ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ

ದಿವ್ಯಾಂಗಜನ ಸಮುದಾಯದ ಘನತೆಯನ್ನು ಖಾತ್ರಿಪಡಿಸಲು ಸಹಾನುಭೂತಿಯ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ: 78ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಪ್ರಧಾನಮಂತ್ರಿ ಭಾಷಣ

Posted On: 15 AUG 2024 2:25PM by PIB Bengaluru

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹೊಸದಿಲ್ಲಿಯ ಕೆಂಪು ಕೋಟೆಯ ಆವರಣದಿಂದ ಭಾಷಣ ಮಾಡಿದರು.  ತಮ್ಮ ಭಾಷಣದಲ್ಲಿ ಪ್ರಧಾನಮಂತ್ರಿಯವರು, ದಿವ್ಯಾಂಗಜನರಿಗೆ (ಅಂಗವಿಕಲರು - ದಿವ್ಯಾಂಗ ವ್ಯಕ್ತಿಗಳು) ಘನತೆಯನ್ನು ಖಾತ್ರಿಪಡಿಸಿಕೊಳ್ಳಲು ಮತ್ತು ಜೀವನದ ಗುಣಮಟ್ಟವನ್ನು ಹೆಚ್ಚಿಸಲು ಕೇಂದ್ರ ಸರ್ಕಾರದ ನಿರಂತರ ಬದ್ಧತೆಯನ್ನು ವಿವರಿಸಿದರು.

ದಿವ್ಯಾಂಗಜನ ಸಮುದಾಯವು ಘನತೆ ಮತ್ತು ಮೌಲ್ಯಯುತವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಹೊಸ, ಸಹಾನುಭೂತಿಯ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.  

ವಿಶೇಷವಾಗಿ ಸೂಚಿಸಲಾದ ಮಾಡಲಾದ ಪ್ರಮುಖ ಉಪಕ್ರಮಗಳು ಸೇರಿವೆ:

ಸುಗಮ್ಯ ಭಾರತ: ಈ ಕಾರ್ಯಕ್ರಮವು ಅಂಗವಿಕಲರಿಗೆ ಸಾರ್ವಜನಿಕ ಸ್ಥಳಗಳಿಗೆ ಮತ್ತು ಸಾರಿಗೆ ವ್ಯವಸ್ಥೆಗಳಿಗೆ ಭೌತಿಕ ಪ್ರವೇಶ ಅವಕಾಶವನ್ನು ಸುಧಾರಿಸುವ ಮೂಲಕ ಅಂತರ್ಗತ ಅನುಕೂಲಕರ ವಾತಾವರಣವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ.

ದಿವ್ಯಾಂಗ ಒಲಿಂಪಿಕ್ ಕ್ರೀಡಾಳು (ಪ್ಯಾರಾಲಿಂಪಿಯನ್‌)ಗಳಿಗೆ ಬೆಂಬಲ: ಅಂಗವಿಕಲ ಕ್ರೀಡಾಪಟುಗಳ ಸಾಧನೆಗಳನ್ನು ಗುರುತಿಸಿ, ಅವರ ಕ್ರೀಡಾ ಪ್ರಯತ್ನಗಳಲ್ಲಿ ಪ್ರೋತ್ಸಾಹಿಸಲು ಮತ್ತು ಸಹಾಯ ಮಾಡಲು ಸರ್ಕಾರ ಹೆಚ್ಚುವರಿ ಬೆಂಬಲವನ್ನು ನೀಡುತ್ತಿದೆ.

ಸಂಕೇತ ಭಾಷೆಯಲ್ಲಿ ಚಟುವಟಿಕೆಗಳ ಅಭಿವೃದ್ಧಿ: ಸಂಕೇತ ಭಾಷೆಯ ಬಳಕೆ ಮತ್ತು ಗುರುತಿಸುವಿಕೆ, ಉತ್ತಮ ಸಂವಹನ ಮತ್ತು ಒಳಗೊಳ್ಳುವಿಕೆಯನ್ನು ಉತ್ತೇಜಿಸಲು ಉಪಕ್ರಮಗಳು ನಡೆಯುತ್ತಿವೆ.

 

 

"ಈ ಉಪಕ್ರಮಗಳು ಸಮಾನತೆ ಮತ್ತು ಸಹಾನುಭೂತಿಯ ಸರ್ಕಾರದ ಬದ್ಧತೆಯನ್ನು ಬಲಪಡಿಸುವ, ದಿವ್ಯಾಂಗಜನರ ಘನತೆಯನ್ನು ಪುನಃಸ್ಥಾಪಿಸುವ ಮತ್ತು ಎತ್ತಿಹಿಡಿಯುವ ವಿಶಾಲ ಪ್ರಯತ್ನದ ಭಾಗವಾಗಿದೆ" ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈ ಸಂದರ್ಭದಲ್ಲಿ ದೃಢಪಡಿಸಿದರು.

 ***



(Release ID: 2045994) Visitor Counter : 8