ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಪ್ರಸಾರ ಮತ್ತು ಪ್ರಸರಣಕ್ಕಾಗಿ ಆಡಿಯೊ – ವಿಡಿಯೊ ಹಂಚಿಕೊಳ್ಳುತ್ತಿರುವ ಪ್ರಸಾರ ಭಾರತಿ [ಪಿಬಿ-ಶಬ್ದ್]:‌ ಸಮಗ್ರ ಸುದ್ದಿ ಸೇವೆ ಹಂಚಿಕೆ


ಲಾಂಛನ ರಹಿತವಾಗಿ ವಿಷಯ ಹಂಚಿಕೊಳ್ಳುತ್ತಿರುವ ಪಿಬಿ-ಶಬ್ದ್‌ ಮತ್ತು ಸುದ್ದಿ ಬಳಕೆಗೆ ಯಾರಿಗೂ ಕ್ರಿಡಿಟ್‌ ನೀಡಬೇಕಿಲ್ಲ

ದೂರದರ್ಶನ ಮತ್ತು ಆಕಾಶವಾಣಿಯ ಗ್ರಂಥಾಲಯದ ಸಂಗ್ರಹದಲ್ಲಿರುವ ಅಪರೂಪದ ಮತ್ತು ಹಳೆಯ ತುಣುಕುಗಳಿಗಾಗಿ ಪ್ರವೇಶ ಪಡೆಯಬಹುದು

ಬರುವ 2025 ರ ಮಾರ್ಚ್‌ ವರೆಗೆ ಎಲ್ಲಾ ಮಾಧ್ಯಮ ಸಂಘಟನೆಗಳು ಉಚಿತವಾಗಿ ಬಳಕೆ ಮಾಡಿಕೊಳ್ಳಲು ಸೈನ್‌ ಇನ್‌ ಆಗಬಹುದು

Posted On: 14 AUG 2024 4:12PM by PIB Bengaluru

ಪ್ರಸಾರ ಮತ್ತು ಪ್ರಸರಣಕ್ಕಾಗಿ ಆಡಿಯೊ – ವಿಡಿಯೊಗಳನ್ನು ಪ್ರಸಾರ ಭಾರತಿ [ಪಿಬಿ-ಶಬ್ದ್] ಹಂಚಿಕೊಳ್ಳುತ್ತಿದ್ದು, ಈ ಸೇವೆಗೆ 2024 ರ ಮಾರ್ಚ್‌ 24 ರಂದು ಚಾಲನೆ ನೀಡಲಾಗಿತ್ತು.  ದೇಶಾದ್ಯಂತ ನಡೆಯುವ ಕಾರ್ಯಕ್ರಮಗಳ ಕುರಿತಾದ ಆಡಿಯೊ, ವಿಡಿಯೊ, ಪಠ್ಯ ಮತ್ತು ಛಾಯಾ ಚಿತ್ರಗಳನ್ನು ಹಂಚಿಕೊಳ್ಳಲು ಸೂಕ್ತ ವಿನ್ಯಾಸವನ್ನು ರೂಪಿಸಲಾಗಿದೆ.

ಸಮಗ್ರ ವ್ಯಾಪ್ತಿಗಾಗಿ ಸಮಗ್ರ ಜಾಲ

ದಿನಪೂರ್ತಿ 1,500 ವರದಿಗಾರರು, ಬಾತ್ಮೀದಾರರು ಮತ್ತು ಅರೆಕಾಲಿಕ ವರದಿಗಾರರು ಕಳುಹಿಸುವ ಸುದ್ದಿಗಳನ್ನು 60 ಮಂದಿ ಸಂಪಾದಕರು ಸುದ್ದಿಗಳನ್ನು ತಿದ್ದಲಿದ್ದಾರೆ. ಭಾರತದ ಮೂಲೆ ಮೂಲೆಯಲ್ಲಿನ ತಾಜಾ ವರದಿಗಳನ್ನು ಪಿಬಿ-ಶಬ್ದ್‌ ಒದಗಿಸಲಿದೆ. ಕೃಷಿ, ತಂತ್ರಜ್ಞಾನ, ವಿದೇಶಾಂಗ ವ್ಯವಹಾರಗಳು ಮತ್ತು ರಾಜಕೀಯ ಬೆಳವಣಿಗೆಗಳು ಒಳಗೊಂಡಂತೆ 50ಕ್ಕೂ ಅಧಿಕ ವಿಭಾಗಗಳಲ್ಲಿ 1000 ಕ್ಕೂ ಹೆಚ್ಚು ಸುದ್ದಿಗಳನ್ನು ಭಾರತದ ಪ್ರಮುಖ ಭಾಷೆಗಳಲ್ಲಿ ಪ್ರಾದೇಶಿಕ ಸುದ್ದಿ ವಿಭಾಗಗಳು [ಆರ್.ಎನ್.ಯುಗಳು] ಮತ್ತು ಮುಖ್ಯ ಕಚೇರಿಗಳು ಜಂಟಿಯಾಗಿ ಒದಗಿಸಲಿವೆ.

ಪಿಬಿ-ಶಬ್ದ್‌ ನ ಪ್ರದಾನ ವೈಶಿಷ್ಟ್ಯಗಳು

ಪಿಬಿ-ಶಬ್ದ್‌ ಲಾಂಛನ ರಹಿತವಾಗಿ ವಿಷಯಗಳನ್ನು ಒದಗಿಸಲಿದೆ ಮತ್ತು ವೇದಿಕೆಯಿಂದ ಪಡೆಯುವ ವಿಷಯಗಳಿಗೆ ಕ್ರಿಡಿಟ್‌ ನೀಡುವ ಅಗತ್ಯವಿಲ್ಲ. ಹೆಚ್ಚುವರಿಯಾಗಿ ಇದರಲ್ಲಿ ಲೈವ್‌ ಫೀಡ್‌, ರಾಷ್ಟ್ರಪತಿ ಭವನದಿಂದ ನಡೆಯುವ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭಗಳು, ಚುನಾವಣಾ ಸಮಾವೇಶಗಳು, ಪ್ರಮುಖ ರಾಜಕೀಯ ಕಾರ್ಯಕ್ರಮಗಳು ಮತ್ತು ವಿವಿಧ ಸುದ್ದಿಗೋಷ್ಠಿಗಳ ಮಾಹಿತಿಯನ್ನು ಲೋಗೋ ರಹಿತವಾಗಿ ಒದಗಿಸಲಾಗುವುದು.

ಪ್ರವೇಶವನ್ನು ಮತ್ತಷ್ಟು ಹೆಚ್ಚಿಸಲು, ಮಾಧ್ಯಮ ಭಂಡಾರವನ್ನು ಆರ್ಕೈವಲ್ ಗ್ರಂಥಾಲಯವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದು ಚಂದಾದಾರರಿಗೆ ದೂರದರ್ಶನ ಮತ್ತು ಆಕಾಶವಾಣಿ ಗ್ರಂಥಾಲಯಗಳಿಂದ ಅಪರೂಪದ ಮತ್ತು ಆರ್ಕೈವಲ್ ತುಣುಕುಗಳನ್ನು ವಿಶೇಷ ಕ್ಯುರೇಟೆಡ್ ಪ್ಯಾಕೇಜ್ ಗಳೊಂದಿಗೆ ಸುಲಭವಾಗಿ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ.

ಬರುವ 2025 ರ ಮಾರ್ಚ್‌ ವರೆಗೆ ಎಲ್ಲಾ ಮಾಧ್ಯಮ ಸಂಘಟನೆಗಳು ಉಚಿತವಾಗಿ ಸುದ್ದಿ ಬಳಕೆ ಮಾಡಿಕೊಳ್ಳಲು ಸೈನ್‌ ಇನ್‌ ಆಗಬಹುದು

ಇದಕ್ಕಾಗಿ https://shabd.prasarbharati.org/register

ತಾಜಾ ಮಾಹಿತಿ ಪಿಬಿ-ಶಬ್ದ್‌ ಎಕ್ಸ್‌ ವೇದಿಯಲ್ಲೂ ಲಭ್ಯ [ಮಾಜಿ ಟ್ವಿಟರ್‌] ಇದಕ್ಕಾಗಿ https://x.com/PBSHABD ಮತ್ತು ಇನ್ಸ್ಟ್ರಾಗ್ರಾಮ್‌ ಗಾಗಿ https://www.instagram.com/pbshabd/

 

*****

 


(Release ID: 2045484) Visitor Counter : 59