ಗೃಹ ವ್ಯವಹಾರಗಳ ಸಚಿವಾಲಯ

ನವದೆಹಲಿಯಲ್ಲಿರುವ ತನ್ನ ಪ್ರಧಾನ ಕಛೇರಿಯಲ್ಲಿ ಬ್ಯೂರೋ ಆಫ್ ಪೊಲೀಸ್ ರಿಸರ್ಚ್ ಅಂಡ್  ಡೆವಲಪ್ ಮೆಂಟ್ ತನ್ನ 54ನೇ ಸಂಸ್ಥಾಪನಾ ದಿನವನ್ನು ಆಚರಿಸಿತು


ಕೇಂದ್ರ ಗೃಹ ಕಾರ್ಯದರ್ಶಿ ಶ್ರೀ ಗೋವಿಂದ್ ಮೋಹನ್ ಅವರು "ಹೊಸ ಕ್ರಿಮಿನಲ್ ಕಾನೂನುಗಳು - ನಾಗರಿಕ ಕೇಂದ್ರಿತ ಸುಧಾರಣೆಗಳು" ವಿಷಯದ ಕುರಿತು ಡಾ ಆನಂದ್‌ ಸ್ವರೂಪ್ ಗುಪ್ತಾ ಸ್ಮಾರಕ ಉಪನ್ಯಾಸ ನೀಡಿದರು

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೀಡಿದ ‘ಪಂಚ ಪ್ರಾಣ’ ಸಂಕಲ್ಪಕ್ಕೆ ಅನುಗುಣವಾಗಿ ವಸಾಹತುಶಾಹಿಯ ಸಂಕೋಲೆಗಳನ್ನು ಮುರಿಯಲು ಕಾನೂನು ಜಾರಿ ಸಂಸ್ಥೆಗಳಿಗೆ ಸಮಕಾಲೀನ ಮತ್ತು ಸಂಬಂಧಿತ ಸಕಾಲಿಕ ನ್ಯಾಯಶಾಸ್ತ್ರದ ಅಗತ್ಯವನ್ನು ಗೃಹ ಕಾರ್ಯದರ್ಶಿ ಒತ್ತಿ ಹೇಳಿದರು

ಕೇಂದ್ರ ಗೃಹ  ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ತರಲಾದ ಹೊಸ ಅಪರಾಧ ಕಾನೂನುಗಳು ನೊಂದವರ ಕೇಂದ್ರಿತವಾಗಿವೆ ಮತ್ತು ಈ ಕಾನೂನುಗಳ ಉದ್ದೇಶವು ಶಿಕ್ಷೆಯಲ್ಲ ನ್ಯಾಯವನ್ನು ನೀಡುವುದಾಗಿದೆ.

ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲು, ಪರಿಣಾಮಕಾರಿ ಪೊಲೀಸ್, ಕಾನೂನು ಮತ್ತು ಸುವ್ಯವಸ್ಥೆ ಮತ್ತು ಅಪರಾಧಗಳು ಮತ್ತು ಅಪರಾಧಿಗಳ ವಿರುದ್ಧ ಪರಿಣಾಮಕಾರಿ ಕ್ರಮ ಅಗತ್ಯ

ಕೇಂದ್ರ ಗೃಹ ಕಾರ್ಯದರ್ಶಿ ಹೊಸ ಅಪರಾಧ ಕಾನೂನುಗಳ ವಿಷಯದ ಮೇಲೆ ಇಂಡಿಯನ್ ಪೊಲೀಸ್ ಜರ್ನಲ್ ನ ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡಿದರು

ಶ್ರೀ ಗೋವಿಂದ್ ಮೋಹನ್ ಅವರು ಹೊಸ ಅಪರಾಧ ಕಾನೂನುಗಳ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಿದರು

2023 ಮತ್ತು 2024ನೇ ಸಾಲಿನ ವಿಶಿಷ್ಟ ಸೇವೆ ಮತ್ತು ಸಾರ್ಥಕ ಸೇವೆಗಾಗಿ ರಾಷ್ಟ್ರಪತಿಗಳ ಪದಕವ

Posted On: 28 AUG 2024 7:41PM by PIB Bengaluru

ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ (ಎಂಹೆಚ್ಎ) ಅಡಿಯಲ್ಲಿ ಬ್ಯೂರೋ ಆಫ್ ಪೊಲೀಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ (ಬಿಪಿಆರ್&ಡಿ) ತನ್ನ 54 ನೇ ಸಂಸ್ಥಾಪನಾ ದಿನವನ್ನು ಇಂದು ನವದೆಹಲಿಯಲ್ಲಿರುವ ತನ್ನ ಪ್ರಧಾನ ಕಛೇರಿಯಲ್ಲಿ ಆಚರಿಸಿತು. ಕೇಂದ್ರ ಗೃಹ ಕಾರ್ಯದರ್ಶಿ ಶ್ರೀ ಗೋವಿಂದ್ ಮೋಹನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಇಂಟೆಲಿಜೆನ್ಸ್ ಬ್ಯೂರೋದ ನಿರ್ದೇಶಕರಾದ ಶ್ರೀ ತಪನ್ ಕುಮಾರ್ ದೇಕಾ, ಕೇಂದ್ರ ಪೊಲೀಸ್ ಸಂಸ್ಥೆಗಳ (ಸಿಪಿಒಗಳು) ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) ಮುಖ್ಯಸ್ಥರು, ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ (ಎಂಎಚ್ಎ) ಮತ್ತು ಇತರ ಇಲಾಖೆಗಳ ಹಿರಿಯ ಅಧಿಕಾರಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಶ್ರೀ ಗೋವಿಂದ ಮೋಹನ್ ಅವರು "ಹೊಸ ಅಪರಾಧ ಕಾನೂನುಗಳು - ನಾಗರಿಕ ಕೇಂದ್ರಿತ ಸುಧಾರಣೆಗಳು" ವಿಷಯದ ಕುರಿತು ಡಾ ಆನಂದಸ್ವರೂಪ ಗುಪ್ತಾ ಸ್ಮಾರಕ ಉಪನ್ಯಾಸ ನೀಡಿದರು. ಸ್ಮಾರಕ ಉಪನ್ಯಾಸ ನೀಡಿದ ಶ್ರೀ ಗೋವಿಂದ ಮೋಹನ್ ಅವರು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೀಡಿದ 'ಪಂಚ ಪ್ರಾಣ' ಸಂಕಲ್ಪಕ್ಕೆ ಅನುಗುಣವಾಗಿ, ವಸಾಹತುಶಾಹಿಯ ಸಂಕೋಲೆಗಳನ್ನು ಮುರಿಯಲು ಅಪರಾಧದ ಕಾನೂನು ಜಾರಿ ಸಂಸ್ಥೆಗಳಿಗೆ ಸಮಕಾಲೀನ ಮತ್ತು ಸಂಬಂಧಿತ ನ್ಯಾಯಶಾಸ್ತ್ರದ ಅಗತ್ಯವನ್ನು ಒತ್ತಿ ಹೇಳಿದರು. ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ತರಲಾದ ಹೊಸ ಅಪರಾಧ ಕಾನೂನುಗಳು ನೊಂದವರ ಕೇಂದ್ರಿತವಾಗಿವೆ ಮತ್ತು ಈ ಕಾನೂನುಗಳ ಉದ್ದೇಶ ಶಿಕ್ಷೆಯಲ್ಲ ನ್ಯಾಯವನ್ನು ನೀಡುವುದಾಗಿದೆ ಎಂದು ಗೃಹ ಕಾರ್ಯದರ್ಶಿ ಹೇಳಿದರು.

ಕಾನೂನುಗಳ ವಿವಿಧ ಪ್ರಮುಖ ಲಕ್ಷಣಗಳು ಮತ್ತು ಹೊಸ ನಿಬಂಧನೆಗಳನ್ನು ಕೇಂದ್ರ ಗೃಹ ಕಾರ್ಯದರ್ಶಿ ಅವರು ವಿವರಿಸಿದರು, ವಿಶೇಷವಾಗಿ ಜೀರೋ ಎಫ್ಐಆರ್ ಮತ್ತು ಇ-ಎಫ್ಐಆರ್ ನಂತಹ ನಾಗರಿಕ ಸ್ನೇಹಿ ಕ್ರಮಗಳಿಗೆ ಸಂಬಂಧಿಸಿದವು, ಹೊಸ ರೀತಿಯ ಶಿಕ್ಷೆಯಾಗಿ ಸಮುದಾಯ ಸೇವೆಯನ್ನು ಪರಿಚಯಿಸುವುದು, ಮೊದಲ ಬಾರಿಗೆ ಅಪರಾಧಿಗಳಿಗೆ ಹೆಚ್ಚು ಸೌಮ್ಯ ಶಿಕ್ಷೆ. ಸಂಘಟಿತ ಅಪರಾಧ ಮತ್ತು ಭಯೋತ್ಪಾದನೆಯ ಪರಿಚಯದಂತಹ ಅನೇಕ ಹೊಸ ನಿಬಂಧನೆಗಳನ್ನು ಅವರು ಹೇಳಿದರು; ಹೊಸ ದಂಡಗಳ ಪರಿಚಯ; ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳನ್ನು ನಿಭಾಯಿಸಲು ಒತ್ತು; ಪುರಾವೆ ಸಂಗ್ರಹಣೆ ಮತ್ತು ಪ್ರಕ್ರಿಯೆಗೆ ಹೆಚ್ಚಿನ ವೈಜ್ಞಾನಿಕ ವಿಧಾನವನ್ನು ಪರಿಚಯಿಸಲಾಗಿದೆ. ವಿಧಿವಿಜ್ಞಾನದ ವರ್ಧಿತ ಬಳಕೆಯನ್ನು ಸೇರಿಸಲಾಗಿದೆ; ತನಿಖಾ ಪ್ರಕ್ರಿಯೆಯ ಹೆಚ್ಚಿದ ಡಿಜಿಟಲೀಕರಣ; ನ್ಯಾಯ ವಿತರಣಾ ಪ್ರಕ್ರಿಯೆಗೆ ನಿಗದಿತ ಸಮಯಾವಧಿಗಳು; ಮತ್ತು ಪಾರದರ್ಶಕತೆಗಾಗಿ ವಿವಿಧ ಕಾರ್ಯವಿಧಾನಗಳ ಸರಳೀಕರಣ; ಹೊಣೆಗಾರಿಕೆ ಮತ್ತು ಸಮಯೋಚಿತ ಪರಿಹಾರವನ್ನು ಹೊಸ ಕಾನೂನುಗಳಲ್ಲಿ ಅಳವಡಿಸಲಾಗಿದೆ.

ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲು, ಪರಿಣಾಮಕಾರಿ ಪೊಲೀಸ್, ಪರಿಣಾಮಕಾರಿ ಕಾನೂನು ಮತ್ತು ಸುವ್ಯವಸ್ಥೆ ಮತ್ತು ಅಪರಾಧಗಳು ಮತ್ತು ಅಪರಾಧಿಗಳ ವಿರುದ್ಧ ಪರಿಣಾಮಕಾರಿ ಕ್ರಮ ಅಗತ್ಯ. ಪೊಲೀಸ್ ಆಧುನೀಕರಣ ಮತ್ತು ಉನ್ನತೀಕರಣದಲ್ಲಿ ಬಿಪಿಆರ್&ಡಿ ಪಾತ್ರವು ಅತ್ಯಂತ ಮಹತ್ವದ್ದಾಗಿದೆ ಎಂದು ಶ್ರೀ ಗೋವಿಂದ್ ಮೋಹನ್ ಹೇಳಿದರು. 

ಬ್ಯೂರೋವನ್ನು ಅಭಿನಂದಿಸುತ್ತಾ, ಕೇಂದ್ರ ಗೃಹ ಕಾರ್ಯದರ್ಶಿಗಳು ಸಂಶೋಧನೆಯ ಮೂಲಕ ಪೊಲೀಸ್‌ ಸೇವೆಯಲ್ಲಿ (ಪೊಲೀಸಿಂಗ್) ಶ್ರೇಷ್ಠತೆಯನ್ನು ಉತ್ತೇಜಿಸಲು ಭಾರತೀಯ ಪೋಲೀಸ್ ನ ಥಿಂಕ್ ಟ್ಯಾಂಕ್‌ ‌ನ ಪಾತ್ರದ ಮೂಲಕ ಎಲ್ಲಾ ಇತರ ಪೊಲೀಸ್ ಸಂಸ್ಥೆಗಳು ಮತ್ತು ರಾಜ್ಯ/ಕೇಂದ್ರಾಡಳಿತ ಪೊಲೀಸ್ ಪಡೆಗಳನ್ನು ಸಂಪರ್ಕಿಸುವ ಏಕೈಕ ಕೇಂದ್ರವಾಗಿ ಅದರ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು, ಆಧುನೀಕರಣ, ತರಬೇತಿ ಮತ್ತು ಸಾಮರ್ಥ್ಯ ನಿರ್ಮಾಣ. ಹೊಸ ಕ್ರಿಮಿನಲ್ ಕಾನೂನುಗಳ ಅನುಷ್ಠಾನಕ್ಕಾಗಿ ಬಿಪಿಆರ್&ಡಿ ಮಾಡಿದ ತರಬೇತಿ ಮತ್ತು ಪ್ರಚಾರದ ಕುರಿತು ಅವರು ವಿಶೇಷವಾಗಿ ಶ್ಲಾಘಿಸಿದರು, ಇದು ಅಪರಾಧ - ನ್ಯಾಯ ವ್ಯವಸ್ಥೆ ಸಂಬಂಧಿತ 9 ಲಕ್ಷಕ್ಕೂ ಹೆಚ್ಚು ಭಾಗೀದಾರರಿಗೆ ತರಬೇತಿಯನ್ನು ನೀಡಿದೆ.

ಹೊಸ ಅಪರಾಧ ಕಾನೂನುಗಳ ವಿಷಯದ ಕುರಿತು ಬಿಪಿಆರ್&ಡಿ ನ ಪ್ರಮುಖ ಪ್ರಕಟಣೆಯಾದ ಇಂಡಿಯನ್ ಪೊಲೀಸ್ ಜರ್ನಲ್ ನ ವಿಶೇಷ ಆವೃತ್ತಿಯನ್ನು ಕೇಂದ್ರ ಗೃಹ ಕಾರ್ಯದರ್ಶಿ ಈ ಸಂದರ್ಭದಲ್ಲಿ ಬಿಡುಗಡೆ ಮಾಡಿದರು. ಹೊಸ ಕಾನೂನುಗಳ ಕುರಿತು ದೂರದರ್ಶನ ನಿರ್ಮಿಸಿದ ಸಾಕ್ಷ್ಯಚಿತ್ರವನ್ನು ಶ್ರೀ ಗೋವಿಂದ್ ಮೋಹನ್ ಬಿಡುಗಡೆ ಮಾಡಿದರು.

ಸಮಾರಂಭದಲ್ಲಿ, ಕೇಂದ್ರ ಗೃಹ ಕಾರ್ಯದರ್ಶಿಯವರು 2023 ಮತ್ತು 2024ರ ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿಗಳ ಪದಕ ಮತ್ತು ಸಾರ್ಥಕ ಸೇವೆಗಾಗಿ ರಾಷ್ಟ್ರಪತಿಗಳ ಪದಕ ಪುರಸ್ಕೃತರನ್ನು ಗೌರವಿಸಿದರು.

ಈ ಸಂದರ್ಭದಲ್ಲಿ, ಬಿಪಿಆರ್&ಡಿ ಮಹಾನಿರ್ದೇಶಕ ಶ್ರೀ ರಾಜೀವ್ ಕುಮಾರ್ ಶರ್ಮಾ ಅವರು ಸಂಸ್ಥೆಗೆ ನಿರಂತರ ಬೆಂಬಲ ಮತ್ತು ಮಾರ್ಗದರ್ಶನಕ್ಕಾಗಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರಿಗೆ ಧನ್ಯವಾದ ಅರ್ಪಿಸಿದರು.

ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ  ಶ್ರೀ ಪಂಕಜ್ ಕುಮಾರ್ ಸಿಂಗ್; ಸಿ.ಆರ್.ಪಿ.ಎಫ್, ಬಿ.ಎಸ್.ಎಫ್, ಐ.ಟಿ.ಬಿ.ಪಿ, ಎನ್.ಡಿ.ಆರ್.ಎಫ್, ಆರ್.ಪಿ.ಎಫ್, ಎನ್.ಹೆಚ್. ಆರ್.ಸಿ,  ಎನ್.ಟಿ.ಆರ್.ಒ ಗಳ ಡೈರೆಕ್ಟರ್ ಜನರಲ್ ಗಳು; ಎನ್.ಐ. ಎ ನಿರ್ದೇಶಕರು; ಎನ್ ಸಿ ಆರ್ ಬಿ, ನಿದೇಶಕರು; ದೆಹಲಿ ಪೊಲೀಸ್ ಆಯುಕ್ತರು; ಡಿಜಿ (ಪ್ರಶಸ್ತಿಗಳು) ಗೃಹ ವ್ಯವಹಾರಗಳ ಸಚಿವಾಲಯ; ಬಿಪಿಆರ್ &ಡಿಯ ಮಾಜಿ ಮಹಾನಿರ್ದೇಶಕರು ಸೇರಿದಂತೆ ಇತರ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
 

*****



(Release ID: 2049589) Visitor Counter : 13