ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

ಸುಸ್ಥಿರ ಅಭಿವೃದ್ಧಿ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತದ ಸಹಕಾರವನ್ನು ಬಲಪಡಿಸಲು ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿ ಮೂರು ದಿನಗಳ ಜರ್ಮನಿ ಪ್ರವಾಸ


2024ರ ಅಕ್ಟೋಬರ್ 7 ರಿಂದ 8 ರವರೆಗೆ ಹ್ಯಾಂಬರ್ಗ್ ಸಸ್ಟೈನಬಿಲಿಟಿ ಕಾನ್ಫರೆನ್ಸ್‌ನಲ್ಲಿ ಭಾಗಿ, ಕೇಂದ್ರ ಸಚಿವರು ಮತ್ತು ಇತರೆ ನಿಯೋಗ ಉದ್ಯಮದ ಮುಖಂಡರ ಜೊತೆ ಭೇಟಿ, ಸಮಾಲೋಚನೆ

ಪರಿಸರ ಸ್ನೇಹಿ ಶಿಪ್ಪಿಂಗ್ ಮತ್ತು ಚಲನಶೀಲತೆಯ ವಲಯವನ್ನು ಡಿಕಾರ್ಬನೈಸ್ ಮಾಡುವಲ್ಲಿ ಹಸಿರು ಜಲಜನಕದ ಪಾತ್ರದ ಬಗ್ಗೆ ಭಾರತದ ಸ್ಥಾನವನ್ನು ಪ್ರತಿಪಾದಿಸಲಿರುವ ಕೇಂದ್ರ ಸಚಿವರಾದ ಜೋಶಿ

Posted On: 05 OCT 2024 1:59PM by PIB Bengaluru

ನವೀಕರಿಸಬಹುದಾದ ಇಂಧನ ಮತ್ತು ಸುಸ್ಥಿರ ಅಭಿವೃದ್ಧಿ ಕ್ಷೇತ್ರಗಳಲ್ಲಿ ಭಾರತದ ಅಂತಾರಾಷ್ಟ್ರೀಯ ಸಹಯೋಗವನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಕೇಂದ್ರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿ ಅವರು ಸುಸ್ಥಿರ ಅಭಿವೃದ್ಧಿ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತದ ಸಹಕಾರವನ್ನು ಬಲಪಡಿಸಲು ಜರ್ಮನಿಗೆ ಮೂರು ದಿನಗಳ ಕಾಲ ಪ್ರವಾಸವನ್ನು ಕೈಗೊಳ್ಳಲಿದ್ದಾರೆ. ಅಕ್ಟೋಬರ್ 6, 2024 ರಂದು ಪ್ರಯಾಣ ಬೆಳೆಸಲಿದ್ದಾರೆ. 

ಕೇಂದ್ರ ಸಚಿವರಾದ ಪ್ರಹ್ಲಾದ್‌ ಜೋಶಿ ಅವರು 2024ರ ಅಕ್ಟೋಬರ್ 7 ರಿಂದ 8 ರವರೆಗೆ ಹ್ಯಾಂಬರ್ಗ್ ನಲ್ಲಿ ನಡೆಯಲಿರುವ ಸುಸ್ಥಿರತೆ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಮತ್ತು ಸುಸ್ಥಿರ ಅಭಿವೃದ್ಧಿ, ಹೈಡ್ರೋಜನ್, ಸಂಪೂರ್ಣ ನವೀಕರಿಸಬಹುದಾದ ಶಕ್ತಿಯ ಮೌಲ್ಯ ಸರಪಳಿ ಘಟಕಗಳು, ಕಡಿಮೆ ವೆಚ್ಚದ ಹಣಕಾಸು ಸಹಕಾರವನ್ನು ಹೆಚ್ಚಿಸಲು ಜರ್ಮನಿ, ಯುನೈಟೆಡ್ ಕಿಂಗ್‌ಡಮ್ ಮತ್ತು ಇತರ ಹಿರಿಯ ಅಧಿಕಾರಿಗಳೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ.

ಸಮ್ಮೇಳನದಲ್ಲಿ ಚಲನಶೀಲತೆಯ ವಲಯವನ್ನು ಡಿಕಾರ್ಬನೈಸ್ ಮಾಡಲು ಹೈಡ್ರೋಜನ್‌ನ ಪಾತ್ರ ಮತ್ತು ಪರಿಸರ ಸ್ನೇಹಿ (ಹಸಿರು) ಶಿಪ್ಪಿಂಗ್‌ನಲ್ಲಿ ಭಾರತದ ಸ್ಥಾನವನ್ನು ಸಚಿವರು ಪ್ರತಿಪಾದಿಸಲಿದ್ದಾರೆ. ವ್ಯಾಪಾರ ಅವಕಾಶಗಳನ್ನು ಹೆಚ್ಚಿಸಲು ಮತ್ತು ಭಾರತ ಮತ್ತು ವಿಶ್ವಾದ್ಯಂತ ನವೀಕರಿಸಬಹುದಾದ ಶಕ್ತಿಯ ವಿಸ್ತರಣೆಯನ್ನು ವೇಗಗೊಳಿಸಲು ಮತ್ತು ಈ ಭೇಟಿಯಿಂದ ಭಾರತ-ಜರ್ಮನಿ ಸಂಬಂಧಗಳನ್ನು ಇನ್ನಷ್ಟು ಹೆಚ್ಚಿಸಲು ಸಹಕಾರಿಯಾಗಲಿದೆ. ಅಲ್ಲದೇ, ಇದು ಸುಸ್ಥಿರ ಅಭಿವೃದ್ಧಿ ಮತ್ತು ನವೀಕರಿಸಬಹುದಾದ ಇಂಧನಕ್ಕೆ ಭಾರತದ ಬದ್ಧತೆಯನ್ನು ಒತ್ತಿಹೇಳುತ್ತದೆ, ಜಾಗತಿಕ ಸವಾಲುಗಳನ್ನು ಎದುರಿಸಲು ಅಂತರರಾಷ್ಟ್ರೀಯ ಪಾಲುದಾರಿಕೆಯನ್ನು ಉತ್ತೇಜಿಸುತ್ತದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತ-ಜರ್ಮನಿ ದ್ವಿಪಕ್ಷೀಯ ಸಂಬಂಧಗಳಿಗೆ ವಿಶೇಷ ಒತ್ತು ನೀಡಿದ್ದಾರೆ. ಭಾರತ ಮತ್ತು ಜರ್ಮನಿಯ ನಾಯಕರ ನಡುವಿನ ಅಂತರ-ಸರ್ಕಾರಿ ಸಮಾಲೋಚನೆಗಳನ್ನು ಅಕ್ಟೋಬರ್, 2024 ರಲ್ಲಿ ಭಾರತದಲ್ಲಿ ನಿಗದಿಪಡಿಸಲಾಗಿದೆ. 

ಸೆಪ್ಟೆಂಬರ್, 2024 ರಲ್ಲಿ ನಡೆದ RE-INVEST 2024 ಸಮಯದಲ್ಲಿ, ಎರಡೂ ದೇಶಗಳು ನವೀಕರಿಸಬಹುದಾದ ಇಂಧನ ಹಾಗೂ ಇತರೆ ಶಕ್ತಿಗಳಲ್ಲಿ ಹೂಡಿಕೆಗಾಗಿ ಭಾರತ-ಜರ್ಮನಿ ಪ್ಲಾಟ್‌ಫಾರ್ಮ್ ಅನ್ನು ಪ್ರಾರಂಭಿಸಿದವು. ಬಂಡವಾಳಕ್ಕಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಹೆಚ್ಚಿನ ವ್ಯಾಪಾರ ಅವಕಾಶಗಳನ್ನು ಮತ್ತು ಹೊಸ ಮಾರ್ಗಗಳನ್ನು ಸೃಷ್ಟಿಸಲು ವೇದಿಕೆಯು ಸುಗಮಗೊಳಿಸುತ್ತದೆ, ತಂತ್ರಜ್ಞಾನ ವರ್ಗಾವಣೆಗೆ ಬೆಂಬಲ ನೀಡಲಿದೆ ಮತ್ತು ವಿಶ್ವಾದ್ಯಂತ ನವೀಕರಿಸಬಹುದಾದ ಇಂಧನದಲ್ಲಿ ನವೀನ ತಾಂತ್ರಿಕ ಪರಿಹಾರಗಳ ಅಭಿವೃದ್ಧಿಯನ್ನು ಹೆಚ್ಚಿಸುತ್ತದೆ.

ಇಂಧನ ಪರಿವರ್ತನೆಯಲ್ಲಿ ಭಾರತವು ಅಂತಾರಾಷ್ಟ್ರೀಯ ಪ್ರಯತ್ನಗಳನ್ನು ಮುನ್ನಡೆಸುತ್ತಿದೆ

ಭಾರತವು ತನ್ನ NDC ಗುರಿಯ 40 ಪ್ರತಿಶತ ಸಂಚಿತ ವಿದ್ಯುತ್ ಶಕ್ತಿಯ ಸ್ಥಾಪಿತ ಸಾಮರ್ಥ್ಯವನ್ನು 2021 ರಲ್ಲಿ ಪಳೆಯುಳಿಕೆ ರಹಿತ ಇಂಧನ ಆಧಾರಿತ ಇಂಧನ ಮೂಲಗಳಿಂದ ಸಾಧಿಸಿದೆ, ನಿಗದಿತ ಸಮಯಕ್ಕಿಂತ ಒಂಬತ್ತು ವರ್ಷಗಳ ಮುಂಚಿತವಾಗಿ ಮತ್ತು 50% ಸಂಚಿತ ವಿದ್ಯುತ್ ಶಕ್ತಿಯನ್ನು ಸಾಧಿಸುವ ತನ್ನ NDC ಗುರಿಯನ್ನು ತಲುಪುವ ಹಾದಿಯಲ್ಲಿದೆ. 2030 ರ ವೇಳೆಗೆ ಪಳೆಯುಳಿಕೆ ರಹಿತ ಇಂಧನ ಮೂಲಗಳಿಂದ ಸ್ಥಾಪಿತ ಸಾಮರ್ಥ್ಯ ಹೆಚ್ಚಲಿದೆ. ಭಾರತದಿಂದ ಇಂಧನ ಪರಿವರ್ತನೆಯ ಪ್ರಯತ್ನಗಳು ನವೀಕರಿಸಬಹುದಾದ ಇಂಧನ ವಲಯದಲ್ಲಿ ಹೂಡಿಕೆ ಮತ್ತು ಉದ್ಯೋಗಾವಕಾಶಗಳಿಗೆ ಇದು ಕಾರಣವಾಗುತ್ತವೆ. ಇಂಟರ್ನ್ಯಾಷನಲ್ ಸೌರ ಒಕ್ಕೂಟ ಸೇರಿದಂತೆ ನವೀಕರಿಸಬಹುದಾದ ಶಕ್ತಿಯ ಅಭಿವೃದ್ಧಿ ಮತ್ತು ನಿಯೋಜನೆಗಾಗಿ ಭಾರತವು ಅಂತರರಾಷ್ಟ್ರೀಯ ಪ್ರಯತ್ನಗಳನ್ನು ಮುನ್ನಡೆಸುತ್ತಿದೆ ಮತ್ತು ಸುಸ್ಥಿರತೆಯ ಸಮ್ಮೇಳನದ ಈ ಭೇಟಿಯು ಜಾಗತಿಕ ಇಂಧನ ಪರಿವರ್ತನೆಗಾಗಿ ಭಾರತದ ಪ್ರಯತ್ನಗಳಿಗೆ ಮತ್ತಷ್ಟು ಪ್ರಚೋದನೆಯನ್ನು ನೀಡುತ್ತದೆ.

 

*****


(Release ID: 2062400) Visitor Counter : 55