ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸೆಪ್ಟೆಂಬರ್ 11ರಂದು ಸೆಮಿಕಾನ್ ಇಂಡಿಯಾ 2024ನ್ನು ಉದ್ಘಾಟಿಸಲಿರುವ ಪ್ರಧಾನಮಂತ್ರಿಯವರು

Posted On: 09 SEP 2024 8:08PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು 2024ರ ಸೆಪ್ಟೆಂಬರ್ 11ರಂದು ಬೆಳಿಗ್ಗೆ 10:30ರ ಸುಮಾರಿಗೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಇಂಡಿಯಾ ಎಕ್ಸ್ ಪೋ ಮಾರ್ಟ್ ನಲ್ಲಿ ಸೆಮಿಕಾನ್ ಇಂಡಿಯಾ 2024ನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭಿಕರನ್ನುದ್ದೇಶಿಸಿ ಭಾಷಣವನ್ನು ಕೂಡಾ ಮಾಡಲಿದ್ದಾರೆ.

ಅರೆವಾಹಕ ವಿನ್ಯಾಸ, ಉತ್ಪಾದನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಯ ಜಾಗತಿಕ ಕೇಂದ್ರವಾಗಿ ಭಾರತವನ್ನು ಸ್ಥಾಪಿಸುವುದು ಪ್ರಧಾನಿಯವರ ದೃಷ್ಟಿಕೋನವಾಗಿದ್ದು, ಈ ದೃಷ್ಟಿಕೋನಕ್ಕೆ ಅನುಗುಣವಾಗಿ, ಸೆಮಿಕಾನ್ ಇಂಡಿಯಾ 2024ನ್ನು ಸೆಪ್ಟೆಂಬರ್ 11 ರಿಂದ 13ರವರೆಗೆ "ಅರೆವಾಹಕ ಭವಿಷ್ಯ ರೂಪಕ" ಎಂಬ ಧ್ಯೇಯವಾಕ್ಯದೊಂದಿಗೆ ಆಯೋಜಿಸಲಾಗಿದೆ.

ಸೆಪ್ಟೆಂಬರ್ 11 ರಿಂದ 13 ರವರೆಗೆ ಮೂರು ದಿನಗಳವರೆಗೆ ನಡೆಯಲಿರುವ ಈ ಸಮ್ಮೇಳನದಲ್ಲಿ ಭಾರತದ ಅರೆವಾಹಕ ಕಾರ್ಯತಂತ್ರ ನೀತಿಯನ್ನು ಪ್ರದರ್ಶಿಸಲಾಗುವುದು. ಇದು ಭಾರತವನ್ನು ಅರೆವಾಹಕದ ಜಾಗತಿಕ ಕೇಂದ್ರವನ್ನಾಗಿ ಮಾಡುವ ಉದ್ದೇಶವನ್ನು ಹೊಂದಿದೆ. ಈ ಸಮ್ಮೇಳನವು ಜಾಗತಿಕ ಅರೆವಾಹಕ ದೈತ್ಯರ ಉನ್ನತ ನಾಯಕತ್ವದ ಭಾಗವಹಿಸುವಿಕೆಗೆ ಸಾಕ್ಷಿಯಾಗಲಿದ್ದು ಜಾಗತಿಕ ನಾಯಕರು, ಕಂಪನಿಗಳು, ಅರೆವಾಹಕ ಉದ್ಯಮದ ತಜ್ಞರನ್ನು ಒಟ್ಟುಗೂಡಿಸುತ್ತದೆ. ಸಮ್ಮೇಳನದಲ್ಲಿ 250ಕ್ಕೂ ಹೆಚ್ಚು ಪ್ರದರ್ಶಕರು ಮತ್ತು 150 ಭಾಷಣಕಾರರು ಭಾಗವಹಿಸಲಿದ್ದಾರೆ.

 

*****


(Release ID: 2053381) Visitor Counter : 118