ಪ್ರಧಾನ ಮಂತ್ರಿಯವರ ಕಛೇರಿ
ಸ್ವಚ್ಛ ಭಾರತ ಅಭಿಯಾನವು 10 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿಯವರು ಜಾಗತಿಕ ಸಂಸ್ಥೆಗಳ ನಾಯಕರಿಂದ ಅಭಿನಂದನಾ ಸಂದೇಶಗಳನ್ನು ಸ್ವೀಕರಿಸಿದ್ದಾರೆ
Posted On:
02 OCT 2024 2:03PM by PIB Bengaluru
ಇಂದು ಸ್ವಚ್ಛ ಭಾರತ ಅಭಿಯಾನವು 10 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿವಿಧ ಜಾಗತಿಕ ಸಂಸ್ಥೆಗಳ ಮುಖಂಡರಿಂದ ಅಭಿನಂದನಾ ಸಂದೇಶಗಳನ್ನು ಸ್ವೀಕರಿಸಿದರು. ಪ್ರಧಾನಮಂತ್ರಿಯವರ ದೂರದರ್ಶಿ ನಾಯಕತ್ವದಲ್ಲಿ ಸ್ವಚ್ಛ ಭಾರತ ಅಭಿಯಾನವು ಉತ್ತಮ ನೈರ್ಮಲ್ಯ ಮತ್ತು ಸ್ವಚ್ಛತೆಯ ಮೂಲಕ ಭಾರತದಲ್ಲಿ ಹೇಗೆ ಮಹತ್ವದ ಪರಿವರ್ತನೆಯನ್ನು ತಂದಿದೆ ಎಂಬುದನ್ನು ನಾಯಕರು ಒತ್ತಿ ಹೇಳಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಡಾ. ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರ ಶುಭಾಶಯಗಳ MyGov ನ ಪೋಸ್ಟ್ ಅನ್ನು ಪ್ರಧಾನ ಮಂತ್ರಿಯವರು X ನಲ್ಲಿ ಹಂಚಿಕೊಂಡಿದ್ದಾರೆ:
“ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಡಾ. ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದ್ದಾರೆ ಮತ್ತು ಸ್ವಚ್ಛ ಭಾರತ ಅಭಿಯಾನದ 10 ನೇ ವಾರ್ಷಿಕೋತ್ಸವದಂದು ಸರ್ಕಾರದ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ. ಸ್ವಚ್ಛ ಮತ್ತು ಆರೋಗ್ಯಕರ ರಾಷ್ಟ್ರವನ್ನು ಉತ್ತೇಜಿಸಲು ಸಮುದಾಯಗಳನ್ನು ಸಜ್ಜುಗೊಳಿಸುವ ಈ ಪರಿವರ್ತಕ ಉಪಕ್ರಮದ ಮೂಲಕ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವಲ್ಲಿ ಮಾಡಿದ ಮಹತ್ವದ ದಾಪುಗಾಲುಗಳನ್ನು ಅವರು ಎತ್ತಿ ತೋರಿಸಿದ್ದಾರೆ.”
#10YearsOfSwachhBharat #SBD2024 #SHS2024"
ವಿಶ್ವಬ್ಯಾಂಕ್ ಅಧ್ಯಕ್ಷರಾದ ಅಜಯ್ ಬಂಗಾ ಅವರ ಶುಭಾಶಯಗಳ MyGov ನ ಪೋಸ್ಟ್ ಅನ್ನು ಶ್ರೀ ಮೋದಿ ಅವರು X ನಲ್ಲಿ ಹಂಚಿಕೊಂಡಿದ್ದಾರೆ:
“ಪ್ರಧಾನಿ ನರೇಂದ್ರಮೋದಿಯವರ ದೂರದರ್ಶಿ ನಾಯಕತ್ವದಲ್ಲಿ ಗಮನಾರ್ಹ ಮೈಲಿಗಲ್ಲನ್ನು ಸಾಧಿಸುವ ಮೂಲಕ ಸ್ವಚ್ಛ ಭಾರತ ಅಭಿಯಾನವು ಸುಧಾರಿತ ನೈರ್ಮಲ್ಯದ ಮೂಲಕ ಭಾರತವನ್ನು ಗಣನೀಯವಾಗಿ ಪರಿವರ್ತಿಸಿದೆ ಎಂದು ವಿಶ್ವಬ್ಯಾಂಕ್ ಅಧ್ಯಕ್ಷ ಅಜಯ್ ಬಂಗಾ ಹೇಳಿದ್ದಾರೆ.” #10YearsOfSwachhBharat #SBD2024 #SHS2024"
ಏಷ್ಯಾ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷರಾದ ಮಸತ್ಸುಗು ಅಸಕಾವಾ ಅವರ ಶುಭಾಶಯಗಳ ಕುರಿತು MyGov ನ ಪೋಸ್ಟ್ ಅನ್ನು ಪ್ರಧಾನಿ X ನಲ್ಲಿ ಹಂಚಿಕೊಂಡಿದ್ದಾರೆ:
“ಏಷ್ಯಾ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷರಾದ ಮಸತ್ಸುಗು ಅಸಕಾವಾ ಅವರು, ಪರಿವರ್ತನಾ ಅಭಿಯಾನವಾದ ಸ್ವಚ್ಛ ಭಾರತ ಮಿಷನ್ ಅನ್ನು ಮುನ್ನಡೆಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದ್ದಾರೆ. ಏಷ್ಯಾ ಅಭಿವೃದ್ಧಿ ಬ್ಯಾಂಕ್ ಆರಂಭದಿಂದಲೂ ಈ ದೂರದೃಷ್ಟಿಯ ಉಪಕ್ರಮದಲ್ಲಿ ಭಾರತದೊಂದಿಗೆ ಪಾಲುದಾರಿಕೆ ಹೊಂದಿರುವುದಕ್ಕೆ ಹೆಮ್ಮೆಪಡುತ್ತದೆ ಎಂದು ಅವರು ಹೇಳಿದ್ದಾರೆ.”
#10YearsOfSwachhBharat #SBD2024 #SHS2024
ಅಧ್ಯಾತ್ಮ ಗುರು ಶ್ರೀ ಶ್ರೀ ರವಿಶಮಕರ್ ಅವರ ಶುಭಾಶಯಗಳ MyGov ನ ಪೋಸ್ಟ್ ಅನ್ನು ಶ್ರೀ ಮೋದಿ ಅವರು X ನಲ್ಲಿ ಹಂಚಿಕೊಂಡಿದ್ದಾರೆ
“ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿ @narendramodi ಅವರು ದೇಶಾದ್ಯಂತ ಸ್ವಚ್ಛ ಭಾರತ ಅಭಿಯಾನವನ್ನು ಪ್ರಾರಂಭಿಸಿದಾಗಿನಿಂದ, ಸ್ವಚ್ಛತೆಯತ್ತ ಜನರ ಗಮನ ಮರಳಿರುವುದನ್ನು ನಾವು ನೋಡುತ್ತಿದ್ದೇವೆ”: ಶ್ರೀ ಶ್ರೀ ರವಿಶಂಕರ್, ಅಧ್ಯಾತ್ಮ ಗುರು
#10YearsOfSwachhBharat #SBD2024 #SwachhBharat”
ಟಾಟಾ ಟ್ರಸ್ಟ್ ಅಧ್ಯಕ್ಷರಾದ ಶ್ರೀ ರತನ್ ಟಾಟಾ ಅವರ ಶುಭಾಶಯಗಳ MyGov ಪೋಸ್ಟ್ ಅನ್ನು ಪ್ರಧಾನಮಂತ್ರಿಯವರು X ನಲ್ಲಿ ಹಂಚಿಕೊಂಡಿದ್ದಾರೆ:
“ನಾನು ಗೌರವಾನ್ವಿತ ಪ್ರಧಾನಮಂತ್ರಿ @narendramodi ಅವರನ್ನು #10YearsOfSwachhBharat ಸಂದರ್ಭದಲ್ಲಿ ಅಭಿನಂದಿಸುತ್ತೇನೆ” @RNTata2000, ಅಧ್ಯಕ್ಷರು, ಟಾಟಾ ಟ್ರಸ್ಟ್ಸ್
#SBD2024 #SwachhBharat
ಮೈಕ್ರೋಸಾಫ್ಟ್ ಸಂಸ್ಥಾಪಕ ಮತ್ತು ಲೋಕೋಪಕಾರಿ ಬಿಲ್ ಗೇಟ್ಸ್ ಅವರ ಶುಭಾಶಯಗಳ ಕುರಿತು MyGov ಪೋಸ್ಟ್ ಅನ್ನು ಶ್ರೀ ಮೋದಿಯವರು X ನಲ್ಲಿ ಹಂಚಿಕೊಂಡಿದ್ದಾರೆ:
"ನೈರ್ಮಲ್ಯ ಆರೋಗ್ಯದ ಮೇಲೆ ಸ್ವಚ್ಛ ಭಾರತ ಅಭಿಯಾನದ ಪ್ರಭಾವವು ಅದ್ಭುತವಾಗಿದೆ”- @BillGates ಮೈಕ್ರೋಸಾಫ್ಟ್ ಸಂಸ್ಥಾಪಕರು ಮತ್ತು ಲೋಕೋಪಕಾರಿ 10YearsOfSwachhBharat. #NewIndia #SwachhBharat
*****
(Release ID: 2061442)
Visitor Counter : 30
Read this release in:
English
,
Urdu
,
Marathi
,
Hindi
,
Bengali
,
Manipuri
,
Assamese
,
Punjabi
,
Gujarati
,
Tamil
,
Telugu
,
Malayalam