ಸಹಕಾರ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ, ಗುರುವಾರ ನವದೆಹಲಿಯಲ್ಲಿ ,100 ದಿನಗಳಲ್ಲಿ ಸಹಕಾರ ಸಚಿವಾಲಯದಿಂದ ಕೈಗೊಂಡ ಉನ್ನತ ಕಾರ್ಯಕ್ರಮಗಳ ಕುರಿತು  ರಾಷ್ಟ್ರೀಯ ಸಮ್ಮೇಳನದಲ್ಲಿ  ಉಪನ್ಯಾಸ ನೀಡಲಿದ್ದಾರೆ


ಶ್ರೀ ಅಮಿತ್ ಶಾ ಅವರು 2 ಲಕ್ಷ ಹೊಸ MPACS, ಹಾಲು ಮತ್ತು ಮೀನುಗಾರಿಕೆ ಸಹಕಾರ ಸಂಘಗಳ ಸ್ಥಾಪನೆ ಮತ್ತು ಬಲಪಡಿಸುವ ಕುರಿತು ‘ಮಾರ್ಗದರ್ಶಿಕೆಯನ್ನು’, ಶ್ವೇತ ಕ್ರಾಂತಿ 2.0 ಮತ್ತು ಸಹಕಾರ ಸಂಘಗಳಲ್ಲಿ ಸಹಕಾರದ ಕುರಿತ ಮಾದರಿ  ಕಾರ್ಯವಿಧಾನವನ್ನು ಬಿಡುಗಡೆ ಮಾಡುತ್ತಾರೆ.

ಪ್ರಧಾನಮಂತ್ರಿ ಮೋದಿಯವರ ನೇತೃತ್ವದಲ್ಲಿ ಮತ್ತು ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಕೇಂದ್ರ ಸರ್ಕಾರ ಎಲ್ಲಾ ಮಟ್ಟಗಳಲ್ಲಿ ಸಹಕಾರ ಸಂಘಗಳನ್ನು ಬಲಪಡಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ.

ಪ್ರಧಾನಮಂತ್ರಿ  ಮೋದಿಯವರ ‘ಸಹಕಾರ್ ಸೇ ಸಮೃದ್ಧಿ’ವಿಷನ್ ನಂತೆ, ದೇಶದಲ್ಲಿ ಸಹಕಾರಿ ಚಳುವಳಿ ಸ್ಥಿರವಾಗಿ ಸುಸ್ಥಿರತೆಯತ್ತ ಸಾಗುತ್ತಿದೆ

ಮುಂದಿನ ಐದು ವರ್ಷಗಳಲ್ಲಿ 70,000 ಹೊಸ ವಿವಿಧೋದ್ದೇಶ PACS  ಸ್ಥಾಪಿಸುವ ಗುರಿ - 2026 ರ ವೇಳೆಗೆ 22,752 ಮತ್ತು 2029 ರ ವೇಳೆಗೆ 47,248

ಮುಂದಿನ ಐದು ವರ್ಷಗಳಲ್ಲಿ ಸುಮಾರು 56,000 ಹೊಸ ವಿವಿಧೋದ್ದೇಶ ಡೈರಿ ಸಹಕಾರ ಸಂಘಗಳನ್ನು (MDCS) ಸ್ಥಾಪಿಸುವ ಗುರಿ

ಮುಂದಿನ ಐದು ವರ್ಷಗಳಲ್ಲಿ ಸುಮಾರು 6,000 ಹೊಸ ಮೀನುಗಾರಿಕಾ ಸಹಕಾರ ಸಂಘಗಳನ್ನು ಸ್ಥಾಪಿಸುವ ಗುರಿ

ಅಸ್ತಿತ್ವದಲ್ಲಿರುವ 46,500 ಡೈರಿ ಸಹಕಾರ ಸಂಘಗಳು ಮತ್ತು 5,500 ಮೀನುಗಾರಿಕೆಯನ್ನು ಬಲಪಡಿಸುವ ಗುರಿ

ಸುಲಭ ಸಾಲ ಮತ್ತು ಇತರ ಸೇವೆಗಳ ಲಭ್ಯತೆಯನ್ನು ಪಂಚಾಯತ್ ಅಥವಾ ಗ್ರಾಮ ಮಟ್ಟದಲ್ಲಿ ಒದಗಿಸಲಾಗುತ್ತದೆ

Posted On: 18 SEP 2024 8:14PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು 2024ರ ಸೆಪ್ಟೆಂಬರ್ 19 ರಂದು ನವದೆಹಲಿಯ ಪೂಸಾದಲ್ಲಿರುವ ICAR ಕನ್ವೆನ್ಷನ್ ಸೆಂಟರ್ ನಲ್ಲಿಆಯೋಜಿಸಲಾಗಿರುವ ರಾಷ್ಟ್ರೀಯ ಮಟ್ಟದ ಸಮ್ಮೇಳನದಲ್ಲಿ ಸಹಕಾರ ಸಚಿವಾಲಯದ 100 ದಿನಗಳಲ್ಲಿ ಕೈಗೊಳ್ಳಲಾದ ಹಲವು ಪರಿವರ್ತನಾತ್ಮಕ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಸಮ್ಮೇಳನದ ಮುಖ್ಯ ಅಧಿವೇಶನದಲ್ಲಿ, ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು "ಸಹಕಾರ್-ಸೇ-ಸಮೃದ್ಧಿ" ಎಂಬ ಥೀಮ್ ಅಡಿಯಲ್ಲಿ ಸಚಿವಾಲಯದ "100 ದಿನಗಳ ಯೋಜನೆಗಳನ್ನು" ಉದ್ಘಾಟಿಸಲಿದ್ದಾರೆ. ಅವರು ಅಸಂಪರ್ಕಿತ ಗ್ರಾಮಗಳು/ಪಂಚಾಯತಿಗಳಲ್ಲಿ 2 ಲಕ್ಷ ಹೊಸ ಎಂಪಿಎಸಿಎಸ್ (MPACS), ಪ್ರಾಥಮಿಕ ಹೈನುಗಾರಿಕೆ ಮತ್ತು ಮೀನುಗಾರಿಕೆ ಸಹಕಾರಿ ಸಂಘಗಳ ರಚನೆ ಮತ್ತು ಬಲವರ್ಧನೆಗಾಗಿ 'ಮಾರ್ಗದರ್ಶಿಕ', ಶ್ವೇತ ಕ್ರಾಂತಿ 2.0 ಮತ್ತು ಸಹಕಾರಿಗಳ ನಡುವಿನ ಸಹಕಾರಕ್ಕಾಗಿ ಮಾದರಿ ಕಾರ್ಯಾವಿಧಾನವನ್ನೂ ಉದ್ಘಾಟಿಸಲಿದ್ದಾರೆ. ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಹಾಗೂ ಪಂಚಾಯತ್ ರಾಜ್ ಸಚಿವ ಶ್ರೀ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಾಲನ್ ಸಿಂಗ್ ಅವರು ಇತರ ಗಣ್ಯರೊಂದಿಗೆ ಉಪಸ್ಥಿತರಿರಲಿದ್ದಾರೆ.

ಸನ್ಮಾನ್ಯ ಪ್ರಧಾನಮಂತ್ರಿ  ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಮತ್ತು ಕೇಂದ್ರ ಗೃಹ ಸಚಿವ ಹಾಗೂ ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರ  ಸಮರ್ಥ ಮಾರ್ಗದರ್ಶನದಲ್ಲಿ, ಸರ್ಕಾರವು ಎಲ್ಲಾ ಮಟ್ಟಗಳಲ್ಲಿ, ವಿಶೇಷವಾಗಿ ತಳಮಟ್ಟದಲ್ಲಿ ಸಹಕಾರಿ ಸಂಘಗಳನ್ನು ಬಲಪಡಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಸನ್ಮಾನ್ಯ ಪ್ರಧಾನಮಂತ್ರಿ  ಶ್ರೀ ನರೇಂದ್ರ ಮೋದಿಯವರ 'ಸಹಕಾರ್ ಸೇ ಸಮೃದ್ಧಿ' ವಿಷನ್ ನಿಂದ ಪ್ರೇರಿತವಾಗಿ, ದೇಶದಲ್ಲಿ ಸಹಕಾರಿ ಚಳವಳಿಯು ನಿರಂತರವಾಗಿ ಸುಸ್ಥಿರತೆಯತ್ತ ಸಾಗುತ್ತಿದೆ ಮತ್ತು ನಮ್ಮ ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬಾಗಿ ನಿರ್ಣಾಯಕ ಪಾತ್ರವನ್ನು ವಹಿಸಲಿದೆ. ಸನ್ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿಷನ್ ಅಡಿಯಲ್ಲಿ ಮತ್ತು ಸಹಕಾರ ಸಚಿವಾಲಯದ  ಮಾರ್ಗದರ್ಶನದಲ್ಲಿ IFFCO ಸಹ ಈ ವರ್ಷದ ಕೊನೆಯಲ್ಲಿ ದೆಹಲಿಯಲ್ಲಿ ICA ಜಾಗತಿಕ ಸಹಕಾರಿ ಸಮ್ಮೇಳನ 2024 ಅನ್ನು ಆಯೋಜಿಸಲಿದೆ.  ಸಹಕಾರಿ ಸಂಘಗಳ ಸುತ್ತ ನಿರ್ಮಿಸಲ್ಪಟ್ಟ ವಿಶ್ವದ ಅತಿದೊಡ್ಡ ಗ್ರಾಮೀಣ ಆರ್ಥಿಕತೆಗಳ ಕುರಿತು ಸಹಕಾರ ಸಚಿವಾಲಯದ ಮುಂದಿನ ಕ್ರಿಯಾ ಯೋಜನೆಯನ್ನು ಈ ಸಮ್ಮೇಳನವು ರೂಪಿಸಲಿದೆ.

ಇಂದು 290 ಮಿಲಿಯನ್ ಜನರು ನೇರವಾಗಿ ಸಹಕಾರಿ ವಲಯದೊಂದಿಗೆ ತೊಡಗಿಸಿಕೊಂಡಿದ್ದಾರೆ, ಇದರ ಸಮುದಾಯ-ಆಧಾರಿತ ಆರ್ಥಿಕ ಭದ್ರತೆ ಮತ್ತು ಜೀವನೋಪಾಯ ಅವಕಾಶಗಳಿಂದ ಪ್ರಯೋಜನ ಪಡೆಯುತ್ತಿದ್ದಾರೆ. ಸಮ್ಮೇಳನವು 2,00,000 ವಿವಿಧೋದ್ದೇಶ ಪ್ರಾಥಮಿಕ ಕೃಷಿ ಕ್ರೆಡಿಟ್ ಸೊಸೈಟಿಗಳ (MPACS) ಸ್ಥಾಪನೆ, "ಸಹಕಾರಿಗಳ ನಡುವೆ ಸಹಕಾರ," ಮತ್ತು "ಶ್ವೇತ ಕ್ರಾಂತಿ 2.0" ಕುರಿತು ಮೂರು ತಾಂತ್ರಿಕ ಅಧಿವೇಶನಗಳನ್ನು ಒಳಗೊಂಡಿರುತ್ತದೆ. ಪ್ರತಿ ಪಂಚಾಯತ್ ನಲ್ಲಿ ಹೊಸ ವಿವಿಧೋದ್ದೇಶ PACS, ಡೈರಿ ಮತ್ತು ಮೀನುಗಾರಿಕಾ ಸಹಕಾರ ಸಂಘಗಳ ರಚನೆ ಮತ್ತು ಬಲವರ್ಧನೆಗೆ ಮಾರ್ಗದರ್ಶಿಕಾ (ಕ್ರಿಯ ಯೋಜನೆ):

ದೇಶದಲ್ಲಿ ಸುಮಾರು 2.7 ಲಕ್ಷ ಗ್ರಾಮ ಪಂಚಾಯಿತಿಗಳಿವೆ, ಆದರೆ ಇನ್ನೂ ಅನೇಕ ಪಂಚಾಯಿತಿಗಳು ಪಿಎಸಿಎಸ್, ಡೈರಿ, ಮೀನುಗಾರಿಕಾ ಸಹಕಾರ ಸಂಘಗಳ ವ್ಯಾಪ್ತಿಗೆ ಬರಬೇಕಿದೆ. ದೇಶದ ಸಮಗ್ರ ಮತ್ತು ಸಮತೋಲಿತ ಅಭಿವೃದ್ಧಿಯಲ್ಲಿ ಈ ಪ್ರಾಥಮಿಕ ಹಂತದ ಸಹಕಾರಿ ಸಂಸ್ಥೆಗಳು ನಿರ್ವಹಿಸುವ ಪ್ರಮುಖ ಪಾತ್ರವನ್ನು ಗಮನದಲ್ಲಿಟ್ಟುಕೊಂಡು, ಭಾರತ ಸರ್ಕಾರವು ದೇಶದಲ್ಲಿನ ವ್ಯಾಪ್ತಿಗೆ ಒಳಪಡದ ಗ್ರಾಮ ಪಂಚಾಯತ್‌ಗಳಲ್ಲಿ ಹೊಸ ವಿವಿಧೋದ್ದೇಶ PACS, ಡೈರಿ ಮತ್ತು ಮೀನುಗಾರಿಕಾ ಸಹಕಾರ ಸಂಘಗಳ ರಚನೆಯ ಯೋಜನೆಯನ್ನು ಅನುಮೋದಿಸಿದೆ. ಕಾಲಮಿತಿಯಲ್ಲಿ ಅದರ ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು, ನಬಾರ್ಡ್, NDDB ಮತ್ತು NFDB ಸಹಯೋಗದೊಂದಿಗೆ ಸಹಕಾರ ಸಚಿವಾಲಯವು ‘ಮಾರ್ಗದರ್ಶಿಕಾ’ ಅನ್ನು ಸಿದ್ಧಪಡಿಸಿದೆ. ಹೊಸ ಬಹುಪಯೋಗಿ ಸಹಕಾರ ಸಂಘಗಳ ರಚನೆ ಮತ್ತು ಬಲವರ್ಧನೆಯು ಅವುಗಳಿಗೆ ಸಂಬಂಧಿಸಿದ ಕೋಟ್ಯಂತರ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪ್ರಯೋಜನವನ್ನು ನೀಡುತ್ತದೆ. ಇದಲ್ಲದೆ, ಇದು ದೇಶದ ಸಂಪೂರ್ಣ ಗ್ರಾಮೀಣ ಆರ್ಥಿಕತೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.

"ಶ್ವೇತ ಕ್ರಾಂತಿ 2.0" ಯೋಜನೆಯೂ ಇತರ ವಿಷಯಗಳ ಜೊತೆಗೆ, ಮಹಿಳೆಯರನ್ನು ಸಬಲೀಕರಣಗೊಳಿಸುವುದು, ಉದ್ಯೋಗ ಸೃಷ್ಟಿಸುವುದು ಮತ್ತು ಸಹಕಾರಿ ವ್ಯಾಪ್ತಿಯನ್ನು ವಿಸ್ತರಿಸುವುದನ್ನು ಗುರಿಯಾಗಿಟ್ಟುಕೊಂಡಿದೆ. ಐದನೇ ವರ್ಷದ ಅಂತ್ಯದ ವೇಳೆಗೆ ಹೈನುಗಾರಿಕೆ ಸಹಕಾರಿ ಸಂಘಗಳು ದೈನಂದಿನ 1,000 ಲಕ್ಷ ಕಿಲೋಗ್ರಾಂ ಹಾಲನ್ನು ಸಂಗ್ರಹಿಸುವ ನಿರೀಕ್ಷೆಯಿದೆ, ಇದು ಗ್ರಾಮೀಣ ಉತ್ಪಾದಕರ ಜೀವನೋಪಾಯವನ್ನು ಗಣನೀಯವಾಗಿ ಸುಧಾರಿಸಲಿದೆ.ಈ ಉಪಕ್ರಮವು ತನ್ನ ಗುರಿಯನ್ನು ಸಾಧಿಸಲು ಅಸ್ತಿತ್ವದಲ್ಲಿರುವ ಕಾರ್ಯಕ್ರಮಗಳ ಪ್ರಯೋಜನವನ್ನು ಬಳಸಿಕೊಳ್ಳಲಿದೆ, ಇವುಗಳಲ್ಲಿ ಹೈನುಗಾರಿಕೆ ಸಂಸ್ಕರಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಧಿ (DIDF), ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಕಾರ್ಯಕ್ರಮ (NPDD) ಹಾಗೂ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯ ಪ್ರಸ್ತಾಪಿತ ಯೋಜನೆಯಾದ NPDD 2.0 ಸೇರಿವೆ.

ಮುಂದಿನ ಐದು ವರ್ಷಗಳಲ್ಲಿ ಸಹಕಾರ ಸಚಿವಾಲಯವು 70,000 ಹೊಸ ವಿವಿಧೋದ್ದೇಶ PACS ಸ್ಥಾಪಪಿಸು ಗುರಿಯನ್ನು ಹೊಂದಿದೆ - 2026 ರ ವೇಳೆಗೆ 22,752 ಮತ್ತು 2029 ರ ವೇಳೆಗೆ 47,248, 56,500 ಹೊಸ ವಿವಿಧೋದ್ದೇಶ ಡೈರಿ ಸಹಕಾರ ಸಂಘಗಳು (MDCS) ಮತ್ತು 6,000 ಹೊಸ ಮೀನುಗಾರಿಕೆ ಸಹಕಾರಿ ಸಂಘಗಳ ಸ್ಥಾಪನೆಯನ್ನು ಗುರಿಯಾಗಿಟ್ಟುಕೊಂಡಿದೆ. ಇದಲ್ಲದೆ, 46,500 ಅಸ್ತಿತ್ವದಲ್ಲಿರುವ ಹೈನುಗಾರಿಕೆ ಸಹಕಾರಿ ಸಂಘಗಳು ಮತ್ತು ಸುಮಾರು 5,500 ಅಸ್ತಿತ್ವದಲ್ಲಿರುವ ಮೀನುಗಾರಿಕೆ ಸಹಕಾರಿ ಸಂಘಗಳನ್ನು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (PMMSY) ಮುಂತಾದ ಅಸ್ತಿತ್ವದಲ್ಲಿರುವ ಭಾರತ ಸರ್ಕಾರದ ಯೋಜನೆಗಳ ಮೂಲಕ ಬಲಪಡಿಸಲಾಗುವುದು. ಇದಕ್ಕೆ ಹೆಚ್ಚುವರಿಯಾಗಿ, ರಾಜ್ಯ ಸರ್ಕಾರಗಳು 25,000 ಹೊಸ PACS, ಹೈನುಗಾರಿಕೆ, ಮತ್ತು ಮೀನುಗಾರಿಕೆ ಸಹಕಾರಿ ಸಂಘಗಳನ್ನು ರಚಿಸುವ ಮೂಲಕ ಕೊಡುಗೆ ನೀಡಲಿವೆ. ಪಂಚಾಯತ್ ಅಥವಾ ಗ್ರಾಮ ಮಟ್ಟದಲ್ಲಿ ಸುಲಭ ಸಾಲ ಮತ್ತು ಇತರ ಸೇವೆಗಳ ಲಭ್ಯತೆಯನ್ನು ಒದಗಿಸಲಾಗುವುದು.

ಈ ಶೃಂಗ ಸಭೆಯು ರೈತರಿಗೆ ಪ್ರಯೋಜನಕಾರಿಯಾಗಿರುತ್ತದೆ, ಏಕೆಂದರೆ ಇದು ಅವರ ಜೀವನೋಪಾಯವನ್ನು ಸ್ಥಿರಗೊಳಿಸುವ ಮಾರ್ಗಗಳನ್ನು ಹುಡುಕುತ್ತದೆ. ಗ್ರಾಮೀಣಾಭಿವೃದ್ಧಿ, ಕೃಷಿ ಉತ್ಪಾದಕತೆ ಹೆಚ್ಚಿಸುವುದು ಮತ್ತು ಹಾಲು ಉತ್ಪಾದನೆ ಹೆಚ್ಚಿಸುವುದರ ಮೇಲೆ ಗಮನ ಹರಿಸುವುದರ ಜೊತೆಗೆ ಅವರ ಅಭಿವೃದ್ಧಿಗಾಗಿ ಹೆಚ್ಚುವರಿ ಆದಾಯದ ಮೂಲಗಳನ್ನು ಒದಗಿಸುತ್ತದೆ. ಈ ಒಂದು ದಿನದ ಶೃಂಗಸಭೆಯು ಈ ಗುರಿಗಳನ್ನು ಮುನ್ನಡೆಸಲು, ಸಹಯೋಗದ ಪರಿಹಾರಗಳನ್ನು ಬೆಳೆಸಲು ಮತ್ತು ದೇಶಾದ್ಯಂತ ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸಲು ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.

ಈ ಕಾರ್ಯಕ್ರಮದಲ್ಲಿ 2000 ಕ್ಕೂ ಹೆಚ್ಚು ಅತಿಥಿಗಳು ಭಾಗವಹಿಸಲಿದ್ದಾರೆ, ಇದರಲ್ಲಿ ರಾಷ್ಟ್ರೀಯ ಸಹಕಾರಿ ಒಕ್ಕೂಟಗಳ ಅಧ್ಯಕ್ಷರು/ವ್ಯವಸ್ಥಾಪಕ ನಿರ್ದೇಶಕರು, ಸಚಿವಾಲಯಗಳ ಹಿರಿಯ ಅಧಿಕಾರಿಗಳು, ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸಹಕಾರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸಹಕಾರಿ ಸಂಘಗಳ ನಿಬಂಧಕರು, ನಬಾರ್ಡ್, FCI, NDDB, ಮತ್ತು NFDB ಮುಂತಾದ ಇತರ ಸಂಬಂಧಿತ ಸಂಸ್ಥೆಗಳ ಅಧಿಕಾರಿಗಳು ಸೇರಿದ್ದಾರೆ.

 

*****


(Release ID: 2056685) Visitor Counter : 64