ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

55ನೇ ಐ ಎಫ್‌ ಎಫ್‌ ಐ 2024 ರಲ್ಲಿ ಚೊಚ್ಚಲ ಭಾರತೀಯ ಚಲನಚಿತ್ರಗಳನ್ನು ಪ್ರದರ್ಶಿಸಲು ಹೊಸ ವಿಭಾಗವನ್ನು ಪ್ರಾರಂಭಿಸಲಾಗಿದೆ


"ಅತ್ಯುತ್ತಮ ಚೊಚ್ಚಲ ಭಾರತೀಯ ಚಲನಚಿತ್ರ ವಿಭಾಗ 2024" 5 ಚೊಚ್ಚಲ ಚಲನಚಿತ್ರಗಳನ್ನು ಪ್ರದರ್ಶಿಸುತ್ತದೆ

"ಭಾರತೀಯ ಚಲನಚಿತ್ರದ ಅತ್ಯುತ್ತಮ ಚೊಚ್ಚಲ ನಿರ್ದೇಶಕ" ಪ್ರಶಸ್ತಿಯು ಪ್ರಮಾಣಪತ್ರ ಮತ್ತು 5 ಲಕ್ಷ ರೂ. ನಗದು ಬಹುಮಾನ ಹೊಂದಿರುತ್ತದೆ

Posted On: 14 SEP 2024 3:25PM by PIB Bengaluru

2024 ರ ನವೆಂಬರ್ 20 ರಿಂದ 28 ರವರೆಗೆ ಗೋವಾದಲ್ಲಿ 55 ನೇ ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (ಐ ಎಫ್‌ ಎಫ್‌ ಐ) 2024 ಆಯೋಜಿಸಲಾಗಿದೆ. ಸ್ವಾಗತಾರ್ಹ ಕ್ರಮದಲ್ಲಿ, ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಐ ಎಫ್‌ ಎಫ್‌ ಐ 2024 ರ ಭಾಗವಾಗಿ ಭಾರತೀಯ ಯುವ ಚಲನಚಿತ್ರ ತಯಾರಕರಿಗಾಗಿ "ಅತ್ಯುತ್ತಮ ಚೊಚ್ಚಲ ಭಾರತೀಯ ಚಲನಚಿತ್ರ ವಿಭಾಗ 2024" ಎಂಬ ಹೊಸ ವಿಭಾಗವನ್ನು ಸ್ಥಾಪಿಸಿದೆ.

ಅತ್ಯುತ್ತಮ ಚೊಚ್ಚಲ ಭಾರತೀಯ ಚಲನಚಿತ್ರ ವಿಭಾಗ 2024

ಈ ವಿಭಾಗದ ಮೂಲಕ, ಐ ಎಫ್‌ ಎಫ್‌ ಐ ಭಾರತೀಯ ಚೊಚ್ಚಲ ಚಲನಚಿತ್ರಗಳ ಮೇಲೆ ಕೇಂದ್ರೀಕರಿಸುತ್ತದೆ, ಇದು ದೇಶಾದ್ಯಂತದ ವೈವಿಧ್ಯಮಯ ನಿರೂಪಣೆಗಳು ಮತ್ತು ಸಿನಿಮೀಯ ಶೈಲಿಗಳನ್ನು ಪ್ರದರ್ಶಿಸುತ್ತದೆ. ಈ ಆಯ್ಕೆಗಳು ಯುವ ಚಲನಚಿತ್ರ ತಯಾರಕರ ಸೃಜನಶೀಲ ದೃಷ್ಟಿ ಮತ್ತು ವಿಶಿಷ್ಟ ಕಥೆ ಹೇಳುವ ವಿಧಾನಗಳನ್ನು ಎತ್ತಿ ತೋರಿಸುತ್ತವೆ. ಹೊಸ ನಿರ್ದೇಶಕರ ಕೆಲಸವನ್ನು ಪ್ರದರ್ಶಿಸುವ ಮೂಲಕ ಯುವ ಪ್ರತಿಭೆಗಳಿಗೆ ವೇದಿಕೆ ಒದಗಿಸುವ ಗುರಿಯನ್ನು ಇದು ಹೊಂದಿದೆ. ಭಾರತೀಯ ಚಿತ್ರರಂಗಕ್ಕೆ ಹೊಸ ದೃಷ್ಟಿಕೋನಗಳು ಮತ್ತು ಕಥೆಗಳನ್ನು ಕೊಡುಗೆ ನೀಡುವ ಹೊಸ ನಿರ್ದೇಶಕರ ಗರಿಷ್ಠ 5 ಚೊಚ್ಚಲ ಚಲನಚಿತ್ರಗಳನ್ನು ನಿಯಮಗಳು ಮತ್ತು ನಿಬಂಧನೆಗಳಿಗೆ ಅನುಗುಣವಾಗಿ ಆಯ್ಕೆ ಮಾಡಲಾಗುತ್ತದೆ ಮತ್ತು ಅತ್ಯುತ್ತಮ ಚೊಚ್ಚಲ ಭಾರತೀಯ ಚಲನಚಿತ್ರ ವಿಭಾಗದಲ್ಲಿ ಪ್ರದರ್ಶಿಸಲಾಗುತ್ತದೆ.

ಭಾರತೀಯ ಚಲನಚಿತ್ರದ ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿ

ಇದರ ಜೊತೆಗೆ, 2024 ರ 55 ನೇ ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಚೊಚ್ಚಲ ಭಾರತೀಯ ಫೀಚರ್ ಫಿಲ್ಮ್ ಪ್ರಶಸ್ತಿಯನ್ನು ಸಹ ನೀಡಲಾಗುತ್ತದೆ. ಈ ಪುರಸ್ಕಾರವು ಮೊದಲ ಬಾರಿಯ ನಿರ್ದೇಶಕರ ಸೃಜನಶೀಲತೆ ಮತ್ತು ಸಾಮರ್ಥ್ಯವನ್ನು ಗೌರವಿಸುವ ಗುರಿಯನ್ನು ಹೊಂದಿದೆ, ಭಾರತೀಯ ಚಿತ್ರರಂಗದ ವಿಕಾಸಕ್ಕೆ ಅವರ ಕೊಡುಗೆಯನ್ನು ಗುರುತಿಸುತ್ತದೆ.

"ಅತ್ಯುತ್ತಮ ಚೊಚ್ಚಲ ಭಾರತೀಯ ಚಲನಚಿತ್ರ ನಿರ್ದೇಶಕ ಪ್ರಶಸ್ತಿ " ವಿವರಗಳು ಕೆಳಕಂಡಂತಿವೆ:

ಪ್ರಶಸ್ತಿ ಹೆಸರು

 

ವಿವರಣೆ

 

ಪ್ರಶಸ್ತಿ ಪುರಸ್ಕೃತರು

ಪ್ರಶಸ್ತಿಯ ವಿವರ

ಅತ್ಯುತ್ತಮ ಚೊಚ್ಚಲ ಭಾರತೀಯ ಚಲನಚಿತ್ರ ನಿರ್ದೇಶಕ ಪ್ರಶಸ್ತಿ

ಭಾರತೀಯ ಚೊಚ್ಚಲ ನಿರ್ದೇಶಕರಿಗೆ ಅವರ ಸೃಜನಶೀಲ ದೃಷ್ಟಿ, ಕಲಾತ್ಮಕ ಅರ್ಹತೆ, ಕಥೆ ಹೇಳುವಿಕೆ ಮತ್ತು ಒಟ್ಟಾರೆ ಪ್ರಭಾವಕ್ಕಾಗಿ ಪ್ರಶಸ್ತಿ ನೀಡಲಾಗುತ್ತದೆ

ನಿರ್ದೇಶಕರು

ಎ. ನಿರ್ದೇಶಕರಿಗೆ ಪ್ರಮಾಣಪತ್ರ

ಬಿ. ನಿರ್ದೇಶಕರಿಗೆ 5 ಲಕ್ಷ ರೂ ನಗದು ಬಹುಮಾನ

 

55ನೇ ಐ ಎಫ್‌ ಎಫ್‌ ಐ ನಲ್ಲಿ "ಅತ್ಯುತ್ತಮ ಚೊಚ್ಚಲ ಭಾರತೀಯ ಚಲನಚಿತ್ರ ವಿಭಾಗ" ಕ್ಕಾಗಿ ಪ್ರವೇಶಗಳನ್ನು ಇದೀಗ ಸಲ್ಲಿಸಬಹುದು ಮತ್ತು ಚಲನಚಿತ್ರವನ್ನು https://iffigoa.org/festival/indian-debut-director ನಲ್ಲಿ ಸಲ್ಲಿಸಬಹುದು. 23 ಸೆಪ್ಟೆಂಬರ್, 2024 ಸಲ್ಲಿಕೆಗೆ ಅಂತಿಮ ದಿನಾಂಕವಾಗಿದೆ ಮತ್ತು ಇತರ ಸಂಬಂಧಿತ ವಿವರಗಳು http://www.iffigoa.org ನಲ್ಲಿ ಲಭ್ಯವಿರುತ್ತವೆ.

ಈ ಹೊಸಬರ ಮೇಲೆ ಬೆಳಕು ಚೆಲ್ಲುವ ಮೂಲಕ, ಮುಂದಿನ ಪೀಳಿಗೆಯ ಸಿನಿಮಾ ಕಥೆಗಾರರನ್ನು ಪ್ರೋತ್ಸಾಹಿಸುವ ಐ ಎಫ್‌ ಎಫ್‌ ಐ ಬದ್ಧತೆಯನ್ನು ಈ ವಿಭಾಗವು ಪ್ರತಿಬಿಂಬಿಸುತ್ತದೆ.

 

 

*****

 




(Release ID: 2054972) Visitor Counter : 54