ಕಾನೂನು ಮತ್ತು ನ್ಯಾಯ ಸಚಿವಾಲಯ
azadi ka amrit mahotsav

ಸ್ವಚ್ಛತಾ ಹಿ ಸೇವಾ 2024

Posted On: 13 SEP 2024 2:13PM by PIB Bengaluru

ಸ್ವಚ್ಛ ಭಾರತ್ ಮಿಷನ್ ನ 10ನೇ ವಾರ್ಷಿಕೋತ್ಸವದ ಆಚರಣೆ ಸಲುವಾಗಿ ನ್ಯಾಯ ಇಲಾಖೆ 2024ರ ಸೆಪ್ಟಂಬರ್ 17 ರಿಂದ 2024ರ ಅಕ್ಟೋಬರ್ 2 ರವರೆಗೆ ಸ್ವಚ್ಛತೆಯೇ ಸೇವೆ (ಸ್ವಚ್ಚತಾ ಹಿ ಸೇವಾ) ಅಭಿಯಾನವನ್ನು ಆರಂಭಿಸಲಿದೆ. ಈ ಬಾರಿ ಎಸ್ ಎಚ್ ಎಸ್‌ 2024ರ ಘೋಷವಾಕ್ಯ ‘ಸ್ವಭಾವ ಸ್ವಚ್ಛತಾ, ಸಂಸ್ಕಾರ ಸ್ವಚ್ಛತಾ’ ಎಂಬುದಾಗಿದ್ದು, ದೇಶಾದ್ಯಂತ ಸ್ವಚ್ಛತೆಯ ಪ್ರಯತ್ನಗಳಲ್ಲಿ ಸಾಮೂಹಿಕ ಕ್ರಿಯೆಯ ಚೈತನ್ಯವನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತದೆ. 'ಇಡೀ ಸಮಾಜದ' ವಿಧಾನವನ್ನು ಒತ್ತಿಹೇಳುವ ಮೂರು ಪ್ರಮುಖ ಆಧಾರ ಸ್ತಂಭಗಳನ್ನು ಹೊಂದಿದೆ.

  • ಸ್ವಚ್ಛತೆಯ ಗುರಿ ಘಟಕಗಳು (ಸಿಟಿಯುಗಳು) —ಶ್ರಮದಾನ ಚಟುವಟಿಕೆಗಳು: ನಿರ್ದಿಷ್ಟ ಗುರಿ ಘಟಕಗಳು ಮತ್ತು ಒಟ್ಟಾರೆ ಶುಚಿತ್ವದ ಕಾಲಮಿತಿಯ ಪರಿವರ್ತನೆಯ ಮೇಲೆ ಕೇಂದ್ರೀಕರಿಸಲಾಗಿದೆ.
  • ಸ್ವಚ್ಛತಾ ಮೇನ್ ಜನ ಭಾಗಿದಾರಿ — ಸಾರ್ವಜನಿಕ ಪಾಲುದಾರಿಕೆ, ಜಾಗೃತಿ ಮತ್ತು ವಕೀಲಿಕೆ: ಹಲವು ಭಾಗಿದಾರಿ ಚಟುವಟಿಕೆಗಳ ಮೂಲಕ ನಾಗರಿಕರನ್ನು ಸ್ವಚ್ಛತಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು.
  • ಸಫಾಯಿ ಮಿತ್ರಾ ಸುರಕ್ಷಾ ಶಿಬಿರಗಳ: ನೈರ್ಮಲ್ಯ ಕಾರ್ಮಿಕರಿಗೆ ಮುನ್ನೆಚ್ಚರಿಕೆಯ ಆರೋಗ್ಯ ತಪಾಸಣೆ ಮತ್ತು ಸಾಮಾಜಿಕ ಭದ್ರತೆಯನ್ನು ಒದಗಿಸುವುದು.

ಎಸ್ ಎಚ್ ಎಸ್ 2024 ಕ್ಕೆ ಸಂಬಂಧಿಸಿದಂತೆ ಇಲಾಖೆಯ ಎಲ್ಲಾ ಅಧಿಕಾರಿಗಳು/ಸಿಬ್ಬಂದಿಗಳಿಗೆ  ಕಾರ್ಯದರ್ಶಿ (ನ್ಯಾಯ) ನೇತೃತ್ವದಲ್ಲಿ 2024 ಸೆಪ್ಟಂಬರ್ 17 ರಂದು ಬೆಳಿಗ್ಗೆ 11:00 ಗಂಟೆಗೆ ‘ಸ್ವಚ್ಛತಾ ಪ್ರಮಾಣವನ್ನು ಬೋಧಿಸಲಾಗುವುದು. ಅಭಿಯಾನದ ಅವಧಿಯಲ್ಲಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಜೈಸಲ್ಮೇರ್ ಹೌಸ್ ಸಂಕೀರ್ಣದ ಕಟ್ಟಡದಲ್ಲಿ ಶುಚಿಗೊಳಿಸುವಿಕೆಯ ಮೂಲಕ ಶ್ರಮದಾನ ಮಾಡುತ್ತಾರೆ. ಈ ವೇಳೆ ಒಳಚರಂಡಿ ವ್ಯವಸ್ಥೆಯನ್ನು ಮುಚ್ಚುವುದು, ಎಲ್ಲಾ ಸಸ್ಯದ ಕುಂಡಗಳಿಗೆ ಬಣ್ಣ ಬಳಿಯುವ ಮೂಲಕ ಪ್ರದೇಶವನ್ನು ಸುಂದರಗೊಳಿಸುವುದು, ಎಲ್ಲಾ ಮೆಟ್ಟಿಲುಗಳನ್ನು ಸ್ವಚ್ಛಗೊಳಿಸುವುದು, ಎಲ್ಲಾ ಸಡಿಲವಾದ ತಂತಿಗಳನ್ನು ಸರಿಪಡಿಸುವುದು, ಎಲ್ಲಾ ಮಾರ್ಗಗಳನ್ನು ಸ್ವಚ್ಛಗೊಳಿಸುವುದು, ಕೆಲಸದ ಸ್ಥಳ ಮತ್ತು ಕಡತಗಳನ್ನು ಸರಿಯಾಗಿ ಜೋಡಿಸಲು ಉದ್ದೇಶಿಸಲಾಗಿದೆ. ಮಾನ್ಯ ಕಾನೂನು ಸಚಿವರು (ಸ್ವತಂತ್ರ ಹೊಣೆಗಾರಿಕೆ) ಈ ಅಭಿಯಾನದಲ್ಲಿ ಗೌರವಾನ್ವಿತ ಸುಪ್ರೀಂ ಕೋರ್ಟ್ ಮತ್ತು ದೇಶದ ಇತರ ನ್ಯಾಯಾಲಯಗಳು ಸಕ್ರಿಯವಾಗಿ ಭಾಗವಹಿಸಲು ವಿವಿಧ ಹೈಕೋರ್ಟ್‌ಗಳ ಗೌರವಾನ್ವಿತ ಸಿಜೆಐ ಮತ್ತು ಸಿಜೆಗಳಿಗೆ ಮನವಿ ಮಾಡಿದ್ದಾರೆ. ಎಸ್ ಎಚ್ ಎಸ್ 2024ರ ಅಭಿಯಾನವು 02.10.2024 ರಂದು ಸ್ವಚ್ಛ ಭಾರತ ದಿನದಂದು ಮಹಾತ್ಮ ಗಾಂಧಿಯವರ ಪರಂಪರೆಯನ್ನು ಗೌರವಿಸಲು ಮತ್ತು ಸ್ವಚ್ಛತೆಯನ್ನು ಜೀವನದ ಮಾರ್ಗವನ್ನಾಗಿ ಮಾಡಲು ಶ್ರಮದಾನದೊಂದಿಗೆ ಸಮಾಪನಗೊಳ್ಳುತ್ತದೆ.

 

*****


(Release ID: 2054530) Visitor Counter : 156