ಸಹಕಾರ ಸಚಿವಾಲಯ
azadi ka amrit mahotsav g20-india-2023

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮೂರನೇ ಅವಧಿಯ ಮೊದಲ 100 ದಿನಗಳಲ್ಲಿ ಸಹಕಾರಿ ಸಚಿವಾಲಯವು ಕೈಗೊಂಡ ಚಟುವಟಿಕೆಗಳ ಕುರಿತು ಇಂದು ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಸಮಾವೇಶದ ಅಧ್ಯಕ್ಷತೆಯನ್ನು ಕೇಂದ್ರ ಮತ್ತು ಸಹಕಾರಿ ಸಚಿವರಾದ ಅಮಿತ್ ಶಾ ವಹಿಸಿದ್ದರು


ಶ್ರೀ ಅಮಿತ್ ಶಾ ಅವರು 2 ಲಕ್ಷ ಹೊಸ MPACS, ಹಾಲು ಮತ್ತು ಮೀನುಗಾರಿಕೆ ಸಹಕಾರ ಸಂಘಗಳ ರಚನೆ ಮತ್ತು ಬಲಪಡಿಸುವ ಕುರಿತು ‘ಮಾರ್ಗದರ್ಶಿಕೆ‘ಯನ್ನು, ಶ್ವೇತ ಕ್ರಾಂತಿ 2.0  ಮತ್ತು ಸಹಕಾರ ಸಂಘಗಳಲ್ಲಿ ಸಹಕಾರದ ಕುರಿತ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್  ಪ್ರಾರಂಭಿಸಿದರು 

ಶ್ವೇತ ಕ್ರಾಂತಿ 2.0 ಮಹಿಳೆಯರ ಸ್ವಾವಲಂಬನೆ ಮತ್ತು ಸಬಲೀಕರಣದ ಜೊತೆಗೆ ಅಪೌಷ್ಟಿಕತೆಯ ವಿರುದ್ಧದ ಹೋರಾಟವನ್ನು ಬಲಪಡಿಸುತ್ತದೆ 

ಪ್ರಧಾನಮಂತ್ರಿ ಮೋದಿ ಅವರ  3.0 ಸರ್ಕಾರದ ಮೊದಲ 100 ದಿನಗಳಲ್ಲಿ 10 ಮಹತ್ವದ ಕ್ರಮಗಳು ಸಹಕಾರ ಕ್ಷೇತ್ರವನ್ನು ಸ್ವಾವಲಂಬಿತ ಮತ್ತು ವ್ಯಾಪಕಗೊಳಿಸಲು ಸಹಾಯ ಮಾಡಲಿವೆ. 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಸಾವಯವ ಕೃಷಿಯನ್ನು ಉತ್ತೇಜಿಸುವ ಸಂಕಲ್ಪವು ಪಶುಸಂಗೋಪನೆಯ ವ್ಯವಹಾರದಿಂದ ಮತ್ತಷ್ಟು ಬಲಗೊಳ್ಳಲಿದೆ 

ಈಗ ವಿದೇಶದಿಂದ ಯಾವುದೇ ಡೈರಿ ಸಂಬಂಧಿತ ಯಂತ್ರೋಪಕರಣಗಳನ್ನು ಆಮದು ಮಾಡಿಕೊಳ್ಳುವ ಅಗತ್ಯವಿಲ್ಲ, 100% ಭಾರತದಲ್ಲೇ ಉತ್ಪಾದಿಸಲಾಗುತ್ತದೆ 

ಒಮ್ಮೆ ಎರಡು ಲಕ್ಷ ಪ್ರಾಥಮಿಕ ಸಹಕಾರಿ ಸಂಘಗಳು ನೋಂದಾಯಿಸಲ್ಪಟ್ಟ ನಂತರ, ದೇಶದಲ್ಲಿ ಪಿಎಸಿಎಸ್, ಹೈನುಗಾರಿಕೆ ಅಥವಾ ಮೀನುಗಾರಿಕೆ ಸಹಕಾರ ಸಂಘವಿಲ್ಲದ ಒಂದೇ ಒಂದು ಪಂಚಾಯತ್ ಇರುವುದಿಲ್ಲ 

ಪಿಎಸಿಎಸ್ ಗಳನ್ನು 25 ವಿಭಿನ್ನ ಕಾರ್ಯಗಳೊಂದಿಗೆ ಸಂಪರ್ಕಿಸುವ ಮೂಲಕ ಕಾರ್ಯಸಾಧ್ಯವಾಗಿಸಲಾಗುತ್ತಿದೆ 

Posted On: 19 SEP 2024 8:21PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ NDA ಸರ್ಕಾರದ ಮೂರನೇ ಅವಧಿಯ ಮೊದಲ 100 ದಿನಗಳಲ್ಲಿ ಸಹಕಾರ ಸಚಿವಾಲಯ ಕೈಗೊಂಡ ಚಟುವಟಿಕೆಗಳ ಕುರಿತು ನವದೆಹಲಿಯಲ್ಲಿ ಇಂದು ನಡೆದ ರಾಷ್ಟ್ರೀಯ ಸಮ್ಮೇಳನದ ಅಧ್ಯಕ್ಷತೆಯನ್ನು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ವಹಿಸಿದ್ದರು. ಈ ಸಂದರ್ಭದಲ್ಲಿ, ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಹಾಗೂ ಪಂಚಾಯತ್ ರಾಜ್ ಸಚಿವರಾದ ಶ್ರೀ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಶ್ರೀ ಲಲ್ಲನ್ ಸಿಂಗ್, ಸಹಕಾರ ರಾಜ್ಯ ಸಚಿವರಾದ ಶ್ರೀ ಮುರಳೀಧರ ಮೊಹೋಳ್ ಮತ್ತು ಸಹಕಾರ ಸಚಿವಾಲಯದ ಕಾರ್ಯದರ್ಶಿ ಡಾ. ಆಶಿಷ್ ಕುಮಾರ್ ಭೂತಾನಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ, ಶ್ರೀ ಅಮಿತ್ ಶಾ ಅವರು 2 ಲಕ್ಷ ಹೊಸ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರ ಸಂಘಗಳು (MPACS), ಹೈನುಗಾರಿಕೆ ಮತ್ತು ಮೀನುಗಾರಿಕೆ ಸಹಕಾರ ಸಂಘಗಳ ರಚನೆ ಮತ್ತು ಬಲವರ್ಧನೆಗಾಗಿ 'ಮಾರ್ಗದರ್ಶಿಕ'ವನ್ನು ಬಿಡುಗಡೆ ಮಾಡಿದರು. ಅಲ್ಲದೆ 'ಶ್ವೇತ ಕ್ರಾಂತಿ 2.0' ಮತ್ತು 'ಸಹಕಾರಿಗಳ ನಡುವೆ ಸಹಕಾರ' ಕುರಿತು ಮಾದರಿ ಕಾರ್ಯಾಚರಣೆ ವಿಧಾನ (ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್) ಗಳನ್ನು ಕೂಡ ಬಿಡುಗಡೆ ಮಾಡಿದರು.

ರಾಷ್ಟ್ರೀಯ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು, ಪ್ರಧಾನಮಂತ್ರಿ ಸನ್ಮಾನ್ಯ ಮೋದಿಯವರ ನೇತೃತ್ವದ ಸರ್ಕಾರದ ಮೂರನೇ ಅವಧಿಯ 100 ದಿನಗಳಲ್ಲಿ, ಸಹಕಾರ ಸಚಿವಾಲಯವು 10 ಮಹತ್ವದ ಉಪಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು. ಇವುಗಳಲ್ಲಿ ಮೂರು ಉಪಕ್ರಮಗಳನ್ನು ಇಂದು ಪ್ರಾರಂಭಿಸಲಾಗುತ್ತಿದೆ. 15ಕ್ಕೂ ಹೆಚ್ಚು ವಿಭಿನ್ನ ಚಟುವಟಿಕೆಗಳಲ್ಲಿ ತೊಡಗಿರುವ ಸಹಕಾರ ಚಳವಳಿಯನ್ನು ಸಮಗ್ರ  ದೃಷ್ಟಿಕೋನ ಮತ್ತು ಸಮಾನ ಅಭಿವೃದ್ಧಿಯೊಂದಿಗೆ ದೇಶದ ಪ್ರತಿಯೊಂದು ಗ್ರಾಮಕ್ಕೂ ತಲುಪಿಸಲು ರಾಷ್ಟ್ರೀಯ ಮಟ್ಟದಲ್ಲಿ ಸಹಕಾರ ಸಚಿವಾಲಯದ ಬೇಡಿಕೆ ವರ್ಷಗಳಿಂದ ಇತ್ತು ಎಂದು ಅವರು ಹೇಳಿದರು. ಸುಮಾರು 70 ವರ್ಷಗಳ ಕಾಲ ಈ ಬೇಡಿಕೆಗೆ ಅಧಿಕಾರದ ಕಾರಿಡಾರ್ ಗಳಲ್ಲಿ ಗಮನ ನೀಡಲಾಗಿರಲಿಲ್ಲ. ಆದರೆ ಅಂತಿಮವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ವತಂತ್ರ ಸಹಕಾರ ಸಚಿವಾಲಯವನ್ನು ಸ್ಥಾಪಿಸಲು ನಿರ್ಧರಿಸಿದರು ಎಂದು ಅವರು ತಿಳಿಸಿದರು. ಪ್ರಧಾನಮಂತ್ರಿ ಸನ್ಮಾನ್ಯ ಮೋದಿ ಅವರು ತನಗೆ ದೇಶದ ಮೊದಲ ಸಹಕಾರ ಸಚಿವರಾಗುವ ಗೌರವವನ್ನು ನೀಡಿದ್ದು ನನ್ನ ಅದೃಷ್ಟ ಎಂದು ಶ್ರೀ ಶಾ ಹೇಳಿದರು.

ಸಹಕಾರವು ವ್ಯಕ್ತಿಗಳ ಶಕ್ತಿಯನ್ನು ಒಟ್ಟುಗೂಡಿಸುತ್ತದೆ ಮತ್ತು ಅದನ್ನು ಸಮಾಜದ ಸಾಮರ್ಥ್ಯವಾಗಿ ಪರಿವರ್ತಿಸುತ್ತದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಸಹಕಾರದ ಮಂತ್ರವು ಎಲ್ಲರೂ ಒಗ್ಗೂಡಿ, ಪ್ರತಿಯೊಬ್ಬರ ಉತ್ತಮ ಗುಣಗಳನ್ನು ಹಂಚಿಕೊಳ್ಳಲು, ಪರಸ್ಪರರ ನ್ಯೂನತೆಗಳನ್ನು ಮರೆಮಾಚಲು ಒಟ್ಟಾಗಿ ಕೆಲಸ ಮಾಡಲು ಮತ್ತು ರಾಷ್ಟ್ರದ ಅಭಿವೃದ್ಧಿಯಲ್ಲಿ ಒಂದಾಗಿ ಸಹಾಯ ಮಾಡಲು ಕರೆ ನೀಡುತ್ತದೆ ಎಂದು ಅವರು ಹೇಳಿದರು. ಸಹಕಾರದ ಮಂತ್ರವು ಹಲವೆಡೆ ಪವಾಡದ ಫಲಿತಾಂಶವನ್ನು ತೋರಿಸಿದೆ ಎಂದು ಅವರು ಹೇಳಿದರು, ಆದರೆ ದೀರ್ಘಕಾಲದವರೆಗೆ ಸಹಕಾರಿ ಚಳುವಳಿ ನಮ್ಮ ದೇಶದಲ್ಲಿ ಅಪ್ರಸ್ತುತವಾಗುತ್ತಿದೆ. ಕಳೆದ 70 ವರ್ಷಗಳಲ್ಲಿ ಸಹಕಾರಿ ಸಂಘಗಳಲ್ಲಿ ಮಾಡಬೇಕಾಗಿದ್ದ ಅಗತ್ಯ ಬದಲಾವಣೆಗಳನ್ನು ಮಾಡಲಾಗಿರಲಿಲ್ಲ. ಇದರಿಂದಾಗಿ ಕೆಲವು ರಾಜ್ಯಗಳಲ್ಲಿ ಸಹಕಾರಿ ಸಂಘಗಳು ಅತ್ಯಂತ ಯಶಸ್ವಿಯಾದರೆ ಇನ್ನು ಕೆಲವು ರಾಜ್ಯಗಳಲ್ಲಿ ಅವು ರಾಜ್ಯ ಸರ್ಕಾರಗಳ ದಯೆಯ ಮೇಲೆ ಬದುಕುಳಿಯಬೇಕಾಯಿತು, ಮತ್ತು ಕೆಲವು ರಾಜ್ಯಗಳಲ್ಲಿ ಸಂಪೂರ್ಣವಾಗಿ ಅಳಿದುಹೋದವು ಎಂದು ಶ್ರೀ ಶಾ ಹೇಳಿದರು.

ಸಹಕಾರ ಸಚಿವಾಲಯವನ್ನು ರಚಿಸಿದಾಗ, ದೇಶದ ಪ್ರತಿಯೊಂದು ಜಿಲ್ಲೆ ಮತ್ತು ಹಳ್ಳಿಗಳಲ್ಲಿ ಸಹಕಾರಿ ಸಂಸ್ಥೆಗಳನ್ನು ಪುನಶ್ಚೇತನಗೊಳಿಸುವುದು ಉದ್ದೇಶವಾಗಿತ್ತು ಎಂದು ಕೇಂದ್ರ ಸಹಕಾರ ಸಚಿವರು ಹೇಳಿದರು. ಸಹಕಾರಿ ಕಾನೂನು, ಅದರ ವ್ಯವಸ್ಥೆಗಳು ಮತ್ತು ಸಂಸ್ಕೃತಿ ಕಾಲಮಾನದ ಅವಶ್ಯಕತೆಗಳಿಗೆ ತಕ್ಕಂತೆ ಹೊಸ ಆರಂಭಕ್ಕೆ ತಯಾರಾಗಿರಬೇಕು ಎಂದರು. 140 ಕೋಟಿ ಜನಸಂಖ್ಯೆಯ ದೇಶದಲ್ಲಿ ಉದ್ಯೋಗಾವಕಾಶಗಳನ್ನು ಒದಗಿಸುವುದು, ದೇಶದ ಸಮೃದ್ಧಿಗೆ ಚಾಲನೆ ನೀಡುವುದು ಮತ್ತು ಜನರಿಗೆ ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗುವುದು ಇವೆರಡೂ ಸಹಕಾರ ಸಂಸ್ಥೆಗಳ ಮುಖ್ಯ ಗುರಿಯಾಗಿರಬೇಕು ಎಂದು  ಅವರು ಅಭಿಪ್ರಾಯಪಟ್ಟರು. ಈ ಉದ್ದೇಶದತ್ತ ಕಳೆದ ಮೂರು ವರ್ಷಗಳಲ್ಲಿ ಬಹಳಷ್ಟು ಕೆಲಸ ಮಾಡಲಾಗಿದೆ. ಅದರ ಅಡಿಯಲ್ಲಿ ಇದುವರೆಗೆ 60 ಕ್ಕೂ ಹೆಚ್ಚು ಹೊಸ ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಕಳೆದ 100 ದಿನಗಳಲ್ಲಿ ತೆಗೆದುಕೊಂಡ 10  ಉಪಕ್ರಮಗಳು ಸಹಕಾರಿ ಕ್ಷೇತ್ರವನ್ನು ಬಲವರ್ಧನೆ ಮಾಡುವುದರಲ್ಲಿ ದೊಡ್ಡ ಕೊಡುಗೆ ನೀಡಲಿವೆ ಎಂದು ಶ್ರೀ ಶಾ ಹೇಳಿದರು. ಎರಡು ಲಕ್ಷ ಎಂಪಿಎಸಿಎಸ್ (MPACS), ಹೈನುಗಾರಿಕೆ ಮತ್ತು ಮೀನುಗಾರಿಕೆ ಸಹಕಾರ ಸಂಘಗಳ ಜಂಟಿ ಪ್ರಸ್ತಾಪವನ್ನು ನಾವು ತಯಾರಿಸಿ ದೇಶಾದ್ಯಂತ ಕಳುಹಿಸಿದ್ದೇವೆ ಎಂದು ಅವರು ಹೇಳಿದರು. ಎಲ್ಲಾ ರಾಜ್ಯಗಳು ಅದನ್ನು ಒಪ್ಪಿಕೊಂಡಿವೆ. ಎರಡು ಲಕ್ಷ ಪ್ರಾಥಮಿಕ ಸಹಕಾರ ಸಂಘಗಳು ನೋಂದಾಯಿಸಲ್ಪಟ್ಟ ನಂತರ, ದೇಶದಲ್ಲಿ ಪಿಎಸಿಎಸ್ (PACS), ಹೈನುಗಾರಿಕೆ ಅಥವಾ ಮೀನುಗಾರಿಕೆ ಸಹಕಾರ ಸಂಘವಿಲ್ಲದ ಒಂದೇ ಒಂದು ಪಂಚಾಯತ್ ಇರುವುದಿಲ್ಲ ಎಂದು ಅವರು ಹೇಳಿದರು. ಹೀಗಾದಾಗ, ಸಹಕಾರ ಸಂಘಗಳು ದೇಶದ ಎಲ್ಲೆಡೆ ತಲುಪಲು ಸಾಧ್ಯವಾಗುತ್ತದೆ, ಇದರಿಂದಾಗಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸಹಕಾರ ಸಂಸ್ಥೆಗಳ ನಿರ್ಮಾಣವಾಗುತ್ತದೆ ಮತ್ತು ರಾಜ್ಯ ಸಂಸ್ಥೆಗಳಿಗೂ ಹೊಸ ಶಕ್ತಿ ಮತ್ತು ಉತ್ತೇಜನ ದೊರೆಯುತ್ತದೆ ಎಂದು ಅವರು ಹೇಳಿದರು.

ಹಿಂದಿನ ಕಾಲದಲ್ಲಿ ರಚನೆಯಾದ ಪಿಎಸಿಎಸ್‌ಗಳು (PACS) ಮುಚ್ಚಿಹೋಗಿದ್ದವು, ಆದರೆ ಹೊಸದಾಗಿ ನೋಂದಾಯಿಸಲ್ಪಡುವ ಪಿಎಸಿಎಸ್‌ಗಳಿಗೆ ಅವು ಮಾಡಬಹುದಾದ 25 ವಿಭಿನ್ನ ರೀತಿಯ ಕೆಲಸಗಳನ್ನು ಸೇರಿಸುವ ಮೂಲಕ ಅವುಗಳನ್ನು ಕಾರ್ಯಸಾಧ್ಯ ಘಟಕಗಳನ್ನಾಗಿ ಮಾಡಲಾಗುವುದು ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರು ಹೇಳಿದರು. ಹಿಂದೆ ಪಿಎಸಿಎಸ್ ಗಳು ಕೃಷಿಗಾಗಿ ಅಲ್ಪಾವಧಿ ಸಾಲಗಳನ್ನು ನೀಡುತ್ತಿದ್ದವು. ಆದರೆ ಈಗ ಹೈನುಗಾರಿಕೆ, ಮೀನುಗಾರಿಕೆ, ಗೋದಾಮು, ಅಗ್ಗದ ಧಾನ್ಯದ ಅಂಗಡಿ, ಅಗ್ಗದ ಔಷಧಿ ಅಂಗಡಿ, ಪೆಟ್ರೋಲ್ ಪಂಪ್, LPG ಸಿಲಿಂಡರ್, ನೀರಿನ ವಿತರಣೆ ಇತ್ಯಾದಿಗಳೊಂದಿಗೆ ಪಿಎಸಿಎಸ್ ಗಳನ್ನು ಸಂಪರ್ಕಿಸಲಾಗಿದೆ ಎಂದು ಅವರು ಹೇಳಿದರು. ಇದರಿಂದ, ಪ್ರತಿ ಪಂಚಾಯತ್ ನಲ್ಲಿ ರಚನೆಯಾಗುವ ಪಿಎಸಿಎಸ್ ಗಳು ನಮ್ಮ ಮೂರು ಹಂತದ ಸಹಕಾರಿ ರಚನೆಯನ್ನು ಬಲಪಡಿಸಲು ಕಾರ್ಯನಿರ್ವಹಿಸುತ್ತವೆ.  ಪಿಎಸಿಎಸ್ ಗಳು ಬಲಿಷ್ಠವಾದಾಗ, ಅಥವಾ ಅವುಗಳ ಸಂಖ್ಯೆ ಹೆಚ್ಚಾದಾಗ, ಜಿಲ್ಲಾ ಸಹಕಾರಿ ಬ್ಯಾಂಕುಗಳು ಸ್ವಯಂಚಾಲಿತವಾಗಿ ಬಲಗೊಳ್ಳುತ್ತವೆ, ಮತ್ತು ಜಿಲ್ಲಾ ಸಹಕಾರಿ ಬ್ಯಾಂಕುಗಳು ಬಲಗೊಳ್ಳುವುದರಿಂದ, ರಾಜ್ಯ ಸಹಕಾರಿ ಬ್ಯಾಂಕುಗಳು ಸಹ ಬಲಗೊಳ್ಳುತ್ತವೆ ಎಂದು ಅವರು ಹೇಳಿದರು.

ಶ್ವೇತ ಕ್ರಾಂತಿ 2.0 ರ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (SoP) ಅನ್ನು ಇಂದು ಬಿಡುಗಡೆ ಮಾಡಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಶ್ವೇತ ಕ್ರಾಂತಿ 2.0 ಮಹಿಳೆಯರ ಸ್ವಾವಲಂಬನೆ ಮತ್ತು ಮಹಿಳಾ ಸಬಲೀಕರಣಕ್ಕಾಗಿ ಕೆಲಸ ಮಾಡುತ್ತದೆ ಎಂದು ಹೇಳಿದರು. ಹಾಲು ಉತ್ಪಾದನೆ ಮತ್ತು ವಿಶೇಷವಾಗಿ ಸಹಕಾರಿ ಡೈರಿಗಳೊಂದಿಗೆ ತಾಯಂದಿರು ಮತ್ತು ಸಹೋದರಿಯರು ಸಂಬಂಧ ಹೊಂದಿದ್ದಾರೆ ಎಂದು ಅವರು ಹೇಳಿದರು. ನಮ್ಮ ತಾಯಂದಿರು ಮತ್ತು ಸಹೋದರಿಯರನ್ನು ಬಲಪಡಿಸಲು ಮತ್ತು ಅವರನ್ನು ಸ್ವಾವಲಂಬಿ ಮತ್ತು ಸ್ವತಂತ್ರರನ್ನಾಗಿಸಲು ಡೈರಿ ಕ್ಷೇತ್ರ ಹೊರತುಪಡಿಸಿ ಇತರ ಯಾವ ಕ್ಷೇತ್ರದಿಂದಲೂ ಸಾಧ್ಯವಿಲ್ಲ,. ಗುಜರಾತ್‌ನಲ್ಲಿ 36 ಲಕ್ಷ ಸಹೋದರಿಯರು ಡೈರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಅವರು ಒಟ್ಟು ₹ 60,000 ಕೋಟಿ ವ್ಯವಹಾರ ಮಾಡುತ್ತಿದ್ದಾರೆ ಎಂದು ಶ್ರೀ ಶಾ ಹೇಳಿದರು.

ಇಂದು ಅಮುಲ್ ಇಡೀ ವಿಶ್ವದಲ್ಲೇ ಆಹಾರ ಕ್ಷೇತ್ರದಲ್ಲಿ ಅತ್ಯಂತ ವಿಶ್ವಾಸಾರ್ಹ ಬ್ರಾಂಡ್ ಆಗಿ ಮಾರ್ಪಟ್ಟಿದೆ  ಎಂದು  ಅವರು ಹೇಳಿದರು. ಒಂದೆಡೆ ಶ್ವೇತ ಕ್ರಾಂತಿ 2.0 ಮಹಿಳೆಯರನ್ನು ಸಬಲೀಕರಣಗೊಳಿಸಿದರೆ, ಅಪೌಷ್ಟಿಕತೆಯ ವಿರುದ್ಧದ ಹೋರಾಟಕ್ಕೂ ಶಕ್ತಿ ನೀಡಲಿದೆ ಎಂದರು. ಹಾಲಿನ ಲಭ್ಯತೆಯ ಹೆಚ್ಚಳದಿಂದ, ಅತಿ ದೊಡ್ಡ ಪ್ರಯೋಜನವು ಬಡವರಿಗೆ ಮತ್ತು ಪೌಷ್ಟಿಕಾಂಶ ಕೊರತೆಯಿಂದ ಬಳಲುತ್ತಿರುವ ಮಕ್ಕಳಿಗೆ ಸಿಗುತ್ತದೆ. ಗುಜರಾತ್ನ ಉದಾಹರಣೆಯನ್ನು ಉಲ್ಲೇಖಿಸಿದ ಅವರು, ಹೈನುಗಾರಿಕೆಗೆ ಸಂಬಂಧಿಸಿದ ತಾಯಿ ಯಾವಾಗಲೂ ತನ್ನ ಮಕ್ಕಳಿಗೆ ಸರಿಯಾದ ಪೋಷಣೆಯನ್ನು ಮಾಡುತ್ತಾಳೆ ಎಂದು ಹೇಳಿದರು. ಸರಕಾರಗಳ ಪ್ರಯತ್ನಕ್ಕಿಂತ ಹೆಚ್ಚಾಗಿ ನಮ್ಮ ತಾಯಂದಿರ ಪ್ರಯತ್ನದಿಂದ ಮಾತ್ರ ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಸಾಧ್ಯ ಎಂದು ಶ್ರೀ ಶಾ ಹೇಳಿದರು.

ನಮ್ಮ ಮನೆಗಳಲ್ಲಿ ತಾಯಂದಿರು ಮತ್ತು ಸಹೋದರಿಯರು ಬಹಳಷ್ಟು ಕೆಲಸ ಮಾಡುತ್ತಾರೆ, ಆದರೆ ಅವರನ್ನು ನಿರುದ್ಯೋಗಿಗಳೆಂದು ಪರಿಗಣಿಸಲಾಗಿದೆ.  ಶ್ವೇತ ಕ್ರಾಂತಿ 2.0 ವಿಶೇಷವಾಗಿ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ಕೆಲಸ ಮಾಡಲಿದೆ. ಬ್ಯಾಂಕ್ ಚೆಕ್ ಗಳು ಮಹಿಳೆಯರ ಹೆಸರಿನಲ್ಲಿ ಬಂದರೆ ಅವರು ತುಂಬಾ ಸಂತೋಷಪಡುತ್ತಾರೆ ಎಂದು ಕೇಂದ್ರ ಸಹಕಾರ ಸಚಿವರು ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೈಸರ್ಗಿಕ ಕೃಷಿಗಾಗಿ ಬೃಹತ್ ಅಭಿಯಾನವನ್ನು ಆರಂಭಿಸಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಪಶುಪಾಲನೆ ಮುಂದುವರಿಸುವುದರಿಂದ  ನೈಸರ್ಗಿಕ ಕೃಷಿ ಬಲಗೊಳ್ಳಲಿದೆ ಎಂದ ಅವರು, ಪಶುಗಳ ಸಗಣಿಯಿಂದ ಮಾತ್ರ ನೈಸರ್ಗಿಕ ಕೃಷಿ ಯಶಸ್ವಿಯಾಗುತ್ತದೆ ಎಂದು ಹೇಳಿದರು.

ಕೃಷಿಯೋಗ್ಯ ಭೂಮಿಯ ಫಲವತ್ತತೆ ಹೆಚ್ಚಿಸುವ ಕೆಲಸವೂ ಪಶುಪಾಲನೆಯ ಮೂಲಕ ನಡೆಯಲಿದೆ ಎಂದು ಕೇಂದ್ರ ಸಹಕಾರ ಸಚಿವರು ತಿಳಿಸಿದರು. ಈ ಉದ್ದೇಶಗಳನ್ನು ಒಗ್ಗೂಡಿಸಿ ಶ್ವೇತ ಕ್ರಾಂತಿ 2.0 ಆರಂಭಿಸಲಾಗಿದೆ ಎಂದರು. ಈ ಕಾರ್ಯಕ್ರಮಕ್ಕೆ ಬಜೆಟ್ ಬೆಂಬಲ ದೊರೆಯುತ್ತದೆಯೋ ಇಲ್ಲವೋ ಎಂಬ ಆತಂಕ ಹಲವರಲ್ಲಿದೆ ಎಂದ ಅವರು, ಪಶುಸಂಗೋಪನಾ ಇಲಾಖೆಗೆ ಇದು ಸರ್ಕಾರದ ಅತ್ಯಂತ ಆದ್ಯತೆಯ ಕ್ಷೇತ್ರವಾಗಿದ್ದು, ಈ ಕಾರ್ಯಕ್ರಮಕ್ಕೆ ಸಂಪೂರ್ಣ ಬಜೆಟ್ ಬೆಂಬಲ ದೊರೆಯಲಿದೆ ಎಂದು ಭರವಸೆ ನೀಡಿದರು.

ಶ್ರೀ ಅಮಿತ್ ಶಾ ಅವರು, "ಸಹಕಾರ ಸಂಘಗಳ ನಡುವಿನ ಸಹಕಾರ" ರೂಪದಲ್ಲಿ ಒಂದು ಪ್ರಮುಖ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. ಇದರ ಅಡಿಯಲ್ಲಿ, ಗುಜರಾತಿನ ಪಂಚಮಹಲ್ ಮತ್ತು ಬನಾಸ್ಕಂಥ ಎಂಬ ಎರಡು ಜಿಲ್ಲೆಗಳಲ್ಲಿ ಪ್ರಯೋಗಗಳನ್ನು ನಡೆಸಿದ್ದೇವೆ. ಸಹಕಾರಿ ಬ್ಯಾಂಕ್ಗಳಲ್ಲಿ ಸಹಕಾರಿ ಕ್ಷೇತ್ರದ ಎಲ್ಲಾ ಸಂಸ್ಥೆಗಳ ಬ್ಯಾಂಕ್ ಖಾತೆಗಳನ್ನು ತೆರೆಯಲು ನಿರ್ಧರಿಸಿದ್ದೇವೆ. ಇದರ ಜೊತೆಗೆ, ಪ್ರಾಥಮಿಕ ಸಹಕಾರಿ ಸಂಘ ಮತ್ತು ಹಾಲು ಉತ್ಪಾದಕ ಸಮಿತಿಗೆ ಸಂಬಂಧಿಸಿದ ತಾಯಂದಿರು ಮತ್ತು ಸಹೋದರಿಗಳಿಗೆ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಗಳನ್ನು ನೀಡಲಾಯಿತು. ಇದು ಅವರನ್ನು ಆರ್ಥಿಕವಾಗಿ ಸಬಲರಾಗುವಂತೆ ಮಾಡಿದೆ ಎಂದು ಹೇಳಿದರು. ಇದರ ಅಡಿಯಲ್ಲಿ, ಇದುವರೆಗೆ ಸಹಕಾರಿ ಬ್ಯಾಂಕ್ ಗಳಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ ಮತ್ತು ಕೇವಲ ಎರಡು ಜಿಲ್ಲೆಗಳಲ್ಲಿ ಮಾತ್ರ ರೂ. 550 ಕೋಟಿಗೂ ಹೆಚ್ಚು ಠೇವಣಿ ಸಂಗ್ರಹವಾಗಿದೆ. 1732 ಮೈಕ್ರೋ ATMಗಳನ್ನು ತೆರೆಯಲಾಯಿತು ಮತ್ತು 20,000 ಹೊಸ ಕ್ರೆಡಿಟ್ ಕಾರ್ಡ್ ಗಳನ್ನು ವಿತರಿಸಲಾಯಿತು. ಹೊಸ ಕ್ರೆಡಿಟ್ ಕಾರ್ಡ್ ಗಳನ್ನು ಬಳಸಿಕೊಂಡು ಸುಮಾರು 24 ಲಕ್ಷ ಮೌಲ್ಯದ ಡಿಜಿಟಲ್ ವಹಿವಾಟುಗಳು ನಡೆದಿವೆ. ಇದುವರೆಗೆ ಗುಜರಾತಿನಲ್ಲಿ ಸಂಪೂರ್ಣವಾಗಿ ಜಾರಿಗೆ ಬಂದಿಲ್ಲವಾದರೂ, ಇದುವರೆಗೆ 9 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ತೆರೆಯಲಾಗಿದೆ ಮತ್ತು ಸಹಕಾರಿ ಬ್ಯಾಂಕ್ಗಳಲ್ಲಿ ಸುಮಾರು ರೂ. 4000 ಕೋಟಿ ಠೇವಣಿ ಹೆಚ್ಚಾಗಿದೆ. ಇದರ ಅಡಿಯಲ್ಲಿ, ಒಟ್ಟು 2600 ಮೈಕ್ರೋ ATMಗಳನ್ನು ವಿತರಿಸಲಾಗಿದೆ. ಈಗ ನಾವು ಅದನ್ನು ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುತ್ತಿದ್ದೇವೆ ಎಂದು ಅವರು ಹೇಳಿದರು.

ಸಹಕಾರ ಸಂಘಗಳ ನಡುವಿನ ಸಹಕಾರ ಕ್ರಮಕ್ಕಾಗಿ ಜಿಲ್ಲೆಯನ್ನು ಘಟಕವಾಗಿ ಮಾಡಲು ನಿರ್ಧರಿಸಿದ್ದೇವೆ ಎಂದು ಕೇಂದ್ರ ಸಹಕಾರ ಸಚಿವರು ಹೇಳಿದರು. ಸಹಕಾರಿ  ವ್ಯವಹಾರ  ಉತ್ತಮವಾಗಿರುವ ಜಿಲ್ಲೆಗಳಲ್ಲಿ ಈ ಕಲ್ಪನೆಯನ್ನು ಜಾರಿಗೆ ತರಲಾಗುವುದು. ಬಿಹಾರದ ಪ್ರತಿಯೊಂದು ಜಿಲ್ಲೆ ಅಥವಾ ತಾಲ್ಲೂಕಿನಲ್ಲೂ ಸಹಕಾರಿ ಸಂಘಗಳನ್ನು ನೀವು ಕಾಣಬಹುದು ಎಂದು ಅವರು ಹೇಳಿದರು. ಕೇಂದ್ರ ಸಹಕಾರ ಸಚಿವಾಲಯವು ದೇಶದ ಪ್ರತಿಯೊಂದು ಪಂಚಾಯತ್, ಪ್ರತಿಯೊಂದು ತಾಲ್ಲೂಕು, ಪ್ರತಿಯೊಂದು ಜಿಲ್ಲೆ ಮತ್ತು ಪ್ರತಿಯೊಂದು ರಾಜ್ಯದ ಡೇಟಾಬೇಸ್ ಹೊಂದಿದೆ ಮತ್ತು ರಾಷ್ಟ್ರೀಯ ಡೇಟಾಬೇಸ್ ಕೂಡ ಹೊಂದಿದೆ. ಇದರ ಮೂಲಕ ಎಷ್ಟು ಸಹಕಾರಿ ಸಂಘಗಳಿವೆ, ಅವುಗಳು ಯಾವ ಪ್ರಕಾರ ಮತ್ತು ಅವುಗಳ ಆಡಿಟ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿದುಕೊಳ್ಳಬಹುದು. ಜಿಲ್ಲೆ/ರಾಜ್ಯ ಸಹಕಾರಿ ನೋಂದಣಿ ಮತ್ತು ಜಿಲ್ಲೆ ಸಹಕಾರಿ ಬ್ಯಾಂಕ್ ಶಾಖೆಗಳಲ್ಲಿ ಸಹಕಾರಿ ಲಭ್ಯವಾಗುವಂತೆ ಮಾಡಿದ್ದೇವೆ ಎಂದು ಅವರು ಹೇಳಿದರು. ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ (NDDB) ಹೊಸ ಡೈರಿಗಳನ್ನು ತೆರೆಯಲು ಪ್ರಯತ್ನಿಸುತ್ತದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಇದಕ್ಕಾಗಿ ವೈಜ್ಞಾನಿಕ ವ್ಯವಸ್ಥೆ ಮಾಡಿದ್ದು, ಎಲ್ಲ ರೀತಿಯ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡುತ್ತಿವೆ ಎಂದರು.

ಕೇಂದ್ರ ಸಹಕಾರ ಸಚಿವರು ಭಾರತವು ಶ್ವೇತ ಕ್ರಾಂತಿ ಕ್ಷೇತ್ರದಲ್ಲಿ ನಕ್ಷತ್ರವಾಗಿ ಹೊರಹೊಮ್ಮಿದೆ ಎಂದು ಹೇಳಿದರು. ಭಾರತವು ವಿಶ್ವದ ಅತಿ ದೊಡ್ಡ ಹಾಲು ಉತ್ಪಾದಕ ರಾಷ್ಟ್ರವಾಗಿದೆ. ಪಶು ಮೇವು, ಬೀಜಗಳು, ಕೃತಕ ಗರ್ಭಧಾರಣೆ, ಗೋಮಯದಿಂದ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಮತ್ತು ಆರೋಗ್ಯದ ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಬದಲಾವಣೆ ಸಂಭವಿಸಿದೆ ಎಂದು ಅವರು ಹೇಳಿದರು ಇದನ್ನು ಮತ್ತಷ್ಟು ಬಲಪಡಿಸುವ ಮೂಲಕ, ವಿದೇಶಿ ವಿನಿಮಯವನ್ನು ಸಹ ಹಾಲಿನ ಮೂಲಕ ಗಳಿಸಬಹುದು ಎಂದು ಅವರು ಹೇಳಿದರು. ನಾವು ನಮ್ಮ ಉತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆಗೆ ರಫ್ತು ಮಾಡುತ್ತೇವೆ ಮತ್ತು ಇದಕ್ಕಾಗಿ, ಭಾರತ ಸರ್ಕಾರವು ಪರೀಕ್ಷಾ ಉಪಕರಣಗಳು, ಸಾಮೂಹಿಕ ಹಾಲು ಸಂಗ್ರಹ ಮತ್ತು ಹಾಲು ಉಪಕರಣ ಮೂಲಸೌಕರ್ಯಕ್ಕೆ ಸಂಬಂಧಿಸಿದ 38 ಉಪಕರಣಗಳ ಸ್ವಾವಲಂಬಿ ಉತ್ಪಾದನೆಗಾಗಿ ಒಂದು ವಿಜ್ಞಾನ ಕಾರ್ಯಕ್ರಮವನ್ನು ಆಯೋಜಿಸಿದೆ. ಇದನ್ನು ಪ್ರಧಾನಮಂತ್ರಯವರು ಮುಂದಿನ ದಿನಗಳಲ್ಲಿ ನಮ್ಮ ಮುಂದೆ ಪ್ರಸ್ತುತಪಡಿಸುತ್ತಾರೆ. ನೆದರ್ಲ್ಯಾಂಡ್ಸ್ ಅಥವಾ ಜಪಾನ್ನಿಂದ ಯಾವುದೇ ಹಾಲು ಯಂತ್ರಗಳನ್ನು ನಾವು ಇನ್ನು ಮುಂದೆ ಆಮದು ಮಾಡಿಕೊಳ್ಳುವ ಅಗತ್ಯವಿಲ್ಲ. ಅವುಗಳ 100% ಉತ್ಪಾದನೆ ಭಾರತದಲ್ಲಿ ನಡೆಯುತ್ತದೆ. ಒಂದು ರೀತಿಯಲ್ಲಿ, ನಾವು ಹಾಲು ಕ್ಷೇತ್ರದಲ್ಲಿ ಸಂಪೂರ್ಣ ಸ್ವಾವಲಂಬಿಯಾಗುವ ಗುರಿ ಹೊಂದಿದ್ದೇವೆ ಎಂದು ಅವರು ಹೇಳಿದರು.

 

*****



(Release ID: 2056940) Visitor Counter : 33