ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಆಸಿಯಾನ್-ಭಾರತ (ASEAN-India) ಶೃಂಗಸಭೆಯ ಸಂದರ್ಭದಲ್ಲಿ ಜಪಾನ್ ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ

Posted On: 10 OCT 2024 7:12PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಲಾವೋಸ್‌ ನಲ್ಲಿ ಆಸಿಯಾನ್-ಭಾರತ ಶೃಂಗಸಭೆಯ ಸಂದರ್ಭದಲ್ಲಿ ಜಪಾನ್‌ ನ ನೂತನ ಪ್ರಧಾನಮಂತ್ರಿ ಘನತೆವೆತ್ತ ಶ್ರೀ ಶಿಗೆರು ಇಶಿಬಾ ಅವರೊಂದಿಗೆ ಇಂದು ದ್ವಿಪಕ್ಷೀಯ ಸಭೆ ನಡೆಸಿದರು.

ಪ್ರಧಾನಮಂತ್ರಿ ಶ್ರೀ ಶಿಗೆರು ಇಶಿಬಾ ಅವರ ಹೊಸ ಜವಾಬ್ದಾರಿಯನ್ನು ಪ್ರಧಾನಮಂತ್ರಿಯವರು ಅಭಿನಂದಿಸಿದರು ಮತ್ತು ಜಪಾನ್ ಅನ್ನು ಇನ್ನೂ ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಬೇಕೆಂದು ಹಾರೈಸಿದರು. ವಿಶ್ವಾಸಾರ್ಹ ಸ್ನೇಹಿತ ಮತ್ತು ಕಾರ್ಯತಂತ್ರದ ಪಾಲುದಾರ ಜಪಾನ್‌ ನೊಂದಿಗಿನ ತನ್ನ ಬಾಂಧವ್ಯಕ್ಕೆ ಭಾರತವು ಹೆಚ್ಚಿನ ಆದ್ಯತೆಯನ್ನು ನೀಡುವುದನ್ನು ಮುಂದುವರಿಸುತ್ತದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.

ವ್ಯಾಪಾರ ಮತ್ತು ಹೂಡಿಕೆ, ಮೂಲಸೌಕರ್ಯ ಅಭಿವೃದ್ಧಿ, ರಕ್ಷಣೆ ಮತ್ತು ಭದ್ರತೆ, ಸೆಮಿಕಂಡಕ್ಟರ್‌ ಗಳು, ಕೌಶಲ್ಯ, ಸಂಸ್ಕೃತಿ ಮತ್ತು ಜನರ ವಿನಿಮಯ ಸೇರಿದಂತೆ ವ್ಯಾಪಕ ಶ್ರೇಣಿಯ ಕ್ಷೇತ್ರಗಳಲ್ಲಿ ವರ್ಧಿತ ಸಹಕಾರದ ಮೂಲಕ ಭಾರತ-ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ತಮ್ಮ ಬದ್ಧತೆಯನ್ನು ಉಭಯ ನಾಯಕರು ಪುನರುಚ್ಚರಿಸಿದರು.

ಶಾಂತಿಯುತ, ಸುರಕ್ಷಿತ ಮತ್ತು ಸಮೃದ್ಧ ಇಂಡೋ-ಪೆಸಿಫಿಕ್ ಪ್ರದೇಶಕ್ಕೆ ಭಾರತ ಮತ್ತು ಜಪಾನ್ ದೇಶಗಳು ಪರಸ್ಪರ ಅನಿವಾರ್ಯ ಪಾಲುದಾರರು ಎಂದು ಇಬ್ಬರೂ ನಾಯಕರು ಹೇಳಿದರು ಮತ್ತು ಈ ಗುರಿಯನ್ನು ಸಾಧಿಸಲು ಒಟ್ಟಾಗಿ ಕೆಲಸ ಮಾಡುವ ತಮ್ಮ ಬದ್ಧತೆಯ ಸಹಮತವನ್ನು ತಿಳಿಸಿದರು.

ಮುಂದಿನ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯ ನರೀಕ್ಷೆಯಲ್ಲಿ ಸಮಯಾವಕಾಶವನ್ನು ಉಭಯ ನಾಯಕರು ಕಾದು ಎದುರು ನೋಡುತ್ತಿರುವುದಾಗಿ ತಿಳಿಸಿದರು.

 

*****



(Release ID: 2064060) Visitor Counter : 20