ಸಂಪುಟ
ಪ್ರಧಾನ ಮಂತ್ರಿ ಅನ್ನದಾತ ಆಯ್ ಸಂರಕ್ಷಣಾ ಅಭಿಯಾನ (ಪಿ.ಎಂ-ಆಶಾ) ಯೋಜನೆಯ ಮುಂದುವರಿಕೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ
Posted On:
18 SEP 2024 3:16PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ರೈತರಿಗೆ ಲಾಭದಾಯಕ ಬೆಲೆಗಳನ್ನು ಒದಗಿಸಲು ಮತ್ತು ಗ್ರಾಹಕರಿಗೆ ಅಗತ್ಯ ವಸ್ತುಗಳ ಬೆಲೆ ಏರಿಳಿತವನ್ನು ನಿಯಂತ್ರಿಸಲು ಪ್ರಧಾನ ಮಂತ್ರಿ ಅನ್ನದಾತ ಆಯ್ ಸಂರಕ್ಷಣಾ ಅಭಿಯಾನದ (ಪಿ.ಎಂ-ಆಶಾ) ಯೋಜನೆಯ ಮುಂದುವರಿಕೆಗೆ ಅನುಮೋದನೆ ನೀಡಿದೆ.
2025-26 ರ ಅವಧಿ ವರೆಗಿನ 15 ನೇ ಹಣಕಾಸು ಆಯೋಗದ ಒಟ್ಟು ಹಣಕಾಸಿನ ಹೊರಹೋಗುವಿಕೆಯು ರೂ. 35,000 ಕೋಟಿ ಆಗಿರುತ್ತದೆ.
ರೈತರು ಮತ್ತು ಗ್ರಾಹಕರಿಗೆ ಹೆಚ್ಚು ಪರಿಣಾಮಕಾರಿಯಾಗಿ ಸೇವೆ ಸಲ್ಲಿಸಲು ಸರ್ಕಾರವು ಪಿ.ಎಂ-ಆಶಾ ಯೋಜನೆಯಲ್ಲಿ ಬೆಲೆ ಬೆಂಬಲ ಯೋಜನೆ (ಪಿ.ಎಸ್.ಎಸ್.) ಮತ್ತು ಬೆಲೆ ಸ್ಥಿರೀಕರಣ ನಿಧಿ (ಪಿ.ಎಸ್.ಎಫ್.) ಯೋಜನೆಗಳನ್ನು ಒಂದಾಗಿ ಏಕೀಕರಿಸಲಾಗಿದೆ. ಸಂಯೋಜಿತ ಪಿ.ಎಂ-ಆಶಾ ಯೋಜನೆಯು ಅನುಷ್ಠಾನದಲ್ಲಿ ಹೆಚ್ಚು ಪರಿಣಾಮಕಾರಿ ಯಾಗಿರುತ್ತದೆ. ಇದು ರೈತರಿಗೆ ಅವರ ಉತ್ಪನ್ನಗಳಿಗೆ ಲಾಭದಾಯಕ ಬೆಲೆಗಳನ್ನು ಒದಗಿಸಲು ಸಹಾಯ ಮಾಡುತ್ತದೆ. ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಉತ್ಪನ್ನಗಳ ಲಭ್ಯತೆಯನ್ನು ಖಾತ್ರಿಪಡಿಸುವ ಮೂಲಕ ಅಗತ್ಯ ವಸ್ತುಗಳ ಬೆಲೆ ಏರಿಳಿತವನ್ನು ನಿಯಂತ್ರಿಸುತ್ತದೆ. ಪಿ.ಎಂ-ಆಶಾ ಯೋಜನೆಯು ಈಗ ಬೆಲೆ ಬೆಂಬಲ ಯೋಜನೆ (ಪಿ.ಎಸ್.ಎಸ್) , ಬೆಲೆ ಸ್ಥಿರೀಕರಣ ನಿಧಿ ಯೋಜನೆ (ಪಿ.ಎಸ್.ಎಫ್), ಬೆಲೆ ಕೊರತೆ ಪಾವತಿ ಯೋಜನೆ (ಪಿಒಪಿಎಸ್) ಮತ್ತು ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ (ಮಿಐಎಸ್) ಗಳೆಂಬ ವಿವಿಧ ಯೋಜನೆಗಳ ಸಮ್ಮೀಳಿತದ ಒಂದು ಘಟಕವಾಗಿರುತ್ತದೆ.
ಎಂ.ಎಸ್.ಪಿ ಯಲ್ಲಿ ಅಧಿಸೂಚಿತ ಬೇಳೆಕಾಳುಗಳು, ಎಣ್ಣೆಕಾಳುಗಳು ಮತ್ತು ಕೊಪ್ರಾದ ಖರೀದಿಯು 2024-25ರ ಋತುವಿನಿಂದ ಈ ಅಧಿಸೂಚಿತ ಬೆಳೆಗಳ ರಾಷ್ಟ್ರೀಯ ಉತ್ಪಾದನೆಯ 25% ರಷ್ಟನ್ನು, ಬೆಲೆ ಬೆಂಬಲ ಯೋಜನೆಯಡಿಯಲ್ಲಿ ಖರೀದಿಸುವುದು. ಈ ನಿಟ್ಟಿನಲ್ಲಿ ರಾಜ್ಯಗಳಿಗೆ ಲಾಭದಾಯಕತೆಯನ್ನು ಖಚಿತಪಡಿಸಿಕೊಳ್ಳಲು ರೈತರಿಂದ ಎಂ.ಎಸ್.ಪಿ ಯಲ್ಲಿ ಹೆಚ್ಚಿನ ಬೆಳೆಗಳನ್ನು ಪಡೆಯಲು ಅನುವು ಮಾಡಿಕೊಡುವುದು. ಮತ್ತು ಸಂಕಟ ಬಂದಾಗ ಮಾರಾಟ ಬೆಲೆಯನ್ನು ನಿಯಂತ್ರಿಸುವುದು. 2024-25ರ ಋತುವಿನಲ್ಲಿ ತೊಗರಿಬೇಳೆ, ಉದ್ದು ಮತ್ತು ಚನ್ನಂಗಿ ಕಾಳು (ಮಸೂರೆ ಬೀಜ/ ಮಸೂರ್ ದಾಲ್) ಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ ಏಕೆಂದರೆ ಈ ಹಿಂದೆ ನಿರ್ಧರಿಸಿದಂತೆ 2024-25 ಋತುವಿನಲ್ಲಿ 100% ತೊಗರಿಬೇಳೆ, ಉದ್ದು ಮತ್ತು ಚನ್ನಂಗಿ ಕಾಳು ( ಮಸೂರೆ ಬೀಜ/ ಮಸೂರ್ ದಾಲ್ ) ಗಳ ಸಂಗ್ರಹಣೆ ಮಾಡಲಾಗಿರುತ್ತದೆ.
ಸರ್ಕಾರವು ರೈತರಿಂದ ಎಂ.ಎಸ್.ಪಿ ದರದಲ್ಲಿ ಅಧಿಸೂಚಿತ ಬೇಳೆಕಾಳುಗಳು, ಎಣ್ಣೆಕಾಳುಗಳು ಮತ್ತು ಕೊಪ್ಪರನ್ನು ಖರೀದಿಸಲು ಸರ್ಕಾರದ ಖಾತರಿಯ ಮೊತ್ತವನ್ನು ರೂ.45,000 ಕೋಟಿಗೆ ಹೆಚ್ಚಿಸಿ ನವೀಕರಿಸಲಾಗಿದೆ. ಇದು ಭಾರತದ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟದ (ನಫೀಡ್) ಇ-ಸಮೃದ್ಧಿ ಪೋರ್ಟಲ್ ಮತ್ತು ರಾಷ್ಟ್ರೀಯ ಇ-ಸಂಯುಕ್ತಿ ಪೋರ್ಟಲ್ನಲ್ಲಿ ಪೂರ್ವ-ನೋಂದಾಯಿತ ರೈತರನ್ನು ಒಳಗೊಂಡಂತೆ ಎಂ.ಎಸ್.ಪಿ.ಯಲ್ಲಿ ರೈತರಿಂದ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡುತ್ತದೆ. ಮಾರುಕಟ್ಟೆಯಲ್ಲಿ ಎಂ.ಎಸ್.ಪಿ.ಗಿಂತ ಕಡಿಮೆ ಬೆಲೆ ಬಂದಾಗಲೆಲ್ಲಾ ಸಹಕಾರಿ ಗ್ರಾಹಕರ ಒಕ್ಕೂಟ ಆಫ್ ಇಂಡಿಯಾ (ಎನ್.ಸಿ.ಸಿ.ಎಫ್.) ಸಂಸ್ಥೆಯು ರೈತರ ಕಲ್ಯಾಣ ಇಲಾಖೆಯಿಂದ ಬೇಳೆಕಾಳುಗಳು, ಎಣ್ಣೆಕಾಳುಗಳು ಮತ್ತು ಕೊಪ್ರಾವನ್ನು ಹೆಚ್ಚು ಹೆಚ್ಚು ಸಂಗ್ರಹಿಸಲು ಸಹಾಯ ಮಾಡುತ್ತದೆ. ಇದು ದೇಶದಲ್ಲಿ ಹೆಚ್ಚಿನ ಬೆಳೆಗಳನ್ನು ಬೆಳೆಯಲು ರೈತರನ್ನು ಪ್ರೇರೇಪಿಸುತ್ತದೆ ಮತ್ತು ಈ ಬೆಳೆಗಳಲ್ಲಿ ಸ್ವಾವಲಂಬನೆಯನ್ನು ಸಾಧಿಸಲು ಕೊಡುಗೆ ನೀಡುತ್ತದೆ, ಇದು ದೇಶೀಯ ಅವಶ್ಯಕತೆಗಳನ್ನು ಪೂರೈಸಲು ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.
ಬೆಲೆ ಸ್ಥಿರೀಕರಣ ನಿಧಿ (ಪಿಎಸ್.ಪಿ) ಯೋಜನೆಯ ವಿಸ್ತರಣೆಯು ಮಾಪನಾಂಕ ಬಿಡುಗಡೆಗಾಗಿ ಬೇಳೆಕಾಳುಗಳು ಮತ್ತು ಈರುಳ್ಳಿಯ ಬಫರ್ ಸ್ಟಾಕ್ ಅನ್ನು ನಿರ್ವಹಿಸುವ ಮೂಲಕ ಕೃಷಿ-ತೋಟಗಾರಿಕಾ ಉತ್ಪನ್ನಗಳ ಬೆಲೆಗಳಲ್ಲಿನ ತೀವ್ರ ಚಂಚಲತೆಯಿಂದ ಗ್ರಾಹಕರನ್ನು ರಕ್ಷಿಸಲು ಸಹಾಯ ಮಾಡುತ್ತದೆ; ಸಂಗ್ರಹಣೆ ನಿಯಂತ್ರಣ, ತ್ಯಾಜ್ಯ ಮತ್ತು ಊಹಾಪೋಹದ ಏರುಏರುಗಳನ್ನು ಕಡಿಮೆಗೊಳಿಸಲು; ಮತ್ತು ಕೈಗೆಟಕುವ ಬೆಲೆಯಲ್ಲಿ ಗ್ರಾಹಕರಿಗೆ ಸರಬರಾಜು ಮಾಡಲು ಸಹಾಯ ಮಾಡುತ್ತದೆ. ಮಾರುಕಟ್ಟೆಯಲ್ಲಿ ಎಂ.ಎಸ್.ಪಿ.ಗಿಂತ ಹೆಚ್ಚಿನ ಬೆಲೆಗಳು ಆಳ್ವಿಕೆ ನಡೆಸಿದಾಗ ನಫೀಡ್ ನ ಇಸಮೃದ್ಧಿ ಪೋರ್ಟಲ್ ಮತ್ತು ಎನ್.ಸಿ.ಸಿ.ಎಫ್ ನ ಇಸಂಯುಕ್ತಿ ಪೋರ್ಟಲ್ನಲ್ಲಿ ಪೂರ್ವ-ನೋಂದಾಯಿತ ರೈತರು ಸೇರಿದಂತೆ ಗ್ರಾಹಕ ವ್ಯವಹಾರಗಳ ಇಲಾಖೆ ಮೂಲಕ ಮಾರುಕಟ್ಟೆ ಬೆಲೆಯಲ್ಲಿ ಬೇಳೆಕಾಳುಗಳ ಸಂಗ್ರಹಣೆಯನ್ನು ಮಾಡಲಾಗುತ್ತದೆ. ಬಫರ್ ನಿರ್ವಹಣೆಯ ಹೊರತಾಗಿ, ಪಿ.ಎಸ್.ಎಫ್. ಯೋಜನೆಯಡಿಯಲ್ಲಿ ಮಧ್ಯಸ್ಥಿಕೆಗಳನ್ನು ಟೊಮೆಟೊದಂತಹ ಇತರ ಬೆಳೆಗಳಲ್ಲಿ ಮತ್ತು ಭಾರತ್ ಡೈಸ್, ಭಾರತ್ ಅಟ್ಟಾ ಮತ್ತು ಭಾರತ್ ರೈಸ್ನ ಸಬ್ಸಿಡಿ ಚಿಲ್ಲರೆ ಮಾರಾಟದಲ್ಲಿ ವಿತರಣಾ ವ್ವಸ್ಥೆಯನ್ನು ಕೈಗೊಳ್ಳಲಾಗಿದೆ.
ಅಧಿಸೂಚಿತ ಎಣ್ಣೆಕಾಳುಗಳಿಗೆ ಆಯ್ಕೆಯಾಗಿ ಬೆಲೆ ಕೊರತೆ ಪಾವತಿ ಯೋಜನೆ (ಪಿಡಿಪಿಎಸ್) ಅನುಷ್ಠಾನಕ್ಕೆ ರಾಜ್ಯಗಳು ಮುಂದೆ ಬರಲು ಪ್ರೋತ್ಸಾಹಿಸಲಾಗಿದೆ. ಈ ವ್ಯಾಪ್ತಿಯನ್ನು ಅಸ್ತಿತ್ವದಲ್ಲಿರುವ ಎಣ್ಣೆಕಾಳುಗಳ ರಾಜ್ಯ ಉತ್ಪಾದನೆಯ 25% ರಿಂದ 40% ಕ್ಕೆ ಹೆಚ್ಚಿಸಲಾಗಿದೆ. ಅನುಷ್ಠಾನದ ಅವಧಿಯನ್ನು ರೈತರ ಅನುಕೂಲಕ್ಕಾಗಿ 3 ತಿಂಗಳಿಂದ 4 ತಿಂಗಳು. ಹೆಚ್ಚಿಸಲಾಗಿದೆ. ಕೇಂದ್ರ ಸರ್ಕಾರವು ಭರಿಸಬೇಕಾದ ಎಂ.ಎಸ್.ಪಿ ಮತ್ತು ಮಾರಾಟ / ಮಾದರಿ ಬೆಲೆಯ ನಡುವಿನ ವ್ಯತ್ಯಾಸದ ಪರಿಹಾರವು ಎಂ.ಎಸ್.ಪಿ ಯ 15% ರಷ್ಟಕ್ಕೆ ಸೀಮಿತ ಗೊಳಿಸಲಾಗಿದೆ.
ಮಾರ್ಕೆಟ್ ಇಂಟರ್ವೆನ್ಷನ್ ಸ್ಕೀಮ್ (ಎಂ.ಐ.ಎಸ್.) ಅನುಷ್ಠಾನದ ವಿಸ್ತರಣೆಯು ಬದಲಾವಣೆಗಳೊಂದಿಗೆ ಕೊಳೆಯುವ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ರೈತರಿಗೆ ಲಾಭದಾಯಕ ಬೆಲೆಗಳನ್ನು ಒದಗಿಸುತ್ತದೆ. ಸರ್ಕಾರವು ಉತ್ಪಾದನೆಯ ವ್ಯಾಪ್ತಿಯನ್ನು 20% ರಿಂದ 25% ಕ್ಕೆ ಹೆಚ್ಚಿಸಿದೆ ಮತ್ತು ಎಂಐಎಸ್ ಯೋಜನೆಯಡಿಯಲ್ಲಿ ಭೌತಿಕ ಸಂಗ್ರಹಣೆಗೆ ಬದಲಾಗಿ ನೇರವಾಗಿ ರೈತರ ಖಾತೆಗೆ ವಿಭಿನ್ನ ಪಾವತಿ ಮಾಡುವ ಹೊಸ ಆಯ್ಕೆಯನ್ನು ಸೇರಿಸಿದೆ. ಇದಲ್ಲದೆ, ಟಾಪ್ (ಟೊಮ್ಯಾಟೊ, ಈರುಳ್ಳಿ ಮತ್ತು ಆಲೂಗಡ್ಡೆ) ಬೆಳೆಗಳ ಸಂದರ್ಭದಲ್ಲಿ, ಗರಿಷ್ಠ ಕೊಯ್ಲು ಸಮಯದಲ್ಲಿ ಉತ್ಪಾದಿಸುವ ರಾಜ್ಯಗಳು ಮತ್ತು ಸೇವಿಸುವ ರಾಜ್ಯಗಳ ನಡುವಿನ ಟಾಪ್ (ಟೊಮ್ಯಾಟೊ, ಈರುಳ್ಳಿ ಮತ್ತು ಆಲೂಗಡ್ಡೆ) ಬೆಳೆಗಳಲ್ಲಿನ ಬೆಲೆ ಅಂತರವನ್ನು ಕಡಿಮೆ ಮಾಡಲು, ಸರ್ಕಾರವು ಕಾರ್ಯಾಚರಣೆಗಳಿಗೆ ಸಾಗಣೆ ಮತ್ತು ಶೇಖರಣಾ ವೆಚ್ಚವನ್ನು ಭರಿಸಲು ನಿರ್ಧರಿಸಿದೆ. ಕೇಂದ್ರೀಯ ನೋಡಲ್ ಏಜೆನ್ಸಿಗಳಾದ ನಫೀಡ್ & ಎನ್.ಸಿ.ಸಿ.ಎಫ್ ಸಂಸ್ಥೆಗಳು ರೈತರಿಗೆ ಲಾಭದಾಯಕ ಬೆಲೆಗಳನ್ನು ಖಾತ್ರಿಪಡಿಸುವುದು ಮಾತ್ರವಲ್ಲದೆ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಉನ್ನತ ಬೆಳೆಗಳ ಉತ್ತಮ ಬೆಲೆಗಳನ್ನು ನೀಡುತ್ತವೆ.
*****
(Release ID: 2056346)
Visitor Counter : 70
Read this release in:
Odia
,
Assamese
,
English
,
Urdu
,
Nepali
,
Hindi
,
Marathi
,
Bengali
,
Manipuri
,
Punjabi
,
Gujarati
,
Tamil
,
Telugu
,
Malayalam