ಉಪರಾಷ್ಟ್ರಪತಿಗಳ ಕಾರ್ಯಾಲಯ
ಮಹಿಳೆಯರು ಮತ್ತು ಶಿಕ್ಷಣ ದೇಶವನ್ನು ‘ವಿಕಸಿತ ಭಾರತ’ ದತ್ತ ಕೊಂಡೊಯ್ಯುವ ರಥದ ಎರಡು ಚಕ್ರಗಳು
ಶಿಕ್ಷಣ ಪ್ರಜಾಪ್ರಭುತ್ವಕ್ಕೆ ಆಮ್ಲಜನಕವನ್ನು ಒದಗಿಸುತ್ತದೆ; ಸಮಾಜ ವ್ಯವಸ್ಥೆಯ ಮಹಾನ್ ಸಮತೋಲನ ವ್ಯವಸ್ಥೆ, ಎನ್ನುತ್ತಾರೆ ಉಪರಾಷ್ಟ್ರಪತಿ
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳಾ ಮೀಸಲಾತಿ ಯುಗದ ಅಭಿವೃದ್ಧಿಯಾಗಿದೆ- ಉಪರಾಷ್ಟ್ರಪತಿ
ಭಾರತವು ಜಾಗತಿಕವಾಗಿ ಹೂಡಿಕೆ ಮತ್ತು ಅವಕಾಶಕ್ಕಾಗಿ ಹೆಚ್ಚು ಪ್ರಸ್ತುತ ಸ್ಥಳವಾಗಿದೆ- ಉಪರಾಷ್ಟ್ರಪತಿ
ದೇಶದಲ್ಲಿ ದಿನದಿಂದ ದಿನಕ್ಕೆ ಅವಕಾಶಗಳು ಹೆಚ್ಚುತ್ತಿವೆ – ಉಪರಾಷ್ಟ್ರಪತಿ
ಶಿಕ್ಷಣವು ಪದವಿಯನ್ನು ಮೀರಿರಬೇಕು, ಗುಣಮಟ್ಟದ, ಉದ್ದೇಶಪೂರ್ವಕ ಶಿಕ್ಷಣವನ್ನು ಒದಗಿಸಲು NEP ಯನ್ನು ಸಿದ್ಧಗೊಳಿಸಲಾಗಿದೆ ಎಂದು ಒತ್ತಿ ಹೇಳುತ್ತಾರೆ ಶ್ರೀ ಧನಕರ್
ಜೈಪುರದ ಇಂಡಿಯಾ ಇಂಟರ್‌ನ್ಯಾಶನಲ್ ಸ್ಕೂಲ್‌ನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಉಪರಾಷ್ಟ್ರಪತಿ ಮಾತನಾಡಿದರು
Posted On:
28 SEP 2024 5:27PM by PIB Bengaluru
ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು ಇಂದು ಮಹಿಳಾ ಶಿಕ್ಷಣದ ಮಹತ್ವದ ಕುರಿತು ಒತ್ತಿ ಹೇಳಿದರು, “ನಾವು ಮಹಿಳೆಯರಿಲ್ಲದೆ ಮತ್ತು ಶಿಕ್ಷಣವಿಲ್ಲದೆ ನಾವು ವಿಕಸಿತ ಭಾರತದ ಕನಸು ಕಾಣುವುದು ಅಸಾಧ್ಯ. ಮಹಿಳೆಯರು ಮತ್ತು ಶಿಕ್ಷಣ ರಾಷ್ಟ್ರವನ್ನು ಮುನ್ನಡೆಸುವ ರಥದ ಎರಡು ಚಕ್ರಗಳಿದ್ದಂತೆ ಎಂದು ಅವರು ಹೇಳಿದರು.
ಜೈಪುರದ ಇಂಡಿಯಾ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರೊಂದಿಗೆ ಇಂದು ಮಾತನಾಡಿದ ಶ್ರೀ ಧನಕರ್ ಅವರು ಶಿಕ್ಷಣದ ಮಹತ್ವದ ಕುರಿತು ವಿಶೇಷವಾಗಿ ಮಹಿಳಾ ಶಿಕ್ಷಣದ ಮಹತ್ವದ ಕುರಿತು ಬೆಳಕು ಚೆಲ್ಲಿದರು. ಮತ್ತು "ಶಿಕ್ಷಣವು ಸಮಾಜದಲ್ಲಿ ಅತ್ಯಂತ ದೊಡ್ಡ ಸಮತೋಲನ ವ್ಯವಸ್ಥೆಯಾಗಿದೆ. ಅಲ್ಲದೆ ಇದು ಸಮಾನತೆಯನ್ನು ತರುತ್ತದೆ ಮತ್ತು ಯಾವುದೇ ಸಮಾಜದಲ್ಲಿ ಪ್ರಜಾಪ್ರಭುತ್ವವು ಪ್ರವರ್ಧಮಾನಕ್ಕೆ ಬರಲು ಇದು ಅವಶ್ಯಕವಾಗಿದೆ. ಶಿಕ್ಷಣವು ಸಮಾನತೆಯನ್ನು ತರುತ್ತದೆ, ಶಿಕ್ಷಣವು ಅಸಮಾನತೆಯನ್ನು ತೊಡೆದುಹಾಕುತ್ತದೆ. ಶಿಕ್ಷಣವು ಸಾಮಾಜಿಕ ವ್ಯವಸ್ಥೆಯ ಶ್ರೇಷ್ಠ ಸಮತೋಲನ ವ್ಯವಸ್ಥೆಯಾಗಿದೆ, ಶಿಕ್ಷಣವು ಪ್ರಜಾಪ್ರಭುತ್ವಕ್ಕೆ ಪ್ರಾಣವಾಯುವನ್ನು ಒದಗಿಸುತ್ತದೆ, ”ಎಂದು ಅವರು ಹೇಳಿದರು.
"ನಾವು ನಮ್ಮ ವೇದಗಳನ್ನು ನೋಡಿದರೆ, ಶಿಕ್ಷಣ ಮತ್ತು ಮಹಿಳೆಯರ ಭಾಗವಹಿಸುವಿಕೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ನಾವು ಮಧ್ಯದಲ್ಲಿ ಎಲ್ಲೋ ದಾರಿ ತಪ್ಪಿದ್ದೇವೆ. ಆದರೆ ವೇದಗಳ ಆ ಕಾಲದಲ್ಲಿ, ವೈದಿಕ ಯುಗದಲ್ಲಿ, ಮಹಿಳೆಯರು ಸಮಾನ ಸ್ಥಾನಮಾನದಲ್ಲಿದ್ದರು. ಅವರು ನೀತಿ ನಿರೂಪಕರಾಗಿದ್ದರು, ನಿರ್ಧಾರ ಕೈಗೊಳ್ಳುವವರಾಗಿದ್ದರು, ಮಾರ್ಗದರ್ಶಿ ಶಕ್ತಿಗಳಾಗಿದ್ದರು ”ಎಂದು ಅವರು ಒತ್ತಿ ಹೇಳಿದರು.
ಇತ್ತೀಚೆಗೆ ಜಾರಿಗೆ ತಂದ, ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳಲ್ಲಿ ಮೂರನೇ ಒಂದು ಭಾಗದಷ್ಟು ಮೀಸಲಾತಿಯನ್ನು ಕಡ್ಡಾಯಗೊಳಿಸಿದ ಮಹಿಳಾ ಮೀಸಲಾತಿ ಮಸೂದೆಯನ್ನು ತಮ್ಮ ಭಾಷಣದಲ್ಲಿ ಅವರು ಶ್ಲಾಘಿಸಿದರು. ಇದು. “ಯುಗಾಂತರದ ಅಭಿವೃದ್ಧಿಯಾಗಿದೆ, ಐತಿಹಾಸಿಕ ಬೆಳವಣಿಗೆಯಾಗಿದೆ. ಅದೇ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳಾ ಮೀಸಲಾತಿ. ಸಂವಿಧಾನವು ಈಗ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮೂರನೇ ಒಂದು ಭಾಗದಷ್ಟು ಮೀಸಲಾತಿಯನ್ನು ಒದಗಿಸಿದೆ..... ಅವರು ನೀತಿ ನಿರೂಪಣೆಯ ಭಾಗವಾಗುತ್ತಾರೆ. - ಅವರು ಶಾಸನ ರಚನೆಯ ಭಾಗವಾಗುತ್ತಾರೆ, ಅವರು ಕಾರ್ಯನಿರ್ವಾಹಕ ಕಾರ್ಯಗಳ ಭಾಗವಾಗುತ್ತಾರೆ, ಅವರು ಪ್ರೇರಕ ಶಕ್ತಿಯಾಗುತ್ತಾರೆ. ಇದು ಶತಮಾನದ ಬೆಳವಣಿಗೆಯಾಗಿದೆ ಎಂದು ಕೂಡಾ ಅವರು ಹೇಳಿದರು.
ಹೂಡಿಕೆ ಮತ್ತು ಅವಕಾಶಗಳ ವಿಷಯದಲ್ಲಿ ಭಾರತವು ಜಾಗತಿಕವಾಗಿ ಹೆಚ್ಚು ಪ್ರಸ್ತುತ ಸ್ಥಳವಾಗಿದೆ ಎಂದು ಒತ್ತಿ ಹೇಳುತ್ತಾ, “ದೇಶವು ಐತಿಹಾಸಿಕ ಬೃಹತ್ ಅಭಿವೃದ್ಧಿಯನ್ನು ಕಂಡಿದೆ, ನಮಗೆ ತಿಳಿದಿರದ ಆರ್ಥಿಕ ಉನ್ನತಿಗೇರಿದೆ ಎಂದು ಅವರು ಉಲ್ಲೇಖಿಸಿದರು. ವಿಶ್ವದರ್ಜೆಯ ಮೂಲಸೌಕರ್ಯಗಳೊಂದಿಗೆ, ದಿನದಿಂದ ದಿನಕ್ಕೆ ನಮ್ಮ ಅವಕಾಶಗಳ ಹೆಚ್ಚುತ್ತಿವೆ. ಆದರೆ ಒಂದು ವಿಷಯವನ್ನು ನಾನು ನಿಮಗೆ ಹೇಳಬಲ್ಲೆ - ಜಾಗತಿಕ ಸಂಸ್ಥೆಗಳು, IMF, ವಿಶ್ವ ಬ್ಯಾಂಕ್, ವಿಶ್ವ ಆರ್ಥಿಕ ವೇದಿಕೆ ಮತ್ತು ಇನ್ನಿತರ ಎಲ್ಲರೂ ಭಾರತವು ಜಾಗತಿಕವಾಗಿ ಹೆಚ್ಚು ಪ್ರಸ್ತುತ ಸ್ಥಳವಾಗಿದೆ ಎಂದು ಮಾತನಾಡಿದ್ದಾರೆ. ಯಾವುದೇ ದೇಶದತ್ತ ಮುಖ ಮಾಡಿದರೂ, ಅವಕಾಶ ಮತ್ತು ಹೂಡಿಕೆಯ ವಿಷಯದಲ್ಲಿ ನಾವು ಉನ್ನತ ಸ್ಥಾನದಲ್ಲಿದ್ದೇವೆ.”
ಗುಣಮಟ್ಟ ಮತ್ತು ಕಡ್ಡಾಯ ಶಿಕ್ಷಣವನ್ನು ನೀಡುವ ಸಾಮರ್ಥ್ಯವನ್ನು ಹೊಂದಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (NEP) ಶ್ಲಾಘಿಸಿದ ಉಪರಾಷ್ಟ್ರಪತಿ, “ಶಿಕ್ಷಣವಿಲ್ಲದೆ ಯಾವುದೇ ಬದಲಾವಣೆ ಸಾಧ್ಯವಿಲ್ಲ. ಶಿಕ್ಷಣ ಗುಣಮಟ್ಟದ ಶಿಕ್ಷಣವಾಗಬೇಕು. ಕಡ್ಡಾಯ ಶಿಕ್ಷಣವಾಗಿರಬೇಕು. ಶಿಕ್ಷಣವು ಪದವಿಗೆ ಮಾತ್ರ ಸೀಮಿತವಾಗಿರಬಾರದು. ಒಂದರ ನಂತರ ಒಂದರಂತೆ ಪದವಿಗಳ ಅನ್ವೇಷಣೆಯು ಶಿಕ್ಷಣದ ಸೂಕ್ತ ವಿಧಾನವಲ್ಲ. ಅದಕ್ಕಾಗಿಯೇ ಮೂರು ದಶಕಗಳ ನಂತರ ದೇಶವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದೆ. ಅದು ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ಪೂರ್ಣವಾಗಿ ಬಳಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಪದವಿ ಆಧಾರಿತ ಶಿಕ್ಷಣದಿಂದ ಅವರನ್ನು ಮುಕ್ತಗೊಳಿಸಲಾಗಿದೆ. ಇದು ಅರ್ಹತೆ ಮತ್ತು ಕೌಶಲ್ಯ ಶಿಕ್ಷಣವನ್ನು ಕೇಂದ್ರೀಕರಿಸಿದೆ. ಓದುತ್ತಿರುವಾಗಲೇ ನೀವು ಕೋರ್ಸ್‌ಗಳನ್ನು ಮುಂದುವರಿಸಬಹುದು.” ಎನ್‌ಇಪಿಯನ್ನು ಇನ್ನೂ ಯಾರು ಅಳವಡಿಸಿಕೊಂಡಿಲ್ಲವೋ ಅವರು ಅದನ್ನು ಅಳವಡಿಸಿಕೊಳ್ಳುವಂತೆ ಮನವಿ ಮಾಡಿದರು.
2047 ರಲ್ಲಿ ‘ವೀಕಸೀತ ಭಾರತ’ ಸಾಧಿಸಲು ಯುವಕರ ಪಾತ್ರದ ಬಗ್ಗೆ ಒತ್ತಿ ಹೇಳಿದ ಶ್ರೀ ಧನಕರ್, ಅಭಿವೃದ್ಧಿ ಹೊಂದಿದ ರಾಷ್ಟ್ರದ ಸ್ಥಾನಮಾನವನ್ನು ಸಾಧಿಸಲು ಅಗತ್ಯವಾದ ಅಂಶಗಳು ದೇಶದಲ್ಲಿವೆ ಎಂದರು. "ಪ್ರತಿಯೊಬ್ಬ ವ್ಯಕ್ತಿಯು ಅವನ ಅಥವಾ ಅವಳ ಪ್ರತಿಭೆ ಮತ್ತು ಆಕಾಂಕ್ಷೆಗಳು ಹಾಗೂ ಕನಸುಗಳನ್ನು ನನಸಾಗಿಸುವ ಸಾಮರ್ಥ್ಯವನ್ನು ಬಳಸಿಕೊಳ್ಳುವ ಒಂದು ಕಾರ್ಯವಿಧಾನವಿದೆ" ಎಂದು ಕೂಡ ಅವರು ಹೇಳಿದರು.
ದೇಶದಲ್ಲಿ ಸಮಾನ ಕಾನೂನು ಅನ್ವಯದ ಬಗ್ಗೆ ಗಮನ ಸೆಳೆದ ಉಪರಾಷ್ಟ್ರಪತಿ, “ಸಂವಿಧಾನವು ಒದಗಿಸಿದರೂ ಕಾನೂನು ಪ್ರಕಾರ ಸಮಾನತೆ ಎಂಬುದು ದೀರ್ಘಕಾಲದಿಂದ ನಮ್ಮಿಂದ ದೂರವೇ ಉಳಿದಿತ್ತು, ಕೆಲವರು ತಾವು ಇತರರಿಗಿಂತ ಹೆಚ್ಚು ಶ್ರೇಷ್ಟರು ಎಂದು ಭಾವಿಸಿದರು, ಕೆಲವರು ನಾವು ಕಾನೂನು ವ್ಯಾಪ್ತಿಗೆ ಮೀರಿದವರು, ನಾವು ಕಾನೂನಿಗಿಂತ ಮೇಲಿದ್ದೇವೆ ಎಂದು ಭಾವಿಸಿದ್ದರು. ಆದರೆ ಸಂಭವಿಸಿದ ದೊಡ್ಡ ಬದಲಾವಣೆಯೆಂದರೆ ಕಾನೂನಿನ ಮುಂದೆ ಸಮಾನತೆ ಎಂಬುದು ಈಗ ಮೂಲ ವಾಸ್ತವವಾಗಿದೆ. ಸವಲತ್ತು, ವಂಶಾವಳಿ, ಕಾನೂನಿನಿಂದ ವಿನಾಯಿತಿ ಹೊಂದಿರುವ ಕಲ್ಪನೆಯನ್ನು ಹೊಂದಿದ್ದ ವಿಶೇಷ ವರ್ಗವನ್ನು ಈಗ ಕಾನೂನು ಪ್ರಕಾರ ಹೊಣೆಗಾರರನ್ನಾಗಿ ಮಾಡಲಾಗುತ್ತಿದೆ. ಅದೊಂದು ದೊಡ್ಡ ಬದಲಾವಣೆ!”
ದೇಶದಲ್ಲಿನ ಭ್ರಷ್ಟ ಕೈಗಳಿಂದ ಪವರ್ ಕಾರಿಡಾರ್‌ಗಳನ್ನು ಶುದ್ಧಗೊಳಿಸುವ ಕೆಲಸವನ್ನು ಶ್ಲಾಘಿಸಿದ ಶ್ರೀ ಧನಕರ್, “ಮೈಯೆಲ್ಲಾ ಎಣ್ಣೆ ಸವರಿಕೊಂಡು ಭ್ರಷ್ಟಾಚಾರವನ್ನೇ ಆಧಾರವಾಗಿರಿಸಿಕೊಂಡು ನಡೆಸುವ ಯಾವುದೇ ಸಮಾಜವು, , ಸಂಪರ್ಕ ಸಾಧನಾ ಏಜೆಂಟರಿಂದ ನಡೆಸಲ್ಪಡುವ ಸಮಾಜದಲ್ಲಿ ಭ್ರಷ್ಟಾಚಾರವಿಲ್ಲದೆ ನಿಮಗೆ ಕೆಲಸ ಅಥವಾ ಉದ್ಯೋಗವನ್ನು ಪಡೆಯುವುದು ಅಸಾಧ್ಯ. ಇದು ಖಂಡಿತ ಯುವಜನತೆಯ ಬೆಳವಣಿಗೆಗೆ ವಿರುದ್ಧವಾಗಿದೆ. ಪ್ರತಿಭಾವಂತರನ್ನು ಭ್ರಷ್ಟಾಚಾರ ಹೊಸಕಿ ಹಾಕುತ್ತದೆ. ಭ್ರಷ್ಟಾಚಾರವು ಅರ್ಹತೆಯನ್ನು ತುಳಿದು ಹಾಕುತ್ತದೆ. ದೊಡ್ಡ ಬದಲಾವಣೆಯಾಗಿದೆ. ಒಂದೊಮ್ಮೆ ಪವರ್ ಕಾರಿಡಾರ್‌ಗಳು ಭ್ರಷ್ಟ ಏಜೆಂಟರಿಂದ ಮುತ್ತಿಕೊಂಡಂತಿದ್ದವು. ಕಾನೂನುಬದ್ಧತೆಗೆ ಮೀರಿ ನಿರ್ಧಾರ ತೆಗೆದುಕೊಳ್ಳುವವರು, ಒಪ್ಪಂದಗಳನ್ನು ಒದಗಿಸಿದವರು ಮತ್ತು ಅರ್ಹತೆ ಇಲ್ಲದ ಉದ್ಯೋಗಗಳು ಪರಿಗಣನೆಗೆ ಒಳಗಾಗುತ್ತವೆ. ಇಂತಹ ಕಾರಿಡಾರ್‌ಗಳನ್ನು ಈಗ ತಟಸ್ಥಗೊಳಿಸಲಾಗಿದೆ. ದೇಶದಲ್ಲಿ ಪಾರದರ್ಶಕ ಜವಾಬ್ದಾರಿಯುತ ಆಡಳಿತ ಜಾರಿಗೆ ಬಂದಿದೆ. ತಂತ್ರಜ್ಞಾನಕ್ಕೆ ಒಟ್ಟು ನೀಡುವ ಮೂಲಕ ಮಧ್ಯವರ್ತಿಯಿಲ್ಲದೆ ಹಳ್ಳಿಗಳವರೆಗೆ ಹಣ ವರ್ಗಾವಣೆಯಾಗುವಂತೆ ಮಾಡಿರುವುದನ್ನು ನೀವು ಈಗ ನೋಡಿದ್ದೀರಿ.”
ಸಂಪೂರ್ಣ ವಿವರವನ್ನು ಇಲ್ಲಿ ಓದಿರಿ: https://pib.gov.in/PressReleasePage.aspx?PRID=2059854
*****
(Release ID: 2060157)
Visitor Counter : 27