ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ಆರ್‌ ಜಿ ಕರ್ ವೈದ್ಯಕೀಯ ಕಾಲೇಜು ಘಟನೆಯಲ್ಲಿ ಮೃತರ ಗುರುತನ್ನು ತೆಗೆದುಹಾಕುವ ಕುರಿತು ಸುಪ್ರೀಂ ಕೋರ್ಟ್ ಆದೇಶವನ್ನು ಅನುಸರಿಸಲು ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಸೂಚನೆ


ಎಲ್ಲಾ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಿಂದ ಮೃತರನ್ನು ಚಿತ್ರಿಸುವ ಹೆಸರು, ಛಾಯಾಚಿತ್ರಗಳು ಮತ್ತು ವೀಡಿಯೊ ಕ್ಲಿಪ್‌ಗಳು ಸೇರಿದಂತೆ ಎಲ್ಲಾ ಉಲ್ಲೇಖಗಳನ್ನು ತ್ವರಿತವಾಗಿ ತೆಗೆದುಹಾಕಬೇಕಾಗಿದೆ

Posted On: 21 AUG 2024 5:32PM by PIB Bengaluru

ಆರ್‌ ಜಿ ಕರ್ ವೈದ್ಯಕೀಯ ಕಾಲೇಜು ಘಟನೆಯಲ್ಲಿ ಮೃತರ ಹೆಸರು ಮತ್ತು ಛಾಯಾಚಿತ್ರಗಳ ವಿಷಯಕ್ಕೆ ಸಂಬಂದಿಸಿದಂತೆ ಕಿನ್ನೋರಿ ಘೋಷ್ @ Anr ಎಂಬ ಶೀರ್ಷಿಕೆಯ ಪ್ರಸಾರಕ್ಕೆ ಸಂಬಂಧಿಸಿದಂತೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಗೆ ಆಗಸ್ಟ್ 20, 2024ರ ಸುಪ್ರೀಂ ಕೋರ್ಟ್ ಆದೇಶವನ್ನು ಅನುಸರಿಸಲು ತಿಳಿಸಿದೆ.

ಭಾರತದ ಸರ್ವೋಚ್ಚ ನ್ಯಾಯಾಲಯವು ತಡೆಯಾಜ್ಞೆಯ ಆದೇಶವನ್ನು ಅನುಸರಿಸಿ, ಮೃತರ ಹೆಸರಿನ ಎಲ್ಲಾ ಉಲ್ಲೇಖಗಳು, ಸತ್ತವರನ್ನು ಚಿತ್ರಿಸುವ ಯಾವುದೇ ಛಾಯಾಚಿತ್ರಗಳು ಮತ್ತು ವೀಡಿಯೊ ಕ್ಲಿಪ್‌ಗಳನ್ನು ಎಲ್ಲಾ ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಿಂದ ತ್ವರಿತವಾಗಿ ತೆಗೆದುಹಾಕಲು ನಿರ್ದೇಶಿಸಿದೆ. ಈ ನಿರ್ದೇಶನವು ಪ್ರಶ್ನಾರ್ಹ ಘಟನೆಯ ಸೂಕ್ಷ್ಮ ವಸ್ತುಗಳ ಪ್ರಸರಣಕ್ಕೆ ಸಂಬಂಧಿಸಿದ್ದಾಗಿದೆ.

ನ್ಯಾಯಾಲಯದ ಆದೇಶದ ಆಪರೇಟಿವ್ ಪ್ಯಾರಾಗ್ರಾಫ್ ಈ ಕೆಳಗಿನಂತಿರುತ್ತದೆ:

“ಸಾಮಾಜಿಕ ಮತ್ತು ವಿದ್ಯುನ್ಮಾನ ಮಾಧ್ಯಮಗಳು ಮೃತರ ಗುರುತು ಮತ್ತು ಮೃತದೇಹದ ಛಾಯಾಚಿತ್ರಗಳನ್ನು, ದೇಹವನ್ನು ಪ್ರಕಟಿಸಲು ಮುಂದಾಗಿರುವುದರಿಂದ ಈ ನ್ಯಾಯಾಲಯವು ತಡೆಯಾಜ್ಞೆ ನೀಡಲು ನಿರ್ಬಂಧಿಸಿದೆ.

ಈ ಆದೇಶಕ್ಕೆ ಅನುಸಾರವಾಗಿ ಮೇಲಿನ ಘಟನೆಯಲ್ಲಿ ಸತ್ತವರ ಹೆಸರಿನ ಎಲ್ಲಾ ಉಲ್ಲೇಖಗಳು, ಛಾಯಾಚಿತ್ರಗಳು ಮತ್ತು ವೀಡಿಯೊ ಕ್ಲಿಪ್‌ಗಳನ್ನು ಎಲ್ಲಾ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಿಂದ ತಕ್ಷಣವೇ ತೆಗೆದುಹಾಕಲಾಗುವುದು ಎಂದು ನಿರ್ದೇಶಿಸಲಾಗಿದೆ.

ಈ ಆದೇಶದ ಹಿನ್ನೆಲೆಯಲ್ಲಿ, ವ್ಯಕ್ತಿಗಳ ಗೌಪ್ಯತೆ ಮತ್ತು ಘನತೆಯನ್ನು ಕಾಪಾಡಲು ನ್ಯಾಯಾಲಯದ ನಿರ್ದೇಶನವನ್ನು ಅನುಸರಿಸುವ ಪ್ರಾಮುಖ್ಯತೆಯನ್ನು ಸಚಿವಾಲಯ ಈ ಮೂಲಕ ಒತ್ತಿಹೇಳುತ್ತದೆ ಮತ್ತು ಆದ್ದರಿಂದ ಸಾಮಾಜಿಕ ಮಾಧ್ಯಮ ವೇದಿಕೆಗಳು ಈ ಆದೇಶದ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ತಕ್ಷಣದ ಕ್ರಮವನ್ನು ತೆಗೆದುಕೊಳ್ಳುವ ಅಗತ್ಯವಿದೆ.

ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಎಲ್ಲಾ ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಇಂತಹ ಸೂಕ್ಷ್ಮ ಮಾಹಿತಿಯನ್ನು ಮತ್ತಷ್ಟು ಹರಡದಂತೆ ನೋಡಿಕೊಳ್ಳಲು ಮುಂದಾಗಿದೆ. ಸುಪ್ರೀಂ ಕೋರ್ಟ್‌ನ ಆದೇಶವನ್ನು ಅನುಸರಿಸಲು ವಿಫಲವಾದರೆ ಕಾನೂನು ಪರಿಣಾಮಗಳು ಮತ್ತು ಮುಂದಿನ  ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಲಾಗಿದೆ.

ಎಲ್ಲಾ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ http://cyberlaw-legal@meity.gov.in ನಲ್ಲಿ ಸುಪ್ರೀಂ ಕೋರ್ಟ್ ಆದೇಶದ ಅನುಸರಣೆಗೆ ಪ್ರತಿಕ್ರಿಯೆಯಾಗಿ ತೆಗೆದುಕೊಂಡ ಕ್ರಮದ ಬಗ್ಗೆ ತಿಳಿಸಬೇಕು.

 

*****



(Release ID: 2047442) Visitor Counter : 21