ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಸೋಮವಾರ, ಅಕ್ಟೋಬರ್ 07, 2024 ರಂದು ನವದೆಹಲಿಯಲ್ಲಿ  ಎಡಪಂಥೀಯ ಉಗ್ರಗಾಮಿ ಪೀಡಿತ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ


ಆಂಧ್ರಪ್ರದೇಶ, ಬಿಹಾರ, ಛತ್ತೀಸ್ ಗಢ, ಜಾರ್ಖಂಡ್, ತೆಲಂಗಾಣ, ಒಡಿಶಾ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ರಾಜ್ಯಗಳ ಮುಖ್ಯಮಂತ್ರಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮತ್ತು ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ, ಮಾರ್ಚ್, 2026 ರೊಳಗೆ  ಎಡಪಂಥೀಯ ಉಗ್ರಗಾಮಿಗಳ (LWE)  ಅಪಾಯವನ್ನು ಸಂಪೂರ್ಣವಾಗಿ ಬೇರುಸಹಿತ ಕಿತ್ತೊಗೆಯಲು ಸರ್ಕಾರ ಬದ್ಧವಾಗಿದೆ

2024ರಲ್ಲಿ, ಇಲ್ಲಿಯವರೆಗೆ, 202 ಸಶಸ್ತ್ರ ಎಡಪಂಥೀಯ ಉಗ್ರಗಾಮಿಗಳನ್ನು ನಿರ್ಮೂಲನೆ ಮಾಡುವಲ್ಲಿ ಭದ್ರತಾ ಪಡೆಗಳು ಅಭೂತಪೂರ್ವ ಯಶಸ್ಸನ್ನು ಕಂಡಿವೆ

2024 ರ ಮೊದಲ 9 ತಿಂಗಳಲ್ಲಿ 723 ಎಡಪಂಥೀಯ ಉಗ್ರಗಾಮಿ ಕಾರ್ಯಕರ್ತರು ಶರಣಾಗಿದ್ದಾರೆ ಮತ್ತು 812 ಮಂದಿಯನ್ನು ಬಂಧಿಸಲಾಗಿದೆ

ಎಡಪಂಥೀಯ ಉಗ್ರಗಾಮಿ ಪೀಡಿತ ಪ್ರದೇಶಗಳಲ್ಲಿ 14400 ಕಿಮೀ ರಸ್ತೆಗಳನ್ನು ನಿರ್ಮಿಸಲಾಗಿದೆ ಮತ್ತು ಸುಮಾರು 6000 ಮೊಬೈಲ್ ಟವರ್ಗಳನ್ನು ಸ್ಥಾಪಿಸಲಾಗಿದೆ

ಮೋದಿ ಸರ್ಕಾರದ ಕಾರ್ಯತಂತ್ರದಿಂದಾಗಿ,  ನಕ್ಸಲ್ ಹಿಂಸಾಚಾರವು 72% ರಷ್ಟು ಕಡಿಮೆಯಾಗಿದೆ, ಸಾವಿನಲ್ಲಿ 86% ಕಡಿಮೆಯಾಗಿದೆ,  ಈಗ ಎಡಪಂಥೀಯ ಉಗ್ರಗಾಮಿತನವು  ತನ್ನ ಕೊನೆಯ ಯುದ್ಧವನ್ನು ಎದುರಿಸುತ್ತಿದೆ

Posted On: 05 OCT 2024 7:02PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಸೋಮವಾರ, 07 ಅಕ್ಟೋಬರ್ 2024 ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಎಡಪಂಥೀಯ ಉಗ್ರಗಾಮಿ ಪೀಡಿತ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಆಂಧ್ರಪ್ರದೇಶ, ಬಿಹಾರ, ಛತ್ತೀಸ್ಗಢ, ಜಾರ್ಖಂಡ್, ತೆಲಂಗಾಣ, ಒಡಿಶಾ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಎಲ್ ಡಬ್ಲ್ಯೂ ಇ ಪೀಡಿತ ರಾಜ್ಯಗಳಿಗೆ ಅಭಿವೃದ್ಧಿ ಬೆಂಬಲವನ್ನು ನೀಡುವಲ್ಲಿ ನಿಕಟವಾಗಿ ತೊಡಗಿಸಿಕೊಂಡಿರುವ ಐದು ಕೇಂದ್ರ ಸಚಿವಾಲಯಗಳ ಸಚಿವರು ಕೂಡ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರರು ಮತ್ತು ಕೇಂದ್ರ, ರಾಜ್ಯಗಳು ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ  (ಸಿಎಪಿಎಫ್) ಹಿರಿಯ ಅಧಿಕಾರಿಗಳು ಸಹ ಚರ್ಚೆಯಲ್ಲಿ ಭಾಗವಹಿಸುತ್ತಾರೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಮತ್ತು ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ, ಮಾರ್ಚ್, 2026 ರೊಳಗೆ ಎಡಪಂಥೀಯ ಉಗ್ರವಾದದ (ಎಲ್ ಡಬ್ಲ್ಯೂಇ ) ಹಾವಳಿಯನ್ನು ಬೇರುಸಹಿತ ಕಿತ್ತೊಗೆಯಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಇದಕ್ಕಾಗಿ ನಕ್ಸಲಿಸಂನ ಬೆದರಿಕೆಯ ವಿರುದ್ಧ ಹೋರಾಡುವಲ್ಲಿ ನಕ್ಷಲ್ ಪೀಡಿತ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರವು ಸಾಧ್ಯವಿರುವ ಎಲ್ಲ ನೆರವು ನೀಡುತ್ತಿದೆ. 

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು 6 ಅಕ್ಟೋಬರ್ 2023 ರಂದು ಎಡಪಂಥೀಯ ಉಗ್ರವಾದದ ಪೀಡಿತ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಎಡಪಂಥೀಯ ಉಗ್ರವಾದದ  ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಆ ಸಭೆಯಲ್ಲಿ, ಕೇಂದ್ರ ಗೃಹ ಸಚಿವರು ಎಡಪಂಥೀಯ ಉಗ್ರವಾದದ ನಿರ್ಮೂಲನೆಗೆ ಸಂಬಂಧಿಸಿದಂತೆ ಸಮಗ್ರ ನಿರ್ದೇಶನಗಳನ್ನು ನೀಡಿದ್ದರು. ಮೋದಿ ಸರ್ಕಾರದ ಕಾರ್ಯತಂತ್ರದಿಂದಾಗಿ, ಎಡಪಂಥೀಯ ಉಗ್ರವಾದದ ಹಿಂಸಾಚಾರವು 72% ರಷ್ಟು ಕಡಿಮೆಯಾಗಿದೆ,  2010 ಕ್ಕೆ ಹೋಲಿಸಿದರೆ 2023 ರಲ್ಲಿ ಸಾವಿನಲ್ಲಿ 86% ಇಳಿಕೆಯಾಗಿದೆ ಮತ್ತು  ಎಲ್ ಡಬ್ಲ್ಯೂಇ ಇಂದು  ತನ್ನ ಕೊನೆಯ ಯುದ್ಧವನ್ನು ಎದುರಿಸುತ್ತಿದೆ. 2024ರಲ್ಲಿ, ಇಲ್ಲಿಯವರೆಗೆ, ಸಶಸ್ತ್ರ ನಕ್ಸಲ್ ಕಾರ್ಯಕರ್ತರ ನಿರ್ಮೂಲನೆಯಲ್ಲಿ ಭದ್ರತಾ ಪಡೆಗಳು ಅಭೂತಪೂರ್ವ ಯಶಸ್ಸನ್ನು ಕಂಡಿವೆ. ಇಲ್ಲಿಯವರೆಗೆ, ಈ ವರ್ಷದಲ್ಲಿ 202  ಹಿಂಸಾವಾದಿಗಳು ಕೊಲ್ಲಲ್ಪಟ್ಟಿದ್ದಾರೆ, 723 ಎಲ್ ಡಬ್ಲ್ಯೂಇ ಕೇಡರ್ಗಳು 2024 ರ ಮೊದಲ 9 ತಿಂಗಳಲ್ಲಿ ಶರಣಾಗಿದ್ದಾರೆ ಮತ್ತು 812 ಮಂದಿಯನ್ನು ಬಂಧಿಸಲಾಗಿದೆ.  ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆ 2024 ರಲ್ಲಿ ಕೇವಲ 38ಕ್ಕೆ ಇಳಿದಿದೆ.

ಬಾಧಿತ ರಾಜ್ಯಗಳ ದೂರದ ಪ್ರದೇಶಗಳಿಗೆ ಅಭಿವೃದ್ಧಿ ಯೋಜನೆಗಳನ್ನು ಕೊಂಡೊಯ್ಯಲು ಕೇಂದ್ರ ಸರ್ಕಾರವು ರಸ್ತೆ ಮತ್ತು ಮೊಬೈಲ್ ಸಂಪರ್ಕಕ್ಕೆ ಉತ್ತೇಜನ ನೀಡುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದೆ. 14400 ಕಿಮೀ ರಸ್ತೆಗಳನ್ನು ನಿರ್ಮಿಸಲಾಗಿದೆ ಮತ್ತು ಇದುವರೆಗೆ ಎಲ್ ಡಬ್ಲ್ಯೂಇ ಪೀಡಿತ ಪ್ರದೇಶಗಳಲ್ಲಿ ಸುಮಾರು 6000 ಮೊಬೈಲ್ ಟವರ್ ಗಳನ್ನು ಸ್ಥಾಪಿಸಲಾಗಿದೆ.

 

*****



(Release ID: 2062531) Visitor Counter : 18