ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಜನ್ಮಾಷ್ಟಮಿಯ ಮುನ್ನಾ ದಿನದಂದು ರಾಷ್ಟ್ರಕ್ಕೆ ಶುಭ ಕೋರಿದ ಭಾರತದ ರಾಷ್ಟ್ರಪತಿಗಳು

Posted On: 25 AUG 2024 5:20PM by PIB Bengaluru

ಭಾರತದ ರಾಷ್ಟ್ರಪತಿಯವರಾದ ಶ್ರೀಮತಿ ದ್ರೌಪದಿ ಮುರ್ಮು ಅವರು ಶ್ರೀ ಕೃಷ್ಣ ಜನ್ಮಾಷ್ಟಮಿಯ ಮುನ್ನಾದಿನವಾದ ಇಂದು ಎಲ್ಲಾ ನಾಗರಿಕರಿಗೆ ಶುಭಾಶಯಗಳನ್ನು ಕೋರುತ್ತಾ, ತಮ್ಮ ಸಂದೇಶದಲ್ಲಿ ಹೀಗೆ ಹೇಳಿದ್ದಾರೆ:-

"ಜನ್ಮಾಷ್ಟಮಿಯ ಶುಭ ಸಂದರ್ಭದಲ್ಲಿ, ನಾನು ನಮ್ಮ ಎಲ್ಲಾ ಸಹ ನಾಗರಿಕರಿಗೆ ಮತ್ತು ವಿದೇಶದಲ್ಲಿ ವಾಸಿಸುವ ಭಾರತೀಯರಿಗೆ ನನ್ನ ಆತ್ಮೀಯ ಶುಭಾಶಯಗಳನ್ನು ಕೋರುತ್ತೇನೆ.

ಜನ್ಮಾಷ್ಟಮಿಯ ದಿನದಂದು, ನಾವು ಭಗವಾನ್ ಶ್ರೀ ಕೃಷ್ಣನನ್ನು ಪೂಜಿಸುತ್ತೇವೆ. ಈ ಸಂತೋಷದ ಆಚರಣೆಯು ಭಗವಾನ್ ಶ್ರೀ ಕೃಷ್ಣನ ದೈವಿಕ ಆದರ್ಶಗಳಿಗೆ ನಮ್ಮನ್ನು ಸಮರ್ಪಿಸಿಕೊಳ್ಳಲು ನಮ್ಮನ್ನು ಪ್ರೇರೇಪಿಸುತ್ತದೆ. ಶ್ರೀಮದ್ ಭಗವದ್ಗೀತೆಯು ಶ್ರೀ ಕೃಷ್ಣ ಮತ್ತು ಅರ್ಜುನರ ನಡುವಿನ ಸಂಭಾಷಣೆಯಾಗಿದ್ದು, ಇಡೀ ಮನುಕುಲಕ್ಕೆ ಸ್ಫೂರ್ತಿ ಮತ್ತು ಜ್ಞಾನೋದಯದ ಶಾಶ್ವತ ಮೂಲವಾಗಿದೆ.

ಈ ಶುಭ ಸಂದರ್ಭದಲ್ಲಿ, ನಾವು ಭಗವಾನ್ ಶ್ರೀ ಕೃಷ್ಣನ ಬೋಧನೆಗಳನ್ನು ಅಳವಡಿಸಿಕೊಂಡು ದೇಶದ ಪ್ರಗತಿ ಮತ್ತು ಸಮೃದ್ಧಿಗಾಗಿ ಕೆಲಸ ಮಾಡುವ ಸಂಕಲ್ಪ ಮಾಡೋಣ."

ರಾಷ್ಟ್ರಪತಿಯವರ ಈ ಸಂದೇಶದ ಹಿಂದಿ ಅನುವಾದವಲ್ಲಿ ನೋಡಲು ಇಲ್ಲಿ ಕ್ಲಿಕ್ ಮಾಡಿ:

https://static.pib.gov.in/WriteReadData/specificdocs/documents/2024/aug/doc2024825380301.pdf

 

*****


(Release ID: 2048910) Visitor Counter : 31