ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಈಶಾನ್ಯ: ಭಾರತದ ಹೃದಯ ಮತ್ತು ಆತ್ಮ, ಎಂದು ಉಪರಾಷ್ಟ್ರಪತಿಯವರು ಹೇಳಿದರು


ಈಶಾನ್ಯ ರಾಜ್ಯಗಳ ರಾಯಭಾರಿಗಳಾಗುವಂತೆ ಮಾಧ್ಯಮಗಳಿಗೆ ಉಪರಾಷ್ಟ್ರಪತಿಯವರಿಂದ ಒತ್ತಾಯ

ಆಕ್ಟ್ ಈಸ್ಟ್ ನೀತಿ: ಈಶಾನ್ಯದ ಅಭಿವೃದ್ಧಿಗೆ ಗೇಮ್ ಚೇಂಜರ್ ಎಂದು ಉಪರಾಷ್ಟ್ರಪತಿಯರು  ಹೇಳಿದರು

ಅಸ್ಸಾಮಿ, ಈಗ ಶಾಸ್ತ್ರೀಯ ಭಾಷೆಯಾಗಿ, ನಮ್ಮ ಸಮೃದ್ಧ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸುತ್ತದೆ ಎಂದು ಉಪರಾಷ್ಟ್ರಪತಿಯವರು ಹೇಳಿದರು

ತಪ್ಪು ಮಾಹಿತಿ ಮತ್ತು ಸನ್ಸೇಷನಲಿಸಂ ರಾಷ್ಟ್ರದ ನೆಲೆಗಟ್ಟನ್ನು ಹಾಳುಮಾಡುತ್ತದೆ ಎಂದು ಉಪರಾಷ್ಟ್ರಪತಿಯರು ಎಚ್ಚರಿಸಿದರು

ಸಂಪಾದಕೀಯ ಕ್ಷೇತ್ರವು ಪ್ರಜಾಪ್ರಭುತ್ವದ ಕಾವಲುಗಾರನಾಗಿ ಕಾರ್ಯನಿರ್ವಹಿಸಬೇಕು ಉಪರಾಷ್ಟ್ರಪತಿ ಶ್ರೀ ಧನಕರ್ ಹೇಳಿದರು

ವಿಚ್ಛಿದ್ರಕಾರಕ ತಂತ್ರಜ್ಞಾನದ ಯುಗದಲ್ಲಿ ಜವಾಬ್ದಾರಿಯುತ ವರದಿ ಮಾಡುವಿಕೆ ಅಗತ್ಯ, ಎಂದು ಉಪರಾಷ್ಟ್ರಪತಿಯರು ಎಚ್ಚರಿಸಿದರು

Posted On: 05 OCT 2024 1:54PM by PIB Bengaluru

ಭಾರತದ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು ಇಂದು ಈಶಾನ್ಯ ಪ್ರದೇಶವು ಭಾರತದ ಹೃದಯ ಮತ್ತು ಆತ್ಮ  ಎಂದು ಘೋಷಿಸಿ, ಪ್ರದೇಶದ ಪ್ರವಾಸೋದ್ಯಮ ಮತ್ತು ಅಭಿವೃದ್ಧಿಯ ಸಾಮರ್ಥ್ಯವನ್ನು ಪ್ರಚಾರ ಮಾಡಲು ಮಾಧ್ಯಮಗಳಿಗೆ ಒತ್ತಾಯಿಸಿದರು. ಈಶಾನ್ಯ ಪ್ರದೇಶವು ಕೇವಲ ಭೌಗೋಳಿಕ ಪ್ರದೇಶವಲ್ಲ, ಬದಲಾಗಿ ಭಾರತದ ಸಾರವನ್ನು ಒಳಗೊಂಡಿರುವ ಸಂಸ್ಕೃತಿಗಳು, ಸಂಪ್ರದಾಯಗಳು ಮತ್ತು ನೈಸರ್ಗಿಕ ಸೌಂದರ್ಯದ ಜೀವಂತ ವೈವಿಧ್ಯತೆಯಾಗಿದೆ ಎಂದು ಅವರು ಹೇಳಿದರು. ಇಂದು ನವದೆಹಲಿಯಲ್ಲಿ ಪ್ರತಿದಿನ್ ಮೀಡಿಯಾ ನೆಟ್ವರ್ಕ್ ಆಯೋಜಿಸಿದ್ದ 'ದಿ ಕಾನ್ಕ್ಲೇವ್ 2024' ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ ಶ್ರೀ ಧನಕರ್ ಅವರು, ಸರ್ಕಾರದ "ಆಕ್ಟ್ ಈಸ್ಟ್ ಪಾಲಿಸಿ" ಯ ಪರಿವರ್ತಕ ಪರಿಣಾಮ ಮತ್ತು ರಾಷ್ಟ್ರೀಯ ನಿರೂಪಣೆಗಳನ್ನು ರೂಪಿಸುವಲ್ಲಿ ಮಾಧ್ಯಮಗಳ ಮಹತ್ವವನ್ನು ಪ್ರತಿಪಾದಿಸಿದರು.

 

"ನ್ಯೂಜಿಲ್ಯಾಂಡ್, ಸ್ವಿಟ್ಜರ್ಲ್ಯಾಂಡ್ ಮತ್ತು ಸ್ಕಾಟ್ಲ್ಯಾಂಡ್ ಅನ್ನು ಒಟ್ಟಿಗೆ ಸೇರಿಸಿದರೂ ಈಶಾನ್ಯದ ಸಂಪತ್ತಿಗೆ ಸಾಟಿಯಾಗಲಾರವು. ಈ ಪ್ರದೇಶದ ಪ್ರತಿಯೊಂದು ರಾಜ್ಯವೂ ಸಂದರ್ಶಕರು, ಪ್ರವಾಸಿಗರು ಮತ್ತು ಸ್ಥಳೀಯರಿಗೆ ಸ್ವರ್ಗಸದೃಶವಾಗಿದೆ" ಎಂದು ಅವರು ಹೇಳಿದರು. ಸಂಪರ್ಕವನ್ನು ಸುಧಾರಿಸುವಲ್ಲಿ ಮಾಡಿದ ಮಹತ್ವದ ದಾಪುಗಾಲುಗಳನ್ನು ಒತ್ತಿ ಹೇಳಿದ ಉಪರಾಷ್ಟ್ರಪತಿಯವರು, ಇದು ಈ ಪ್ರದೇಶಕ್ಕೆ ಗೇಮ್ ಚೇಂಜರ್ ಎಂದು ಕರೆದರು. "ವಿಮಾನ ನಿಲ್ದಾಣಗಳ ಸಂಖ್ಯೆ  ದ್ವಿಗುಣಗೊಂಡಿದೆ ಮತ್ತು ಜಲಮಾರ್ಗಗಳು ಇಪ್ಪತ್ತು ಪಟ್ಟು ವಿಸ್ತರಣೆಗೊಂಡಿವೆ, ಇದು ರಾಷ್ಟ್ರವ್ಯಾಪಿ ಅಪಾರ ಆಸಕ್ತಿ ಮತ್ತು ಹೂಡಿಕೆಯನ್ನು ಹುಟ್ಟುಹಾಕಿದೆ" ಎಂದು ಅವರು ಹೇಳಿದರು.

ಶ್ರೀ ಧನಕರ್ ಅವರು ಇತ್ತೀಚೆಗೆ ಅಸ್ಸಾಮಿ ಭಾಷೆಯನ್ನು ಬಂಗಾಳಿ, ಮರಾಠಿ, ಪಾಲಿ ಮತ್ತು ಪ್ರಾಕೃತ ಭಾಷೆಗಳೊಂದಿಗೆ ಭಾರತದ ಹನ್ನೊಂದು ಶಾಸ್ತ್ರೀಯ ಭಾಷೆಗಳಲ್ಲಿ ಐದು ಭಾಷೆಗಳಲ್ಲಿ ಒಂದಾಗಿ ಗುರುತಿಸಿರುವುದನ್ನು ಉಲ್ಲೇಖಿಸಿದರು. "ಈ ಗುರುತಿಸುವಿಕೆಯು ನಮ್ಮ ರಾಷ್ಟ್ರದ ಸಮೃದ್ಧ ಸಾಂಸ್ಕೃತಿಕ ಪರಂಪರೆ ಮತ್ತು ವೈವಿಧ್ಯತೆಯನ್ನು ಪ್ರದರ್ಶಿಸುವ ಸಕಾರಾತ್ಮಕ ಪರಿಣಾಮವನ್ನು ಹೊಂದಿದೆ" ಎಂದು ಅವರು ಹೇಳಿದರು.

ಉಪರಾಷ್ಟ್ರಪತಿಯವರು ಪ್ರದೇಶದ ಸಮೃದ್ಧ ಆಧ್ಯಾತ್ಮಿಕ ಮತ್ತು ನೈಸರ್ಗಿಕ ಪರಂಪರೆಯನ್ನು ಸಹ ಉಲ್ಲೇಖಿಸಿದರು, ಪೂಜ್ಯ ಕಾಮಾಖ್ಯ ದೇವಾಲಯ ಮತ್ತು ವಿಶ್ವಪ್ರಸಿದ್ಧ ಕಾಜಿರಂಗ ರಾಷ್ಟ್ರೀಯ ಉದ್ಯಾನವನ್ನು ಉಲ್ಲೇಖಿಸಿದರು. "ನಿಮಗೆ ಆಶೀರ್ವಾದ ಎಲ್ಲಿ ಸಿಗುತ್ತದೆ? ಕಾಮಾಖ್ಯ. ಈ ರೀತಿಯ ಅಭಯಾರಣ್ಯವನ್ನು ನೀವು ಎಲ್ಲಿ ನೋಡುತ್ತೀರಿ? ಕಾಜಿರಂಗ" ಎಂದು ಅವರು ಹೇಳಿದರು, ಈಶಾನ್ಯದ ದೈವಿಕ ಮತ್ತು ಪರಿಸರಾತ್ಮಕ ಮಹತ್ವವನ್ನು ಪ್ರತಿಪಾದಿಸಿದರು.

ಶ್ರೀ ಧನಕರ್ ಅವರು ಈಶಾನ್ಯದ ಜನರ ಸುಂದರ ಸಂಸ್ಕೃತಿ, ಅತ್ಯಂತ ರುಚಿಕರವಾದ ಆಹಾರ ಮತ್ತು ಉತ್ಸಾಹದ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. 'ನಾನು ಅಲ್ಲಿ ಅನುಭವಿಸಿದ ಸಾಂಸ್ಕೃತಿಕ ಅನುಭವವನ್ನು ನಾನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ, ಈಶಾನ್ಯವು ಭಾರತದ ಹೃದಯ ಮತ್ತು ಆತ್ಮ' ಎಂದು ಅವರು ಪ್ನೋಮ್ ಪೆನ್ನಲ್ಲಿ ನಡೆದ ASEAN ಶೃಂಗಸಭೆಯಲ್ಲಿ ತಮ್ಮ ಭಾಗವಹಿಸುವಿಕೆಯನ್ನು ಪ್ರತಿಬಿಂಬಿಸುತ್ತಾ ಹೇಳಿದರು. ಅಲ್ಲಿ 'ಅಕ್ಟ್ ಈಸ್ಟ್' ನೀತಿಯ ಪ್ರಾಮುಖ್ಯತೆಯನ್ನು ಸ್ಪಷ್ಟಪಡಿಸಲಾಯಿತು.

 

ಆಕ್ಟ್ ಈಸ್ಟ್ ನೀತಿಯು ರಾಷ್ಟ್ರದ ಗಡಿಗಳಿಗೆ ಸೀಮಿತವಾಗಿಲ್ಲ, ಆದರೆ ಭಾರತವನ್ನು ಮೀರಿ, ಆಗ್ನೇಯ ಏಷ್ಯಾದ ದೇಶಗಳೊಂದಿಗೆ ಆಳವಾದ ಸಂಪರ್ಕವನ್ನು ಬೆಳೆಸುತ್ತದೆ ಎಂದು ಉಪರಾಷ್ಟ್ರಪತಿಯರು ಹೇಳಿದರು. ಹೆಚ್ಚುತ್ತಿರುವ ಸಂಪರ್ಕವು ಶೀಘ್ರದಲ್ಲೇ ಈಶಾನ್ಯದಿಂದ ಕಾಂಬೋಡಿಯಾಗೆ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ, ಅಲ್ಲಿ ಭಾರತ ಸರ್ಕಾರದ ಪ್ರಯತ್ನಗಳ ಮೂಲಕ ಅಂಗ್ಕೋರ್ ವಾಟ್ ದೇವಾಲಯವನ್ನು ಪುನಃಸ್ಥಾಪಿಸಲಾಗುತ್ತಿದೆ ಎಂದು ಅವರು ಹೇಳಿದರು. "ಈ ನೀತಿಯು ಗೇಮ್ ಚೇಂಜರ್ ಆಗಿದ್ದು, ಈ ಪ್ರದೇಶದೊಂದಿಗೆ ಆಳವಾದ ಸಾಂಸ್ಕೃತಿಕ ಮತ್ತು ಆರ್ಥಿಕ ಸಂಬಂಧಗಳನ್ನು ಬೆಳೆಸುತ್ತದೆ" ಎಂದು ಅವರು ಹೇಳಿದರು.

ಶ್ರೀ ಧನಕರ್ ಅವರು ಅವರು ಕಾಶ್ಮೀರದೊಂದಿಗೆ ಸಾಮ್ಯತೆಗಳನ್ನು ತೋರಿಸುತ್ತಾ, "ಕಾಶ್ಮೀರವೂ ಸಹ ಆಕರ್ಷಕ ತಾಣವಾಗಿದ್ದು, ಅದನ್ನು ಸ್ವೀಕರಿಸಿ ಆಚರಿಸಬೇಕು" ಎಂದು ಹೇಳಿದರು. " 1990ರ ದಶಕದಲ್ಲಿ ನಾನು ಕೇಂದ್ರ ಸಚಿವಾಲಯದಲ್ಲಿದ್ದ ಅವಧಿಯಲ್ಲಿ ಶ್ರೀನಗರಕ್ಕೆ ಭೇಟಿ ನೀಡಿದ್ದೆ. ರಸ್ತೆಯಲ್ಲಿ ಕೇವಲ 20 ಜನರಿದ್ದರು. ಕಳೆದ ವರ್ಷ ರಾಜ್ಯಸಭೆಯ ದಾಖಲೆಗಳ ಪ್ರಕಾರ 2 ಕೋಟಿಗೂ ಹೆಚ್ಚು ಪ್ರವಾಸಿಗರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದರು. ಇದು ನಮ್ಮ ರಾಷ್ಟ್ರದ ಪರಿವರ್ತನೆಯ ಪಯಣಕ್ಕೆ ಸಾಕ್ಷಿಯಾಗಿದೆ" ಎಂದು ಅವರು ಹೇಳಿದರು. ಈಶಾನ್ಯದ ಆರ್ಥಿಕತೆಯನ್ನು ಪರಿವರ್ತಿಸುವ ಪ್ರವಾಸೋದ್ಯಮದ ಸಾಮರ್ಥ್ಯವನ್ನು ಎತ್ತಿ ತೋರಿಸಿದ ಅವರು, "ಪ್ರವಾಸೋದ್ಯಮವು ಈಶಾನ್ಯದ ಸಂಪೂರ್ಣ ಭೂದೃಶ್ಯವನ್ನು ಬದಲಾಯಿಸಬಹುದು, ತ್ವರಿತ ಉದ್ಯೋಗ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಮತ್ತು ಈ ಪ್ರದೇಶವನ್ನು ಜಾಗತಿಕ ಪ್ರವಾಸಿ ಕೇಂದ್ರವಾಗಿ ಇರಿಸುತ್ತದೆ" ಎಂದು ಹೇಳಿದರು.

ರಾಷ್ಟ್ರ ನಿರ್ಮಾಣದಲ್ಲಿ ಮಾಧ್ಯಮಗಳ ಪಾತ್ರದ ಬಗ್ಗೆ ಮಾತನಾಡುತ್ತಾ ಶ್ರೀ ಧನಕರ್, ಈಶಾನ್ಯದ ಪ್ರವಾಸೋದ್ಯಮದ ಸಾಮರ್ಥ್ಯ ಮತ್ತು ಅಭಿವೃದ್ಧಿಯ ಹೆಜ್ಜೆಗಳನ್ನು ಪ್ರಚಾರ ಮಾಡುವ ಮೂಲಕ ಈಶಾನ್ಯದ ರಾಯಭಾರಿಗಳಾಗಿ ಸೇವೆ ಸಲ್ಲಿಸುವಂತೆ ಮಾಧ್ಯಮಗಳಿಗೆ ಒತ್ತಾಯಿಸಿದರು. "ಸಾರ್ವಜನಿಕರಿಗೆ ಮಾಹಿತಿ ನೀಡುವಲ್ಲಿ ಮತ್ತು ಮನಸ್ಸುಗಳನ್ನು ಪ್ರಜ್ವಲಿಸುವಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸುತ್ತವೆ. ನಿಮ್ಮ ಕಥನಗಳು ಅಭಿವೃದ್ಧಿಗೆ ಶಕ್ತಿಯುತ ಸಾಧನಗಳಾಗಿ ಕಾರ್ಯನಿರ್ವಹಿಸಬಹುದು, ನಮ್ಮ ವೈವಿಧ್ಯಮಯ ಪ್ರದೇಶಗಳಲ್ಲಿರುವ ವಿಶಿಷ್ಟ ಅವಕಾಶಗಳ ಮೇಲೆ ಬೆಳಕು ಚೆಲ್ಲಬಹುದು" ಎಂದು ಅವರು ಹೇಳಿದರು. "ನಮ್ಮ ದೇಶದಲ್ಲಿ ಕೈಹಿಡಿಯುವ ಮತ್ತು ಸಲಹೆ ನೀಡುವ ಅಭ್ಯಾಸವನ್ನು ಬೆಳೆಸೋಣ. ನಾವು ನಮ್ಮ ತಾಯಿ ಮತ್ತು ನಮ್ಮ ಸಂಸ್ಥೆಗಳಿಗೆ ಹಾನಿ ಮಾಡುವಂತಿಲ್ಲ; ನಾವು ಅವುಗಳನ್ನು ಪೋಷಿಸಬೇಕು. ಮಾಧ್ಯಮಗಳು ಸೇರಿದಂತೆ ಅದರ ಪ್ರತಿಯೊಂದು ಸಂಸ್ಥೆಯು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದಾಗ ಪ್ರಜಾಪ್ರಭುತ್ವ ಪೋಷಿತವಾಗುತ್ತದೆ" ಎಂದು ಅವರು ಹೇಳಿದರು.

ತ್ವರಿತ ತಾಂತ್ರಿಕ ಅಡಚಣೆಯ ಸಮಯದಲ್ಲಿ ಜವಾಬ್ದಾರಿಯುತ ಮಾಧ್ಯಮದ ಅಗತ್ಯವನ್ನು ಮತ್ತು ಸಾರ್ವಜನಿಕ ಸಂವಾದದ ಸಮಗ್ರತೆಯನ್ನು ಕಾಪಾಡುವ ಮಹತ್ವವನ್ನು ಉಪರಾಷ್ಟ್ರಪತಿಯವರು ಪ್ರತಿಪಾದಿಸಿದರು. "ಸಂಪಾದಕೀಯ ವ್ಯವಸ್ಥೆಯು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಮತ್ತು ಜಾಗೃತಗೊಳಿಸಬೇಕು, ಮಾಧ್ಯಮವು ಪ್ರಜಾಪ್ರಭುತ್ವದ ಕಾವಲು ನಾಯಿಯಾಗಿ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಬೇಕು" ಎಂದು ಅವರು ಹೇಳಿದರು.

ತುರ್ತುಪರಿಸ್ಥಿತಿಯ ಸಮಯದಲ್ಲಿ ಕೆಲವು ಪತ್ರಿಕೆಗಳು ತಮ್ಮ ಸಂಪಾದಕೀಯ ಸ್ಥಳವನ್ನು ಖಾಲಿ ಬಿಟ್ಟು ಸೆನ್ಸಾರ್ ಶಿಪ್ ನ ವಿರುದ್ಧ ಪ್ರತಿಭಟಿಸಿದ ಧೈರ್ಯಶಾಲಿ ನಿಲುವನ್ನು ಅವರು ಮತ್ತೆ ನೆನಪಿಸಿಕೊಂಡರು. "ಮಾಧ್ಯಮವು ಯಾವಾಗಲೂ ಪ್ರಜಾಪ್ರಭುತ್ವದ ಸ್ತಂಭವಾಗಿ ನಿಲ್ಲಬೇಕು" ಎಂದು ಅವರು ಹೇಳಿದರು. ಪತ್ರಿಕಾ ಸ್ವಾತಂತ್ರ್ಯವು ಅದರ ಜವಾಬ್ದಾರಿಯೊಂದಿಗೆ ಹೆಣೆದುಕೊಂಡಿದೆ ಎಂಬುದನ್ನು ಅವರು ಪ್ರತಿಪಾದಿಸಿದರು.

ತಪ್ಪು ಮಾಹಿತಿ, ಸನ್ಸೇಶನಲಿಸಮ್ ಮತ್ತು ರಾಷ್ಟ್ರ ವಿರೋಧಿ ಸುದ್ದಿಗಳಿಂದ ಉಂಟಾಗುವ ಅಪಾಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಶ್ರೀ ಧನಕರ್ ಅವರು, ಈ ಬೆದರಿಕೆಗಳನ್ನು ಎದುರಿಸಲು ತಂತ್ರಜ್ಞಾನವನ್ನು ಬಳಸುವಂತೆ ಮಾಧ್ಯಮಗಳಿಗೆ ಕರೆ ನೀಡಿದರು. "ಸುಳ್ಳು ಸುದ್ದಿಗಳು ಮತ್ತು ಸನ್ಸೇಶನಲಿಸಮ್ ರುಚಿಕರವಾಗಿರಬಹುದು, ಆದರೆ ಅವು ರಾಷ್ಟ್ರದ ನೆಲೆಗಟ್ಟುನ್ನು ಹಾನಿ ಮಾಡುತ್ತವೆ. ಮಾಧ್ಯಮಗಳು ಈ ಶಕ್ತಿಗಳನ್ನು ತಟಸ್ಥಗೊಳಿಸಬೇಕು ಮತ್ತು ನಮ್ಮ ಪ್ರಜಾಪ್ರಭುತ್ವ ಮೌಲ್ಯಗಳನ್ನು ಕಾಪಾಡಬೇಕು" ಎಂದು ಅವರು ಒತ್ತಾಯಿಸಿದರು.

ವಿಶಾಲ ರಾಷ್ಟ್ರೀಯ ಬೆಳವಣಿಗೆಯ ಬಗ್ಗೆ ಪ್ರಸ್ತಾಪಿಸಿದ ಉಪರಾಷ್ಟ್ರಪತಿಯವರು 1990ರ ದಶಕದಲ್ಲಿ ಭಾರತ ಎದುರಿಸಿದ ಆರ್ಥಿಕ ಸವಾಲುಗಳನ್ನು ನೆನಪಿಸಿಕೊಂಡರು. "1990ರ ದಶಕದಲ್ಲಿ ನಾನು ಸಂಸದ ಮತ್ತು ಕೇಂದ್ರ ಸಚಿವನಾಗಿದ್ದ ದಿನಗಳನ್ನು ನೆನಪಿಸಿಕೊಳ್ಳುತ್ತೇನೆ. ಆ ಸಮಯದಲ್ಲಿ, ನಮ್ಮ ಆರ್ಥಿಕ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಲು ನಮ್ಮ ಚಿನ್ನವನ್ನು ಸ್ವಿಟ್ಜರ್ಲೆಂಡ್ ಗೆ ರವಾನಿಸಲಾಗುತ್ತಿತ್ತು, ಮತ್ತು ನಮ್ಮ ವಿದೇಶಿ ವಿನಿಮಯ ಮೀಸಲು ಸುಮಾರು 1 ಬಿಲಿಯನ್ ಯುಎಸ್ ಡಾಲರ್ ಗಳಷ್ಟಿತ್ತು" ಎಂದು ಅವರು ನೆನಪಿಸಿಕೊಂಡರು. ನಂತರ ಪ್ರಧಾನಿ ಮೋದಿ ಮತ್ತು ಪ್ರಸ್ತುತ ಸರ್ಕಾರದ ಪ್ರಯತ್ನಗಳಿಗೆ ಅಭಿನಂದಿಸಿ, "ಇಂದು, ನಾವು ವಿದೇಶಿ ವಿನಿಮಯ ಮೀಸಲುಗಳಲ್ಲಿ 700 ಬಿಲಿಯನ್ ಯುಎಸ್ ಡಾಲರ್ ಗಳನ್ನು ದಾಟಿದ್ದೇವೆ, ಇದು ನಮ್ಮ ರಾಷ್ಟ್ರದ ಸ್ಥಿತಿಸ್ಥಾಪಕತೆ ಮತ್ತು ಬೆಳವಣಿಗೆಯನ್ನು ಪ್ರದರ್ಶಿಸುವ ಗಮನಾರ್ಹ ಸಾಧನೆಯಾಗಿದೆ" ಎಂದು ಹೇಳಿದರು.

ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದ ಉಪರಾಷ್ಟ್ರಪತಿಗಳು, ಪ್ರತಿಯೊಬ್ಬರೂ ಕಾನೂನಿನ ಮುಂದೆ ಸಮಾನರಾಗಿರುವ ಮತ್ತು ಅದಕ್ಕೆ ಜವಾಬ್ದಾರರಾಗಿರುವ ಭರವಸೆ ಮತ್ತು ಸಾಧ್ಯತೆಯ ಭಾರತವನ್ನು ರೂಪಿಸುವಲ್ಲಿ ಮಾಧ್ಯಮಗಳು ನಿರ್ಣಾಯಕ ಪಾಲುದಾರರೆಂಬ ತಮ್ಮ ನಂಬಿಕೆಯನ್ನು ಪುನರುಚ್ಚರಿಸಿದರು. "ಭಾರತದ ಅಭೂತಪೂರ್ವ ಬೆಳವಣಿಗೆಯ ಪಥದ ಮೇಲೆ ಗಮನ ಕೇಂದ್ರೀಕರಿಸಲು ಮತ್ತು ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸುವ ಜಾಗೃತಿ ಮತ್ತು ಸಮತೋಲಿತ ಚರ್ಚೆಯನ್ನು ಉತ್ತೇಜಿಸಲು ನಾನು ಮಾಧ್ಯಮಗಳನ್ನು ಒತ್ತಾಯಿಸುತ್ತೇನೆ" ಎಂದು ಅವರು ಹೇಳಿದರು.

ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯದ ಕೇಂದ್ರ ಸಂಪುಟ ಸಚಿವರಾದ ಶ್ರೀ ಸರ್ಬಾನಂದ ಸೋನೊವಾಲ್, ಸಾದಿನ್-ಪ್ರತಿದಿನ್ ಸಮೂಹದ ಅಧ್ಯಕ್ಷರು ಮತ್ತು ಅಸೋಮಿಯಾ ಪ್ರತಿದಿನದ ಸಂಪಾದಕರು ಶ್ರೀ ಜಯಂತ ಬರುವಾ  ಮತ್ತು ಇತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

*****


(Release ID: 2062612) Visitor Counter : 24