ಪರಿಸರ ಮತ್ತು ಅರಣ್ಯ ಸಚಿವಾಲಯ
azadi ka amrit mahotsav

ಪರಿಸರ-ಸ್ನೇಹಿ ಜೀವನಶೈಲಿಗೆ ಸಂಬಂಧಿಸಿದ ನಡವಳಿಕೆಯ ಬದಲಾವಣೆಗಳನ್ನು ಪ್ರೇರೇಪಿಸುವ ಉತ್ಪನ್ನಗಳು ಮತ್ತು ಸೇವೆಗಳಿಗೆ ಸಂಬಂಧಿಸಿದ ಕಲ್ಪನೆಗಳನ್ನು ಆಹ್ವಾನಿಸಲು Ideas4LiFE ಪೋರ್ಟಲ್ ಉದ್ಘಾಟನೆಯೊಂದಿಗೆ ಸಚಿವಾಲಯವು 100 ದಿನಗಳ ಗುರಿಯನ್ನು ಸಾಧಿಸಿದೆ


ಸಚಿವಾಲಯದ #Ideas4LiFE  ಅಭಿಯಾನವು 46.5 ದಶಲಕ್ಷ ಇಂಪ್ರೆಷನ್ ಗಳು, 13.5 ದಶಲಕ್ಷ ರೀಚ್, ಮತ್ತು ಪೋರ್ಟಲ್ ನಲ್ಲಿ 1000ಕ್ಕೂ ಹೆಚ್ಚು ಕಲ್ಪನೆಗಳ ಸಲ್ಲಿಕೆಯೊಂದಿಗೆ ವೇಗ ಪಡೆದುಕೊಂಡಿದೆ.

Ideas4LiFE Ideathon ಮಿಷನ್ LiFE ಗೆ ಹೊಂದಿಕೊಳ್ಳುವ ಏಳು ಪ್ರಮುಖ ವಿಷಯಗಳನ್ನು ಒಳಗೊಂಡಿದೆ: ನೀರಿನ ಸಂರಕ್ಷಣೆ, ಇಂಧನ ದಕ್ಷತೆ, ತ್ಯಾಜ್ಯ ವಿಲೇವಾರಿ ಇತ್ಯಾದಿ 

Posted On: 23 SEP 2024 2:05PM by PIB Bengaluru

ಕೇಂದ್ರ  ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಶ್ರೀ ಭೂಪೇಂದರ್ ಯಾದವ್ ಅವರು ಜುಲೈ 29, 2024 ರಂದು ದೆಹಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ Ideas4LiFE ಪೋರ್ಟಲ್ ಉದ್ಘಾಟಿಸಿದ್ದರು. ಈ ಪೋರ್ಟಲ್ ಪರಿಸರ-ಸ್ನೇಹಿ ಜೀವನಶೈಲಿಗೆ ಸಂಬಂಧಿಸಿದ ನಡವಳಿಕೆಯ ಬದಲಾವಣೆಗಳನ್ನು ಪ್ರೇರೇಪಿಸುವ ಉತ್ಪನ್ನಗಳು ಮತ್ತು ಸೇವೆಗಳಿಗೆ ಸಂಬಂಧಿಸಿದ ಹೊಸ ಕಲ್ಪನೆಗಳನ್ನು ಆಹ್ವಾನಿಸಲು ಆರಂಭಿಸಲಾಯಿತು.

UNICEF YuWaah (ಯುನಿಸೆಫ್ ಯುವಾಹ್)  ಸಹಭಾಗಿತ್ವದಲ್ಲಿ ರಚಿಸಲಾದ ಭಾರತ ಸರ್ಕಾರದ ಯೋಜನೆಗಳ ಮಾಹಿತಿ ಜಾಲತಾಣವಾದ ‘Ideas4Life.nic.in’ ಮೂಲಕ, ಭಾಗವಹಿಸುವವರು ತಮ್ಮ ಕಲ್ಪನೆಗಳು ಮತ್ತು ಆವಿಷ್ಕಾರಗಳನ್ನು ಆನ್ ಲೈನ್ ನಲ್ಲಿ ಸಲ್ಲಿಸಲು ಅನುವು ಮಾಡಿಕೊಡುತ್ತದೆ. ಮಿಷನ್ ಲೈಫ್ನ ಪ್ರತಿಯೊಂದು ಏಳು ವಿಷಯಗಳ ಅಡಿಯಲ್ಲಿ ವಿಜೇತ ಆಲೋಚನೆಗಳನ್ನು ಗುರುತಿಸಲಾಗುತ್ತದೆ ಮತ್ತು ವ್ಯಕ್ತಿಗಳಿಗೆ ಮತ್ತು ಸಂಸ್ಥೆಗಳಿಗೆ ಆಕರ್ಷಕ ಬಹುಮಾನಗಳೊಂದಿಗೆ ನೀಡಲಾಗುತ್ತದೆ.

ಇದಲ್ಲದೆ, ಮಹಾರಾಷ್ಟ್ರ ಸರ್ಕಾರದ ರಾಜ್ಯ ಪರಿಸರ ಇಲಾಖೆಯೊಂದಿಗೆ ಸಹಯೋಗದಲ್ಲಿ IIT ಬಾಂಬೆಯಲ್ಲಿ ನವೀನ ಪರಿಸರ ಪರಿಹಾರಗಳನ್ನು ಪ್ರೇರೇಪಿಸುವ ಉದ್ದೇಶದೊಂದಿಗೆ 31 ಆಗಸ್ಟ್ 2024 ರಂದು ಒಂದು ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಅಲ್ಲಿ ಕೇಂದ್ರ ಸಚಿವ ಶ್ರೀ ಭೂಪೇಂದರ್ ಯಾದವ್ ಅವರು Ideas4LiFE ಯೋಜನೆಗೆ ಕಲ್ಪನೆಗಳನ್ನು ಸಲ್ಲಿಸುವ ಕೊನೆಯ ದಿನಾಂಕವನ್ನು ಸೆಪ್ಟೆಂಬರ್ 15 ರಿಂದ ಅಕ್ಟೋಬರ್ 15, 2024 ರವರೆಗೆ ವಿಸ್ತರಿಸಿರುವುದಾಗಿ ಘೋಷಿಸಿದರು.

ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE)ಯಂತಹ ಪ್ರಮುಖ ಶೈಕ್ಷಣಿಕ ಸಂಸ್ಥೆಗಳೊಂದಿಗೆ ಪಾಲುದಾರಿಕೆಗಳನ್ನು ಮಾಡಿಕೊಳ್ಳಲಾಗಿದೆ. ಇದು ಶೈಕ್ಷಣಿಕ ಸಂಸ್ಥೆಗಳಲ್ಲಿ ಈ  ಉಪಕ್ರಮದ  ಉಪಸ್ಥಿತಿಯನ್ನು ಬಲಪಡಿಸುವ  ಗುರಿಯನ್ನು ಹೊಂದಿದೆ. ಇದರ ಮೂಲಕ  ದೇಶಾದ್ಯಂತ ವಿದ್ಯಾರ್ಥಿಗಳು, ಬೋಧಕರು ಮತ್ತು ಸಂಶೋಧಕರು ಸುಸ್ಥಿರ ಜೀವನಕ್ಕಾಗಿ ಹೊಸ ಆಲೋಚೆನೆಗಳನ್ನು ಕೊಡುಗೆಯಾಗಿ ನೀಡಲು ಪ್ರೋತ್ಸಾಹಿಸಲಾಗುತ್ತಿದೆ.

UGC, AICTE, IIT ಗಳು ಮತ್ತು ದೇಶಾದ್ಯಂತದ  ವಿವಿಧ ಶೈಕ್ಷಣಿಕ ಸಂಸ್ಥೆಗಳು,  ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಶೈಕ್ಷಣಿಕ ಸಮುದಾಯದಲ್ಲಿ Ideas4LiFE ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ.  ಪರಿಸರ ಸ್ನೇಹಿ ಜೀವನಶೈಲಿಯನ್ನು ಉತ್ತೇಜಿಸುವ ನಾಗರಿಕ-ಕೇಂದ್ರಿತ ನವೀನ ಕಲ್ಪನೆಗಳು ಮತ್ತು ತಂತ್ರಜ್ಞಾನಗಳನ್ನು ಕೊಡುಗೆಯಾಗಿ ನೀಡಲು ಅವರನ್ನು ಪ್ರೋತ್ಸಾಹಿಸಲಾಗುತ್ತಿದೆ. Ideas4LiFE Ideathon ಮಿಷನ್ LiFE ಗೆ ಹೊಂದಿಕೊಳ್ಳುವ ಏಳು ವಿಷಯಗಳನ್ನು ಒಳಗೊಂಡಿದೆ: ನೀರಿನ ಸಂರಕ್ಷಣೆ, ಇಂಧನ ದಕ್ಷತೆ, ತ್ಯಾಜ್ಯ ವಿಲೇವಾರಿ, ಇ-ತ್ಯಾಜ್ಯ ನಿರ್ವಹಣೆ, ಒಂದೇ ಬಾರಿ ಬಳಸಿ ಬಿಸಾಡುವ ಪ್ಲಾಸ್ಟಿಕ್ ಗಳ ಬಳಕೆಯನ್ನು ಕಡಿಮೆ ಮಾಡುವುದು, ಸುಸ್ಥಿರ ಆಹಾರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಪ್ರೋತ್ಸಾಹಿಸುವುದು.

ಸಚಿವಾಲಯವು #Ideas4LiFE ಅಭಿಯಾನವನ್ನು ಸಾಮಾಜಿಕ ಮಾಧ್ಯಮಗಳ ಮೂಲಕವೂ ಪ್ರಚಾರ ಮಾಡುತ್ತಿದೆ. ಇಂದಿನವರೆಗೆ Ideas4LiFE ಪೋರ್ಟಲ್ ನಲ್ಲಿ ಸುಮಾರು 3300 ನೋಂದಣಿಗಳು ಮತ್ತು 1000 ಕಲ್ಪನೆಗಳು ಸ್ವೀಕೃತವಾಗಿವೆ. #Ideas4LiFE ಸಾಮಾಜಿಕ ಮಾಧ್ಯಮ ಪ್ರಚಾರದ ಫಲಿತಾಂಶಗಳು 46.5 ಮಿಲಿಯನ್ ಇಂಪ್ರೆಷನ್ ಮತ್ತು 13.5 ಮಿಲಿಯನ್  ರೀಚ್  ತೋರಿಸುತ್ತವೆ.

ಈ ಅಭಿಯಾನವನ್ನು ಮತ್ತಷ್ಟು ವಿಸ್ತರಿಸಲು ಯುಜಿಸಿ/ಎಐಸಿಟಿಇ/ಶಿಕ್ಷಣ ಇಲಾಖೆ/ರಾಜ್ಯ ಸರ್ಕಾರಗಳು ಮುಂತಾದವರೊಂದಿಗೆ ಸಭೆಗಳನ್ನು ನಡೆಸಲು ಯೋಜಿಸಲಾಗಿದೆ. ಸವಾಲಿನ ಪೂರ್ಣಗೊಳ್ಳುವಿಕೆಯ ನಂತರ, ಆವಿಷ್ಕಾರಕ ಕಲ್ಪನೆಗಳನ್ನು ತೀರ್ಪುಗಾರರು ಮೌಲ್ಯಮಾಪನ ಮಾಡಿ, ಶಾರ್ಟ್ಲಿಸ್ಟ್ ಮತ್ತು ವಿಜೇತ ಕಲ್ಪನೆಗಳನ್ನು ಘೋಷಿಸುತ್ತದೆ. ಈ ಕಲ್ಪನೆಗಳನ್ನು ಆಕರ್ಷಕ ಬಹುಮಾನಗಳೊಂದಿಗೆ ಮಾತ್ರವಲ್ಲದೆ ಆವಿಷ್ಕಾರಗಳ ರಾಷ್ಟ್ರೀಯ ಭಂಡಾರದ ಭಾಗವಾಗಿಯೂ ಗುರುತಿಸಲಾಗುತ್ತದೆ. ಇವುಗಳನ್ನು ಸರ್ಕಾರಿ ಸಂಸ್ಥೆಗಳು ಮತ್ತು ಖಾಸಗಿ ಘಟಕಗಳೂ ಸೇರಿದಂತೆ ವಿವಿಧ ಪಾಲುದಾರರು ಪೋಷಿಸಬಹುದು, ವಿಸ್ತರಿಸಬಹುದು ಮತ್ತು ಅನುಷ್ಠಾನಗೊಳಿಸಬಹುದು.

 

*****


(Release ID: 2058170) Visitor Counter : 34