ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ದೆಹಲಿಯಲ್ಲಿ ನೆಲೆಸಿರುವ ಪಾಕಿಸ್ತಾನದ ಮಹಿಳಾ ನಿರಾಶ್ರಿತರು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಅವರಿಗೆ ರಾಖಿ ಕಟ್ಟಿದರು


ರಾಖಿಯ ಸಂದರ್ಭದಲ್ಲಿ ಶ್ರೀ ಪಿಯೂಷ್ ಗೋಯಲ್ ಅವರು ಸಿಎಎ ಪೌರತ್ವ ಮಹಿಳಾ ಫಲಾನುಭವಿಗಳನ್ನು ಭೇಟಿ ಮಾಡಿದರು

ನೆರೆಯ ರಾಷ್ಟ್ರಗಳಲ್ಲಿರುವ ಅಲ್ಪಸಂಖ್ಯಾತ ವಲಸಿಗರಿಗೆ ಭಾರತವು ಸುರಕ್ಷತೆ ಮತ್ತು ಭದ್ರತೆಯನ್ನು ಒದಗಿಸುತ್ತದೆ: ಕೇಂದ್ರ  ಶ್ರೀ ಪಿಯೂಷ್ ಗೋಯಲ್

ಪೌರತ್ವ ಕಾಯ್ದೆ ಜಾರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಇಚ್ಛಾಶಕ್ತಿ ಸಹಕಾರಿ: ಕೇಂದ್ರ  ಶ್ರೀ ಪಿಯೂಷ್ ಗೋಯಲ್

Posted On: 19 AUG 2024 1:32PM by PIB Bengaluru

ದೆಹಲಿಯಲ್ಲಿ ನೆಲೆಸಿರುವ ಪಾಕಿಸ್ತಾನ ಮೂಲದ ಮಹಿಳಾ ನಿರಾಶ್ರಿತರು ಇಂದಿನ ರಕ್ಷಾ ಬಂಧನ ಆಚರಣೆಯ ಸಂದರ್ಭದಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಅವರಿಗೆ ರಾಖಿ ಕಟ್ಟಿದರು.

ಕೇಂದ್ರ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಅವರು ಸಾಧ್ವಿ ರಿತಂಬರಾ ಮತ್ತು ಬ್ರಹ್ಮಕುಮಾರಿ ಸಹೋದರಿಯರೊಂದಿಗೆ ರಕ್ಷಾ ಬಂಧನವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಪಿಯೂಷ್ ಗೋಯಲ್ ಅವರು, “ಸಿಎಎ ಅಡಿಯಲ್ಲಿ ರಾಷ್ಟ್ರೀಯತೆ ಪಡೆದ ವಲಸಿಗರಿಗೆ ಪೌರತ್ವ ಕಾಯ್ದೆ ಸುರಕ್ಷತೆ ಮತ್ತು ಭದ್ರತೆಯನ್ನು ಒದಗಿಸುತ್ತದೆ” ಎಂದು ಹೇಳಿದರು.

"ಪೌರತ್ವ (ತಿದ್ದುಪಡಿ) ಕಾಯಿದೆಯು ಗೌರವ ಮತ್ತು ಸುರಕ್ಷತೆಯನ್ನು ಒದಗಿಸಿದೆ, ಅದು ನಿಮ್ಮ ಹಕ್ಕು" ಎಂದು ಕೇಂದ್ರ ಸಚಿವ ಶ್ರೀ ಪಿಯೂಷ್ ಗೋಯಲ್ ಅವರು ಹೇಳಿದರು. "ಇದು ನನ್ನ ಜೀವನದ ಅತ್ಯುತ್ತಮ ರಕ್ಷಾ ಬಂಧನ ಆಚರಣೆಗಳಲ್ಲಿ ಒಂದಾಗಿದೆ" ಎಂದು ಅವರು ಹೇಳಿದರು.

“ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಬಲವಾದ ಇಚ್ಛಾಶಕ್ತಿಯಿಂದಾಗಿ ಈ ಎಲ್ಲಾ ಸಹೋದರಿಯರು ಸಿಎಎ ಅಡಿಯಲ್ಲಿ ಭಾರತೀಯ ಪೌರತ್ವವನ್ನು ಪಡೆಯಲು ಸಾಧ್ಯವಾಯಿತು” ಎಂದು ಕೇಂದ್ರ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಅವರು ಹೇಳಿದರು.

 

*****



(Release ID: 2046604) Visitor Counter : 22