ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ಡಾ. ಮನ್ಸುಖ್ ಮಾಂಡವಿಯಾ ಪ್ಯಾರಾ-ಕ್ರೀಡಾಪಟುಗಳ ಸಾಧನೆಗಳನ್ನು ಶ್ಲಾಘಿಸಿದ್ದಾರೆ; 2047 ರ ವೇಳೆಗೆ 'ವಿಕಸಿತ ಭಾರತ' ಸಾಧಿಸಲು ಕ್ರೀಡಾ ಶ್ರೇಷ್ಠತೆಗೆ ಕರೆ ನೀಡಿದರು


ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಿಂದ ಹಿಂದಿರುಗಿದ ಆರು ಪದಕ ವಿಜೇತರನ್ನು ಕೇಂದ್ರ ಸಚಿವರು ಸನ್ಮಾನಿಸಿದರು

Posted On: 07 SEP 2024 6:06PM by PIB Bengaluru

ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಪ್ಯಾರಾ ಒಲಿಂಪಿಕ್ಸ್‌ನ ಪ್ಯಾರಾ ಶೂಟಿಂಗ್‌ ವಿಭಾಗದಲ್ಲಿ ಪದಕ ಗೆದ್ದು ಭಾರತಕ್ಕೆ ಹಿಂದಿರುಗಿದ ಭಾರತೀಯ ಪ್ಯಾರಾ-ಶೂಟಿಂಗ್ ತಂಡವನ್ನು ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡೆ ಮತ್ತು ಕಾರ್ಮಿಕ ಮತ್ತು ಉದ್ಯೋಗ ಸಚಿವ ಡಾ. ಮನ್ಸುಖ್ ಮಾಂಡವಿಯಾ ಜೊತೆಗೆ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ರಾಜ್ಯ ಸಚಿವರಾದ ಶ್ರೀಮತಿ ರಕ್ಷಾ ಖಡ್ಸೆ, ಇಂದು ನವದೆಹಲಿಯಲ್ಲಿ ಅಭಿನಂದಿಸಿದರು.

ತಂಡವು ಪ್ಯಾರಿಸ್‌ನಲ್ಲಿ ಒಟ್ಟು 4 ಪದಕಗಳನ್ನು ತನ್ನದಾಗಿಸಿಕೊಂಡಿತು, ಅವನಿ ಲೆಖರಾ (ಚಿನ್ನ), ಮನೀಶ್ ನರ್ವಾಲ್ (ಬೆಳ್ಳಿ), ರುಬಿನಾ ಫ್ರಾನ್ಸಿಸ್ (ಕಂಚು) ಮತ್ತು ಮೋನಾ ಅಗರ್ವಾಲ್ (ಕಂಚಿನ) ಪದಕ ಗೆದ್ದ ವಿಜೇತರು.ಡಾ. ಮಾಂಡವೀಯ ಅವರು ಕ್ರೀಡಾಪಟುಗಳು, ತರಬೇತುದಾರರು ಮತ್ತು ಅವರ ಸಹಾಯಕ ಸಿಬ್ಬಂದಿಯನ್ನು ಅಭಿನಂದಿಸಿದರು. ನಂತರ ಮಾತನಾಡಿದ ಸಚಿವರು, "ನೀವು ಆಡುವಾಗ, ನೀವು ಕೇವಲ ನಿಮಗಾಗಿ ಯಶಸ್ಸನ್ನು ಸಾಧಿಸುವುದಿಲ್ಲ ಆದರೆ ನಿಮ್ಮ ತರಬೇತುದಾರರು, ನಿಮ್ಮ ಪೋಷಕರು ಮತ್ತು ಇಡೀ ರಾಷ್ಟ್ರಕ್ಕೆ ಹೆಮ್ಮೆ ತರುತ್ತೀರಿ" ಎಂದು ಹೇಳಿದರು. "ನಮ್ಮ ಎಲ್ಲಾ 84 ಪ್ಯಾರಾ-ಅಥ್ಲೀಟ್‌ಗಳು ಪ್ಯಾರಿಸ್‌ಗೆ ತೆರಳುವ ಮೊದಲು ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಕೆಲವರು ಪದಕಗಳೊಂದಿಗೆ ಮರಳಿದರು, ಮತ್ತು ಇತರರು ಅಮೂಲ್ಯವಾದ ಅನುಭವವನ್ನು ಪಡೆದರು. ನಾವು ಈ ಅನುಭವಗಳನ್ನು ಬೆಳೆಸಿಕೊಳ್ಳೋಣ ಮತ್ತು ದೃಢಸಂಕಲ್ಪದಿಂದ ಮುಂದುವರಿಯೋಣ. ಯಾವಾಗಲೂ ಪದಕ ಗೆಲ್ಲುವ ಗುರಿಯನ್ನು ಹೊಂದಿರಿ ಎಂದು ತಿಳಿಸಿದರು.

ಕ್ರೀಡೆಯನ್ನು ರಾಷ್ಟ್ರೀಯ ಪ್ರಗತಿಯ ಮೂಲಾಧಾರವಾಗಿ ಅಭಿವೃದ್ಧಿಪಡಿಸುವ ಸರ್ಕಾರದ ಬದ್ಧತೆಯನ್ನು ಸಚಿವರು ಪುನರುಚ್ಚರಿಸಿದರು. "2047 ರ ವೇಳೆಗೆ ಸ್ವಾತಂತ್ರ್ಯದ 100 ವರ್ಷಗಳನ್ನು ಆಚರಿಸುವ 'ವಿಕಸಿತ ಭಾರತ' ದೃಷ್ಟಿಯನ್ನು ಈಡೇರಿಸಲು ಮುಂಬರುವ ಸ್ಪರ್ಧೆಗಳಲ್ಲಿ ನಾವು ಉತ್ತಮ ಪ್ರದರ್ಶನವನ್ನು ಮುಂದುವರಿಸಬೇಕು. ಸರ್ಕಾರವು ಎಲ್ಲಾ ಆಟಗಾರರಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ತರಬೇತಿಯನ್ನು ಖಚಿತಪಡಿಸುತ್ತದೆ ಮತ್ತು ನಮ್ಮ ಕ್ರೀಡಾಪಟುಗಳು ಮತ್ತು ತರಬೇತುದಾರರಿಗೆ ಬೆಂಬಲವನ್ನು ಮುಂದುವರಿಸುತ್ತದೆ" ಎಂದು ಅವರು ಹೇಳಿದರು. 

ಅವನಿ ಲೆಖರಾ R2 - ಮಹಿಳೆಯರ 10m ಏರ್ ರೈಫಲ್ ಸ್ಟ್ಯಾಂಡಿಂಗ್ SH1 ಈವೆಂಟ್‌ನಲ್ಲಿ 249.7 ಪಾಯಿಂಟ್‌ಗಳ ಹೊಸ ಪ್ಯಾರಾಲಿಂಪಿಕ್ ದಾಖಲೆಯೊಂದಿಗೆ (PR) ಚಿನ್ನದ ಪದಕವನ್ನು ಗೆದ್ದರು. ಟೋಕಿಯೊ 2020 ಕ್ರೀಡಾಕೂಟದಲ್ಲಿಯೂ ಪದಕ ಗೆದ್ದಿದ್ದರು. ಅವರು ಚಿನ್ನ ಗೆದ್ದ ಏಕೈಕ ಭಾರತೀಯ ಮಹಿಳಾ ಅಥ್ಲೀಟ್ ಆಗಿದ್ದಾರೆ. ಪ್ಯಾರಾಲಿಂಪಿಕ್ಸ್ ಅಥವಾ ಒಲಿಂಪಿಕ್ಸ್‌ನಲ್ಲಿ ಎರಡು ಬಾರಿ ಪದಕ ಪಡೆದಿದ್ದಾರೆ.

ಈ ತಂಡದಲ್ಲಿ ಪ್ಯಾರಾ ಆರ್ಚರ್ ರಾಕೇಶ್ ಕುಮಾರ್ ಮತ್ತು ಪ್ಯಾರಾ ಅಥ್ಲೀಟ್ ಪ್ರಣವ್ ಸೂರ್ಮಾ ಕೂಡ ಇದ್ದರು. ಮಿಶ್ರ ತಂಡದ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ರಾಕೇಶ್ ಅವರು ಶೀತಲ್ ದೇವಿಯೊಂದಿಗೆ ಕಂಚಿನ ಪದಕವನ್ನು ಪಡೆದರು; ಪ್ಯಾರಾಲಿಂಪಿಕ್ಸ್‌ನಲ್ಲಿ ಕಾಂಪೌಂಡ್ ಆರ್ಚರಿಯಲ್ಲಿ ಭಾರತಕ್ಕೆ ಮೊದಲ ಪದಕ ಬಂದಿದೆ. 39ರ ಹರೆಯದ ರಾಕೇಶ್ 4ನೇ ಸ್ಥಾನ ಪಡೆದು ವೈಯಕ್ತಿಕ ಸ್ಪರ್ಧೆಯಲ್ಲಿ 1 ಅಂಕದಿಂದ ಕಂಚಿನ ಪದಕದಿಂದ ವಂಚಿತರಾದರು.

ಪುರುಷರ ಕ್ಲಬ್ ಥ್ರೋ ಎಫ್ 51 ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಪ್ರಣವ್, ಅದೇ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಪಡೆದ ದೇಶವಾಸಿ ಧರಂಬೀರ್ ಅವರೊಂದಿಗೆ ವೇದಿಕೆಯನ್ನು ಹಂಚಿಕೊಂಡರು.

06.09.2024 ರಂದು ದಿನದ ಈವೆಂಟ್‌ಗಳ ಅಂತ್ಯದ ನಂತರ ಭಾರತವು ಒಟ್ಟು 27 ಪದಕಗಳನ್ನು (6 ಚಿನ್ನ, 9 ಬೆಳ್ಳಿ, 12 ಕಂಚು) ಗೆದ್ದುಕೊಂಡಿದೆ. ನಿನ್ನೆ, ಟೋಕಿಯೊ 2020 ರ ಬೆಳ್ಳಿ ಪದಕ ವಿಜೇತ ಪ್ರವೀಣ್ ಕುಮಾರ್ ಅವರು ಪುರುಷರ ಹೈ ಜಂಪ್ - T64 ಈವೆಂಟ್‌ನಲ್ಲಿ ತಮ್ಮ ವೈಯಕ್ತಿಕ ಅತ್ಯುತ್ತಮ 2.08 ಮೀ ಜಿಗಿತದೊಂದಿಗೆ ಚಿನ್ನದ ಪದಕವನ್ನು ಗೆದ್ದರು; ಇದು ಮತ್ತೊಂದು ದಾಖಲೆ ಕೂಡ ಆಗಿದೆ.

ಖೇಲೋ ಇಂಡಿಯಾದ ಅಥ್ಲೀಟ್ ಮತ್ತು ಪ್ಯಾರಾಲಿಂಪಿಕ್ಸ್ ಚೊಚ್ಚಲ ಆಟಗಾರ 40 ವರ್ಷ ವರ್ಷದ ಹೊಕಾಟೊ ಸೆಮಾ ಪುರುಷರ ಶಾಟ್ ಪುಟ್ - ಎಫ್ 57 ಸ್ಪರ್ಧೆಯಲ್ಲಿ 14.65 ಮೀ ವೈಯಕ್ತಿಕ ಬೆಸ್ಟ್ ಥ್ರೋನೊಂದಿಗೆ ಕಂಚಿನ ಪದಕವನ್ನು ಗೆದ್ದರು. ಪ್ಯಾರಾಲಿಂಪಿಕ್ಸ್‌ನ ಈ ಆವೃತ್ತಿಯಲ್ಲಿ ಪದಕ ಗೆದ್ದ ಅತ್ಯಂತ ಹಿರಿಯ ಭಾರತೀಯ ಕ್ರೀಡಾಪಟುವಾಗಿದ್ದಾರೆ.

 

*****


(Release ID: 2052897) Visitor Counter : 36