ನೀತಿ ಆಯೋಗ
azadi ka amrit mahotsav

ಹವಾಮಾನ ಸ್ಮಾರ್ಟ್ ಕೃಷಿ ತಂತ್ರಜ್ಞಾನ (ಕ್ಲೈಮೇಟ್ ಸ್ಮಾರ್ಟ್ ಅಗ್ರಿಟೆಕ್‌)ನಲ್ಲಿ ಭಾಗವಹಿಸಲು ನವೋದ್ಯಮಗಳು ಮತ್ತು ಎಂಎಸ್‌ಎಂಇಗಳಿಗೆ ಇಂಡಿಯಾ ಆಸ್ಟ್ರೇಲಿಯಾ ರೈಸ್ ಆಕ್ಸಲರೇಟರ್ ಕರೆ 

Posted On: 19 AUG 2024 10:07AM by PIB Bengaluru

ಅಟಲ್ ಇನ್ನೋವೇಶನ್ ಮಿಷನ್ – ಆಸ್ಟ್ರೇಲಿಯಾದ ಸಿಎಸ್ ಐಆರ್ ಒ ಸಹಭಾಗಿತ್ವದಲ್ಲಿ - ಭಾರತ ಆಸ್ಟ್ರೇಲಿಯಾ ರಾಪಿಡ್ ಇನ್ನೋವೇಶನ್ ಮತ್ತು ಸ್ಟಾರ್ಟ್-ಅಪ್ ಎಕ್ಸ್‌ಪಾನ್ಶನ್ (RISE)  ಆಕ್ಸಲರೇಟರ್‌  ಉಭಯ ದೇಶಗಳ ನಡುವಿನ ಅಂತಾರಾಷ್ಟ್ರೀಯ ವಿಸ್ತರಣೆಯ ಗುರಿಯನ್ನು ಹೊಂದಿರುವ ವ್ಯವಹಾರಗಳನ್ನು ಬೆಂಬಲಿಸಲು ಹವಾಮಾನ ಸ್ಮಾರ್ಟ್ ಕೃಷಿ ತಂತ್ರಜ್ಞಾನ ಕಾರ್ಯಕ್ರಮಕ್ಕಾಗಿ ಭಾರತ ಮತ್ತು ಆಸ್ಟ್ರೇಲಿಯಾದಿಂದ ನವೋದ್ಯಮಗಳು ಮತ್ತು ಎಂಎಸ್ ಎಂಇಗಳಿಂದ ಅರ್ಜಿಗಳನ್ನು ಆಹ್ವಾನಿಸುತ್ತಿದೆ. ಕೃಷಿ ವಲಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾದ ಅತ್ಯಂತ ಒತ್ತಡದ ಹಂಚಿಕೆಯ ಸವಾಲುಗಳನ್ನು ಪರಿಹರಿಸುವ ಆವಿಷ್ಕಾರಗಳನ್ನು ಉತ್ತೇಜಿಸುವಲ್ಲಿ ಇದು ಮಹತ್ವದ ಮೈಲಿಗಲ್ಲು ಎಂದು ಗುರುತಿಸಲಾಗುತ್ತದೆ.

2024ರ ಅಕ್ಟೋಬರ್ ನಿಂದ ಆರಂಭವಾಗುವ ಹವಾಮಾನ ಸ್ಮಾರ್ಟ್ ಕೃಷಿ ತಂತ್ರಜ್ಞಾನ ಕುರಿತ ರೈಸ್ ಆಕ್ಸಲರೇಟರ್ ಸಮೂಹವು ಹೆಚ್ಚುತ್ತಿರುವ ಹವಾಮಾನ ವೈಪರೀತ್ಯ, ಸಂಪನ್ಮೂಲ ಕೊರತೆ ಮತ್ತು ಆಹಾರ ಅಭದ್ರತೆಯ ಹಿನ್ನೆಲೆಯಲ್ಲಿ ಕೃಷಿ ಉತ್ಪಾದಕತೆ ಮತ್ತು ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುವ ತಂತ್ರಜ್ಞಾನಗಳು ಮತ್ತು ಪರಿಹಾರಗಳೊಂದಿಗೆ ನವೋದ್ಯಗಳು ಮತ್ತು ಎಂಎಸ್ಎಂಇಗಳ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುತ್ತದೆ.

ರೈತರ ಅಗತ್ಯತೆಗಳಿಗೆ ಆದ್ಯತೆ ನೀಡುವ ಮತ್ತು ಕೃಷಿ ಪದ್ಧತಿಗಳನ್ನು ರೂಢಿಸಿಕೊಳ್ಳುವ ವಿಷಯದಲ್ಲಿ ಪರಿಹಾರ ಕಂಡುಕೊಳ್ಳುವಲ್ಲಿ ಆಸಕ್ತಿ ಹೊಂದಿರುವ ನವೋದ್ಯಮಗಳು ಮತ್ತು ಎಂಎಸ್ ಎಂಇಗಳಿಗೆ ಈ ಕಾರ್ಯಕ್ರಮ ರೂಪಿಸಲಾಗಿದೆ. 

ರೈಸ್ ಆಕ್ಸಲರೇಟರ್ ಕಾರ್ಯಕ್ರಮ- 2023 ರಲ್ಲಿ ಆರಂಭಿಸಲಾಯಿತು – ಇದು ಹೊಸ ಮಾರುಕಟ್ಟೆಗಳಲ್ಲಿ ತಮ್ಮ ತಂತ್ರಜ್ಞಾನಗಳನ್ನು ಮೌಲ್ಯೀಕರಿಸುವಲ್ಲಿ, ಅಳವಡಿಸಿಕೊಳ್ಳುವಲ್ಲಿ ಮತ್ತು ಪ್ರಾಯೋಗಿಕವಾಗಿ ನವೋದ್ಯಮಗಳು ಮತ್ತು ಎಂಎಸ್ ಎಂಇಗಳನ್ನು ಬೆಂಬಲಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಹವಾಮಾನ ಸ್ಮಾರ್ಟ್ ಕೃಷಿ ತಂತ್ರಜ್ಞಾನ ಸಮೂಹದ ಪರಿಚಯದೊಂದಿಗೆ, ಹೆಚ್ಚಾಗುತ್ತಿರುವ ಪರಿಸರ ಸವಾಲುಗಳ ಮುಖಾಂತರ ಕೃಷಿ ಉತ್ಪಾದಕತೆ ಮತ್ತು ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುವ ಪರಿಹಾರಗಳೊಂದಿಗೆ ಕೃಷಿ ತಂತ್ರಜ್ಞಾನ ನವೋದ್ಯಮಗಳು ಮತ್ತು ಎಂಎಸ್ ಎಂಇ ಗಳ ಮೇಲೆ ಈಗ ಗಮನ ಹರಿಸಲಾಗುತ್ತಿದೆ. 

ಸಿ ಎಸ್ಐ ಆರ್ ಒದ ಕಾರ್ಯಕ್ರಮದ ನಿರ್ದೇಶಕಿ ತಮಾರಾ ಒಗಿಲ್ವಿ, “ಭಾರತ ಮತ್ತು ಆಸ್ಟ್ರೇಲಿಯಾ ಸಾಮಾನ್ಯ ಕೃಷಿ ಸವಾಲುಗಳನ್ನು ಹಂಚಿಕೊಳ್ಳುತ್ತವೆ, ಆದರೆ ನಮ್ಮ ಕೃಷಿ ಕಾರ್ಯಾಚರಣೆಗಳ ವ್ಯಾಪ್ತಿ ಮತ್ತು ವೈವಿಧ್ಯತೆಯು ಅನನ್ಯವಾಗಿದೆ. ಈ ಸಮೂಹವು ಭಾಗವಹಿಸುವವರಿಗೆ ವೈವಿಧ್ಯಮಯ ಮಾರುಕಟ್ಟೆಗಳಲ್ಲಿ ಉತ್ಪನ್ನ-ಮಾರುಕಟ್ಟೆಗಳಿಗೆ ಅನುಗುಣವಾಗಿ ಉತ್ಪನ್ನಗಳನ್ನು ಬೆಳೆಯಲು ಅನುವು ಮಾಡಿಕೊಡುತ್ತದೆ ಮತ್ತು ಜಾಗತಿಕ ಬೇಡಿಕೆಗಳನ್ನು ಪೂರೈಸಲು ತ್ವರಿತ ಪರಿಹಾರಗಳನ್ನು ಒದಗಿಸುತ್ತದೆ’’ ಎಂದು ಹೇಳಿದ್ದಾರೆ. 

ಒಂಬತ್ತು ತಿಂಗಳ ಆಕ್ಸಲರೇಟರ್ ಕಾರ್ಯಕ್ರಮದ ಅವಧಿಯಲ್ಲಿ, ಆಯ್ದ ನವೋದ್ಯಮಗಳು ಮತ್ತು ಎಂಎಸ್ಎಂಇಗಳು ಭಾರತ ಮತ್ತು ಆಸ್ಟ್ರೇಲಿಯಾ ಎರಡರಲ್ಲೂ ಇಮ್ಮರ್ಶನ್ ವಾರಗಳನ್ನು ಒಳಗೊಂಡಂತೆ ಸ್ವಯಂ-ಗತಿಯ ಆನ್‌ಲೈನ್ ಕಲಿಕೆ ಮತ್ತು ವೈಯಕ್ತಿಕ ಗೋಷ್ಠಿಗಳ ಮಿಶ್ರಣದಿಂದ ಪ್ರಯೋಜನ ಪಡೆಯುತ್ತವೆ. ಈ ಗೋಷ್ಠಿಗಳಲ್ಲಿ ಆಳವಾದ ಮಾರುಕಟ್ಟೆ ಒಳನೋಟಗಳು, ಒಬ್ಬರಿಗೊಬ್ಬರು ತರಬೇತಿ ಮತ್ತು ವಿಷಯ ತಜ್ಞರು ಮತ್ತು ಉದ್ಯಮ ವೃತ್ತಿಪರರಿಂದ ಮಾರ್ಗದರ್ಶನವನ್ನು ನೀಡುತ್ತವೆ. ಸಂಭಾವ್ಯ ಪಾಲುದಾರರು ಮತ್ತು ಗ್ರಾಹಕರೊಂದಿಗೆ ಸಂಪರ್ಕವನ್ನು ಸುಲಭಗೊಳಿಸಲು ಈ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದ್ದು, ಇದು ಹೊಸ ಮಾರುಕಟ್ಟೆಗಳಲ್ಲಿ ಯಶಸ್ಸಿನ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.

ಈ ಕಾರ್ಯಕ್ರಮದ ದ್ವಿತಿಯಾರ್ಧದಲ್ಲಿ ಕ್ಷೇತ್ರಮಟ್ಟದ ಪ್ರಯೋಗಗಳು ಹಾಗೂ ತಾಂತ್ರಿಕ ಪ್ರಯೋಗಗಳು ಒಳಗೊಂಡಿವೆ. ಕಾರ್ಯಕ್ರಮದ ಪ್ರಾಮುಖ್ಯತೆಯನ್ನು ವಿವರಿಸಿದ ಎಐಎಂ ನ ಕಾರ್ಯಕ್ರಮ ಮುಖ್ಯಸ್ಥ  ಪ್ರಮಿತ್ ಡ್ಯಾಶ್, “ನಾವೀನ್ಯತೆಯನ್ನು ಉತ್ತೇಜಿಸುವ ಮೂಲಕ ಮತ್ತು ನವೋದ್ಯಮಗಳಿಗೆ ತಮ್ಮ ಪರಿಹಾರಗಳನ್ನು ಒದಗಿಸಲು ರೈಸ್ ಆಕ್ಸಲರೇಟರ್‌  ಕಾರ್ಯಕ್ರಮವು ಕೃಷಿ ವಲಯದಲ್ಲಿನ ತಕ್ಷಣದ ಸವಾಲುಗಳನ್ನು ಪರಿಹರಿಸುವುದು ಮಾತ್ರವಲ್ಲದೆ, ರೈತರು ತಮ್ಮ ನಿರ್ದಿಷ್ಟ ಅಗತ್ಯಗಳಿಗೆ ಅನುಗುಣವಾಗಿ ಚೇತರಿಸಿಕೊಳ್ಳುವ ಪದ್ದತಿಗಳನ್ನು ಅಳವಡಿಸಿಕೊಳ್ಳಬಹುದು’’ ಎಂದು ಹೇಳಿದ್ದಾರೆ. 

ಕಾರ್ಯಕ್ರಮದ ಕೊನೆಯ ಸುತ್ತುಗಳಲ್ಲಿ ಇಳುವರಿ ಹೆಚ್ಚಳ, ಮಾಲಿನ್ಯ ತಗ್ಗಿಸುವುದು ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳುವುದು ಸೇರಿದಂತೆ ಕೃಷಿ ಲವಯದ ಗಂಭೀರ ಸವಾಲುಗಳನ್ನು ಎದುರಿಸಲು ನವೀನ ಪರಿಹಾರಗಳನ್ನು ಕೋರಲಾಗುವುದು. ರೈಸ್ ಆಕ್ಸಲರೇಟರ್ ಗೆ ಅರ್ಜಿ ಸಲ್ಲಿಸುವುದು 2024ರ ಸೆಪ್ಟಂಬರ್ 15ಕ್ಕೆ ಮುಕ್ತಾಯವಾಗಲಿದೆ. 

ಆಸ್ಟ್ರೇಲಿಯ ಮತ್ತು ಭಾರತದ ನಡುವೆ ಪ್ರಯಾಣಿಸಲು ಹಲವಾರು ಅವಕಾಶಗಳು ಲಭ್ಯವಾಗುವ ಜತೆಗೆ ನವೋದ್ಯಮಗಳು / ಎಸ್ ಎಂಇ ಗಳಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಯಾವುದೇ ಶುಲ್ಕವಿರುವುದಿಲ್ಲ. ಆಯ್ದ ನವೋದ್ಯಮಗಳು / ಎಸ್‌ಎಂಇಗಳು ಇಕ್ವಿಟಿಯೇತರ ಅನುದಾನದಲ್ಲಿ  45 ಲಕ್ಷದವರೆಗೆ ಪಡೆಯಲು ಅರ್ಹರಾಗಿರುತ್ತಾರೆ. 

ಹೆಚ್ಚಿನ ಮಾಹಿತಿ ಮತ್ತು ಅರ್ಜಿ ಸಲ್ಲಿಕೆಗಾಗಿ ಇಲ್ಲಿಗೆ ಭೇಟಿ ನೀಡಿ https://riseaccelerator.org/
ಗೋಷ್ಠಿಗಳು ಹಾಗೂ ಪ್ರಶ್ನೋತ್ತರದ ಬಗ್ಗೆ ಹೆಚ್ಚಿನ ವಿವರ ತಿಳಿಯಲು 2024ರ ಆಗಸ್ಟ್ 28ರಂದು ಇಲ್ಲಿಗೆ ಭೇಟಿ ನೀಡಿ  https://events.csiro.au/Events/2024/August/9/India-Aust-RISE-Accelerator-Online-Info-and-QA-Session 

ರೈಸ್ ಆಕ್ಸಲರೇಟರ್ ಕುರಿತು:

ಇಂಡಿಯಾ ಆಸ್ಟ್ರೇಲಿಯಾ ರಾಪಿಡ್ ಇನ್ನೋವೇಶನ್ ಮತ್ತು ಸ್ಟಾರ್ಟ್-ಅಪ್ ವಿಸ್ತರಣೆ (ರೈಸ್) ಆಕ್ಸಲರೇಟರ್ ಮತ್ತು ನೀತಿ ಆಯೋಗದ ಅಟಲ್ ಇನ್ನೋವೇಶನ್ ಮಿಷನ್ (ಎಐಎಂ) ನೇತೃತ್ವದ ದ್ವಿಪಕ್ಷೀಯ ಕಾರ್ಯಕ್ರಮವಾಗಿದೆ.

ರೈಸ್ ಆಕ್ಸಲರೇಟರ್ ಭಾರತ ಮತ್ತು ಆಸ್ಟ್ರೇಲಿಯಾದ  ಸವಾಲುಗಳನ್ನು ಪರಿಸರ ಮತ್ತು ಹವಾಮಾನ ಸಮಸ್ಯೆಗಳ ಮೇಲೆ ಕೇಂದ್ರೀಕರಿಸುವ ಮೂಲಕ ಗಡಿಗಳಾದ್ಯಂತ ನವೀನ ಕೃಷಿ ತಾಂತ್ರಿಕ ಪರಿಹಾರಗಳ ವಿಸ್ತರಣೆಯನ್ನು ಬೆಂಬಲಿಸುತ್ತದೆ. 

 

*****
 


(Release ID: 2046653) Visitor Counter : 41