ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

ರಾಷ್ಟ್ರಪತಿ ಭವನದಲ್ಲಿ 15 ಮಂದಿಗೆ 2024ರ ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ಪ್ರದಾನ ಮಾಡಿದ ಭಾರತದ ರಾಷ್ಟ್ರಪತಿ

Posted On: 11 SEP 2024 2:53PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ನರ್ಸಿಂಗ್ ವೃತ್ತಿಪರರರಿಗೆ ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಒಟ್ಟಾರೆ 15 ಮಂದಿಗೆ ಅವರ ಕರ್ತವ್ಯ ನಿಷ್ಠೆ ಮತ್ತು ಸಮುದಾಯ ಸೇವಾ ಬದ್ಧತೆಯನ್ನು ಗುರುತಿಸಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಜಗತ್ ಪ್ರಕಾಶ್ ನಡ್ಡಾ ಮತ್ತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವರಾದ ಶ್ರೀಮತಿ ಅನುಪ್ರಿಯಾ ಪಟೇಲ್ ಮತ್ತಿತರರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ ಮಾತನಾಡಿದ ಶ್ರೀ ಜೆ.ಪಿ.ನಡ್ಡಾ ಅವರು ಸಾರ್ವಜನಿಕ ಸೇವೆಯಲ್ಲಿ ಮಿತಿಯಾಚೆಗೂ ಸೇವೆ ಸಲ್ಲಿಸುವುದನ್ನು ಮುಂದುವರಿಸಲು ಈ ಪ್ರಶಸ್ತಿ ಪ್ರೇರಣೆ ನೀಡುತ್ತದೆ ಎಂದರು. "ದಾದಿಯರು ಆರೋಗ್ಯ ಕ್ಷೇತ್ರದ ಬೆನ್ನೆಲುಬು" ಎಂದು ಅವರು ಹೇಳಿದರು.

 

ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು 1973 ರಲ್ಲಿ ದಾದಿಯರು ಮತ್ತು ಶುಶ್ರೂಷಾ ವೃತ್ತಿಪರರು ಸಮಾಜಕ್ಕೆ ಸಲ್ಲಿಸಿದ ಶ್ಲಾಘನೀಯ ಸೇವೆಗಳನ್ನು ಗುರುತಿಸುವ ಸಲುವಾಗಿ ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿಯನ್ನು ಸ್ಥಾಪಿಸಿದೆ.

ನೋಂದಾಯಿತ ಸಹಾಯಕ ದಾದಿಯರು ಮತ್ತು ಸೂಲಗಿತ್ತಿ, ನೋಂದಾಯಿತ ದಾದಿಯರು ಮತ್ತು ಸೂಲಗಿತ್ತಿ ಮತ್ತು ನೋಂದಾಯಿತ ಲೇಡಿ ವಿಸಿಟರ್ ವಿಭಾಗ ಸೇರಿ ಒಟ್ಟು 15 ಪ್ರಶಸ್ತಿಗಳನ್ನು ನೀಡಲಾಯಿತು. ಕೇಂದ್ರ, ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು ಮತ್ತು ಸ್ವಯಂಸೇವಾ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿರುವ ಅತ್ಯುತ್ತಮ ಶುಶ್ರೂಷಾ ಸಿಬ್ಬಂದಿಗೆ ಪ್ರಶಸ್ತಿಯನ್ನು ನೀಡಲಾಗುತ್ತದೆ. ಆಸ್ಪತ್ರೆ ಅಥವಾ ಸಮುದಾಯ ಕೇಂದ್ರಗಳು, ಶೈಕ್ಷಣಿಕ ಅಥವಾ ಆಡಳಿತಾತ್ಮಕ ವ್ಯವಸ್ಥೆಗಳಲ್ಲಿ ನಿಗದಿತ ಉದ್ಯೋಗದಲ್ಲಿರುವ ಆತ/ಆಕೆ ನರ್ಸ್ ರಾಷ್ಟ್ರೀಯ ಪ್ರಶಸ್ತಿಗೆ ಅರ್ಹರಾಗಿರುತ್ತಾರೆ. ಪ್ರತಿ ಪ್ರಶಸ್ತಿಯು ಅರ್ಹತಾ ಪ್ರಮಾಣಪತ್ರ, 1,00,000/- ರೂ,ನಗದು ಪ್ರಶಸ್ತಿ ಮತ್ತು ಪದಕವನ್ನು ಒಳಗೊಂಡಿರುತ್ತದೆ.

ಇಂದು ಪ್ರಶಸ್ತಿ ಪಡೆದ ನರ್ಸ್ ಗಳ ಪಟ್ಟಿ ಈ ಕೆಳಗಿನಂತಿದೆ:

ಕ್ರ.ಸಂ

ವಿಭಾಗ

ರಾಜ್ಯ

ಹೆಸರು

1

ಎ ಎನ್ ಎಂ

ಅಂಡಮಾನ್ & ನಿಕೋಬಾರ್ ದ್ವೀಪಗಳು

ಶ್ರೀಮತಿ ಶೀಲಾ ಮೊಂಡಲ್

2

ಎ ಎನ್ ಎಂ

ಅರುಣಾಚಲ ಪ್ರದೇಶ

ಶ್ರೀಮತಿ ಇಕೆನ್ ಲೋಲೆನ್

3

ಎ ಎನ್ ಎಂ

                                   ಪುದುಚೇರಿ

ಶ್ರೀಮತಿ ವಿದ್ಜೆಯಕೌಮರಿ ವಿ

4

ಎ ಎನ್ ಎಂ

ಸಿಕ್ಕಿಂ

ಶ್ರೀಮತಿ ಜನುಕಾ ಪಾಂಡೆ

5

ಎ ಎನ್ ಎಂ

ಪಶ್ಚಿಮ ಬಂಗಾಳ

ಶ್ರೀಮತಿ ಅನಿಂದಿತಾ ಪ್ರಮಾಣಿಕ್

6

ಎಲ್ ಎಚ್ ವಿ

ಮಣಿಪುರ

ಶ್ರೀಮತಿ ಬ್ರಹ್ಮಚಾರಿಮಯುಮ್ ಅಮುಸನಾ ದೇವಿ

7

ನರ್ಸ್

ದೆಹಲಿ

ಮೇಜರ್ ಜನರಲ್ ಇಗ್ನೇಷಿಯಸ್ ಡೆಲೋಸ್ ಫ್ಲೋರಾ

8

ನರ್ಸ್

ದೆಹಲಿ

ಶ್ರೀಮತಿ ಪ್ರೇಮ್ ರೋಸ್ ಸೂರಿ

9

ನರ್ಸ್

ಜಮ್ಮು & ಕಾಶ್ಮೀರ

ಡಾ ತಬಸುಮ್ ಇರ್ಷಾದ್ ಹ್ಯಾಂಡೂ

10

ನರ್ಸ್

ಕರ್ನಾಟಕ

ಡಾ.ನಾಗರಾಜಯ್ಯ

11

ನರ್ಸ್

ಲಕ್ಷದ್ವೀಪ

ಶ್ರೀಮತಿ ಶಂಶಾದ್ ಬೇಗಂ ಎ

12

ನರ್ಸ್

ಮಹಾರಾಷ್ಟ್ರ

ಶ್ರೀಮತಿ ಆಶಾ ವುಮನ್ರಾವ್ ಬವಾನೆ

13

ನರ್ಸ್

ಮಿಜೋರಂ

ಶ್ರೀಮತಿ ಎಚ್ ಮಂಕಿಮಿ

14

ನರ್ಸ್

ಒಡಿಶಾ

ಶ್ರೀಮತಿ ಸಂಜುಂತಾ ಸೇಥಿ

15

ನರ್ಸ್

ರಾಜಸ್ಥಾನ್

ಶ್ರೀ ರಾಧೇ ಲಾಲ್ ಶರ್ಮಾ

ದಾದಿಯರು ಆರೋಗ್ಯ ವ್ಯವಸ್ಥೆಯ ಬೆನ್ನೆಲುಬು. ಗೌರವಾನ್ವಿತ ಪ್ರಧಾನ ಮಂತ್ರಿಯವರ ನೇತೃತ್ವದಲ್ಲಿ ಭಾರತ ಸರ್ಕಾರವು ನರ್ಸಿಂಗ್ ಮತ್ತು ಸೂಲಗಿತ್ತಿ ಶಿಕ್ಷಣವನ್ನು ಬಲವರ್ಧನೆಗೊಳಿಸಲು ಹಲವು ಉಪಕ್ರಮಗಳನ್ನು ಕೈಗೊಂಡಿದೆ. ವೈದ್ಯಕೀಯ ಕಾಲೇಜುಗಳ ಇರುವ ಸ್ಥಳದಲ್ಲಿ 157 ನರ್ಸಿಂಗ್ ಕಾಲೇಜುಗಳ ಸ್ಥಾಪನೆ ಮತ್ತು ನರ್ಸಿಂಗ್ ಶಿಕ್ಷಣ ಮತ್ತು ತರಬೇತಿಯನ್ನು ಉನ್ನತೀಕರಿಸಲು ರಾಷ್ಟ್ರೀಯ ನರ್ಸಿಂಗ್ ಮತ್ತು ಮಿಡ್‌ವೈಫರಿ ಆಯೋಗ ರಚನೆಯಂತಹ ಸಂವಿಧಾನಿಕ ಪ್ರಮುಖ ಉಪಕ್ರಮಗಳು ಇಡೀ ದೇಶಕ್ಕೆ ಉತ್ತಮ ಆರೋಗ್ಯ ಸೇವೆಗಳಿಗೆ ಹೆಸರುವಾಸಿಯಾಗಿದೆ.

ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ಪ್ರದಾನ ಸಮಾರಂಭದ ದೃಶ್ಯಗಳನ್ನು ಇಲ್ಲಿ ವೀಕ್ಷಿಸಬಹುದು:

 

 

*****

 


(Release ID: 2053763) Visitor Counter : 58