ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

ಶೈಕ್ಷಣಿಕ ಸಂಶೋಧನೆಯನ್ನು ಮಾನದಂಡಗಳೊಂದಿಗೆ ಸಂಯೋಜಿಸಿ ಅವಳಿ ಸಮಾವೇಶ ಆಯೋಜಿಸಿದ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ 

Posted On: 30 AUG 2024 1:21PM by PIB Bengaluru

ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿ.ಐ.ಎಸ್) ಉದಯಪುರ (ರಾಜಸ್ಥಾನ) ಮತ್ತು ಧರ್ಮಶಾಲಾ (ಹಿಮಾಚಲ ಪ್ರದೇಶ) ಗಳಲ್ಲಿ ಅವಳಿ ಸಮಾವೇಶಗಳನ್ನು ಆಯೋಜಿಸಿದ್ದು, ಶೈಕ್ಷಣಿಕ ಸಂಶೋಧನೆಯನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಮಾಣೀಕರಣದ ಅಗತ್ಯತೆಗಳೊಂದಿಗೆ ಜಾಗತಿಕ ಬೆಳವಣಿಗೆಗಳ ಜೊತೆಗೆ ಜೋಡಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ ಹಾಗೂ ಭಾರತದ ಗುಣಮಟ್ಟವು ಮುಂಚೂಣಿಯಲ್ಲಿದೆ ಎಂದು ಖಚಿತಪಡಿಸುತ್ತದೆ.

ಬಿ.ಐ.ಎಸ್. ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪಾಲುದಾರ ಸಂಸ್ಥೆಗಳ ಡೀನ್ ಗಳು ಮತ್ತು ವಿಭಾಗಗಳ ಮುಖ್ಯಸ್ಥರಿಗಾಗಿ (ಎಚ್.ಒ.ಡಿ.ಗಳು) ಒಂದು ಸಮಾವೇಶವನ್ನು ಆಯೋಜಿಸಿದೆ. 2024 ರ ಆಗಸ್ಟ್ 23 ಮತ್ತು 24 ರಂದು ಉದಯಪುರದಲ್ಲಿ ಈ ಮೊದಲು ಇಂತಹ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಬಿ.ಐ.ಎಸ್. ನ ಮಹಾನಿರ್ದೇಶಕರಾದ ಶ್ರೀ ಪ್ರಮೋದ್ ಕುಮಾರ್ ತಿವಾರಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು, ಪ್ರಮಾಣೀಕರಣ ಪ್ರಕ್ರಿಯೆಯಲ್ಲಿ ಶಿಕ್ಷಣದ ಪ್ರಮುಖ ಪಾತ್ರವನ್ನು ವಿವರಿಸಿದರು. ಪ್ರಮಾಣೀಕರಣದಲ್ಲಿ ಅಕಾಡೆಮಿಯ ವಿರಳವಾದ ಒಳಗೊಳ್ಳುವಿಕೆ, ನಡೆಯುತ್ತಿರುವ ಸಂಶೋಧನೆಯ ನಡುವಿನ ಸಿನರ್ಜಿಯ ಕೊರತೆ ಮತ್ತು ಪ್ರಮಾಣೀಕರಣಕ್ಕೆ ಅದರ ಪ್ರಸ್ತುತತೆ ಮತ್ತು ಅಂತರಾಷ್ಟ್ರೀಯ ಪ್ರಮಾಣೀಕರಣದಲ್ಲಿ ಪಕ್ಷಪಾತವಿಲ್ಲದ ಭಾರತೀಯ ದೃಷ್ಟಿಕೋನದ ಪ್ರಾತಿನಿಧ್ಯ ಮುಂತಾದ ಉದಾಹರಣೆ ಜೊತೆಗೆ ಬಿ.ಐ.ಎಸ್.  ಎದುರಿಸುತ್ತಿರುವ ಸವಾಲುಗಳನ್ನು ಎತ್ತಿ ತೋರಿಸಿದರು.

ಸಮಾವೇಶವು ಸಿವಿಲ್ ಇಂಜಿನಿಯರಿಂಗ್ ವಿಭಾಗದ ಉನ್ನತ ಶಿಕ್ಷಣತಜ್ಞರನ್ನು ಒಟ್ಟುಗೂಡಿಸಿ, ಸಮಾನ ಜ್ಞಾನ ವಿನಿಮಯ ಮತ್ತು ಸಹಯೋಗಕ್ಕೆ ವೇದಿಕೆಯನ್ನು ಒದಗಿಸುವಲ್ಲಿ ಯಶಸ್ವಿಯಾಯಿತು.

ಇದೇ ರೀತಿಯ ಸಮಾವೇಶವನ್ನು ಏಕಕಾಲದಲ್ಲಿ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಕೂಡಾ ನಡೆಸಲಾಯಿತು. ಇದರಲ್ಲಿ ಕೆಮಿಕಲ್ ಎಂಜಿನಿಯರಿಂಗ್ ಮತ್ತು ರಸಾಯನಶಾಸ್ತ್ರ ವಿಭಾಗದ ಗಣ್ಯ ಶಿಕ್ಷಣತಜ್ಞರು ಭಾಗವಹಿಸಿದ್ದರು. ಉಪ ಮಹಾ ನಿರ್ದೇಶಕ ಶ್ರೀ ಚಂದನ್ ಬಹ್ಲ್ ಮತ್ತು ಜೊತೆಗೆ ಎಸ್.ಸಿ.-ಇ ಮತ್ತು ಬಿ.ಐ.ಎಸ್ ನ ಟಿ.ಎನ್.ಎಂ.ಡಿ ವಿಭಾಗದ ಮುಖ್ಯಸ್ಥ ಡಾ. ಸೂರ್ಯ ಕಲ್ಯಾಣಿ ಅಕಾಡೆಮಿಯ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು.  ಪ್ರಮುಖ ಭಾರತೀಯ ಮಾನದಂಡಗಳು ಮತ್ತು ಕೆಮಿಕಲ್ ಇಂಜಿನಿಯರಿಂಗ್ಹಾಗೂ ಪೆಟ್ರೋ ಕೆಮಿಕಲ್ ವಿಭಾಗದಲ್ಲಿ ನಡೆಯುತ್ತಿರುವ ಕೆಲಸಗಳ ಕುರಿತು ವಿವರವಾದ ಪ್ರಸ್ತುತಿಗಳ ಮೂಲಕ ಅಧಿವೇಶನವನ್ನು ಮುಂದುವರಿಸಲಾಯಿತು.  

ಬಿ.ಐ.ಎಸ್ ತನ್ನ ಸಹಭಾಗಿತ್ವವನ್ನು ದೇಶಾದ್ಯಂತ 92 ಶಿಕ್ಷಣ ಸಂಸ್ಥೆಗಳೊಂದಿಗೆ ಮಾಡಿಕೊಂಡಿರುವ ತಿಳಿವಳಿಕೆ ಒಪ್ಪಂದಗಳು / ಒಡಂಬಡಿಕೆಯ ಒಪ್ಪಂದಗಳು /ಜ್ಞಾಪಕ ಪತ್ರಗಳ ಮೂಲಕ ಬಲಪಡಿಸಿದೆ. ರಾಷ್ಟ್ರೀಯ ಪ್ರಮಾಣೀಕರಣ ಪ್ರಕ್ರಿಯೆಯಲ್ಲಿ ಶಿಕ್ಷಣವನ್ನು ನಿರ್ಣಾಯಕ ಮತ್ತು ಪಕ್ಷಪಾತವಿಲ್ಲದ ಮಧ್ಯಸ್ಥಗಾರ ಎಂದು ಗುರುತಿಸಿದೆ. ಈ ತಿಳಿವಳಿಕೆ ಒಪ್ಪಂದಗಳು ಶೈಕ್ಷಣಿಕ ಸಂಸ್ಥೆಗಳಿಗೆ ರಾಷ್ಟ್ರೀಯ ಮಾನದಂಡಗಳನ್ನು ರೂಪಿಸಲು ಬಿ.ಐ.ಎಸ್ ತಾಂತ್ರಿಕ ಸಮಿತಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಅವಕಾಶ ಮಾಡಿಕೊಡುತ್ತವೆ. ಬಿ.ಐ.ಎಸ್ ನೀಡುವ ಆರ್&ಡಿ ಯೋಜನೆಗಳನ್ನು ಕೈಗೊಳ್ಳಲು ಅವಕಾಶ ನೀಡುತ್ತವೆ ಮತ್ತು ಅಂತರರಾಷ್ಟ್ರೀಯ ಪ್ರಮಾಣೀಕರಣ ಪ್ರಯತ್ನಗಳಿಗೆ ಕೊಡುಗೆ ನೀಡುತ್ತವೆ.

ಎರಡೂ ಸಮಾವೇಶಗಳಲ್ಲಿ ಹಲವಾರು ತಾಂತ್ರಿಕ ಸಭೆಗಳನ್ನು ನಡೆಸಲಾಯಿತು, ಇದು ಸಿವಿಲ್ ಇಂಜಿನಿಯರಿಂಗ್, ಕೆಮಿಕಲ್ ಇಂಜಿನಿಯರಿಂಗ್ ಮತ್ತು ರಸಾಯನಶಾಸ್ತ್ರ ವಿಭಾಗದಲ್ಲಿ ಪ್ರಮಾಣೀಕರಣದ ತಾಂತ್ರಿಕ ಅಂಶಗಳ ಬಗ್ಗೆ ಉತ್ತಮ ಚರ್ಚೆ ಹಾಗೂ ಮೌಲ್ಯಯುತವಾದ ಒಳನೋಟಗಳನ್ನು ಒದಗಿಸಿತು.

 

*****


(Release ID: 2050092) Visitor Counter : 47