ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಶ್ರೀಮತಿ ಅನ್ನಪೂರ್ಣ ದೇವಿಯವರು ರಾಂಚಿಯಲ್ಲಿ ನಡೆಸುತ್ತಿರುವ 7 ನೇ ರಾಷ್ಟ್ರೀಯ ಪೋಷಣ ಮಾಹೆ 2024 ರ ಸಮಾರೋಪ ಸಮಾರಂಭದಲ್ಲಿ ನಾಳೆ ( 30.09.2024) ಭಾಗವಹಿಸಲಿದ್ದಾರೆ
ಆರೋಗ್ಯಕರ ಮತ್ತು ಪೋಷಣೆಯುಕ್ತ ಭಾರತಕ್ಕಾಗಿ ಸಾಮೂಹಿಕ ಪ್ರಯತ್ನಗಳನ್ನು ಈ ಕಾರ್ಯಕ್ರಮ ಪ್ರತಿನಿಧಿಸಿ ಬಿಂಬಿಸುತ್ತದೆ
ಭಾರತದಾದ್ಯಂತ ಸ್ಥಾಪಿಸಿರುವ 11 ಸಾವಿರಕ್ಕೂ ಹೆಚ್ಚು ಸಕ್ಷಮ್ ಅಂಗನವಾಡಿ ಕೇಂದ್ರಗಳು ವಿಡಿಯೊ ಸಮಾವೇಶ ಮೂಲಕ ಅಧಿಕೃತವಾಗಿ ಉದ್ಘಾಟನೆಗೊಳ್ಳಲಿವೆ
ಈ ಸ್ಥಳಗಳಲ್ಲಿ ಮಿಷನ್ ಪೋಷಣ್ 2.0 ರ ಅಂಶಗಳನ್ನು ಪ್ರದರ್ಶಿಸಲಾಗುವುದು.
ಇದುವರೆಗೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಪೋಷಣ್ ಮಾಹೆಯ ಯೋಚನೆಯಲ್ಲಿ ಸುಮಾರು 12 ಕೋಟಿ ಚಟುವಟಿಕೆಗಳನ್ನು ನಡೆಸಲಾಗಿದೆ
Posted On:
29 SEP 2024 10:07AM by PIB Bengaluru
7ನೇ ರಾಷ್ಟ್ರೀಯ ಪೋಷಣ್ ಮಾಹೆ 2024 ರ ಸಮಾರೋಪ ಸಮಾರಂಭವು ನಾಳೆ, 30 ನೇ ಸೆಪ್ಟೆಂಬರ್, 2024 ರಂದು ರಾಂಚಿಯ ಶೌರ್ಯ ಸಭಾಗರ್ ನಲ್ಲಿ ಜಾರ್ಖಂಡ್ ರಾಜ್ಯಪಾಲರಾದ ಶ್ರೀ ಸಂತೋಷ್ ಗಂಗ್ವಾರ್ ಅವರ ಘನ ಉಪಸ್ಥಿತಿಯಲ್ಲಿ ನಡೆಯಲಿದೆ; ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶ್ರೀಮತಿ ಅನ್ನಪೂರ್ಣ ದೇವಿ, ಜಾರ್ಖಂಡ್ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಶ್ರೀಮತಿ ಬೇಬಿ ದೇವಿ; ಕೇಂದ್ರ ರಕ್ಷಣಾ ರಾಜ್ಯ ಸಚಿವರಾದ ಶ್ರೀ ಸಂಜಯ್ ಸೇಠ್; ಭಾರತ ಸರ್ಕಾರ ಮತ್ತು ಜಾರ್ಖಂಡ್ ರಾಜ್ಯ ಸರ್ಕಾರಗಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಗಳ ಕಾರ್ಯದರ್ಶಿ ಗಳು ಮತ್ತು ಇತರ ಅಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
7ನೇ ರಾಷ್ಟ್ರೀಯ ಪೋಷಣ್ ಮಾಹೆಯನ್ನು (ಸೆಪ್ಟೆಂಬರ್ , 1ನೇ -30ರ ವರೆಗೆ , 2024), ರಕ್ತಹೀನತೆ, ಬೆಳವಣಿಗೆಯ ಮಾನಿಟರಿಂಗ್, ಪೂರಕ ಆಹಾರ ಮತ್ತು ಪೋಷಣ್ ಭಿ ಪಧೈ ಭಿ, ಜೊತೆಗೆ ಉತ್ತಮ ಆಡಳಿತಕ್ಕಾಗಿ ತಂತ್ರಜ್ಞಾನದ ಮೇಲೆ ಕೇಂದ್ರೀಕರಿಸಿ ಕಾರ್ಯಕ್ರಮ ರೂಪಿಸಲಾಗಿದೆ. ಒಂದು ತಿಂಗಳ ಅವಧಿಯ ಅಭಿಯಾನವು ತಾಯಿ ಹೆಸರಿನಲ್ಲಿ ಒಂದು ಸಸಿ (ಏಕ್ ಪೆದ್ ಮಾ ಕೆ ನಾಮ್) ಉಪಕ್ರಮದ ಮೂಲಕ 'ಪರಿಸರ ಸುಸ್ಥಿರತೆ'ಗೆ ಕೂಡ ಒತ್ತು ನೀಡಿತು, ಇದರಲ್ಲಿ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ತೋಟವನ್ನು ಪ್ರೋತ್ಸಾಹಿಸಲಾಯಿತು. ಇಲ್ಲಿಯವರೆಗೆ ಸುಮಾರು 12 ಕೋಟಿ ಚಟುವಟಿಕೆಗಳನ್ನು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಈ ಪೋಷಣ್ ಮಾಹೆಯಲ್ಲಿ ನಡೆಸಿವೆ.
2018 ರಲ್ಲಿ ರಾಷ್ಟ್ರದ ಮೊದಲ ಪೌಷ್ಟಿಕಾಂಶ-ಕೇಂದ್ರಿತ ಯೋಜನೆಯಡಿಯಲ್ಲಿ ಜನ ಆಂದೋಲನಗಳು ಪ್ರಾರಂಭವಾದಾಗಿನಿಂದ ಸಚಿವಾಲಯಗಳು/ಇಲಾಖೆಗಳೊಂದಿಗೆ ಒಮ್ಮುಖವಾಗಿ ಕೆಲಸ ಮಾಡಿದವು. ಈ ಯೋಜನೆಯು ಯಾವಾಗಲೂ ಜನ ಆಂದೋಲನಗಳ ಕೇಂದ್ರವಾಗಿ ಕೆಲಸ ಮಾಡಿವೆ, ಏಕೆಂದರೆ ಇದು ವಿವಿಧ ವರ್ಗದ ಮಕ್ಕಳಿಗೆ, ವಿಶೇಷವಾಗಿ ತಳಮಟ್ಟದ ಜನರನ್ನು ತಲುಪಲು ಸಹಾಯ ಮಾಡುತ್ತದೆ.
ಸಕ್ಷಮ್ ಅಂಗನವಾಡಿಗಳನ್ನು ಸುಧಾರಿತ ಪೋಷಣೆ ಮತ್ತು ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣ ವಿತರಣೆಗಾಗಿ (ಇಸಿಸಿಇ) ಬಲಪಡಿಸಲಾಗಿದೆ. ಮೇಲ್ದರ್ಜೆಗೇರಿಸಲಾಗಿದೆ ಮತ್ತು ಪುನಶ್ಚೇತನಗೊಳಿಸಲಾಗಿದೆ. ಸಕ್ಷಮ್ ಅಂಗನವಾಡಿ ಕೇಂದ್ರದ ಕೆಲವು ವಿಶೇಷ ಲಕ್ಷಣಗಳೆಂದರೆ- ಎಲ್.ಇ.ಡಿ ಪರದೆಗಳು, ಶುದ್ಧ ಕುಡಿಯುವ ನೀರಿಗಾಗಿ ನೀರಿನ ಫಿಲ್ಟರ್ ವ್ಯವಸ್ಥೆ ಸೇರಿದಂತೆ ಸುಧಾರಿತ ಮೂಲಸೌಕರ್ಯ; ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣ (ಇಸಿಸಿಇ), ಬಾಲಾ (ಕಲಿಕೆಯ ಸಹಾಯವಾಗಿ ಕಟ್ಟಡ) ಚಿತ್ರಕಲೆಗಳಿಗೆ ಸಂಬಂಧಿಸಿದ ವಸ್ತುಗಳು; ಮತ್ತು ಪೋಶನ್ ವಾಟಿಕಾ ವೈವಿಧ್ಯಮಯ ಆಹಾರ ಸಸ್ಯಗಳಿಗೆ ಪ್ರವೇಶವನ್ನು ನೀಡುತ್ತದೆ ಮತ್ತು ಅಪೌಷ್ಟಿಕತೆಯ ವಿರುದ್ಧ ಹೋರಾಡುವ ಮಿಷನ್ ಗೆ ಸಹಾಯ ಮಾಡುತ್ತದೆ. ಭಾರತದಾದ್ಯಂತ ಸ್ಥಾಪಿಸಿರುವ 11 ಸಾವಿರಕ್ಕೂ ಹೆಚ್ಚು ಸಕ್ಷಮ್ ಅಂಗನವಾಡಿ ಕೇಂದ್ರಗಳು ಪೋಷಣ ಮಾಹೆಯ ಸಮಾರೋಪ ಸಮಾರಂಭದಲ್ಲಿ ವಿಡಿಯೊ ಸಮಾವೇಶ ಮೂಲಕ ಉದ್ಘಾಟನೆಗೊಳ್ಳಲಿವೆ.
ಜಾರ್ಖಂಡ್ ರಾಜ್ಯ ಸರ್ಕಾರವು ಮಾಡಿರುವ ಮಿಷನ್ ಪೋಷಣ್ 2.0 ನ ಅಂಶಗಳನ್ನು ಪ್ರದರ್ಶಿಸುವ ಪ್ರದರ್ಶನ ವ್ಯವಸ್ಥೆಯನ್ನು ಸಹ ಸ್ಥಳದಲ್ಲಿ ಆಯೋಜಿಸುತ್ತದೆ.
ಪೋಷಣ್ ಮಾಹೆ 2024 ರ ಸಮಾರೋಪ ಕಾರ್ಯಕ್ರಮವು ಆರೋಗ್ಯಕರ ಮತ್ತು ಪೋಷಣೆಯ ಭಾರತಕ್ಕಾಗಿ ಸಾಮೂಹಿಕ ಪ್ರಯತ್ನಗಳನ್ನು ಪ್ರತಿನಿಧಿಸುತ್ತದೆ. ಇದು ಎಲ್ಲಾ ಭಾಗವಹಿಸುವ ರಾಜ್ಯಗಳ ಸಮರ್ಪಣೆಯನ್ನು ಗುರುತಿಸುವುದಲ್ಲದೆ, ಮಧ್ಯಸ್ಥಗಾರರ ಸಹಯೋಗದ ಪ್ರಮುಖ ಪಾತ್ರವನ್ನು ಒತ್ತಿಹೇಳುತ್ತದೆ, ನಿರಂತರ ಜನ ಆಂದೋಲನಗಳ ಮೂಲಕ ತಳಮಟ್ಟದ ಚಳುವಳಿಗಳನ್ನು ಬಲಪಡಿಸುತ್ತದೆ. ಸಕ್ಷಮ್ ಅಂಗನವಾಡಿ ಕೇಂದ್ರಗಳ ಮೂಲಕ ಫಲಾನುಭವಿಗಳು ಮತ್ತು ಸಮುದಾಯಗಳ ಭಾಗವಹಿಸುವಿಕೆಯನ್ನು ಹೆಚ್ಚಿಸಿದೆ. ಈ ಕಾರ್ಯಕ್ರಮವನ್ನು ಜಾಲತಾಣ ಕೊಂಡಿ https://webcast.gov.in/mwcd ಮೂಲಕ ಭಾರತದಾದ್ಯಂತ ವೆಬ್ ಕಾಸ್ಟ್ ಮಾಡಲಾಗುತ್ತದೆ
*****
(Release ID: 2060155)
Visitor Counter : 32