ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಹೊಸದಿಲ್ಲಿಯಲ್ಲಿ ಸ್ವಚ್ಛತಾ ಹೀ ಸೇವಾ, 2024 ಅಭಿಯಾನ: ಶ್ರೀ ಅಶ್ವಿನಿ ವೈಷ್ಣವ್ ಭಾಗಿ


ಸ್ವಚ್ಛತೆ ಮತ್ತು ಪರಿಸರ ಸುಸ್ಥಿರತೆಗಾಗಿ ಸಚಿವಾಲಯದ ಅಧಿಕಾರಿಗಳಿಗೆ ಸಚಿವರಿಂದ ಪ್ರತಿಜ್ಞೆ ಬೋಧನೆ

ಶ್ರೀ ಅಶ್ವಿನಿ ವೈಷ್ಣವ್ ಅವರು 'ಏಕ್ ಪೆಡ್ ಮಾ ಕೆ ನಾಮ್' ಅಭಿಯಾನದ ಅಡಿಯಲ್ಲಿ ಸೂಚನಾ ಭವನದಲ್ಲಿ ಸಸಿ ನೆಟ್ಟರು

ಸ್ಥಳೀಯ ಸ್ವಚ್ಛತೆಗೆ ಸಮುದಾಯ ಸೇವಾ ಉಪಕ್ರಮ ಬಹಳ ಮುಖ್ಯ : ಶ್ರೀ ಅಶ್ವಿನಿ ವೈಷ್ಣವ್

Posted On: 25 SEP 2024 7:28PM by PIB Bengaluru

ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಸ್ವಚ್ಛತಾ ಹೀ ಸೇವಾ, 2024 ಅಭಿಯಾನದ ಭಾಗವಾಗಿ ಕೇಂದ್ರೀಯ ಸಂವಹನ ಬ್ಯೂರೋ (ಸಿಬಿಸಿ) ಸೂಚನಾ ಭವನದಲ್ಲಿ ಆಯೋಜಿಸಿದ್ದ ಸರಣಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಸ್ವಚ್ಛತೆ ಮತ್ತು ಪರಿಸರ ನಿರ್ವಹಣೆಯ ಮಹತ್ವವನ್ನು ಒತ್ತಿ ಹೇಳಿದರು.

ಸೂಚನಾ ಭವನದಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸಚಿವರು ಪ್ರಮಾಣ ವಚನ ಬೋಧಿಸಿದರು, ಅಲ್ಲಿ ಭಾಗವಹಿಸಿದವರು  ತಮ್ಮ ಕಾರ್ಯ ಚಟುವಟಿಕೆಗಳ ಕ್ಷೇತ್ರಗಳಲ್ಲಿ ಸ್ವಚ್ಛತೆ ಮತ್ತು ಸುಸ್ಥಿರ ಅಭ್ಯಾಸಗಳನ್ನು ಉತ್ತೇಜಿಸಲು ಬದ್ಧತೆ ವ್ಯಕ್ತಪಡಿಸಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಾರಂಭಿಸಿದ 'ಏಕ್ ಪೆಡ್ ಮಾ ಕೆ ನಾಮ್' ಅಭಿಯಾನದ ಮುಂದುವರಿಕೆಯಾಗಿ, ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಯ ಎರಡೂ  ಉದ್ದೇಶವನ್ನು ಎತ್ತಿ ತೋರಿಸುವ ಸಸಿ ನೆಡುವ ಅಭಿಯಾನವನ್ನು ಶ್ರೀ ಅಶ್ವಿನಿ ವೈಷ್ಣವ್ ಅವರು ಪ್ರಾರಂಭಿಸಿದರು. ಅವರು ಉದ್ಯೋಗಿಗಳಿಗೆ ಸಸಿಗಳನ್ನು ವಿತರಿಸಿದರು ಹಾಗು ಪರಿಸರದ ಬಗ್ಗೆ ವೈಯಕ್ತಿಕ ಜವಾಬ್ದಾರಿಯನ್ನು ಒತ್ತಿಹೇಳಿದರು.

ಸಚಿವರೊಂದಿಗೆ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಸಹಾಯಕ ಸಚಿವರಾದ ಶ್ರೀ ಎಲ್ ಮುರುಗನ್, ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು, ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷರು, ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧಿಕಾರಿಗಳು, ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಇತರ ವಿಭಾಗಗಳ ಮಾಧ್ಯಮ ಮುಖ್ಯಸ್ಥರು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಿಗಳು ಉಪಸ್ಥಿತರಿದ್ದರು.

 

*****


(Release ID: 2058907) Visitor Counter : 42