ಹಣಕಾಸು ಸಚಿವಾಲಯ
azadi ka amrit mahotsav

ಕೇಂದ್ರ ಬಜೆಟ್ 2024-25 ಪ್ರಕಟಣೆಯ ಅನುಸಾರವಾಗಿ ವಿದೇಶಿ ವಿನಿಮಯ (ಸಂಯುಕ್ತ ಪ್ರಕ್ರಿಯೆಗಳು) ನಿಯಮಗಳು, 2024 ಅನ್ನು ಕೇಂದ್ರ ಆರ್ಥಿಕ ವ್ಯವಹಾರಗಳ ಇಲಾಖೆಯು ಸೂಚನೆ ಹೊರಡಿಸಿದೆ


ಈ ನೂತನ ನಿಯಮಗಳು ವಿದೇಶಿ ವಿನಿಮಯ (ಸಂಯುಕ್ತ ಪ್ರಕ್ರಿಯೆಗಳು) ನಿಯಮಗಳು, 2000 ಅನ್ನು ರದ್ದುಗೊಳಿಸುತ್ತದೆ

ಹೊಸ ತಿದ್ದುಪಡಿಗಳು 'ಹೂಡಿಕೆಯ ಸುಲಭತೆ' ಮತ್ತು 'ವ್ಯಾಪಾರ ಮಾಡುವ ಸುಲಭ ವ್ಯವಸ್ಥೆ’ಗಳ  ನಿಬಂಧನೆಗಳನ್ನು ಸರಳಗೊಳಿಸುತ್ತದೆ ಮತ್ತು ನವೀಕರಿಸುತ್ತದೆ

Posted On: 12 SEP 2024 4:23PM by PIB Bengaluru

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರ ಕೇಂದ್ರ ಬಜೆಟ್ 2024-25 ರ ಘೋಷಣೆಯ ಅನುಸಾರವಾಗಿ, ವಿದೇಶಿ ಹೂಡಿಕೆಯ ನಿಯಮಗಳು ಮತ್ತು ನಿಬಂಧನೆಗಳನ್ನು ಸರಳೀಕರಿಸಲು, ಕೇಂದ್ರ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆ (ಡಿಇಎ), ವಿದೇಶಿ ವಿನಿಮಯ (ಸಂಯುಕ್ತ ಪ್ರಕ್ರಿಯೆಗಳು) ನಿಯಮಗಳು, 46 ರ ಅಡಿಯಲ್ಲಿ ನೀಡಲಾದ ಅಧಿಕಾರಗಳ ಅಡಿಯಲ್ಲಿ ವಿದೇಶಿ ಸೆಕ್ಷನ್ 15ರ ಜೊತೆಗೆ ಎಕ್ಸ್ಚೇಂಜ್ ಮ್ಯಾನೇಜ್ಮೆಂಟ್ ಆಕ್ಟ್ (ಫೆಮಾ), 1999 ಓದಲಾಗಿ, ಇಂದು ತಿದ್ದುಪಡಿ ಮಾಡಲಾಗಿ, ವಿದೇಶಿ ವಿನಿಮಯ (ಸಂಯುಕ್ತ ಪ್ರಕ್ರಿಯೆಗಳು) ನಿಯಮಗಳು, 2024 ಅನ್ನು  ಹೊರಡಿಸುತ್ತಾ, ನಿಯಮಗಳು 2000 ರಲ್ಲಿ ಹೊರಡಿಸಲಾದ ಅಸ್ತಿತ್ವದಲ್ಲಿರುವ ವಿದೇಶಿ ವಿನಿಮಯ (ಸಂಯುಕ್ತ ಪ್ರಕ್ರಿಯೆಗಳು) ನಿಯಮಗಳನ್ನು ಈ ಮೂಲಕ ರದ್ದುಗೊಳಿಸಲ್ಪಡುತ್ತವೆ.  

ವ್ಯವಹಾರವನ್ನು ಸುಲಭಗೊಳಿಸಲು ಅಸ್ತಿತ್ವದಲ್ಲಿರುವ ನಿಯಮಗಳು ಮತ್ತು ನಿಬಂಧನೆಗಳನ್ನು ಸುಗಮಗೊಳಿಸುವ ಮತ್ತು ತರ್ಕಬದ್ಧಗೊಳಿಸುವ ವಿಶಾಲ ಉಪಕ್ರಮದ ಭಾಗವಾಗಿ, ಭಾರತೀಯ ರಿಸರ್ವ್ ಬ್ಯಾಂಕ್ ನೊಂದಿಗೆ ಸಮಾಲೋಚಿಸಿ ಸಂಯೋಜಿತ ಪ್ರಕ್ರಿಯೆಯ ನಿಯಮಗಳನ್ನು ಸಮಗ್ರವಾಗಿ ಪರಿಶೀಲಿಸಲಾಗಿದೆ.

ಕಾಂಪೌಂಡಿಂಗ್ ಅಪ್ಲಿಕೇಶನ್ ಗಳ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಮತ್ತು ಸುಗಮಗೊಳಿಸಲು ನಿಬಂಧನೆಗಳನ್ನು ಸಕ್ರಿಯಗೊಳಿಸಲು ಒತ್ತು ನೀಡಲಾಗಿದೆ. ಅಪ್ಲಿಕೇಶನ್ ಶುಲ್ಕಗಳು ಮತ್ತು ಸಂಯುಕ್ತ ಮೊತ್ತಗಳಿಗೆ ಡಿಜಿಟಲ್ ಪಾವತಿ ಆಯ್ಕೆಗಳ ಪರಿಚಯ, ಮತ್ತು ಅಸ್ಪಷ್ಟತೆಯನ್ನು ತೊಡೆದುಹಾಕಲು ಪ್ರಯತ್ನ ಮತ್ತು ಪ್ರಕ್ರಿಯೆಯನ್ನು ಸ್ಪಷ್ಟಪಡಿಸಲು ನಿಬಂಧನೆಗಳ ಸರಳೀಕರಣಗೊಳಿಸುವುದು ಮತ್ತು ತರ್ಕಬದ್ಧತೆಯ ಮೇಲೆ ಕೇಂದ್ರೀಕರಿಸಲಾಗಿದೆ.

ಹೂಡಿಕೆದಾರರಿಗೆ 'ಹೂಡಿಕೆಯ ಸುಲಭತೆ' ಮತ್ತು ವ್ಯವಹಾರಗಳಿಗೆ 'ವ್ಯಾಪಾರ ಮಾಡುವ ಸುಲಭ ವ್ಯವಸ್ಥೆ'ಯನ್ನು ಉತ್ತೇಜಿಸಲು ಸರ್ಕಾರದ ಬದ್ಧತೆಯನ್ನು ಈ ತಿದ್ದುಪಡಿಗಳು ಸೂಚಿಸುತ್ತವೆ.

ಅಧಿಸೂಚನೆಯನ್ನು ಪಡೆಯಲು ಇಲ್ಲಿ ಒತ್ತಿರಿ

CLICK HERE TO ACCESS NOTIFICATION

 

*****


(Release ID: 2054208) Visitor Counter : 37