ಗೃಹ ವ್ಯವಹಾರಗಳ ಸಚಿವಾಲಯ
ರಾಯ್ಪುರದಲ್ಲಿ ಎಡಪಂಥೀಯ ಉಗ್ರವಾದದ ಕುರಿತು ಕೇಂದ್ರ ಗೃಹ ಮತ್ತು ಸಹಕಾರ ಸಚಿವರ ಪತ್ರಿಕಾಗೋಷ್ಠಿ
2026ರ ಮಾರ್ಚ್ ನೊಳಗೆ ದೇಶದಲ್ಲಿ ಎಡಪಂಥೀಯ ಉಗ್ರವಾದವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗುವುದು
ಮೋದಿ ಸರ್ಕಾರವು ಎಡಪಂಥೀಯ ತೀವ್ರಗಾಮಿತ್ವದ ಸಿದ್ಧಾಂತಕ್ಕೆ ಬದಲಾಗಿ ಅಭಿವೃದ್ಧಿಯ ಬಗ್ಗೆ ಜನರಲ್ಲಿ ನಂಬಿಕೆಯನ್ನು ಮೂಡಿಸಲು ಕೆಲಸ ಮಾಡಿದೆ
ಎಡಪಂಥೀಯ ಉಗ್ರವಾದದಿಂದ ಉಂಟಾಗಿರುವ ಅಭಿವೃದ್ಧಿಯ ಕೊರತೆಯ ಅಂತರವನ್ನು ಕಡಿಮೆ ಮಾಡಲು ಮೋದಿ ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ
ನಕ್ಸಲ್ ಪೀಡಿತ ಪ್ರದೇಶಗಳಲ್ಲಿನ ಭದ್ರತಾ ಕಂದಕವನ್ನು ನಿವಾರಿಸಲು ಮತ್ತು ಎಲ್ ಡಬ್ಲ್ಯುಇ ಹಣಕಾಸು ಒದಗಿಸುವ ಸಂಪೂರ್ಣ ಪರಿಸರ ವ್ಯವಸ್ಥೆಯ ಮೇಲೆ ಮೋದಿ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ
ಎಡಪಂಥೀಯ ಉಗ್ರವಾದವನ್ನು ತಹಬಂದಿಗೆ ತಂದಿರುವುದು ದೇಶದ ಭದ್ರತಾ ಪಡೆಗಳು ಮತ್ತು ಪ್ರಜಾಪ್ರಭುತ್ವದ ವಿಜಯವಾಗಿದೆ
ಎಡಪಂಥೀಯ ಉಗ್ರವಾದ ಪೀಡಿತ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಭದ್ರತಾ ಪಡೆಗಳು ಮೇಲ್ವಿಚಾರಣೆ ಮಾಡುತ್ತಿವೆ
ಎಲ್ ಡಬ್ಲ್ಯುಇಯಿಂದಾಗಿ ಅನಕ್ಷರಸ್ಥರಾಗಿ ಉಳಿದಿರುವ ಜನರಿಗೆ ಶಿಕ್ಷಣ ನೀಡುವ ಅಭಿಯಾನವನ್ನು ಗೃಹ ಸಚಿವಾಲಯ ಮತ್ತು ಛತ್ತೀಸ್ ಗಢ ಸರ್ಕಾರ ಜಂಟಿಯಾಗಿ ನಡೆಸಲಿವೆ
ಛತ್ತೀಸ್ಗಢ ಸರ್ಕಾರವು ಮಾರ್ಚ್ 2025 ರ ವೇಳೆಗೆ ಎಲ್ಲಾ ಸರ್ಕಾರಿ ಯೋಜನೆಗಳನ್ನು 100% ಪೂರ್ಣಗೊಳಿಸುವ ಗುರಿಯನ್ನು ನಿಗದಿಪಡಿಸಿದೆ
ಛತ್ತೀಸ್ಗಢ ಸರ್ಕಾರ ಶೀಘ್ರದಲ್ಲೇ ಹೊಸ ಶರಣಾಗತಿ ನೀತಿಯನ್ನು ತರಲಿದ್ದು, ಇದರಿಂದ ಯುವಜನರ
Posted On:
24 AUG 2024 9:33PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಛತ್ತೀಸ್ ಗಢದ ರಾಯ್ ಪುರದಲ್ಲಿ ಎಡಪಂಥೀಯ ಉಗ್ರವಾದದ ಕುರಿತು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಎಡಪಂಥೀಯ ಉಗ್ರವಾದದ ವಿರುದ್ಧದ ಹೋರಾಟವು ಕೊನೆಯ ಹಂತದಲ್ಲಿದೆ ಎಂದು ಅವರು ಹೇಳಿದರು. ಬಲವಾದ ಕಾರ್ಯತಂತ್ರ ಮತ್ತು ನಿರ್ದಯ ಕಠಿಣ ವಿಧಾನದೊಂದಿಗೆ ಎಲ್ ಡಬ್ಲ್ಯುಇ ವಿರುದ್ಧ ಅಂತಿಮ ದಾಳಿಯನ್ನು ಕೈಗೊಳ್ಳುವ ಸಮಯ ಇದು ಎಂದು ಅವರು ಹೇಳಿದರು. ಮಾರ್ಚ್ 2026 ರೊಳಗೆ ದೇಶದಲ್ಲಿ ಎಡಪಂಥೀಯ ಉಗ್ರವಾದವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗುವುದು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಮೋದಿ ಸರ್ಕಾರವು ಎಡಪಂಥೀಯ ಸಿದ್ಧಾಂತದ ಬದಲು ಅಭಿವೃದ್ಧಿಯ ಬಗ್ಗೆ ಜನರಲ್ಲಿ ವಿಶ್ವಾಸವನ್ನು ಮೂಡಿಸುವ ಕೆಲಸ ಮಾಡಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಎಡಪಂಥೀಯ ಉಗ್ರವಾದವು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಮುಂದಿರುವ ಅತಿದೊಡ್ಡ ಸವಾಲಾಗಿದೆ ಮತ್ತು ಮೋದಿ ಸರ್ಕಾರ ಎಡಪಂಥೀಯ ಉಗ್ರವಾದವನ್ನು ಸವಾಲಾಗಿ ತೆಗೆದುಕೊಂಡಿದೆ ಮತ್ತು ಈ ಸಮಸ್ಯೆಯನ್ನು ದೇಶದಿಂದ ನಿರ್ಮೂಲನೆ ಮಾಡಲು ಬದ್ಧವಾಗಿದೆ ಎಂದೂ ಕೇಂದ್ರ ಗೃಹ ಸಚಿವರು ಹೇಳಿದರು. ಎಡಪಂಥೀಯ ಉಗ್ರವಾದದಲ್ಲಿ ತೊಡಗಿರುವ ಯುವಕರು ಹಿಂಸಾಚಾರವನ್ನು ತ್ಯಜಿಸಿ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆಯುತ್ತಿರುವ ದೇಶದ ಅಭಿವೃದ್ಧಿಯ ಮಹಾಯಜ್ಞಕ್ಕೆ ಸೇರಬೇಕು ಎಂದು ಕೇಂದ್ರ ಗೃಹ ಸಚಿವರು ಕರೆ ನೀಡಿದರು.
ಎಡಪಂಥೀಯ ಉಗ್ರವಾದದ ಸಿದ್ಧಾಂತವನ್ನು ಬದಿಗಿಟ್ಟು ಅಭಿವೃದ್ಧಿಯ ನಂಬಿಕೆಯೊಂದಿಗೆ ಮೋದಿ ಸರ್ಕಾರ ಮುನ್ನಡೆಯುತ್ತಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಎಡಪಂಥೀಯ ಉಗ್ರವಾದದಿಂದಾಗಿ ಸೃಷ್ಟಿಯಾದ ಅಭಿವೃದ್ಧಿಯ ಕೊರತೆಯ ಅಂತರವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಅವರು ಹೇಳಿದರು. ಮೋದಿ ಸರ್ಕಾರದ ದೃಢತೆಯಿಂದಾಗಿ, 2019 ರಿಂದ 2024 ರ ಅವಧಿಯಲ್ಲಿ ಅನೇಕ ರಾಜ್ಯಗಳು ಎಡಪಂಥೀಯ ಉಗ್ರವಾದದಿಂದ ಸಂಪೂರ್ಣವಾಗಿ ಮುಕ್ತವಾಗಿವೆ ಎಂದು ಶ್ರೀ ಶಾ ಬೆಟ್ಟು ಮಾಡಿದರು.
2022 ರಲ್ಲಿ, 4 ದಶಕಗಳಲ್ಲಿ ಮೊದಲ ಬಾರಿಗೆ, ಎಡಪಂಥೀಯ ಹಿಂಸಾಚಾರದಿಂದ ಸಾವನ್ನಪ್ಪಿದವರ ಸಂಖ್ಯೆ 100 ಕ್ಕಿಂತ ಕಡಿಮೆಯಾಗಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. 2022 ಮತ್ತು 2024 ರ ನಡುವೆ ಕಡಿಮೆ ಸಂಖ್ಯೆಯ ಎಲ್ಡಬ್ಲ್ಯುಇ ಸಂಬಂಧಿತ ಹಿಂಸಾತ್ಮಕ ಘಟನೆಗಳು ವರದಿಯಾಗಿವೆ ಎಂದು ಅವರು ಗಮನಸೆಳೆದರು. 2010 ರಲ್ಲಿ ಅತಿ ಹೆಚ್ಚು ಸಾವುಗಳು ಅಂದರೆ 1005 ಮಂದಿ ಸಾವಿಗೀಡಾಗಿದ್ದರೆ 2023 ರಲ್ಲಿ ಈ ಸಂಖ್ಯೆ 138 ಕ್ಕೆ ಇಳಿದಿದೆ ಎಂದು ಶ್ರೀ ಶಾ ಹೇಳಿದರು. ಭದ್ರತಾ ನಿರ್ವಾತವನ್ನು ಕಡಿಮೆಮಾಡುತ್ತಿರುವುದರಿಂದ ಎಲ್ ಡಬ್ಲ್ಯುಇಯ ಹಣಕಾಸು ಪರಿಸರ ವ್ಯವಸ್ಥೆಗೆ ತೀವ್ರ ಹೊಡೆತ ಬಿದ್ದಿದೆ ಎಂದು ಅವರು ಹೇಳಿದರು. ಎಡಪಂಥೀಯ ಉಗ್ರವಾದವನ್ನು ಮಿತಿಗೊಳಿಸಿರುವುದು ದೇಶದ ಭದ್ರತಾ ಪಡೆಗಳು ಮತ್ತು ಪ್ರಜಾಪ್ರಭುತ್ವದ ಗೆಲುವು ಎಂದು ಅವರು ಹೇಳಿದರು.
2017 ರಲ್ಲಿ ಸಿಆರ್ಪಿಎಫ್ನಲ್ಲಿ 'ಬಸ್ತಾರಿಯಾ ಬೆಟಾಲಿಯನ್' ಸ್ಥಾಪಿಸಲಾಯಿತು, ಇದರಲ್ಲಿ ಎಲ್ಲಾ ಯೋಧರು ಬಸ್ತಾರ್ ಪ್ರದೇಶದವರು ಎಂದು ಶ್ರೀ ಅಮಿತ್ ಶಾ ಹೇಳಿದರು. ಕೇಂದ್ರ ಸಚಿವ ಸಂಪುಟದ ಅನುಮೋದನೆ ಪಡೆದ ನಂತರ, ದಾಂತೇವಾಡ, ಸುಕ್ಮಾ ಮತ್ತು ಬಿಜಾಪುರದ 400 ಬುಡಕಟ್ಟು ಸೈನಿಕರನ್ನು 2022 ರಲ್ಲಿ ವಿಶೇಷ ಅಭಿಯಾನದ ಅಡಿಯಲ್ಲಿ ಈ ಬೆಟಾಲಿಯನ್ನಿಗೆ ನೇಮಕ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಈ ಸಮಸ್ಯೆಯ ವಿರುದ್ಧ ಹೋರಾಡುವುದರ ಜೊತೆಗೆ, ಭದ್ರತಾ ಪಡೆಗಳು ಎಡ ಉಗ್ರವಾದ ಪೀಡಿತ ಪ್ರದೇಶಗಳಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಮೇಲ್ವಿಚಾರಣೆ ಮಾಡುತ್ತಿವೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಮೋದಿ ಸರ್ಕಾರದ ಕಳೆದ 10 ವರ್ಷಗಳಲ್ಲಿ ಛತ್ತೀಸ್ ಗಢದಲ್ಲಿ ಸಂಪರ್ಕ, ರಸ್ತೆ ನಿರ್ಮಾಣ ಮತ್ತು ಆರ್ಥಿಕ ಹೊಂದಾಣಿಕೆಗಾಗಿ ಸಾಕಷ್ಟು ಕೆಲಸಗಳನ್ನು ಮಾಡಲಾಗಿದೆ ಎಂದು ಅವರು ಹೇಳಿದರು. ಛತ್ತೀಸ್ ಗಢ ಸರ್ಕಾರ ಶೀಘ್ರದಲ್ಲೇ ಹೊಸ ಶರಣಾಗತಿ ನೀತಿಯನ್ನು ತರಲಿದೆ ಇದರಿಂದ ಯುವಕರು ಶಸ್ತ್ರಾಸ್ತ್ರಗಳನ್ನು ತ್ಯಜಿಸಲು ಮತ್ತು ಅಭಿವೃದ್ಧಿಯ ಮುಖ್ಯವಾಹಿನಿಗೆ ಪರಿಣಾಮಕಾರಿ ರೀತಿಯಲ್ಲಿ ಸೇರಲು ಸಾಧ್ಯವಾಗುತ್ತದೆ ಎಂದು ಶ್ರೀ ಶಾ ಹೇಳಿದರು. ಛತ್ತೀಸ್ ಗಢ ಸರ್ಕಾರವು ಮಾರ್ಚ್ 2025 ರ ವೇಳೆಗೆ ಎಲ್ಲಾ ಸರ್ಕಾರಿ ಯೋಜನೆಗಳ ಶೇಕಡಾ 100 ರಷ್ಟು ಪರಿಪೂರ್ಣತೆಯನ್ನು ಸಾಧಿಸುವ ಗುರಿಯನ್ನು ನಿಗದಿಪಡಿಸಿದೆ ಎಂದು ಅವರು ಹೇಳಿದರು. ಎಡಪಂಥೀಯ ಉಗ್ರವಾದದಿಂದಾಗಿ ಅನಕ್ಷರಸ್ಥರಾಗಿ ಉಳಿದಿರುವ ಜನರಿಗೆ ಶಿಕ್ಷಣ ನೀಡಲು ಗೃಹ ಸಚಿವಾಲಯ ಮತ್ತು ಛತ್ತೀಸ್ ಗಢ ಸರ್ಕಾರ ಜಂಟಿಯಾಗಿ ಅಭಿಯಾನವನ್ನು ನಡೆಸಲಿವೆ ಎಂದು ಶ್ರೀ ಶಾ ವಿವರಿಸಿದರು.
*****
(Release ID: 2048719)
Visitor Counter : 45