ಮಾಡಿದ್ದೇವೆ ಎಂದರು.  ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ, ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ, ಮುಂಬೈನ ವಿಶ್ವ-ಪ್ರಸಿದ್ಧ ಟ್ರಾನ್ಸ್-ಹಾರ್ಬರ್ ಲಿಂಕ್ ಮತ್ತು ಕೋಲ್ಕತ್ತಾದ ಅಂಡರ್ವಾಟರ್ ಮೆಟ್ರೋ ನಂತಹ ಮೂಲಸೌಕರ್ಯಗಳನ್ನು ಕಳೆದ 10 ವರ್ಷಗಳಲ್ಲಿ ನಿರ್ಮಿಸಲಾಗಿದೆ. ಅಂಡಮಾನ್-ನಿಕೋಬಾರ್ ಮತ್ತು ಲಕ್ಷದ್ವೀಪದಲ್ಲಿ ಸಮುದ್ರದಡಿಯಲ್ಲಿ ಹಾಕಲಾದ ಆಪ್ಟಿಕಲ್ ಫೈಬರ್ ಮೂಲಕ ದೂರದ ಪ್ರದೇಶಗಳಿಗೆ ಸಂಪರ್ಕವನ್ನು ತರುವ ಮೂಲಕ, ಅಲ್ಲಿನ ವ್ಯಾಪಾರ ಅವಕಾಶಗಳನ್ನು ಬಳಸಿಕೊಳ್ಳುವ ಮತ್ತು ಭದ್ರತಾ ದೃಷ್ಟಿಯಿಂದ ಈ ದ್ವೀಪಗಳನ್ನು ಬಲಪಡಿಸುವ ಕೆಲಸವನ್ನು ಮಾಡಲಾಗಿದೆ ಎಂದು ಶ್ರೀ ಶಾ ಹೇಳಿದರು.

ಚಂದ್ರನ ಮೇಲಿನ ಶಿವಶಕ್ತಿ ಬಿಂದುವಿನಲ್ಲಿ ಭಾರತದ ಧ್ವಜವನ್ನು ಹಾರಿಸಿದಾಗ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುತ್ತಾನೆ ಎಂದು ಶ್ರೀ ಅಮಿತ್ ಶಾ ಹೇಳಿದರು. ದೇಶದ ಅಭಿವೃದ್ಧಿ ಹೊಂದದ ಪ್ರದೇಶಗಳನ್ನು ಸಾಗರಮಾಲಾ ಯೋಜನೆಯ ಮೂಲಕ ಸಂಪರ್ಕಿಸುವುದು, ದೇಶದಲ್ಲಿ ಆರಾಮದಾಯಕ ಪ್ರಯಾಣಕ್ಕೆ ಹೊಸ ಮಾರ್ಗವನ್ನು ತೆರೆಯಲು ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳ ಜಾಲವನ್ನು ಹೆಣೆಯುವುದು, ನಮ್ಮ ಅಗತ್ಯಗಳನ್ನು ಮಾತ್ರವಲ್ಲದೆ ಇಡೀ ವಿಶ್ವದ ಅಗತ್ಯಗಳನ್ನು ಪೂರೈಸಲು ಸೆಮಿಕಂಡಕ್ಟರ್ ತಯಾರಿಕೆಯಲ್ಲಿ ಮುಂದುವರಿಯುವುದು, ವಿದ್ಯುತ್ ವಾಹನಗಳಲ್ಲಿ ಹೊಸ ಕ್ರಾಂತಿಯನ್ನು ತರುವುದು, ಮತ್ತು ವಿದೇಶಿ ನೇರ ಹೂಡಿಕೆಯನ್ನು ದಾಖಲೆಯ ಮಟ್ಟಕ್ಕೆ ಹೆಚ್ಚಿಸುವುದು, ಭಾರತವನ್ನು ವಿಶ್ವದ ನಾಲ್ಕನೇ ಅತಿದೊಡ್ಡ ವಿದೇಶಿ ವಿನಿಮಯ ಮೀಸಲು ಹೊಂದಿರುವ ದೇಶವನ್ನಾಗಿ ಮಾಡುವುದು - ಇವೆಲ್ಲವೂ ನಮಗೆ ಗಣನೀಯ ಸಾಧನೆಗಳಾಗಿವೆ.

ನಾವು ವಿಶ್ವದ ಅತಿ ವೇಗವಾಗಿ ಬೆಳೆಯುತ್ತಿರುವ ಸ್ಟಾರ್ಟ್-ಅಪ್ ಆರ್ಥಿಕತೆಯಾಗಿದ್ದೇವೆ. ನಾವು ವಿಶ್ವದ ಅತಿದೊಡ್ಡ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಯಶಸ್ವಿಯಾಗಿ ಪ್ರಾರಂಭಿಸಿದ್ದೇವೆ, ಇದನ್ನು ಈಗ ಅನೇಕ ದೇಶಗಳು ಅಳವಡಿಸಿಕೊಳ್ಳುತ್ತಿವೆ. ಇದರೊಂದಿಗೆ, ಪ್ರಧಾನಮಂತ್ರಿ ಶ್ರೋ ಮೋದಿ ಅವರು ಸಹಕಾರಿ ಆಧಾರಿತ ವಿಶ್ವದ ಅತಿದೊಡ್ಡ ಧಾನ್ಯ ಸಂಗ್ರಹಣಾ ಯೋಜನೆಯನ್ನು ಪರಿಚಯಿಸಿದ್ದಾರೆ ಎಂದು ಅವರು ಹೇಳಿದರು. ಆಹಾರ ಭದ್ರತೆಯಿಂದ ಆರೋಗ್ಯ ಭದ್ರತೆಯವರೆಗೆ, ನಾವು ಎಲ್ಲಾ ಆಯಾಮಗಳನ್ನು ಒಳಗೊಂಡಿದ್ದೇವೆ. ಕಳೆದ 10 ವರ್ಷಗಳಲ್ಲಿ ಪ್ರಧಾನಮಂತ್ರಿ ಶೀ ಮೋದಿ ಅವರ ನಾಯಕತ್ವದಲ್ಲಿ, ಮುಂದಿನ 25 ವರ್ಷಗಳಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಭಾರತವು ಮುಂಚೂಣಿಯಲ್ಲಿರಲು ಅಡಿಪಾಯ ಹಾಕಲಾಗಿದೆ ಎಂದು ಶ್ರೀ ಶಾ ಹೇಳಿದರು. ವಿಷನ್, ಅನುಭವ ಮತ್ತು ಬದ್ಧತೆ ಒಬ್ಬ ವ್ಯಕ್ತಿಯಲ್ಲಿ ಒಟ್ಟುಗೂಡಿದಾಗ ಮತ್ತು ಆ ವ್ಯಕ್ತಿ ಪ್ರಧಾನ ಮಂತ್ರಿಯಾಗಿದ್ದಾಗ, ದೇಶವು ಅಪಾರವಾಗಿ ಲಾಭ ಪಡೆಯುತ್ತದೆ. ಶ್ರೀ ನರೇಂದ್ರ ಮೋದಿ ಇದಕ್ಕೆ ಉತ್ತಮ ಉದಾಹರಣೆಯಾಗಿದ್ದಾರೆ ಎಂದು ಅವರು ಹೇಳಿದರು.

ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ ಮತ್ತು ಪ್ರಜಾಪ್ರಭುತ್ವದಲ್ಲಿ ಸರ್ಕಾರವನ್ನು ಯಾರು ಮುನ್ನಡೆಸಬೇಕು ಎಂಬುದನ್ನು ಜನರು ನಿರ್ಧರಿಸುತ್ತಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. ತೌಲನಿಕ ಅಧ್ಯಯನ ಮಾಡದೆ ಸರಿಯಾದ ಮೌಲ್ಯಮಾಪನ ಮಾಡಲು ಸಾಧ್ಯವಿಲ್ಲ ಎಂದರು. 2014ರಿಂದ 2024ರ ನಡುವಿನ ದೇಶದ ಪರಿಸ್ಥಿತಿಯನ್ನು ತುಲನಾತ್ಮಕವಾಗಿ ನೋಡುವ ಅಗತ್ಯವಿದೆ ಎಂದು ಹೇಳಿದರು. 2014ಕ್ಕೂ ಮೊದಲು, ನಮ್ಮ ದೇಶವು ನೀತಿ ಪಕ್ಷವಾತದಿಂದ ಬಳಲುತ್ತಿದೆ ಮತ್ತು ಯಾವುದೇ ನೀತಿಗಳನ್ನು ರೂಪಿಸಲಾಗುತ್ತಿಲ್ಲ ಎಂದು ಎಲ್ಲರೂ ಹೇಳುತ್ತಿದ್ದರು, ಆದರೆ ಪ್ರಧಾನಿ ಮೋದಿ ಈ ನೀತಿ ಪಕ್ಷವಾತಕ್ಕೆ ಅಂತ್ಯ ಹಾಡಿದರು, ಅನೇಕ ನೀತಿಗಳನ್ನು ರೂಪಿಸಿದರು ಮತ್ತು ಕಾರ್ಯನಿರ್ವಹಣೆಯ ರಾಜಕಾರಣವನ್ನು ತಂದರು ಎಂದು ಅವರು ಹೇಳಿದರು. ಇಂದು ಶಾಶ್ವತ ನೀತಿಯನ್ನು ಮಾಡದ ಕ್ಷೇತ್ರವಿಲ್ಲ ಎಂದು ಶ್ರೀ ಶಾ ಹೇಳಿದರು. ಈ ಹಿಂದೆ ಭಾರತವನ್ನು ದುರ್ಬಲವಾದ ಐದರಲ್ಲಿ ಎಣಿಸಲಾಗಿತ್ತು ಆದರೆ ಇಂದು IMF ಜಾಗತಿಕ ಆರ್ಥಿಕತೆಯಲ್ಲಿ ನಮ್ಮನ್ನು "ಪ್ರಕಾಶಮಾನ ಕೇಂದ್ರ" (Bright Spot) ಎಂದು ಕರೆಯುತ್ತದೆ.

ಮೂಲಸೌಕರ್ಯ ಅಭಿವೃದ್ಧಿಯಡಿ, ಝೋಜಿ ಲಾ ಸುರಂಗ, ಚೆನಾಬ್ ರೈಲ್ವೆ ಸೇತುವೆ ಮತ್ತು ಅಸ್ಸಾಂನಲ್ಲಿನ ಸೇತುವೆ ನಂತಹ ಯೋಜನೆಗಳು ಎಲ್ಲರಿಗೂ ಕಾಣಲು ಸಿಗುತ್ತಿವೆ. ಈ ಹಿಂದೆ ಭಾರತದಲ್ಲಿ ಎರಡಂಕಿಯ ಹಣದುಬ್ಬರವಿತ್ತು ಆದರೆ ಇಂದು ನಾವು ಆತ್ಮವಿಶ್ವಾಸದಿಂದ ಎರಡಂಕಿಯ ಬೆಳವಣಿಗೆಯತ್ತ ಸಾಗುತ್ತಿದ್ದೇವೆ ಎಂದು ಹೇಳಿದರು. ಹಲವು ವರ್ಷಗಳಿಂದ ನಮ್ಮ ಬೆಳವಣಿಗೆ ದರ ಜಿ20 ರಾಷ್ಟ್ರಗಳಲ್ಲೇ ಅತ್ಯಧಿಕವಾಗಿದೆ ಎಂದರು. ಹಿಂದಿನ ಜಾಗತಿಕ ಹೂಡಿಕೆದಾರರು ಭಾರತದ ಮೇಲೆ ವಿಶ್ವಾಸ ಕಳೆದುಕೊಂಡಿದ್ದರು ಆದರೆ ಇಂದು ಭಾರತವು ಉತ್ಪಾದನೆಗೆ ಉತ್ತಮ ತಾಣವಾಗಿದೆ ಎಂದು ಶ್ರೀ ಶಾ ಹೇಳಿದರು. 2021-22ರಲ್ಲಿ, ನಾವು 85 ಬಿಲಿಯನ್ ಡಾಲರ್ ಗಳ ದಾಖಲೆಯ ವಿದೇಶಿ ನೇರ ಹೂಡಿಕೆ (ಎಫ್ಡಿಐ) ಯನ್ನು ಆಕರ್ಷಿಸಿದ್ದೇವೆ.ಇಂದು ನಾವು ಡಿಜಿಟಲ್ ಪಾವತಿಯಂತಹ ಹಲವು ಕ್ಷೇತ್ರಗಳಲ್ಲಿ ಅಗ್ರಸ್ಥಾನದಲ್ಲಿದ್ದೇವೆ. 2014ಕ್ಕಿಂತ ಮೊದಲು 12 ಲಕ್ಷ ಕೋಟಿ ರೂಪಾಯಿಗಳ ಭ್ರಷ್ಟಾಚಾರ ಹಗರಣಗಳು ನಡೆದಿದ್ದವು, ಆದರೆ 10 ವರ್ಷಗಳ ಮೋದಿ ಸರ್ಕಾರದ ಅವಧಿಯಲ್ಲಿ ನಮ್ಮ ವಿರೋಧಿಗಳು ಕೂಡ ನಮ್ಮ ವಿರುದ್ಧ ಯಾವುದೇ ಭ್ರಷ್ಟಾಚಾರದ ಆರೋಪಗಳನ್ನು ಮಾಡಲು ಸಾಧ್ಯವಾಗಲಿಲ್ಲ. 

ಹಿಂದಿನ ಸರ್ಕಾರದ ಸಮಯದಲ್ಲಿ, ಭಯೋತ್ಪಾದನೆ, ಬಾಂಬ್ ಸ್ಫೋಟಗಳು ಮತ್ತು ನಕ್ಸಲಿಸಂ ದೇಶಕ್ಕೆ ತೀವ್ರ ಸಮಸ್ಯೆಗಳಾಗಿ ಮಾರ್ಪಟ್ಟಿದ್ದವು, ಆದರೆ ಇಂದು ನಾವು ಆತ್ಮವಿಶ್ವಾಸದಿಂದ ಹೇಳಬಹುದು - ಅದು ಕಾಶ್ಮೀರವಾಗಿರಲಿ, ಎಡಪಂಥೀಯ ಅತಿರೇಕ ಪ್ರಭಾವಿತ ಪ್ರದೇಶಗಳಾಗಿರಲಿ, ಅಥವಾ ಈಶಾನ್ಯ ಭಾರತವಾಗಿರಲಿ, ನಾವು ಭಯೋತ್ಪಾದನೆ ಮತ್ತು ಉಗ್ರವಾದವನ್ನು ಯಶಸ್ವಿಯಾಗಿ ನಿರ್ಮೂಲನೆ ಮಾಡಿದ್ದೇವೆ. ವ್ಯಾಪಾರ ಮಾಡುವ ಸುಲಭತೆಯ (ಈಸ್ ಆಫ್ ಡೂಯಿಂಗ್ ಬಿಸಿನೆಸ್) ಶ್ರೇಯಾಂಕದಲ್ಲಿ, ಭಾರತವು ಹಿಂದೆ 142ನೇ ಸ್ಥಾನದಲ್ಲಿತ್ತು, ಆದರೆ ಇಂದು ನಾವು 63ನೇ ಸ್ಥಾನಕ್ಕೆ ಏರಿದ್ದೇವೆ ಎಂದು ಅವರು ತಿಳಿಸಿದರು. ಇಡೀ ಬ್ಯಾಂಕಿಂಗ್ ವ್ಯವಸ್ಥೆಯು ದುರ್ಬಲ ಸ್ಥಿತಿಯಲ್ಲಿತ್ತು, ಆದರೆ 2023-24ರಲ್ಲಿ, ಸರ್ಕಾರಿ ಬ್ಯಾಂಕುಗಳು ₹1.40 ಲಕ್ಷ ಕೋಟಿ ಲಾಭ ಗಳಿಸಿವೆ ಎಂಬುದನ್ನು ಅವರು ಒತ್ತಿ ಹೇಳಿದರು.ಪ್ರತಿಯೊಂದು ಕ್ಷೇತ್ರದಲ್ಲೂ ಹೊಸ ನೀತಿಗಳನ್ನು ಜಾರಿಗೆ ತರಲಾಗಿದೆ, ಇದು ದೇಶವನ್ನು ಪ್ರಗತಿಯತ್ತ ಸಾಗಲು ಸಹಾಯ ಮಾಡುತ್ತಿದೆ ಎಂದು ಅವರು ಹೇಳಿದರು. 

ದೇಶ ಪ್ರಗತಿಯತ್ತ ಸಾಗಬೇಕಾದರೆ ದೇಶದ ಶಿಕ್ಷಣ ನೀತಿ ಹೊಸದಾಗಿರಬೇಕು ಎಂದ ಅವರು, ಶ್ರೀ ಮೋದಿಜಿಯವರು ಹೊಸ ಶಿಕ್ಷಣ ನೀತಿ ತಂದಿದ್ದು, ನಮ್ಮ ಪರಂಪರೆಯನ್ನು ಮೈಗೂಡಿಸಿಕೊಂಡು ಶಿಕ್ಷಣವನ್ನು ಜಾಗತಿಕಗೊಳಿಸಿದ್ದೇವೆ ಎಂದರು. ಜಿಎಸ್‌ಟಿ, ಡಿಜಿಟಲ್ ಇಂಡಿಯಾ, ಭಾರತಮಾಲಾ, ಸಾಗರಮಾಲಾ, ಪಿಎಂ ಗತಿಶಕ್ತಿ, ಸ್ಟಾರ್ಟ್‌ಅಪ್ ಇಂಡಿಯಾದಂತಹ ಅನೇಕ ಯೋಜನೆಗಳು ದೇಶವನ್ನು ಎಲ್ಲಾ ದಿಕ್ಕುಗಳಲ್ಲಿ ಮುನ್ನಡೆಸಲು ಕೆಲಸ ಮಾಡಿದೆ ಎಂದು ಹೇಳಿದರು.

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮತ್ತು "ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ" ತತ್ವದ ಅಡಿಯಲ್ಲಿ, 2,000 ಹಳತಾದ ವಸಾಹತುಶಾಹಿ ಕಾನೂನುಗಳನ್ನು ರದ್ದುಪಡಿಸಲಾಗಿದೆ ಮತ್ತು ವಿವಿಧ ವಲಯಗಳಲ್ಲಿನ 39,000 ಕ್ಕೂ ಹೆಚ್ಚು ಅನುಸರಣೆಗಳನ್ನು ತೆಗೆದುಹಾಕಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಕಳೆದ 10 ವರ್ಷಗಳಲ್ಲಿ, 80 ಕೋಟಿ ಜನರು ಪ್ರತಿ ವ್ಯಕ್ತಿಗೆ 5 ಕೆಜಿ ಉಚಿತ ಧಾನ್ಯವನ್ನು ಪಡೆಯುತ್ತಿದ್ದಾರೆ, 4 ಕೋಟಿ ಬಡವರಿಗೆ ಮನೆಗಳನ್ನು ಒದಗಿಸಲಾಗಿದೆ, 15 ಕೋಟಿ ಮನೆಗಳು ಕೊಳವೆ ನೀರನ್ನು ಪಡೆದಿವೆ, 11 ಕೋಟಿಗೂ ಹೆಚ್ಚು ಜನರಿಗೆ ಉಚಿತ ಅನಿಲ ಸಂಪರ್ಕಗಳನ್ನು ನೀಡಲಾಗಿದೆ ಮತ್ತು ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ 12 ಕೋಟಿಗೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಪ್ರಧಾನಿ ಮೋದಿ ಅವರು ಲಕ್ಷಾಂತರ ಜನರ ಚಿಂತೆಗಳನ್ನು ನಿವಾರಿಸಿದ್ದಾರೆ ಮತ್ತು ಭಾರತವನ್ನು 130 ಕೋಟಿ ಜನರ ಮಾರುಕಟ್ಟೆಯಾಗಿ ಪರಿವರ್ತಿಸಿದ್ದಾರೆ ಎಂದು ಶ್ರೀ ಶಾ ಹೇಳಿದರು. ದೇಶದ ಅಭಿವೃದ್ಧಿ ಪ್ರಕ್ರಿಯೆಯಿಂದ 60 ಕೋಟಿ ಜನರನ್ನು ಹೊರಗಿಟ್ಟರೆ, ದೇಶ ಎಂದಿಗೂ ಪ್ರಗತಿ ಹೊಂದಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಇಂದು, 130 ಕೋಟಿ ಜನರು ರಾಷ್ಟ್ರದ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದರಿಂದ, ನಮ್ಮ ಬೆಳವಣಿಗೆಯ ದರವು ಮೇಲ್ಮುಖವಾಗಿದೆ ಎಂದು ಅವರು ಹೇಳಿದರು. 

ಮೋದಿ ಸರ್ಕಾರ ಸಂಶೋಧನಾ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಮೊದಲ ಬಾರಿಗೆ 50 ಸಾವಿರ ಕೋಟಿ ರೂ.ಗಳೊಂದಿಗೆ ಸಂಶೋಧನಾ ಪ್ರತಿಷ್ಠಾನವನ್ನು ಸ್ಥಾಪಿಸಲಾಗಿದೆ. ಮುಂದಿನ 25 ವರ್ಷಗಳಲ್ಲಿ ಭಾರತ ವಿಶ್ವದಲ್ಲಿಯೇ ಸಂಶೋಧನಾ ಕ್ಷೇತ್ರದಲ್ಲಿ ಅಗ್ರಸ್ಥಾನಕ್ಕೇರಲಿದೆ ಎಂದರು. ಪ್ರಧಾನಮಂತ್ರಿ ಶ್ರೀ ಮೋದಿ ಅವರು ಹಲವು ಕ್ಷೇತ್ರಗಳಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ ಎಂದು ಶ್ರೀ ಶಾ ಹೇಳಿದರು. ಇಂಟರ್ನೆಟ್ ಬಳಕೆದಾರರ ವಿಷಯದಲ್ಲಿ ನಾವು ಪ್ರಪಂಚದಲ್ಲಿ ಎರಡನೆಯವರಾಗಿದ್ದೇವೆ ಮತ್ತು ಜಾಗತಿಕ ಫಿನ್ ಟೆಕ್ ಅಳವಡಿಕೆ ದರ ಮತ್ತು ಸ್ಮಾರ್ಟ್ ಫೋನ್ ಡೇಟಾ ಬಳಕೆಯಲ್ಲಿ ಮೊದಲನೆಯವರಾಗಿದ್ದೇವೆ. ಇಂದು ಜಗತ್ತಿನಲ್ಲಿ ಪ್ರತಿದಿನ ನಡೆಯುವ ಡಿಜಿಟಲ್ ವಹಿವಾಟಿನ ಅರ್ಧದಷ್ಟು ಭಾರತದಲ್ಲಿ ನಡೆಯುತ್ತಿದೆ ಎಂದು ಹೇಳಿದರು.

ಈಗ ಭಾರತೀಯ ಕೈಗಾರಿಕೆಗಳು ತಮ್ಮ ಗಾತ್ರ ಮತ್ತು ಪ್ರಮಾಣ ಎರಡನ್ನೂ ಬದಲಾಯಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಕಂಪನಿಗಳನ್ನು ಜಾಗತಿಕವಾಗಿಸುವ ಅಗತ್ಯವಿದ್ದು, ನಮ್ಮ ಚೇಂಬರ್ ಗಳು ಮತ್ತು ಉದ್ಯಮಗಳು ಭಾರತವನ್ನು ವಿಶ್ವದಲ್ಲಿ ಪ್ರಬಲವಾಗಿಸುವ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.

 

*****



(Release ID: 2064074) Visitor Counter : 13