ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

ಪ್ರಧಾನಮಂತ್ರಿಯವರು ಸಿಇಒಗಳ ದುಂಡುಮೇಜಿನ ಸಭೆಯಲ್ಲಿ ಭಾಗವಹಿಸಿದರು

Posted On: 22 SEP 2024 11:50PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನ್ಯೂಯಾರ್ಕ್‌ನಲ್ಲಿ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ), ಸ್ಕೂಲ್ ಆಫ್ ಇಂಜಿನಿಯರಿಂಗ್ ಆಯೋಜಿಸಿದ್ದ ದುಂಡುಮೇಜಿನ ಸಭೆಯಲ್ಲಿ ತಂತ್ರಜ್ಞಾನ ಉದ್ಯಮದ ಪ್ರಮುಖರೊಂದಿಗೆ ಸಂವಾದ ನಡೆಸಿದರು. ದುಂಡುಮೇಜಿನ ಸಭೆಯಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಕ್ವಾಂಟಮ್; ಜೈವಿಕ ತಂತ್ರಜ್ಞಾನ ಮತ್ತು ಜೀವ ವಿಜ್ಞಾನ; ಕಂಪ್ಯೂಟಿಂಗ್, ಐಟಿ ಮತ್ತು ಸಂವಹನ; ಮತ್ತು ಸೆಮಿಕಂಡಕ್ಟರ್‌ ತಂತ್ರಜ್ಞನ ವಿಷಯಗಳ ಮೇಲೆ ಕೇಂದ್ರೀಕರಿಸಲಾಯಿತು.

ಜಾಗತಿಕವಾಗಿ ವಿಕಸನಗೊಳ್ಳುತ್ತಿರುವ ತಂತ್ರಜ್ಞಾನ ಮತ್ತು ಈ ಅತ್ಯಾಧುನಿಕ ತಂತ್ರಜ್ಞಾನಗಳು ಭಾರತ ಸೇರಿದಂತೆ ಪ್ರಪಂಚದಾದ್ಯಂತ ಜನರ ಯೋಗಕ್ಷೇಮಕ್ಕೆ ಹೇಗೆ ಕೊಡುಗೆ ನೀಡುತ್ತಿವೆ ಎಂಬುದರ ಕುರಿತು ಸಿಇಒಗಳು ಪ್ರಧಾನ ಮಂತ್ರಿಯೊಂದಿಗೆ ಆಳವಾದ ಚರ್ಚೆ ನಡೆಸಿದರು. ಜಾಗತಿಕ ಆರ್ಥಿಕತೆ ಮತ್ತು ಮಾನವ ಅಭಿವೃದ್ಧಿಯನ್ನು ಕ್ರಾಂತಿಗೊಳಿಸುವ ಸಾಮರ್ಥ್ಯವನ್ನು ಹೊಂದಿರುವ ಆವಿಷ್ಕಾರಗಳಿಗೆ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಲಾಗುತ್ತಿದೆ ಎಂಬುದರ ಕುರಿತು ಅವರು ಚರ್ಚಿಸಿದರು.

ತಂತ್ರಜ್ಞಾನ ಕ್ಷೇತ್ರದ ನಾಯಕರನ್ನು ಒಟ್ಟುಗೂಡಿಸುವಲ್ಲಿ ಎಂಐಟಿ ಸ್ಕೂಲ್ ಆಫ್ ಇಂಜಿನಿಯರಿಂಗ್ ಮತ್ತು ಅದರ ಡೀನ್‌ ಪ್ರಯತ್ನಗಳನ್ನು ಪ್ರಧಾನಮಂತ್ರಿ ಶ್ಲಾಘಿಸಿದರು. ತಂತ್ರಜ್ಞಾನ ಸಹಕಾರ ಮತ್ತು ಇನಿಶಿಯೇಟಿವ್ ಆನ್ ಕ್ರಿಟಿಕಲ್ ಅಂಡ್ ಎಮರ್ಜಿಂಗ್ ಟೆಕ್ನಾಲಜೀಸ್ (ಐಸಿಇಟಿ) ಯಂತಹ ಪ್ರಯತ್ನಗಳು ಭಾರತ-ಅಮೆರಿಕ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯ ಕೇಂದ್ರಸ್ಥಾನದಲ್ಲಿವೆ ಎಂದು ಅವರು ಹೇಳಿದರು. ತಮ್ಮ ಮೂರನೇ ಅವಧಿಯಲ್ಲಿ, ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತೇನೆ ಎಂದು ಪ್ರಧಾನಿ ಒತ್ತಿ ಹೇಳಿದರು. ಸಹಯೋಗ ಮತ್ತು ನಾವೀನ್ಯತೆಗಾಗಿ ಭಾರತದ ಬೆಳವಣಿಗೆಯನ್ನು  ಬಳಸಿಕೊಳ್ಳುವಂತೆ ಅವರು ಕಂಪನಿಗಳಿಗೆ ಕರ ನೀಡಿದರು. ಅವರು ಭಾರತದ ಆರ್ಥಿಕ ಮತ್ತು ತಾಂತ್ರಿಕ ಬೆಳವಣಿಗೆಯ ಅವಕಾಶಗಳನ್ನು ಬಳಸಿಕೊಳ್ಳುವ ಮೂಲಕ ವಿಶ್ವಕ್ಕಾಗಿ ಭಾರತದಲ್ಲಿ ಸಹ-ಅಭಿವೃದ್ಧಿ ಮಾಡಬಹುದು, ಸಹ-ವಿನ್ಯಾಸಗೊಳಿಸಬಹುದು ಮತ್ತು ಸಹ-ಉತ್ಪಾದನೆ ನಡೆಸಬಹುದು ಎಂದು ಹೇಳಿದರು. ಬೌದ್ಧಿಕ ಆಸ್ತಿಯನ್ನು ರಕ್ಷಿಸಲು ಮತ್ತು ತಾಂತ್ರಿಕ ಆವಿಷ್ಕಾರವನ್ನು ಉತ್ತೇಜಿಸಲು ಭಾರತದ ಆಳವಾದ ಬದ್ಧತೆಯ ಬಗ್ಗೆ ಅವರು ಉದ್ಯಮ ನಾಯಕರಿಗೆ ಭರವಸೆ ನೀಡಿದರು.

ಭಾರತದಲ್ಲಿ ವಿಶೇಷವಾಗಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಉತ್ಪಾದನೆ, ಸೆಮಿಕಂಡಕ್ಟರ್‌, ಜೈವಿಕ ತಂತ್ರಜ್ಞಾನ ಮತ್ತು ಹಸಿರು ಬೆಳವಣಿಗೆಯಲ್ಲಿ ನಡೆಯುತ್ತಿರುವ ಆರ್ಥಿಕ ಪರಿವರ್ತನೆಯನ್ನು ಪ್ರಧಾನಮಂತ್ರಿಯವರು ಎತ್ತಿ ತೋರಿಸಿದರು. ಭಾರತವನ್ನು ಸೆಮಿಕಂಡಕ್ಟರ್ ಉತ್ಪಾದನೆಯ ಜಾಗತಿಕ ಕೇಂದ್ರವನ್ನಾಗಿ ಮಾಡಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದರು. ಭಾರತವನ್ನು ಬಯೋಟೆಕ್ ಪವರ್‌ ಹೌಸ್ ಆಗಿ ಅಭಿವೃದ್ಧಿಪಡಿಸಲು ತಂದಿರುವ ಭಾರತದ ಬಯೋ ಇ3 ನೀತಿಯ ಕುರಿತು ಅವರು ಮಾತನಾಡಿದರು. ಕೃತಕ ಬುದ್ಧಿಮತ್ತೆ  ಕುರಿತು ಮಾತನಾಡಿದ ಅವರು, ಅದರ ನೈತಿಕ ಮತ್ತು ಜವಾಬ್ದಾರಿಯುತ ಬಳಕೆಯ ಆಧಾರದ ಮೇಲೆ ಎಲ್ಲರಿಗೂ ಕೃತಕ ಬುದ್ಧಿಮತ್ತೆಯನ್ನು ಉತ್ತೇಜಿಸುವುದು ಭಾರತದ ನೀತಿಯಾಗಿದೆ ಎಂದು ಹೇಳಿದರು.

ಭಾರತದೊಂದಿಗೆ ಹೂಡಿಕೆ ಮತ್ತು ಸಹಯೋಗದ ಬಗ್ಗೆ ಸಿಇಒಗಳು ತಮ್ಮ ತೀವ್ರ ಆಸಕ್ತಿಯನ್ನು ವ್ಯಕ್ತಪಡಿಸಿದರು. ಜಾಗತಿಕ ತಂತ್ರಜ್ಞಾನದ ಕೇಂದ್ರವಾಗಿ ಭಾರತದ ಬೆಳೆಯುತ್ತಿರುವ ಪ್ರಾಮುಖ್ಯತೆ, ಅದರ ನಾವೀನ್ಯತೆ-ಸ್ನೇಹಿ ನೀತಿಗಳು ಮತ್ತು ಸಮೃದ್ಧ ಮಾರುಕಟ್ಟೆ ಅವಕಾಶಗಳಿಂದ ನಡೆಸಲ್ಪಟ್ಟಿದೆ, ಇದು ಟೆಕ್ ನಾಯಕರಿಂದ ಹೆಚ್ಚಿನ ಮೆಚ್ಚುಗೆಯನ್ನು ಪಡೆಯಿತು. ಸ್ಟಾರ್ಟಪ್‌ ಗಳಲ್ಲಿ ಹೂಡಿಕೆ ಮಾಡುವುದು ಭಾರತದಲ್ಲಿ ಹೊಸ ತಂತ್ರಜ್ಞಾನಗಳನ್ನು ಆವಿಷ್ಕರಿಸಲು ಮತ್ತು ಅಭಿವೃದ್ಧಿಪಡಿಸಲು ಸಮಷ್ಟಿ ಪರಿಣಾಮದ ಅವಕಾಶವಾಗಿದೆ ಎಂದು ಅವರು ಒಪ್ಪಿಕೊಂಡರು.

ಸಂಸ್ಥೆಯ ಮುಖ್ಯ ನಾವೀನ್ಯತೆ ಮತ್ತು ಕಾರ್ಯತಂತ್ರ ಅಧಿಕಾರಿ ಮತ್ತು ಎಂಐಟಿ ಸ್ಕೂಲ್ ಆಫ್ ಎಂಜಿನಿಯರಿಂಗ್‌ ನ ಡೀನ್ ಪ್ರೊಫೆಸರ್ ಅನಂತ ಚಂದ್ರಕಾಸನ್ ದುಂಡುಮೇಜಿನ ಸಭೆಯ ಅಧ್ಯಕ್ಷತೆ ವಹಿಸಿ, ಪ್ರಧಾನ ಮಂತ್ರಿ ಮತ್ತು ಸಿಇಒಗಳಿಗೆ ಭಾಗವಹಿಸಿದ್ದಕ್ಕಾಗಿ ಧನ್ಯವಾದಗಳನ್ನು ತಿಳಿಸಿದರು, ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಮತ್ತು ಜಾಗತಿಕ ಒಳಿತಿಗಾಗಿ ಎಂಐಟಿಯ ಬದ್ಧತೆಯನ್ನು ದೃಢೀಕರಿಸಿದರು.

ದುಂಡುಮೇಜಿನ ಸಭೆಯಲ್ಲಿ ಭಾಗವಹಿಸಿದ ಸಿಇಒಗಳ ಪಟ್ಟಿ:

ಕ್ರ.ಸಂ.

ಕಂಪನಿಯ ಹೆಸರು

ಸಿಇಒ ಹೆಸರು

  1.  

ಆಕ್ಸೆಂಚರ್

ಶ್ರೀಮತಿ ಜೂಲಿ ಸ್ವೀಟ್, ಸಿಇಒ

  1.  

ಅಡೋಬ್

ಶ್ರೀ ಶಾಂತನು ನಾರಾಯಣ್, ಅಧ್ಯಕ್ಷರು ಮತ್ತು ಸಿಇಒ

  1.  

ಎ ಎಮ್‌ ಡಿ

ಶ್ರೀಮತಿ ಲಿಸಾ ಸು, ಸಿಇಒ

  1.  

ಬಯೋಜೆನ್ ಇಂಕ್

ಶ್ರೀ ಕ್ರಿಸ್ ವಿಹ್ಬಾಚೆರ್, ಸಿಇಒ

  1.  

ಬ್ರಿಸ್ಟಲ್ ಮೈಯರ್ಸ್ ಸ್ಕ್ವಿಬ್

ಶ್ರೀ ಕ್ರಿಸ್ ಬೋರ್ನರ್, ಸಿಇಒ

  1.  

ಎಲಿ ಲಿಲ್ಲಿ ಮತ್ತು ಕಂಪನಿ

ಶ್ರೀ ಡೇವಿಡ್ A. ರಿಕ್ಸ್, ಸಿಇಒ

  1.  

ಗೂಗಲ್

ಶ್ರೀ ಸುಂದರ್ ಪಿಚೈ, ಸಿಇಒ

  1.  

ಎಚ್‌ ಪಿ ಇಂಕ್

ಶ್ರೀ ಎನ್ರಿಕ್ ಲೋರೆಸ್, ಸಿಇಒ ಮತ್ತು ಅಧ್ಯಕ್ಷರು

  1.  

ಐಬಿಎಂ

ಶ್ರೀ ಅರವಿಂದ್ ಕೃಷ್ಣ, ಸಿಇಒ

  1.  

ಎಲ್‌ ಎ ಎಂ ರೀಸರ್ಚ್‌

ಶ್ರೀ ಟಿಮ್ ಆರ್ಚರ್, ಸಿಇಒ

  1.  

ಮಾಡರ್ನಾ

ನೌಬರ್ ಅಫೆಯಾನ್, ಅಧ್ಯಕ್ಷರು

  1.  

ವೆರಿಝೋನ್

ಶ್ರೀ ಹ್ಯಾನ್ಸ್ ವೆಸ್ಟ್‌ಬರ್ಗ್, ಅಧ್ಯಕ್ಷರು ಮತ್ತು ಸಿಇಒ

  1.  

ಗ್ಲೋಬಲ್ ಫೌಂಡರರೀಸ್

ಶ್ರೀ ಥಾಮಸ್ ಕಾಲ್ಫೀಲ್ಡ್, ಸಿಇಒ

  1.  

ಎನ್ ವಿಡಿಯಾ

ಶ್ರೀ ಜೆನ್ಸನ್ ಹುವಾಂಗ್, ಅಧ್ಯಕ್ಷರು ಮತ್ತು ಸಿಇಒ

  1.  

ಕಿಂಡ್ರಿಲ್

ಶ್ರೀ ಮಾರ್ಟಿನ್ ಶ್ರೋಟರ್, ಸಿಇಒ

 

*****

 



(Release ID: 2057915) Visitor Counter : 13