ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

ಜಪಾನ್ ಪ್ರಧಾನಮಂತ್ರಿಯೊಂದಿಗೆ ಸಭೆ ನಡೆಸಿದ ಪ್ರಧಾನಮಂತ್ರಿ

Posted On: 22 SEP 2024 5:55AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2024ರ  ಸೆಪ್ಟೆಂಬರ್ 21   ರಂದು ಅಮೆರಿಕದ ಡೆಲವೇರ್‌ನ ವಿಲ್ಮಿಂಗ್‌ಟನ್‌ನಲ್ಲಿ ಕ್ವಾಡ್ ನಾಯಕರ ಶೃಂಗಸಭೆಯ ಹಿನ್ನೆಲೆಯಲ್ಲಿ ಜಪಾನ್‌ನ ಪ್ರಧಾನ ಮಂತ್ರಿ ಶ್ರೀ ಫ್ಯುಮಿಯೊ ಕಿಶಿಡಾ ಅವರೊಂದಿಗೆ ಸಮಾಲೋಚನೆ ನಡೆಸಿದರು.

ಉಭಯ ನಾಯಕರು ತಮ್ಮ ಅನೇಕ ಸಂವಾದಗಳನ್ನು ಪ್ರೀತಿಯಿಂದ ಸ್ಮರಿಸಿಕೊಂಡರು. ವಿಶೇಷವಾಗಿ 2022 ರ ಮಾರ್ಚ್ ನಲ್ಲಿ ಅವರ ಮೊದಲ ವಾರ್ಷಿಕ ಶೃಂಗಸಭೆಯ ನಂತರ. ಕಳೆದ ಕೆಲವು ವರ್ಷಗಳಿಂದ ಭಾರತ-ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯಲ್ಲಿ ಪ್ರಗತಿಯನ್ನು ಸಕ್ರಿಯಗೊಳಿಸುವಲ್ಲಿ ಅವರ ಅಚಲವಾದ ಸಮರ್ಪಣೆ ಮತ್ತು ನಾಯಕತ್ವಕ್ಕಾಗಿ ಪ್ರಧಾನಮಂತ್ರಿ ಕಿಶಿದಾ ಅವರಿಗೆ ನರೇಂದ್ರ ಮೋದಿ ಅವರು ಧನ್ಯವಾದ ಸಲ್ಲಿಸಿದರು.

ಭಾರತ-ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಸಹಭಾಗಿತ್ವವು 10 ನೇ ವರ್ಷದಲ್ಲಿದೆ ಎಂದು ಉಭಯ ನಾಯಕರು ನೆನಪಿಸಿಕೊಂಡರು ಮತ್ತು ಬಾಂಧವ್ಯ ವಲಯದಲ್ಲಿ ಸಾಧಿಸಿದ ಪ್ರಗತಿಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ಉಭಯ ಪ್ರಧಾನ ಮಂತ್ರಿಗಳು ಎರಡೂ ದೇಶಗಳ ನಡುವಿನ ಬಹುಮುಖಿ ಸಂಬಂಧವನ್ನು ಪರಿಶೀಲಿಸಿದರು. ರಕ್ಷಣಾ ಮತ್ತು ಭದ್ರತಾ ಸಂಬಂಧಗಳು ಮತ್ತು ಬಿ2ಬಿ ಮತ್ತು ಪಿ2ಪಿ ಸಹಯೋಗಗಳನ್ನು ಒಳಗೊಂಡಂತೆ ಸಹಕಾರ ವಲಯವನ್ನು ಇನ್ನಷ್ಟು ಗಾಢಗೊಳಿಸುವ ನಿಟ್ಟಿನಲ್ಲಿ ತಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.

ಪ್ರಧಾನಮಂತ್ರಿ ಕಿಶಿದಾ ಅವರನ್ನು ಪ್ರಧಾನಮಂತ್ರಿ ಬೀಳ್ಕೊಟ್ಟರು ಮತ್ತು ಅವರ ಮುಂದಿನ ಪ್ರಯತ್ನಗಳು ಸಾಕಾರಗೊಳ್ಳಲಿ ಮತ್ತು ಯಶಸ್ಸು ದೊರೆಯಲಿ ಎಂದು ಹಾರೈಸಿದರು.

 

*****

 



(Release ID: 2057758) Visitor Counter : 12