ಭಾರೀ ಕೈಗಾರಿಕೆಗಳ ಸಚಿವಾಲಯ
ಭಾರೀ ಕೈಗಾರಿಕೆಗಳ ಸಚಿವಾಲಯವು ಪಿ ಎಲ್ ಐ ಎ ಸಿ ಸಿ ಯೋಜನೆಯಡಿಯಲ್ಲಿ 10 GWh ಸಾಮರ್ಥ್ಯವನ್ನು ಒಬ್ಬ ಬಿಡ್ಡುದಾರರಿಗೆ ನೀಡಿದೆ
ಪಿ ಎಲ್ ಐ ಎಸಿಸಿ ಯೋಜನೆಯಡಿಯಲ್ಲಿ ಒಟ್ಟು 10 GWh ಸಾಮರ್ಥ್ಯದ ಗಿಗಾ-ಸ್ಕೇಲ್ ಅಡ್ವಾನ್ಸ್ಡ್ ಕೆಮಿಸ್ಟ್ರಿ ಸೆಲ್ (ಎಸಿಸಿ) ಉತ್ಪಾದನಾ ಸೌಲಭ್ಯಗಳನ್ನು ಸ್ಥಾಪಿಸಲು ಬಿಡ್ಡರ್ ಗಳ ಆಯ್ಕೆಗಾಗಿ ಜಾಗತಿಕ ಟೆಂಡರ್ ನಲ್ಲಿ ಏಳು ಬಿಡ್ ಗಳನ್ನು ಸ್ವೀಕರಿಸಲಾಗಿತ್ತು
ಪಿ ಎಲ್ ಐ ಎಸಿಸಿ ಯೋಜನೆಯು ಭಾರತದಲ್ಲಿ ತಂತ್ರಜ್ಞಾನ ಸವಾಲಿನ ಸುಧಾರಿತ ರಾಸಾಯನಿಕ ಕೋಶಗಳ ತಯಾರಿಕೆಯನ್ನು ಉತ್ತೇಜಿಸುತ್ತದೆ
ಪ್ರಧಾನಿ ನರೇಂದ್ರ ಮೋದಿಯವರ ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತ ಅಭಿಯಾನಕ್ಕೆ ಪ್ರಮುಖ ಉತ್ತೇಜನ
Posted On:
04 SEP 2024 3:37PM by PIB Bengaluru
ಭಾರತ ಸರ್ಕಾರದ ಬೃಹತ್ ಕೈಗಾರಿಕೆಗಳ ಸಚಿವಾಲಯ (ಎಂ ಎಚ್ ಐ) ಅಡ್ವಾನ್ಸ್ಡ್ ಕೆಮಿಸ್ಟ್ರಿ ಸೆಲ್ (ಎಸಿಸಿ) ಬ್ಯಾಟರಿ ಸಂಗ್ರಹಣೆಗಾಗಿ ಉತ್ಪಾದನೆ ಆಧಾರಿತ ಪ್ರೋತ್ಸಾಹ (ಪಿ ಎಲ್ ಐ) ಯೋಜನೆಯಡಿಯಲ್ಲಿ ಯಶಸ್ವಿ ಬಿಡ್ ದಾರರ ಆಯ್ಕೆಯನ್ನು ಪ್ರಕಟಿಸಿದೆ. QCBS ಕಾರ್ಯವಿಧಾನದ ಆಧಾರದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಗೆ 10 GWh (ಗಿಗಾ ವ್ಯಾಟ್ ಅವರ್ಸ್) ಎಸಿಸಿ ಸಾಮರ್ಥ್ಯವನ್ನು ಉತ್ಪಾದನೆ ಆಧಾರಿತ ಪ್ರೋತ್ಸಾಹ (ಪಿ ಎಲ್ ಐ) ಯೋಜನೆಯಡಿಯಲ್ಲಿ ನೀಡಲಾಗಿದೆ. ಈ ಉಪಕ್ರಮವು ದೇಶೀಯ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಮತ್ತೊಂದು ಹೆಜ್ಜೆಯಾಗಿದೆ, ಆಮದು ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಮತ್ತು ಎಸಿಸಿ ಬ್ಯಾಟರಿ ತಯಾರಿಕೆಯಲ್ಲಿ ಭಾರತವನ್ನು ಜಾಗತಿಕ ನಾಯಕನಾಗಿ ಇರಿಸುತ್ತದೆ.
ಬೃಹತ್ ಕೈಗಾರಿಕೆಗಳ ಸಚಿವಾಲಯವು (ಎಂ ಎಚ್ ಐ) ಜಾಗತಿಕ ಟೆಂಡರ್ ಅಡಿಯಲ್ಲಿ ಏಳು ಬಿಡ್ ದಾರರಿಂದ ಬಿಡ್ ಗಳನ್ನು ಸ್ವೀಕರಿಸಿತ್ತು. 10 GWh ಅಡ್ವಾನ್ಸ್ಡ್ ಕೆಮಿಸ್ಟ್ರಿ ಸೆಲ್ (ಎಸಿಸಿ) ಉತ್ಪಾದನೆಗೆ 3,620 ಕೋಟಿ ರೂ.ಗಳ ಗರಿಷ್ಠ ಬಜೆಟ್ ವೆಚ್ಚದೊಂದಿಗೆ ಉತ್ಪಾದನಾ ಆಧಾರಿತ ಪ್ರೋತ್ಸಾಹ್ಕಾಗಿ 24 ಜನವರಿ 2024 ರಂದು ಟೆಂಡರ್ ಕರೆದಿತ್ತು.
70 GWh ಸಂಚಿತ ಸಾಮರ್ಥ್ಯದ ಈ ಟೆಂಡರ್ ಗೆ ಪ್ರತಿಕ್ರಿಯೆಯಾಗಿ ಬಿಡ್ ಗಳನ್ನು ಸಲ್ಲಿಸಿದ ಬಿಡ್ಡರ್‌ಗಳ ಪಟ್ಟಿ (ವರ್ಣಮಾಲೆಯ ಕ್ರಮದಲ್ಲಿ) ಹೀಗಿವೆ: ಎಸಿಎಂಇ ಕ್ಲೀನ್‌ಟೆಕ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್, ಅಮರ ರಾಜ ಅಡ್ವಾನ್ಸ್‌ಡ್ ಸೆಲ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಅನ್ವಿ ಪವರ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್, ಜೆ ಎಸ್ ಡಬ್ಲ್ಯು ನಿಯೋ ಎನರ್ಜಿ ಲಿಮಿಟೆಡ್, ಲುಕಾಸ್ ಟಿವಿಎಸ್ ಲಿಮಿಟೆಡ್, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ವಾರೀ ಎನರ್ಜಿಸ್ ಲಿಮಿಟೆಡ್.
ಎಲ್ಲಾ ಏಳು ಬಿಡ್ ಗಳನ್ನು ಮೌಲ್ಯಮಾಪನ ಮಾಡಲಾಯಿತು ಮತ್ತು ಆರು ಕಂಪನಿಗಳನ್ನು ಆರ್ ಎಫ್ ಪಿ ಅಡಿಯಲ್ಲಿ ಅಗತ್ಯತೆಗಳ ಪ್ರಕಾರ ಹಣಕಾಸಿನ ಮೌಲ್ಯಮಾಪನಕ್ಕಾಗಿ ಆಯ್ಕೆ ಮಾಡಲಾಯಿತು. ಅಂತೆಯೇ, ಭಾರತ ಸರ್ಕಾರದ ಸಿಪಿಪಿ ಪೋರ್ಟಲ್ ಮೂಲಕ ಆರ್ ಎಫ್ ಪಿ ಯ ಪಾರದರ್ಶಕ ಜಾಗತಿಕ ಟೆಂಡರ್ ಪ್ರಕ್ರಿಯೆಯ ಅಡಿಯಲ್ಲಿ ತಾಂತ್ರಿಕ ಮೌಲ್ಯಮಾಪನದ ಫಲಿತಾಂಶಗಳನ್ನು ಪ್ರಕಟಿಸಿದ ನಂತರ ಅರ್ಹ ಬಿಡ್ ದಾರರಿಗೆ ಹಣಕಾಸು ಬಿಡ್‌ಗಳನ್ನು ಆಗಸ್ಟ್ 2, 2024 ರಂದು ತೆರೆಯಲಾಯಿತು.
ಗುಣಮಟ್ಟ ಮತ್ತು ವೆಚ್ಚ ಆಧಾರಿತ ಆಯ್ಕೆ (QCBS) ಕಾರ್ಯವಿಧಾನದ ಪ್ರಕಾರ ಶಾರ್ಟ್ ಲಿಸ್ಟ್ ಮಾಡಲಾದ ಬಿಡ್ ದಾರರ ಅಂತಿಮ ಮೌಲ್ಯಮಾಪನವನ್ನು ಕೈಗೊಳ್ಳಲಾಯಿತು ಮತ್ತು ಬಿಡ್ ದಾರರಿಗೆ ಅವರ ಸಂಯೋಜಿತ ತಾಂತ್ರಿಕ ಮತ್ತು ಆರ್ಥಿಕ ಅಂಕಗಳ ಆಧಾರದ ಮೇಲೆ ಶ್ರೇಯಾಂಕ ನೀಡಲಾಯಿತು. ಸಚಿವಾಲಯವು 10 GWh ಪಿ ಎಲ್ ಐ ಎಸಿಸಿ ಸಾಮರ್ಥ್ಯವನ್ನು ಒಟ್ಟು ಶ್ರೇಯಾಂಕದಲ್ಲಿ ಅಗ್ರ ಸ್ಥಾನದಲ್ಲಿದ್ದ ಬಿಡ್ ದಾರರಿಗೆ ಅಂದರೆ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಗೆ ನೀಡಿದೆ. ಉಳಿದ ಐದು ಶಾರ್ಟ್ ಲಿಸ್ಟ್ ಮಾಡಿದ ಬಿಡ್ಡರ್ ಗಳನ್ನು ಅವರ ಶ್ರೇಯಾಂಕದ ಪ್ರಕಾರ ಕಾಯುವ ಪಟ್ಟಿಯಲ್ಲಿ ಇರಿಸಲಾಗಿದೆ. ಇದು ಶ್ರೇಯಾಂಕ II ರಿಂದ ಪ್ರಾರಂಭವಾಗಿದೆ. ಕಾರ್ಯಕ್ರಮದ ಅಡಿಯಲ್ಲಿ ಕಾಯುವ ಪಟ್ಟಿಯಲ್ಲಿರುವ ಬಿಡ್ ದಾರರು: ಎಸಿಎಂಇ ಕ್ಲೀನ್‌ಟೆಕ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ (ವೇಟ್ ಲಿಸ್ಟ್ 1), ಅಮರ ರಾಜ ಅಡ್ವಾನ್ಸ್‌ಡ್ ಸೆಲ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ (ವೇಟ್ ಲಿಸ್ಟ್ 2), ವಾರೀ ಎನರ್ಜಿಸ್ ಲಿಮಿಟೆಡ್ (ವೇಟ್ ಲಿಸ್ಟ್ 3), ಜೆ ಎಸ್ ಡಬ್ಲ್ಯೂ ನಿಯೋ ಎನರ್ಜಿ ಲಿಮಿಟೆಡ್ (ವೇಟ್ ಲಿಸ್ಟ್4 ) ಮತ್ತು ಲುಕಾಸ್ ಟಿವಿಎಸ್ ಲಿಮಿಟೆಡ್ (ವೇಟ್ ಲಿಸ್ಟ್ 5).
ಮೇ 2021 ರಲ್ಲಿ, 18,100 ಕೋಟಿ ರೂ ವೆಚ್ಚದಲ್ಲಿ ಎಸಿಸಿಯ ಐವತ್ತು (50) ಗಿಗಾ ವ್ಯಾಟ್ ಅವರ್ಸ್ (GWh) ಉತ್ಪಾದನಾ ಸಾಮರ್ಥ್ಯವನ್ನು ಸಾಧಿಸಲು 'ನ್ಯಾಷನಲ್ ಪ್ರೋಗ್ರಾಂ ಆನ್ ಅಡ್ವಾನ್ಸ್ಡ್ ಕೆಮಿಸ್ಟ್ರಿ ಸೆಲ್ (ಎಸಿಸಿ) ಬ್ಯಾಟರಿ ಸ್ಟೋರೇಜ್' ನಲ್ಲಿ ತಂತ್ರಜ್ಞಾನ ಸವಾಲಿನ ಪಿ ಎಲ್ ಐ ಯೋಜನೆಗೆ ಸಂಪುಟವು ಅನುಮೋದನೆ ನೀಡಿತು. ಎಸಿಸಿ ಪಿ ಎಲ್ ಐ ಬಿಡ್ಡಿಂಗ್ ನ ಮೊದಲ ಸುತ್ತನ್ನು ಮಾರ್ಚ್ 2022 ರಲ್ಲಿ ಮುಕ್ತಾಯಗೊಳಿಸಲಾಯಿತು ಮತ್ತು ಮೂರು ಫಲಾನುಭವಿ ಸಂಸ್ಥೆಗಳಿಗೆ ಒಟ್ಟು ಮೂವತ್ತು ಗಿಗಾ ವ್ಯಾಟ್ ಅವರ್ಸ್ (GWh) ಸಾಮರ್ಥ್ಯವನ್ನು ಹಂಚಲಾಯಿತು ಮತ್ತು ಆಯ್ದ ಫಲಾನುಭವಿ ಸಂಸ್ಥೆಗಳೊಂದಿಗೆ ಕಾರ್ಯಕ್ರಮ ಒಪ್ಪಂದಕ್ಕೆ ಜುಲೈ 2022 ರಲ್ಲಿ ಸಹಿ ಮಾಡಲಾಯಿತು.
ಪಿ ಎಲ್ ಐ ಎಸಿಸಿ ಯೋಜನೆಯು ಭಾರತದಲ್ಲಿ ಸುಧಾರಿತ ರಾಸಾಯನಿಕ ಕೋಶಗಳನ್ನು ತಯಾರಿಸಲು ಪಡೆದ ಬಿಡ್ ಗಳ ವಿಷಯದಲ್ಲಿ ಪ್ರಮುಖ ಯಶಸ್ಸನ್ನು ಕಂಡಿದೆ. ಈ ಅಗಾಧ ಪ್ರತಿಕ್ರಿಯೆಯು ಉದ್ಯಮವು ವಿಶ್ವ ದರ್ಜೆಯ ಉತ್ಪಾದನಾ ತಾಣವಾಗಿ ಭಾರತದ ಪ್ರಚಂಡ ಬೆಳವಣಿಗೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿದೆ ಎಂದು ತೋರಿಸುತ್ತದೆ, ಇದು ಸ್ವಾವಲಂಬಿ ಭಾರತಕ್ಕಾಗಿ ಪ್ರಧಾನ ಮಂತ್ರಿಯವರ ಕರೆಯನ್ನು ಬಲವಾಗಿ ಪ್ರತಿಧ್ವನಿಸುತ್ತದೆ.
*****
(Release ID: 2051776)
Visitor Counter : 37