ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಭಾರತವನ್ನು ಅಸ್ಥಿರಗೊಳಿಸುವ ಮತ್ತು ದೇಶದ ಅಭಿವೃದ್ಧಿಗೆ ಅಡ್ಡಿಪಡಿಸುವ ಅಪಾಯಕಾರಿ ಪಿತೂರಿಗಳ ವಿರುದ್ಧ ಉಪರಾಷ್ಟ್ರಪತಿಗಳು ರಾಷ್ಟ್ರಕ್ಕೆ ಎಚ್ಚರಿಕೆ ನೀಡಿದರು 


ತ್ರಿವರ್ಣವು ವಿರೋಧಿ ಶಕ್ತಿಗಳ ವಿರುದ್ಧ ರಾಷ್ಟ್ರವನ್ನು ಒಗ್ಗೂಡಿಸಲು ಪ್ರೇರೇಪಿಸುತ್ತದೆ - ಉಪರಾಷ್ಟ್ರಪತಿ

'ಹರ್ ಘರ್ ತಿರಂಗ' ಅಭಿಯಾನವು ನಾಗರಿಕರಲ್ಲಿ ರಾಷ್ಟ್ರೀಯ ಹೆಮ್ಮೆಯನ್ನು ತುಂಬುವಲ್ಲಿ ಪ್ರಮುಖ ಪಾತ್ರ ವಹಿಸಿದೆ: ಉಪರಾಷ್ಟ್ರಪತಿ

ತ್ರಿವರ್ಣ ಧ್ವಜವು ನಮ್ಮ ಸಾರ್ವಭೌಮತ್ವ ಮತ್ತು ಸಾಮೂಹಿಕ ಗುರುತಿನ ಸಂಕೇತವಾಗಿದೆ - ಉಪರಾಷ್ಟ್ರಪತಿ

ನಮ್ಮ ಭಾರತೀಯ ಅಸ್ಮಿತೆಗೆ ಸವಾಲು ಹಾಕುವುದು ನಮ್ಮ ಅಸ್ತಿತ್ವಕ್ಕೆ ಸವಾಲೆಸೆದಂತೆ ಎಂದು ಉಪರಾಷ್ಟ್ರಪತಿ ಶ್ರೀ ಧನಕರ್ ಹೇಳಿದ್ದಾರೆ 

ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ನೇತಾಜಿಯವರ ಕೊಡುಗೆಗಳನ್ನು ಸ್ಮರಿಸಿದ ಶ್ರೀ ಧನಕರ್ 

Posted On: 13 AUG 2024 4:39PM by PIB Bengaluru

ಭಾರತದ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು, ನಮ್ಮ ದೇಶವನ್ನು ಅಸ್ಥಿರಗೊಳಿಸಿ ಮತ್ತು ನಮ್ಮ ಪ್ರಗತಿಗೆ ಅಡ್ಡಿಯಾಗುವ ದುರುದ್ದೇಶದ  ದುಷ್ಟಶಕ್ತಿಗಳ ಬಗ್ಗೆ ಎಚ್ಚರವಾಗಿರಬೇಕು ಎಂದು ದೇಶದ ನಾಗರಿಕರಿಗೆ ಕರೆ ನೀಡಿದರು.

 

ಇಂದು ಭಾರತ ಮಂಟಪದಿಂದ ʼಹರ್ ಘರ್ ತಿರಂಗಾʼ ಬೈಕ್ ರ್‍ಯಾಲಿಗೆ ಚಾಲನೆ ನೀಡುವ ಮುನ್ನ ನಾಗರಿಕರನ್ನುದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿಗಳು, ನಮ್ಮ ಅಭಿವೃದ್ಧಿಯ ವೇಗವನ್ನು ಜೀರ್ಣಿಸಿಕೊಳ್ಳಲು ಕೆಲವರಿಗೆ ಆಗುತ್ತಿಲ್ಲ. ಅವರು ಅಡೆತಡೆಗಳು ಸೃಷ್ಟಿಸಲು, ಅಸ್ಥಿರತೆ ತರಲು ಬಯಸುತ್ತಿದ್ದಾರೆ" ಎಂದು ಹೇಳಿದರು.

ತ್ರಿವರ್ಣ ಧ್ವಜದ ಸಾಂಕೇತಿಕ ಪ್ರಾಮುಖ್ಯತೆಯನ್ನು ಗುರುತಿಸಿದ ಅವರು, ವಿರೋಧಿ ಶಕ್ತಿಗಳ ವಿರುದ್ಧ ಒಗ್ಗೂಡಲು ಅದರಿಂದ ಸ್ಫೂರ್ತಿ ಪಡೆಯುವಂತೆ ನಾಗರಿಕರಿಗೆ ಕರೆ ನೀಡಿದರು ಮತ್ತು ಎಲ್ಲಾ ಸಂದರ್ಭಗಳಲ್ಲಿಯೂ ರಾಷ್ಟ್ರದ ಹಿತವನ್ನು ಮುಖ್ಯವಾಗಿರಿಸುವಂತೆ  ಎಲ್ಲಾ ಸಹ ನಾಗರಿಕರಿಗೆ ಮನವಿ ಮಾಡಿದರು.

 

2021 ರಲ್ಲಿ ಆರಂಭಿಸಲಾದ 'ಹರ್ ಘರ್ ತಿರಂಗ' ಅಭಿಯಾನದ ಮಹತ್ವವನ್ನು ಒತ್ತಿ ಹೇಳಿದ ಶ್ರೀ ಧನಖಡ್ ಅವರು, ಈ ಕಲ್ಪನೆಯು ಎಲ್ಲಾ ಭಾರತೀಯರಲ್ಲಿ ದೇಶಭಕ್ತಿ ಮತ್ತು ರಾಷ್ಟ್ರೀಯ ಹೆಮ್ಮೆಯ ಆಳವಾದ ಭಾವನೆಯನ್ನು ಜಾಗೃತಗೊಳಿಸುವ ಮತ್ತು ಐಕ್ಯತೆಯ ಮನೋಭಾವವನ್ನು ಬೆಳೆಸುವ ಗುರಿಯನ್ನು ಹೊಂದಿದೆ ಎಂದರು. ಈ ಅಭಿಯಾನವು ಇಂದು 'ಜನ ಆಂದೋಲನ'ವಾಗಿ ವಿಕಸನಗೊಂಡಿರುವುದನ್ನು ಸಹ ಅವರು ಗಮನಿಸಿದರು.

 

ಉಪರಾಷ್ಟ್ರಪತಿಯವರು, ಭಾರತೀಯ ತ್ರಿವರ್ಣ ಧ್ವಜವು ಕೇವಲ ಒಂದು ಪತಾಕೆಯಲ್ಲ, ಅದು ನಮ್ಮ ಸಾರ್ವಭೌಮತೆ ಮತ್ತು ಸಾಮೂಹಿಕ ಗುರುತನ್ನು ಪ್ರತಿನಿಧಿಸುವ ಪ್ರಬಲ ಸಂಕೇತವಾಗಿದೆ ಎಂದು ಭಾರತೀಯ ತ್ರಿವರ್ಣ ಧ್ವಜದ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದರು. 

ಭಾರತೀಯ ಅಸ್ಮಿತೆ ನಮ್ಮ ರಕ್ತದಲ್ಲಿದೆ,  ಭಾರತೀಯ ಅಸ್ಮಿತೆಗೆ ಸವಾಲು ಹಾಕುವುದು ನಮ್ಮ ಅಸ್ತಿತ್ವಕ್ಕೆ ಸವಾಲೆಸೆದಂತೆ ಎಂದು ಉಪರಾಷ್ಟ್ರಪತಿ ದೃಢಪಡಿಸಿದರು. ತ್ರಿವರ್ಣ ಧ್ವಜದ ಗೌರವ, ಮರ್ಯಾದೆ ಮತ್ತು ಹೆಮ್ಮೆಯನ್ನು  ಸದಾ ಎತ್ತಿಹಿಡಿಯುವಂತೆ ಅವರು ಜನತೆಗೆ ಸಲಹೆ ನೀಡಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಅಪಾರ ಕೊಡುಗೆಯನ್ನು ಸ್ಮರಿಸುತ್ತಾ ಶ್ರೀ ಧನಕರ್, 1943ರ ಡಿಸೆಂಬರ್ 30ರಂದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ನೇತಾಜಿಯವರು ಭಾರತೀಯ ಧ್ವಜವನ್ನು ಹಾರಿಸಿದ್ದು ಬ್ರಿಟಿಷ್ ಆಳ್ವಿಕೆಗೆ ಸಂಚಲನಕಾರಿ ಸವಾಲಾಗಿತ್ತು ಎಂದು ಉಲ್ಲೇಖಿಸಿದರು. ಇದು ಬ್ರಿಟಿಷ್ ಆಳ್ವಿಕೆಯ ವಿರುದ್ಧ ಐತಿಹಾಸಿಕ ಪ್ರತಿಭಟನೆ. ನೇತಾಜಿ ಅವರ ಪರಂಪರೆಯನ್ನು ಪ್ರತಿ ವರ್ಷ ಪರಾಕ್ರಮ ದಿನವಾಗಿ ಆಚರಿಸುವ ಮೂಲಕ ಮತ್ತು ಕರ್ತವ್ಯ ಪಥದಲ್ಲಿನ ಪ್ರತಿಮೆಯ ಮೂಲಕ ಅಮರಗೊಳಿಸಲಾಗಿದೆ ಎಂದು ಅವರು ಹೇಳಿದರು.

"ಶ್ರೀ ಧನಕರ್ ಅವರು 'ಆಜಾದಿ ಕಾ ಅಮೃತ್ ಮಹೋತ್ಸವ' ಆಚರಣೆಗಳಲ್ಲಿ ಭಾರತದೆ ಸ್ವಾತಂತ್ರ್ಯ ಹೋರಾಟದ ವೀರರನ್ನು ಗೌರವಿಸುವ ದೇಶದ ಪ್ರಯತ್ನಗಳನ್ನು ಪ್ರಶಂಸಿಸಿದರು. 'ನಾವು ನಮ್ಮ ಸ್ವಾತಂತ್ರ್ಯ ಹೋರಾಟಕ್ಕೆ ಕೊಡುಗೆ ನೀಡಿದ ಪ್ರತಿಯೊಬ್ಬ ವ್ಯಕ್ತಿಗಳನ್ನು ನೆನೆಸಿಕೊಳ್ಳುತ್ತೇವೆ, ದೇಶದ ಪ್ರತಿಯೊಂದು ಭಾಗವೂ ಅವರನ್ನು ಗುರುತಿಸಿ ಗೌರವಿಸಿದೆ. ವಿಶೇಷವಾಗಿ ಬಹುಮುಖ್ಯ ವ್ಯಕ್ತಿಗಳು ಆದ ಬಿರ್ಸಾ ಮುಂಡಾ ಜೀ ಅವರಂತಹವರು,  ದೇಶಕ್ಕಾಗಿ ತಮ್ಮ  ಬಹಳ ಚಿಕ್ಕ ವಯಸ್ಸಿನಲ್ಲಿಯೇ ಅಪಾರ ತ್ಯಾಗ ಮಾಡಿದ್ದರು' ಎಂದು ಹೇಳಿದರು.

ಶ್ರೀ ಧನಕರ್ ಅವರು ವಿಶ್ವ ವೇದಿಕೆಯಲ್ಲಿ ಭಾರತದ ಗಮನಾರ್ಹ ಪರಿವರ್ತನೆ ಮತ್ತು ಶಾಂತಿ, ಪ್ರಗತಿಯ ಕಡೆಗಿನ ಅಚಲ ಬದ್ಧತೆಯನ್ನು ಪ್ರಸ್ತಾಪಿಸುತ್ತಾ, ವಿದೇಶಿ ಸಂಸ್ಥೆಗಳು ಭಾರತವನ್ನು ತ್ವರಿತ ಆರ್ಥಿಕ ಬೆಳವಣಿಗೆ ಮತ್ತು ಜಾಗತಿಕ ಪ್ರಭಾವದ ಮಾದರಿಯಾಗಿ ಗ್ರಹಿಸುತ್ತಿವೆ ಎಂದು ಉಲ್ಲೇಖಿಸಿದರು. ಭಾರತವು ಇನ್ನು ಮುಂದೆ ಸಾಮರ್ಥ್ಯ ಮತ್ತು ಸಂಭವನೀಯತೆಗಳನ್ನು ಹೊಂದಿರುವ ರಾಷ್ಟ್ರವಲ್ಲ, ಬದಲಾಗಿ ಅಭೂತಪೂರ್ವ ವೇಗದಲ್ಲಿ ಮೇಲೇರುತ್ತಿರುವ ರಾಷ್ಟ್ರವಾಗಿದೆ ಎಂಬುದನ್ನು ಅವರು ಒತ್ತಿಹೇಳಿದರು.  ನಮ್ಮ ಏಳಿಗೆಯನ್ನು ತಡೆಯಲಾಗದು, ನಮ್ಮ ಏಳಿಗೆ 2047ರ ವೇಳೆಗೆ ನಮ್ಮನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುತ್ತದೆ" ಎಂದು ಅವರು ಹೇಳಿದರು.

 


ರ್‍ಯಾಲಿಗೆ ನೀಡಿದ ಶ್ರೀ ಧನಕರ್, "ನನ್ನ ಹಸಿರು ಧ್ವಜದ ನಿಶಾನೆ ಈ ತಿರಂಗಾ ಬೈಕ್ ರ್‍ಯಾಲಿಗೆ ಚಾಲನೆ ನೀಡುವ ಸಂಕೇತವಲ್ಲ. ಇದು ಸ್ವಾತಂತ್ರ್ಯದ ಶತಮಾನೋತ್ಸವದ ಸಂದರ್ಭದಲ್ಲಿ ವಿಕಸಿತ ಭಾರತದ ಗುರಿಯತ್ತ ನಮ್ಮ ದೀರ್ಘ ಪಯಣದ ಒಂದು ಅತೀ ಪ್ರಮುಖ ಹಂತವನ್ನು ಪ್ರಾರಂಭಿಸುವ ಸಂಕೇತ" ಎಂದು ಹೇಳಿದರು

ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವರಾದ ಶ್ರೀ ಗಜೆಂದ್ರ ಸಿಂಗ್ ಶೇಖಾವತ್; ಸಂಸತ್ತೀಯ ವ್ಯವಹಾರಗಳು ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಕೇಂದ್ರ ಸಚಿವರಾದ ಶ್ರೀ ಕಿರಣ್ ರಿಜಿಜು; ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ, ನಾಗರಿಕ ವಿಮಾನಯಾನ ಸಚಿವರಾದ ಶ್ರೀ ಕಿಂಜರಾಪು ರಾಮ್ ಮೋಹನ್ ನಾಯ್ಡು ಮತ್ತು ಇತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹೆಚ್ಚಿನ ವಿವರಗಳಿಗಾಗಿ ಈ ಇಂಗ್ಲಿಷ್ ಪತ್ರಿಕಾ ಪ್ರಕಟಣೆಯನ್ನು ನೋಡಿ:

https://pib.gov.in/PressReleseDetail.aspx?PRID=2044745

 

*****


(Release ID: 2045032) Visitor Counter : 60