ಸಂಸ್ಕೃತಿ ಸಚಿವಾಲಯ
azadi ka amrit mahotsav

ಪ್ರಧಾನ ಮಂತ್ರಿಯವರ ಸ್ವಾತಂತ್ರ್ಯ ದಿನಾಚರಣೆಯ ಭಾಷಣವು ನಮ್ಮ ಭರವಸೆಯ ಭವಿಷ್ಯದ ರೋಮಾಂಚಕ ಚಿತ್ರವನ್ನು ಚಿತ್ರಿಸುತ್ತದೆ ಮತ್ತು ಜಾಗತಿಕ ಶ್ರೇಷ್ಠತೆಯನ್ನು ಸಾಧಿಸಬಹುದು ಎಂಬ ಅಚಲ ನಂಬಿಕೆಯನ್ನು ರಾಷ್ಟ್ರಕ್ಕೆ ತುಂಬುತ್ತದೆ ಎಂದು ಕೇಂದ್ರ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದ್ದಾರೆ

प्रविष्टि तिथि: 15 AUG 2024 2:21PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸ್ವಾತಂತ್ರ್ಯ ದಿನಾಚರಣೆಯ ಭಾಷಣವು ನಮ್ಮ ಭರವಸೆಯ ಭವಿಷ್ಯದ ರೋಮಾಂಚಕ ಚಿತ್ರವನ್ನು ಚಿತ್ರಿಸುತ್ತದೆ ಮತ್ತು ಜಾಗತಿಕ ಶ್ರೇಷ್ಠತೆಯನ್ನು ಸಾಧಿಸಬಹುದು ಎಂಬ ಅಚಲ ನಂಬಿಕೆಯನ್ನು ರಾಷ್ಟ್ರಕ್ಕೆ ತುಂಬುತ್ತದೆ ಎಂದು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದ್ದಾರೆ.

ಈ ಸಂಬಂಧ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಶ್ರೀ ಶೇಖಾವತ್,

"ನಮ್ಮ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ 11ನೇ ಸ್ವಾತಂತ್ರ್ಯ ದಿನಾಚರಣೆಯ ಭಾಷಣವು ನಮ್ಮ ಭರವಸೆಯ ಭವಿಷ್ಯದ ರೋಮಾಂಚಕ ಚಿತ್ರವನ್ನು ಚಿತ್ರಿಸುತ್ತದೆ ಮತ್ತು ಜಾಗತಿಕ ಶ್ರೇಷ್ಠತೆಯನ್ನು ಸಾಧಿಸಬಹುದು ಎಂಬ ಅಚಲ ನಂಬಿಕೆಯನ್ನು ರಾಷ್ಟ್ರಕ್ಕೆ ತುಂಬುತ್ತದೆ. ಕಳೆದ ದಶಕದಲ್ಲಿ ಭಾರತವು ಜಾಗತಿಕ ಒಳಿತಿಗಾಗಿ ಬದಲಾವಣೆಯನ್ನು ಧೈರ್ಯಗೊಳಿಸುವ, ಕಾಳಜಿ ವಹಿಸುವ ಮತ್ತು ಪ್ರೇರೇಪಿಸುವ ನವ ಭಾರತವಾಗಿ ಬದಲಾಗಿದೆ. ನವ ಭಾರತವು ಅಂತರ್ಗತ ಬೆಳವಣಿಗೆಯಿಂದ ಪ್ರೇರಿತವಾದ ಜಾಗತಿಕ ವೈಭವವನ್ನು ಬಯಸುತ್ತಿದೆ. ತನ್ನ ವಸಾಹತುಶಾಹಿ ಉಡುಪನ್ನು ತೊರೆದು ತನ್ನ ಪರಂಪರೆ ಮತ್ತು ಸಾಂಪ್ರದಾಯಿಕ ಮೌಲ್ಯಗಳನ್ನು ಹೆಮ್ಮೆಯಿಂದ ಧರಿಸಿರುವ ನವ ಭಾರತವು ಜಗತ್ತನ್ನು ತನ್ನ ಮಾರ್ಗವನ್ನು ಅನುಸರಿಸುವಂತೆ ಒತ್ತಾಯಿಸುತ್ತದೆ. ನಾಗರಿಕ ಚಾಲಿತ ಆಡಳಿತವನ್ನು ಹೊಂದಿರುವ ನವ ಭಾರತವು ಉತ್ತಮ ಆಡಳಿತ ಮತ್ತು ಪ್ರಜಾಪ್ರಭುತ್ವ ನಾಯಕತ್ವದ ಹೊಸ ಅಧ್ಯಾಯವನ್ನು ಬರೆಯುತ್ತದೆ,’’ ಎಂದಿದ್ದಾರೆ.

 

 

*****


(रिलीज़ आईडी: 2045745) आगंतुक पटल : 88
इस विज्ञप्ति को इन भाषाओं में पढ़ें: English , Urdu , हिन्दी , Hindi_MP , Manipuri , Assamese , Punjabi , Telugu