ರಕ್ಷಣಾ ಸಚಿವಾಲಯ
ಐ.ಎ.ಎಫ್.ನ ಎಸ್.ಯು-30 ಎಂ.ಕೆ.ಐ ವಿಮಾನಕ್ಕಾಗಿ ರೂಪಾಯಿ 26,000 ಕೋಟಿ ಮೌಲ್ಯದ 240 ಏರೋ-ಎಂಜಿನ್ ಗಳನ್ನು ಎಚ್.ಎ.ಎಲ್.ನಿಂದ ಖರೀದಿಗೆ ಭದ್ರತಾ ಸಂಪುಟ ಸಮಿತಿ ಅನುಮೋದನೆ ನೀಡಿದೆ
Posted On:
02 SEP 2024 8:24PM by PIB Bengaluru
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್.ಎ.ಎಲ್.) ನಿಂದ ಖರೀದಿ (ಭಾರತೀಯ ಉತ್ಪನ್ನ) ವರ್ಗದ ಅಡಿಯಲ್ಲಿ ಭಾರತೀಯ ವಾಯುಪಡೆಯ (ಐಎಎಫ್) ಎಸ್.ಯು.-30 ಎಂ.ಕೆ.ಐ. ವಿಮಾನಗಳಿಗಾಗಿ ಎಲ್ಲಾ ತೆರಿಗೆಗಳು ಮತ್ತು ಸುಂಕಗಳನ್ನು ಒಳಗೊಂಡಂತೆ ರೂಪಾಯಿ 26,000 ಕೋಟಿ ಮೌಲ್ಯದ 240 ಎಲ್-31 ಎಫ್.ಪಿ ಏರೋ-ಎಂಜಿನ್ ಗಳನ್ನು ಖರೀದಿಸುವ ಪ್ರಸ್ತಾಪವನ್ನು ಸೆಪ್ಟಂಬರ್ 02, 2024 ರಂದು ನಡೆದ ಭದ್ರತಾ ಸಂಪುಟ ಸಮಿತಿಯು ಅನುಮೋದಿಸಿತು. ಈ ಏರೋ-ಎಂಜಿನ್ ಗಳ ವಿತರಣೆಯು ಒಂದು ವರ್ಷದ ನಂತರ ಪ್ರಾರಂಭವಾಗುತ್ತದೆ ಮತ್ತು ಎಂಟು ವರ್ಷಗಳ ಅವಧಿಯಲ್ಲಿ ಪೂರ್ಣಗೊಳ್ಳುತ್ತದೆ.
ಏರೋ - ಎಂಜಿನ್ ಗಳ ಕೆಲವು ಪ್ರಮುಖ ಘಟಕಗಳ ಸ್ವದೇಶೀಕರಣದ ಕಾರಣದಿಂದಾಗಿ ವರ್ಧಿಸಲಾಗಿದೆ, ಇಂಜಿನ್ ಗಳು 54% ಕ್ಕಿಂತ ಹೆಚ್ಚು ಸ್ಥಳೀಯ ವಸ್ತುಗಳನ್ನು ಹೊಂದಿರುತ್ತವೆ. ಇವುಗಳನ್ನು ಎಚ್.ಎ.ಎಲ್.ನ ಕೊರಾಪುಟ್ ಘಟಕದಲ್ಲಿ ತಯಾರಿಸಲಾಗುವುದು.
ಐ.ಎ.ಎಫ್ ನಾ ಈ ಎಸ್.ಯು.-30 ಎಂ.ಕೆ.ಐ.-30 ಅತ್ಯಂತ ಶಕ್ತಿಶಾಲಿ ಮತ್ತು ಕಾರ್ಯತಂತ್ರವಾಗಿ ಅತಿ ಮಹತ್ವದ ಯುದ್ಧ ವಾಹನವಾಗಿದೆ. ಎಚ್.ಎ.ಎಲ್.ನಿಂದ ಈ ಸ್ವದೇಶಿ ನಿರ್ಮಿತ ಏರೋ-ಎಂಜಿನ್ ಗಳ ಪೂರೈಕೆಯು ತಮ್ಮ ಅಡೆತಡೆಯಿಲ್ಲದ ಕಾರ್ಯಾಚರಣೆಯನ್ನು ಮುಂದುವರಿಸಲು ಮತ್ತು ದೇಶದ ರಕ್ಷಣಾ ಸನ್ನದ್ಧತೆಯನ್ನು ಬಲಪಡಿಸಲು ಹಾಗೂ ಐ.ಎ.ಎಫ್ ನ ಯುದ್ಧ ವಿಮಾನ ಪೋಷಣೆಯ ಅಗತ್ಯವನ್ನು ಪೂರೈಸುತ್ತದೆ.
*****
(Release ID: 2051181)
Visitor Counter : 31