ಉಪರಾಷ್ಟ್ರಪತಿಗಳ ಕಾರ್ಯಾಲಯ
ಉಪರಾಷ್ಟ್ರಪತಿಗಳು ಜನ್ಮಾಷ್ಟಮಿಯ ಮುನ್ನಾದಿನದಂದು ರಾಷ್ಟ್ರಕ್ಕೆ ಶುಭಾಶಯ ಕೋರಿದ್ದಾರೆ
Posted On:
25 AUG 2024 2:34PM by PIB Bengaluru
ಉಪರಾಷ್ಟ್ರಪತಿಯವರಾದ ಶ್ರೀ ಜಗದೀಪ್ ಧನಕರ್ ಅವರು ಶ್ರೀ ಕೃಷ್ಣ ಜನ್ಮಾಷ್ಟಮಿಯ ಮುನ್ನಾದಿನವಾದ ಇಂದು ಜನತೆಗೆ ಶುಭ ಕೋರಿದ್ದಾರೆ. ಅವರ ಸಂದೇಶವು ಈ ಕೆಳಗಿನಂತಿದೆ -
"ಜನ್ಮಾಷ್ಟಮಿಯ ಶುಭ ಸಂದರ್ಭದಲ್ಲಿ ನಾನು ಎಲ್ಲಾ ನಾಗರಿಕರಿಗೆ ನನ್ನ ಆತ್ಮೀಯ ಶುಭಾಶಯಗಳನ್ನು ಸಲ್ಲಿಸಲು ಇಚ್ಚಿಸುತ್ತೇನೆ.
ದೈವಿಕ ಪ್ರೀತಿ, ಬುದ್ಧಿವಂತಿಕೆ ಮತ್ತು ನೀತಿಯನ್ನು ಸಾಕಾರಗೊಳಿಸುವ ಶ್ರೀಕೃಷ್ಣನ ಜನನವನ್ನು ಗುರುತಿಸುವ ಜನ್ಮಾಷ್ಟಮಿಯು ಆಳವಾದ ಆಧ್ಯಾತ್ಮಿಕ ಪ್ರಾಮುಖ್ಯತೆಯನ್ನು ಹೊಂದಿದೆ.
ಈ ಹಬ್ಬವು ಸನಾತನ ಧರ್ಮದ ಮೌಲ್ಯಗಳು, ಅಧರ್ಮದ ಮೇಲೆ ಧರ್ಮದ ವಿಜಯ ಮತ್ತು ಸತ್ಯ ಮತ್ತು ಸಹಾನುಭೂತಿ ಜೀವನದ ಮಹತ್ವವನ್ನು ನೆನಪಿಸುತ್ತದೆ. ಈ ಪವಿತ್ರ ದಿನವನ್ನು ಆಚರಿಸುತ್ತಿರುವ ಈ ಶುಭ ಸಂದರ್ಭದಲ್ಲಿ, ಭಗವಾನ್ ಶ್ರೀ ಕೃಷ್ಣನ ಕಾಲಾತೀತ ನೀತಿ ಪಾಠಗಳನ್ನು ಪ್ರತಿಬಿಂಬಿಸಿ, ಅವುಗಳಿಂದ ಪ್ರೇರೇಪಿತರಾಗಿ ಬದುಕಲು ಪ್ರಯತ್ನಿಸೋಣ, ನಮ್ಮ ಸಮಾಜದಲ್ಲಿ ಏಕತೆ, ಶಾಂತಿ ಮತ್ತು ಸಾಮರಸ್ಯವನ್ನು ಬೆಳೆಸೋಣ.
ಈ ದೈವಿಕ ಶುಭ ಸಂದರ್ಭದಲ್ಲಿ, ನಾವು ನೀತಿಯ ಮಾರ್ಗವನ್ನು ಅನುಸರಿಸಿ, ಎಲ್ಲರ ಕಲ್ಯಾಣಕ್ಕಾಗಿ ಕೆಲಸ ಮಾಡಲು ಪ್ರತಿಜ್ಞೆ ಮಾಡೋಣ.
ಜೈ ಶ್ರೀ ಕೃಷ್ಣ!"
*****
(Release ID: 2048909)
Visitor Counter : 25