ಪ್ರಧಾನ ಮಂತ್ರಿಯವರ ಕಛೇರಿ
ವಿಶ್ವಕರ್ಮ ಜಯಂತಿಯಂದು ಜನತೆಗೆ ಶುಭ ಕೋರಿದ ಪ್ರಧಾನಮಂತ್ರಿ
Posted On:
17 SEP 2024 9:07AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ವಿಶ್ವಕರ್ಮ ಜಯಂತಿಯ ಸಂದರ್ಭದಲ್ಲಿ ದೇಶದ ಜನತೆಗೆ ಶುಭ ಕೋರಿದ್ದಾರೆ. ನಿರ್ಮಾಣ ಮತ್ತು ಸೃಷ್ಟಿಗೆ ಸಂಬಂಧಿಸಿದ ನುರಿತ ಮತ್ತು ಕಠಿಣ ಪರಿಶ್ರಮಿ ಕುಶಲಕರ್ಮಿಗಳು ಮತ್ತು ಸೃಷ್ಟಿಕರ್ತರನ್ನು ಪ್ರಧಾನಿಯವರು ಸ್ಮರಿಸಿದರು. ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ಭಾರತದ ಸಂಕಲ್ಪವನ್ನು ಸಾಧಿಸುವಲ್ಲಿ ಕುಶಲಕರ್ಮಿಗಳು ಮತ್ತು ಸೃಷ್ಟಿಕರ್ತರ ಕೊಡುಗೆಗೆ ಯಾವುದೇ ಸಾಟಿಯಿಲ್ಲ ಎಂಬ ವಿಶ್ವಾಸವನ್ನು ಶ್ರೀ ಮೋದಿಯವರು ವ್ಯಕ್ತಪಡಿಸಿದರು.
Xನ ಪೋಸ್ಟ್ ನಲ್ಲಿ ಪ್ರಧಾನಮಂತ್ರಿಯವರು;
"ಭಗವಾನ್ ವಿಶ್ವಕರ್ಮ ಜಯಂತಿಯ ಸಂದರ್ಭದಲ್ಲಿ ನನ್ನ ಎಲ್ಲಾ ದೇಶವಾಸಿಗಳಿಗೆ ಶುಭಾಶಯಗಳು. ಈ ಸಂದರ್ಭದಲ್ಲಿ, ನಿರ್ಮಾಣ ಮತ್ತು ಸೃಷ್ಟಿಗೆ ಸಂಬಂಧಿಸಿದ ನನ್ನ ಎಲ್ಲಾ ನುರಿತ ಮತ್ತು ಕಠಿಣ ಪರಿಶ್ರಮಿ ಸಹೋದ್ಯೋಗಿಗಳಿಗೆ ನಾನು ವಿಶೇಷವಾಗಿ ನಮಸ್ಕರಿಸುತ್ತೇನೆ. ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ಭಾರತದ ಸಂಕಲ್ಪವನ್ನು ಸಾಧಿಸುವಲ್ಲಿ ನಿಮ್ಮ ಕೊಡುಗೆಗೆ ಸಾಟಿಯಿಲ್ಲ ಎಂದು ನನಗೆ ವಿಶ್ವಾಸವಿದೆ” ಎಂದು ಹೇಳಿದ್ದಾರೆ.
*****
(Release ID: 2055607)
Visitor Counter : 34
Read this release in:
Telugu
,
English
,
Urdu
,
Hindi
,
Marathi
,
Manipuri
,
Bengali
,
Assamese
,
Punjabi
,
Gujarati
,
Tamil
,
Malayalam