ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಈ ವರ್ಷದ ಗಾಂಧಿ ಜಯಂತಿಯಂದು ನವದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿರುವ 'ಖಾದಿ ಇಂಡಿಯಾ'ದಲ್ಲಿ ₹ 2.01 ಕೋಟಿ ಮೌಲ್ಯದ ದಾಖಲೆ ಮಾರಾಟ: ಎಲ್ಲಾ ಖಾದಿ ಉತ್ಪಾದಕರನ್ನು ಅಭಿನಂದಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ


ಇದು ಖಾದಿ ಕುಶಲಕರ್ಮಿಗಳ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುತ್ತದೆ ಮತ್ತು ಅವರನ್ನು ಪ್ರೋತ್ಸಾಹಿಸುತ್ತದೆ

ಖಾದಿ ಮತ್ತು ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವಂತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮನವಿ ಇದೀಗ ಕ್ರಾಂತಿಯಾಗಿದೆ ಮತ್ತು ಅವರ ನೇತೃತ್ವದಲ್ಲಿ ಖಾದಿ ಉದ್ಯಮ ಇಂದು ಹೊಸ ದಾಖಲೆಗಳನ್ನು ನಿರ್ಮಿಸುತ್ತಿದೆ - ಗೃಹ ಸಚಿವ

ಜನರಲ್ಲಿ ಸ್ವದೇಶಿ ಉತ್ಪನ್ನಗಳ ಕಡೆಗೆ ಹೆಚ್ಚುತ್ತಿರುವ ಆಕರ್ಷಣೆಯು ಆತ್ಮನಿರ್ಭರ ಭಾರತ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ

Posted On: 05 OCT 2024 7:53PM by PIB Bengaluru

ಈ ವರ್ಷದ ಗಾಂಧಿ ಜಯಂತಿಯಂದು ನವದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿರುವ 'ಖಾದಿ ಇಂಡಿಯಾ'ದಲ್ಲಿ ₹ 2.01 ಕೋಟಿ ಮೌಲ್ಯದ ದಾಖಲೆ ಮಾರಾಟವಾಗಿದೆ ಎಂದು  ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಎಲ್ಲಾ ಖಾದಿ ಉತ್ಪಾದಕರನ್ನು ಅಭಿನಂದಿಸಿದ್ದಾರೆ.

ಸಾಮಾಜಿಕ ಜಾಲತಾಣ "ಎಕ್ಸ್" ನಲ್ಲಿ ಪೋಸ್ಟ್ ಮಾಡಿದ ಶ್ರೀ ಅಮಿತ್ ಶಾ, ಖಾದಿ ಮತ್ತು ಸ್ಥಳೀಯ ಉತ್ಪನ್ನಗಳನ್ನು ಖರೀದಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮನವಿಯು ಈಗ ಕ್ರಾಂತಿಯಾಗಿದೆ ಮತ್ತು ಅವರ ನೇತೃತ್ವದಲ್ಲಿ ಖಾದಿ ಉದ್ಯಮವು ಇಂದು ಹೊಸ ದಾಖಲೆಗಳನ್ನು ನಿರ್ಮಿಸುತ್ತಿದೆ ಎಂದು ಹೇಳಿದರು. ಈ ವರ್ಷ ಗಾಂಧಿ ಜಯಂತಿಯಂದು ಹೊಸದಿಲ್ಲಿಯ ಕನ್ನಾಟ್ ಪ್ಲೇಸ್‌ನಲ್ಲಿರುವ ‘ಖಾದಿ ಇಂಡಿಯಾ’ದಲ್ಲಿ ₹ 2.01 ಕೋಟಿ ದಾಖಲೆ ಮಾರಾಟವಾಗಿರುವುದು ನಿಜಕ್ಕೂ ಸಂತಸದ ಸಂಗತಿ ಎಂದರು. ಇದು ಖಾದಿ ಕುಶಲಕರ್ಮಿಗಳ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುತ್ತದೆ ಮತ್ತು ಅವರನ್ನು ಪ್ರೋತ್ಸಾಹಿಸುತ್ತದೆ ಎಂದು ಶ್ರೀ ಅಮಿತ್‌ ಶಾ ಹೇಳಿದರು. ಜನರಲ್ಲಿ ಸ್ವದೇಶಿ ಉತ್ಪನ್ನಗಳತ್ತ ಹೆಚ್ಚುತ್ತಿರುವ ಆಕರ್ಷಣೆಯು ಆತ್ಮನಿರ್ಭರ ಭಾರತ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಗೃಹ ಸಚಿವರು ಹೇಳಿದರು.

 

 

*****


(Release ID: 2062620) Visitor Counter : 28